ಫಿಫಾ ಕಿರಿಯರ ವಿಶ್ವಕಪ್‌: ಅಹಮದಾಬಾದ್‌ ಆತಿಥ್ಯ

ಫಿಫಾ ಅಂಡರ್-17 ಮಹಿಳಾ ಫುಟ್ಬಾಲ್ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಿದೆ.  ಭುವನೇಶ್ವರ, ಕೋಲ್ಕತಾ ಹಾಗೂ ಗುವಾಹಟಿ ಬಳಿಕ ಇದೀಗ ಅಹಮದಾಬಾದ್ ಈ ಕ್ರೀಡಾಕೂಟಕ್ಕೆ ವೇದಿಕೆಯಾಗಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

Ahmedabad gets clearance for FIFA U 17 Women's world Cup 2020

ಅಹಮದಾಬಾದ್‌[ಡಿ.23]: ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಅಂಡರ್‌-17 ಫಿಫಾ ಮಹಿಳಾ ಫುಟ್ಬಾಲ್‌ ವಿಶ್ವಕಪ್‌ಗೆ ಆತಿಥ್ಯ ವಹಿಸಲಿರುವ 4 ನಗರಗಳು ಅಂತಿಮಗೊಂಡಿವೆ. 

U 17 ಮಹಿಳಾ ಫುಟ್ಬಾ​ಲ್‌ ವಿಶ್ವ​ಕಪ್‌ ಲೋಗೋ ಬಿಡು​ಗ​ಡೆ

ಭಾನುವಾರ ಇಲ್ಲಿನ ಟ್ರ್ಯಾನ್ಸ್‌ ಸ್ಟೇಡಿಯಾ ಅರೇನಾಗೆ ಆತಿಥ್ಯ ಹಕ್ಕನ್ನು ನೀಡಲಾಯಿತು. ಟೂರ್ನಿಗೆ ಕ್ರೀಡಾಂಗಣ ಸಿದ್ಧಗೊಳ್ಳುತ್ತಿರುವ ರೀತಿ ಬಗ್ಗೆ ಸ್ಥಳೀಯ ಆಯೋಜಕರು ಸಮಾಧಾನ ವ್ಯಕ್ತಪಡಿಸಿದ್ದಾರೆ. ಭುವನೇಶ್ವರದ ಕಳಿಂಗಾ ಕ್ರೀಡಾಂಗಣ, ಕೋಲ್ಕತಾದ ಸಾಲ್ಟ್‌ ಲೇಕ್‌ ಕ್ರೀಡಾಂಗಣ ಹಾಗೂ ಗುವಾಹಟಿಯ ಇಂಡಿಯಾ ಗಾಂಧಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಈ ಮೊದಲೇ ಒಪ್ಪಿಗೆ ಸೂಚಿಸಲಾಗಿತ್ತು. ಇದೀಗ ಅಹಮದಾಬಾದ್‌ ಕೂಡಾ ಈ ಪಟ್ಟಿಗೆ ಸೇರ್ಪಡೆಯಾಗಿದೆ.

ಫಿಫಾ ಅಂಡರ್‌-17 ಮಹಿಳಾ ಫುಟ್ಬಾಲ್‌ ವಿಶ್ವ​ಕಪ್‌ ವೇಳಾಪಟ್ಟಿ ಪ್ರಕಟ

ಇದೇ ಮೊದಲ ಬಾರಿಗೆ ಗುಜರಾತ್’ಗೆ ಫಿಫಾ ಕ್ರೀಡಾಕೂಟದ ಆತಿಥ್ಯ ಸಿಕ್ಕಿರುವುದು ಗೌರವದ ಸಂಗತಿಯಾಗಿದೆ. ಈ ಟೂರ್ನಿಯನ್ನು ಯಶಸ್ವಿಗೊಳಿಸಲು ಅಗತ್ಯವಾದ ಸಹಕಾರ ನೀಡುತ್ತೇವೆ ಎಂದು ಗುಜರಾತ್ ಕ್ರೀಡಾಸಚಿವ ಈಶ್ವರ್ ಸಿಂಗ್ ಪಟೇಲ್ ಹೇಳಿದ್ದಾರೆ. 2020ರ ನ.2ರಿಂದ 21ರ ವರೆಗೂ ಪಂದ್ಯಾವಳಿ ನಡೆಯಲಿದ್ದು, ಭಾರತ ಸೇರಿದಂತೆ ಒಟ್ಟು 16 ತಂಡಗಳು ಸೆಣಸಲಿವೆ.
 

Latest Videos
Follow Us:
Download App:
  • android
  • ios