ಪ್ರೊ ಕಬಡ್ಡಿ ಟೂರ್ನಿಯಲ್ಲಿ ಪುಣೇರಿ ಪಲ್ಟಾನ್ ತಂಡಕ್ಕೆ ಗುಜರಾತ್ ಜೈಂಟ್ಸ್ ಶಾಕ್ಗುಜರಾತ್‌ ಜೈಂಟ್ಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಪ್ರತೀಕ್‌ ದಹಿಯಾಸೋಲಿನ ಹೊರತಾಗಿಯೂ ಅಗ್ರಸ್ಥಾನ ಕಾಯ್ದುಕೊಂಡ ಗುಜರಾತ್ ಜೈಂಟ್ಸ್

ಹೈದರಾಬಾದ್‌(ನ.30): ಸತತ 5 ಗೆಲುವು ಸಾಧಿಸಿ ಪ್ಲೇ-ಆಫ್‌ನತ್ತ ಮುನ್ನುಗ್ಗುತ್ತಿದ್ದ ಪುಣೇರಿ ಪಲ್ಟನ್‌ಗೆ ಗುಜರಾತ್‌ ಜೈಂಟ್ಸ್‌ ಆಘಾತ ನೀಡಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಗುಜರಾತ್‌ 51-39ರಲ್ಲಿ ಪುಣೆಯನ್ನು ಸೋಲಿಸಿತು. ಪ್ರತೀಕ್‌ ದಹಿಯಾ 18 ರೈಡ್‌ ಅಂಕ ಗಳಿಸಿ ಗುಜರಾತ್‌ ಜಯಕ್ಕೆ ನೆರವಾದರು. ಸೋತರೂ ಪುಣೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ಆದರೆ ತನಗಿಂತ ಕೆಳಗಿರುವ ತಂಡಗಳ ವಿರುದ್ಧ ಅಂತರ ಹೆಚ್ಚಿಸಿಕೊಳ್ಳುವ ಪುಣೇರಿ ಉದ್ದೇಶ ಈಡೇರಲಿಲ್ಲ. 

ಪುಣೆ 19 ಪಂದ್ಯಗಳಲ್ಲಿ 69 ಅಂಕ ಕಲೆಹಾಕಿದೆ. ಜೈಪುರ, ಬೆಂಗಳೂರು ಹಾಗೂ ಯು.ಪಿ.ಯೋಧಾಸ್‌ ತಲಾ 18 ಪಂದ್ಯಗಳನ್ನು ಆಡಿದ್ದು ಕ್ರಮವಾಗಿ 64, 63 ಹಾಗೂ 60 ಅಂಕ ಹೊಂದಿವೆ. ಲೀಗ್‌ ಹಂತದಲ್ಲಿ ಪುಣೆಗೆ 3, ಬುಲ್ಸ್‌, ಜೈಪುರ, ಯೋಧಾಸ್‌ಗೆ ತಲಾ 4 ಪಂದ್ಯ ಬಾಕಿ ಇವೆ. ಅಗ್ರ 2 ಸ್ಥಾನಕ್ಕಾಗಿ ಪೈಪೋಟಿ ಮತ್ತಷ್ಟುತೀವ್ರಗೊಳ್ಳುವ ನಿರೀಕ್ಷೆ ಇದೆ. ಮಂಗಳವಾರದ ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಹರಾರ‍ಯಣ ಸ್ಟೀಲ​ರ್ಸ್‌ 35-33ರಲ್ಲಿ ಜಯಿಸಿತು.

ರ‍್ಯಾಂಕಿಂಗ್‌‌: 2 ಸ್ಥಾನ ಏರಿಕೆ ಕಂಡ ಲಕ್ಷ್ಯ ಸೇನ್‌

ನವದೆಹಲಿ: ಭಾರತದ ತಾರಾ ಶಟ್ಲರ್‌ ಲಕ್ಷ್ಯ ಸೇನ್‌ ಬ್ಯಾಡ್ಮಿಂಟನ್‌ ವಿಶ್ವ ರ‍್ಯಾಂಕಿಂಗ್‌‌ ಪಟ್ಟಿಯಲ್ಲಿ ಎರಡು ಸ್ಥಾನ ಜಿಗಿತ ಕಂಡು ವೃತ್ತಿಬದುಕಿನ ಶ್ರೇಷ್ಠ 6ನೇ ಸ್ಥಾನಕ್ಕೆ ಮರಳಿದ್ದಾರೆ. ಕಿದಂಬಿ ಶ್ರೀಕಾಂತ್‌ ಹಾಗೂ ಎಚ್‌.ಎಸ್‌.ಪ್ರಣಯ್‌ ಸಿಂಗಲ್ಸ್‌ ರ‍್ಯಾಂಕಿಂಗ್‌‌ನಲ್ಲಿ ಕ್ರಮವಾಗಿ 11 ಹಾಗೂ 12ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಗಾಯತ್ರಿ ಗೋಪಿಚಂದ್‌ ಹಾಗೂ ತ್ರೀಸಾ ಜಾಲಿ ಇದೇ ಮೊದಲ ಬಾರಿಗೆ ಅಗ್ರ 20ರೊಳಗೆ ಪ್ರವೇಶಿಸಿದ್ದು, 19ನೇ ಸ್ಥಾನ ಪಡೆದಿದ್ದಾರೆ. ಪಿ.ವಿ.ಸಿಂಧು 6ನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ಹಾಕಿ: ಭಾರತ, ಆಸೀಸ್‌ 3ನೇ ಪಂದ್ಯ ಇಂದು

ಅಡಿಲೇಡ್‌: ಮೊದಲೆರಡು ಪಂದ್ಯಗಳಲ್ಲಿ ಒಟ್ಟು 12 ಗೋಲು ಬಿಟ್ಟುಕೊಟ್ಟಿರುವ ಭಾರತ, ಬುಧವಾರ ಆತಿಥೇಯ ಆಸ್ಪ್ರೇಲಿಯಾ ವಿರುದ್ಧ 3ನೇ ಪಂದ್ಯವನ್ನಾಡಲಿದೆ. ಮತ್ತೊಂದು ದೊಡ್ಡ ಗೆಲುವಿನ ಮೂಲಕ 5 ಪಂದ್ಯಗಳ ಸರಣಿಯನ್ನು ವಶಪಡಿಸಿಕೊಳ್ಳಲು ಆಸ್ಪ್ರೇಲಿಯಾ ಎದುರು ನೋಡುತ್ತಿದೆ. ಮೊದಲ ಪಂದ್ಯದಲ್ಲಿ 4-5ರಲ್ಲಿ ಸೋತಿದ್ದ ಭಾರತ, 2ನೇ ಪಂದ್ಯದಲ್ಲಿ 4-7ರಲ್ಲಿ ಪರಾಭವಗೊಂಡಿತ್ತು. 2023ರ ಜನವರಿಯಲ್ಲಿ ನಡೆಯಲಿರುವ ವಿಶ್ವಕಪ್‌ ದೃಷ್ಟಿಯಿಂದ ಈ ಸರಣಿ ಮಹತ್ವ ಪಡೆದಿದೆ.

Gujarat Elections 2022 ಪತ್ನಿ ರಿವಾಬ ಪರ ಪ್ರಚಾರ ಆರಂಭಿಸಿದ ರವೀಂದ್ರ ಜಡೇಜಾ; ಮೋದಿ ಭೇಟಿ ಮಾಡಿದ ತಾರಾ ಕ್ರಿಕೆಟಿಗ!

ಪಂದ್ಯ: ಮಧ್ಯಾಹ್ನ 1.30ಕ್ಕೆ, 
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ಫಸ್ಟ್‌

ಇಂದು ಖೇಲ್‌ ರತ್ನ, ಅರ್ಜುನ ಪ್ರದಾನ

ನವದೆಹಲಿ: 2022ನೇ ಸಾಲಿನ ಖೇಲ್‌ ರತ್ನ, ಅರ್ಜುನ ಸೇರಿದಂತೆ ಕ್ರೀಡಾ ಪ್ರಶಸ್ತಿಗಳನ್ನು ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಲಿದ್ದಾರೆ. ದಿಗ್ಗಜ ಟೇಬಲ್‌ ಟೆನಿಸ್‌ ಆಟಗಾರ ಶರತ್‌ ಕಮಲ್‌ಗೆ ಖೇಲ್‌ ರತ್ನ, 25 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ದೊರೆಯಲಿದೆ. ಕರ್ನಾಟಕದ ಅಶ್ವಿನಿ ಅಕ್ಕುಂಜಿ, ಬಿ.ಸಿ.ಸುರೇಶ್‌ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ಸ್ವೀಕರಿಸಲಿದ್ದು, ಶೂಟಿಂಗ್‌ ಕೋಚ್‌ ಸುಮಾ ಶಿರೂರ್‌ ಧ್ಯಾನ್‌ಚಂದ್‌ ಪ್ರಶಸ್ತಿ ಪಡೆಯಲಿದ್ದಾರೆ.

ಅರ್ಜಿ ವಜಾ: ಪ್ರಶಸ್ತಿ ವಿತರಣಾ ಕಾರ‍್ಯಕ್ರಮಕ್ಕೆ ತಡೆ ಕೋರಿ ಅಥ್ಲೀಟ್‌ ಮನ್‌ಜೀತ್‌ ಸಿಂಗ್‌ ದೆಹಲಿ ಹೈಕೋರ್ಚ್‌ಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. 2018ರ ಏಷ್ಯನ್‌ ಗೇಮ್ಸ್‌ 800 ಮೀ. ಓಟದಲ್ಲಿ ಚಿನ್ನ ಗೆದ್ದಿದ್ದ ತಮ್ಮನ್ನು ಪ್ರಶಸ್ತಿಗೆ ಪರಿಗಣಿಸದ ಹಿನ್ನೆಲೆಯಲ್ಲಿ ತಡೆ ಕೋರಿದ್ದರು.