Asianet Suvarna News Asianet Suvarna News

COVID 19 Threat‌: ಏಷ್ಯಾಕಪ್‌ ಫುಟ್ಬಾಲ್‌ ಟೂರ್ನಿಯಿಂದ ಹೊರಬಿದ್ದ ಭಾರತ

* ಎಎಫ್‌ಸಿ ಏಷ್ಯಾಕಪ್‌ ಫುಟ್‌ಬಾಲ್‌ ಟೂರ್ನಿಯಿಂದ ಹೊರಬಿದ್ದ ಭಾರತ ಮಹಿಳಾ ಫುಟ್ಬಾಲ್ ತಂಡ

* ಪಂದ್ಯಕ್ಕೂ ಮೊದಲು 12 ಆಟಗಾರರಿಗೆ ಕೋವಿಡ್‌ ಪಾಸಿಟಿವ್‌ 

* ಭಾರತಕ್ಕೆ 13ರ ಆಟಗಾರ್ತಿಯರ ತಂಡವನ್ನು ಅಂತಿಮಗೊಳಿಸಲು ಸಾಧ್ಯವಾಗಲಿಲ್ಲ

 

AFC Womens Asian Cup 2022 India vs Chinese Taipei Called off Due to Coronavirus Outbreak kvn
Author
Bengaluru, First Published Jan 24, 2022, 11:42 AM IST

ಮುಂಬೈ(ಜ.24): ಭಾರತ ಮತ್ತು ಚೈನೀಸ್‌ ತೈಪೆ (India vs Chinese Taipei) ನಡುವಿನ ಪಂದ್ಯಕ್ಕೂ ಮೊದಲು 12 ಆಟಗಾರರಿಗೆ ಕೋವಿಡ್‌ (COVID 19) ಪಾಸಿಟಿವ್‌ ಬಂದ ಕಾರಣ ಭಾರತ ಮಹಿಳಾ ತಂಡ ಎಎಫ್‌ಸಿ ಏಷ್ಯಾಕಪ್‌ ಫುಟ್‌ಬಾಲ್‌ (AFC Women's Asian Cup 2022) ಟೂರ್ನಿಯಿಂದ ಹೊರಬಿದ್ದಿದೆ. ಶನಿವಾರ ನಿಗದಿಯಾಗಿದ್ದ ಪಂದ್ಯದ ಆರಂಭಕ್ಕೂ ಕೆಲವು ನಿಮಿಷಗಳ ಮೊದಲು ಆಟಗಾರರಲ್ಲಿ ಕೋವಿಡ್‌ ಪಾಸಿಟಿವ್‌ ಇರುವುದು ದೃಢಪಟ್ಟಿದೆ. 

ಅಲ್ಲದೇ ಇಬ್ಬರು ಭಾರತೀಯ ಆಟಗಾರ್ತಿಯರು ಗಾಯಗೊಂಡಿದ್ದ ಕಾರಣ ಚೈನೀಸ್‌ ತೈಪೆ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ 13ರ ಆಟಗಾರ್ತಿಯರ ತಂಡವನ್ನು ಅಂತಿಮಗೊಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಶನಿವಾರದ ಪಂದ್ಯ ಮುಂದೂಡಿಕೆ ಮಾಡಲಾಯಿತು. ಬಳಿಕ ಟೂರ್ನಿಯಿಂದಲೇ ಹಿಂದೆ ಸರಿಯಲು ಭಾರತೀಯ ಫುಟ್ಬಾಲ್‌ ತಂಡ ನಿರ್ಧರಿಸಿತು. ಏಷ್ಯಾ ಫುಟ್‌ಬಾಲ್‌ ಕಾನ್ಫೆಡರೇಷನ್‌ನ ನಿಯಮದಂತೆ ಪಂದ್ಯಾವಳಿಗೂ ಮುನ್ನ ಕ್ರಿಡಾಂಗಣದಲ್ಲಿ ಹಾಜರಾಗಲು ವಿಫಲವಾದ ಭಾರತ ತಂಡ ಪಂದ್ಯಾವಳಿಯಿಂದ ಹೊರಬಿದ್ದಿದೆ.

ಐಎಸ್‌ಎಲ್‌: ಬೆಂಗಳೂರು, ಗೋವಾ ಎಫ್‌ಸಿ ಪಂದ್ಯ ಡ್ರಾ

ಬಾಂಬೋಲಿಮ್‌: ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯಲ್ಲಿ (Indian Super League) ಬೆಂಗಳೂರು ಎಫ್‌ಸಿ (Bengaluru FC) ಹಾಗೂ ಗೋವಾ ಎಫ್‌ಸಿ (Goa FC) ವಿರುದ್ಧದ ಪಂದ್ಯ 1-1 ಗೋಲುಗಳಿಂದ ಡ್ರಾಗೊಂಡಿದೆ. ಭಾನುವಾರ ನಡೆದ ರೋಚಕ ಕಾದಾಟದಲ್ಲಿ ಗೋವಾ ತಂಡ ಮೊದಲಾರ್ಧಕ್ಕೆ 1-0 ಮುನ್ನಡೆಯಲ್ಲಿತ್ತು. 

ತಂಡದ ಪರ 41ನೇ ನಿಮಿಷದಲ್ಲಿ ಡೈಲನ್‌ ಫಾಕ್ಸ್‌ ಗೋಲು ಬಾರಿಸಿದರು. ಬಳಿಕ ಬಿಎಫ್‌ಸಿ ನಾಯಕ ಸುನಿಲ್‌ ಚೆಟ್ರಿ(Sunil Chhetri) 61ನೇ ನಿಮಿಷದಲ್ಲಿ ಗೋಲು ಹೊಡೆದು ಸಮಬಲ ಸಾಧಿಸಲು ನೆರವಾದರು. ಟೂರ್ನಿಯಲ್ಲಿ 12 ಪಂದ್ಯಗಳನ್ನಾಡಿರುವ ಬಿಎಫ್‌ಸಿ ಕೇವಲ 3ರಲ್ಲಿ ಗೆದ್ದಿದ್ದು, 14 ಅಂಕದೊಂದಿಗೆ 8ನೇ ಸ್ಥಾನದಲ್ಲಿದೆ. ಅಷ್ಟೇ ಅಂಕ ಪಡೆದಿರುವ ಗೋವಾ 9ನೇ ಸ್ಥಾನದಲ್ಲೇ ಉಳಿದಿದೆ.

Australian Open: ರಾಫೆಲ್ ನಡಾಲ್, ಆಶ್ಲೆ ಬಾರ್ಟಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ

ಏಷ್ಯಾ ಕಪ್‌ ಹಾಕಿ: ಭಾರತದ ಸೋಲು

ಮಸ್ಕಟ್‌: ಮಲೇಶಿಯಾ ವಿರುದ್ಧ 9 - 0 ಅಂತರದ ಭಾರಿ ಜಯಗಳಿಸಿ ಮಹಿಳಾ ಏಷ್ಯಾಕಪ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಭಾರತ ತನ್ನ ಎರಡನೇ ಪಂದ್ಯದಲ್ಲಿ ಜಪಾನ್‌ ವಿರುದ್ಧ ಸೋಲನ್ನನುಭವಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡ ಜಪಾನ್‌ ಮಹಿಳಾ ತಂಡದ ವಿರುದ್ಧ 2 - 0 ಅಂತರದಿಂದ ಪರಾಜಯಗೊಂಡಿದೆ. ಈ ಪಂದ್ಯದಲ್ಲಿ ಭಾರತ ಗೆದ್ದಿದ್ದರೆ ವಿಶ್ವಕಪ್‌ ಟೂರ್ನಿಯಲ್ಲಿ ಭಾಗವಹಿಸುವ ಅರ್ಹತೆಯನ್ನು ಗಳಿಸಿಕೊಳ್ಳುತ್ತಿತ್ತು.

ಮಿಶ್ರ ಡಬಲ್ಸ್‌ನಲ್ಲಿ ಬೋಪಣ್ಣಗೆ ಸೋಲು

ಮೆಲ್ಬರ್ನ್‌: ಆಸ್ಪ್ರೇಲಿಯನ್‌ ಓಪನ್‌ನಲ್ಲಿ (Australian Open) ಭಾರತದ ರೋಹನ್‌ ಬೋಪಣ್ಣ-ಕ್ರೊವೇಷಿಯಾದ ದರಿಜಾ ಜುರಾಕ್‌ ಜೋಡಿ ಮೊದಲ ಸುತ್ತಲ್ಲೇ ಸೋಲನುಭವಿಸಿದೆ. ಮಿಶ್ರ ಡಬಲ್ಸ್‌ ಪಂದ್ಯದಲ್ಲಿ ಈ ಜೋಡಿ ಕಜಕಸ್ಥಾನದ ಗೊಲುಬೆವ್‌-ಉಕ್ರೇನ್‌ನ ಕಿಚೆನೋಕ್‌ ವಿರುದ್ಧ 6​-1, 4-​6, 9-​11 ಸೆಟ್‌ಗಳಲ್ಲಿ ಸೋಲುಂಡಿತು.

ಕೊಹ್ಲಿಗೆ ನೋಟಿಸ್‌ ನೀಡುವ ಯೋಚನೆ ಇರಲಿಲ್ಲ: ಗಂಗೂಲಿ

ಕೋಲ್ಕತಾ: ಪತ್ರಿಕಾಗೋಷ್ಠಿ ವಿಚಾರಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಮಾಜಿ ನಾಯಕ  ವಿರಾಟ್‌ (Virat Kohli) ಕೊಹ್ಲಿಗೆ ಶೋಕಾಸ್‌ ನೋಟಿಸ್‌ ನೀಡಲು ಬಿಸಿಸಿಐ (BCCI) ಅಧ್ಯಕ್ಷ ಸೌರವ್‌ ಗಂಗೂಲಿ (Sourav Ganguly) ಮುಂದಾಗಿದ್ದರು ಎಂಬ ವರದಿಯನ್ನು ಗಂಗೂಲಿ ಅಲ್ಲಗಳೆದಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಸುದ್ದಿ ನಿಜವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 

ಏಕದಿನ ನಾಯಕತ್ವದಿಂದ ವಜಾಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಬಿಸಿಸಿಐ ಅಧಿಕಾರಿಗಳ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದಕ್ಕೆ ಕೊಹ್ಲಿಗೆ ಸೌರವ್‌ ಗಂಗೂಲಿ ಶೋಕಾಸ್‌ ನೋಟಿಸ್‌ ನೀಡಲು ಮುಂದಾಗಿದ್ದರು, ಆದರೆ ಕಾರ‍್ಯದರ್ಶಿ ಜಯ್‌ ಶಾ ಇದಕ್ಕೆ ಒಪ್ಪಿರಲಿಲ್ಲ ಎಂದು ವರದಿಯಾಗಿತ್ತು.
 

Follow Us:
Download App:
  • android
  • ios