ರಾಷ್ಟ್ರಪತಿ ಮುರ್ಮು ಅವರಿಂದ ಶರತ್ ಕಮಲ್‌ಗೆ ಖೇಲ್ ರತ್ನ ಪ್ರದಾನ
ದಿಗ್ಗಜ ಟೇಬಲ್ ಟೆನಿಸ್ ಪಟು ಶರತ್ ಕಮಲ್‌ಗೆ ಖೇಲ್ ರತ್ನ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿದ ಶರತ್
25 ಲಕ್ಷ ನಗದು, ಪದಕ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವ
ನವದೆಹಲಿ(ಡಿ.01): ದಿಗ್ಗಜ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್‌ಗೆ ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ರಾಷ್ಟ್ರಪತಿ ಭವನದಲ್ಲಿ ನಡೆದ 2022ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ವಿತರಣಾ ಸಮಾರಂಭದಲ್ಲಿ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಖೇಲ್ ರತ್ನವನ್ನು ಪ್ರದಾನ ಮಾಡಿದರು. 25 ಲಕ್ಷ ನಗದು, ಪದಕ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಲಕ್ಷ್ಯ ಸೆನ್, ನಿಖತ್ ಜರೀನ್, ಎಲ್ಡೋಸ್ ಪೌಲ್ ಸೇರಿ 25 ಕ್ರೀಡಾಪಟುಗಳು ಅರ್ಜುನ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿ ಪುರಸ್ಕೃತರಿಗೆ 15 ಲಕ್ಷ ನಗದು, ಕಂಚಿನ ಪತ್ರಿಮೆ ನೀಡಲಾಯಿತು. ಇದೇ ವೇಳೆ ಕರ್ನಾಟಕದ ಪ್ಯಾರಾ ಶೂಟಿಂಗ್ ಕೋಚ್ ಸುಮಾರು ಶಿರೂರ್‌ಗೆ ದ್ರೋಣಾಚಾರ್ಯ ಪ್ರಶಸ್ತಿ ದೊರೆತರೆ, ಮಾಜಿ ಕಬಡ್ಡಿ ಆಟಗಾರ ಬಿ.ಸಿ.ಸುರೇಶ್ ಹಾಗೂ ಮಾಜಿ ಅಥ್ಲೀಟ್ ಅಶ್ವಿನಿ ಅಕ್ಕುಂಜಿಗೆ ಜೀವಮಾನ ಶ್ರೇಷ್ಠ ಸಾಧನೆಗಾಗಿ ಧ್ಯಾನ್‌ಚಂದ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರೊ ಕಬಡ್ಡಿ: ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಸೋತ ಬುಲ್ಸ್
ಹೈದರಾಬಾದ್: 9ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಪ್ಲೇ-ಆಫ್‌ಗೇರಲು ಪೈಪೋಟಿ ತೀವ್ರಗೊಳ್ಳುತ್ತಿರುವ ಸಮಯದಲ್ಲಿ ಬೆಂಗಳೂರು ಬುಲ್ಸ್ ದೊಡ್ಡ ಸೋಲು ಕಂಡು ಹಿನ್ನಡೆ ಅನುಭವಿಸಿದೆ. ಜೈಪುರ ಪಿಂಕ್ಪ್ಯಾಂಥರ್ಸ್ ವಿರುದ್ಧ ಬುಲ್ಸ್ 25-45ರಲ್ಲಿ ಶರಣಾಯಿತು. ಕಳೆದ 4 ಪಂದ್ಯಗಳಲ್ಲಿ ತಂಡಕ್ಕಿದು 3ನೇ ಸೋಲು. ಜೈಪುರ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದರೆ, ಬುಲ್ಸ್ 3ನೇ ಸ್ಥಾನದಲ್ಲೇ ಉಳಿದಿದೆ.
Pro Kabaddi League: ಪುಣೇರಿ ಪಲ್ಟಾನ್ ಜಯದ ಓಟಕ್ಕೆ ಬ್ರೇಕ್!
ಲೀಗ್ ಹಂತದಲ್ಲಿ ತಂಡಕ್ಕಿನ್ನು 3 ಪಂದ್ಯ ಬಾಕಿ ಇದ್ದು, ಎಲ್ಲಾ ಪಂದ್ಯಗಳನ್ನು ಗೆದ್ದರೂ ನೇರವಾಗಿ ಸೆಮಿಫೈನಲ್‌ಗೇರುವ ಅವಕಾಶ ಕೈತಪ್ಪಬಹುದು. ತಾರಾ ರೈಡರ್ ಭರತ್‌ರನ್ನು 20 ನಿಮಿಷಕ್ಕೂ ಹೆಚ್ಚು ಕಾಲ ಅಂಕಣದಿಂದ ಹೊರಗಿಡುವಲ್ಲಿ ಯಶಸ್ವಿಯಾದ ಜೈಪುರ ಸುಲಭವಾಗಿ ಜಯಿಸಿತು. ಮತ್ತೊಂದು ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಹಾಗೂ ತಮಿಳ್ ತಲೈವಾಸ್ 37-37ರಲ್ಲಿ ಟೈಗೆ ತೃಪ್ತಿಪಟ್ಟವು.
ಹಾಕಿ: ಆಸ್ಪ್ರೇಲಿಯಾ ವಿರುದ್ಧ ಭಾರತಕ್ಕೆ 4-3ರ ಗೆಲುವು
ಅಡಿಲೇಡ್: ವಿಶ್ವ ನಂ.1 ಆಸ್ಪ್ರೇಲಿಯಾ ವಿರುದ್ಧ ಸತತ 12 ಸೋಲುಗಳನ್ನು ಅನುಭವಿಸಿದ್ದ ಭಾರತ, ಕೊನೆಗೂ ಗೆಲುವು ದಾಖಲಿಸಿದೆ. ಬುಧವಾರ 5 ಪಂದ್ಯಗಳ ಸರಣಿಯ 3ನೇ ಪಂದ್ಯದಲ್ಲಿ 4-3 ಗೋಲುಗಳಲ್ಲಿ ಜಯಿಸಿತು. ಇದರೊಂದಿಗೆ ಸರಣಿ ಜಯದ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಕೊನೆ ನಿಮಿಷದಲ್ಲಿ ಆಕಾಶ್‌ದೀಪ್ ಬಾರಿಸಿದ ಗೋಲು ಭಾರತದ ಗೆಲುವಿಗೆ ಕಾರಣವಾಯಿತು. ತಂಡದ ಪರ ಹರ್ಮನ್‌ಪ್ರೀತ್(12ನೇ ನಿಮಿಷ), ಅಭಿಷೇನ್(47ನೇ ನಿ.,), ಶಮ್ಶೇರ್ ಸಿಂಗ್(57ನೇ ನಿ,.) ಹಾಗೂ ಆಕಾಶ್‌ದೀಪ್(60ನೇ ನಿ.,) ಗೋಲು ಬಾರಿಸಿದರು.