Side Effects of Ketchup: ಬೇಕಾಬಿಟ್ಟಿ ಟೊಮೇಟೊ ಕೆಚಪ್ ತಿಂದ್ರೆ ಆರೋಗ್ಯಕ್ಕೆ ತೊಂದ್ರೆ !
ಸಿಹಿ-ಹುಳಿ ಮಿಶ್ರಿತ ಟೊಮೇಟೊ ಕೆಚಪ್ (Tomato Ketchup) ಹಲವರ ಫೇವರಿಟ್. ಎಲ್ಲಾ ಆಹಾರ (Food)ದೊಂದಿಗೆ ಸೇರಿಸಿಕೊಂಡು ತಿನ್ತಾರೆ. ಆದ್ರೆ ತಿನ್ನೋಕೆ ರುಚಿಯಾಗಿರೋ ಟೊಮೇಟೊ ಕೆಚಪ್‌ನಿಂದ ಆರೋಗ್ಯ (Health)ಕ್ಕೆ ಎಷ್ಟೊಂದು ಹಾನಿಯಿದೆ ಗೊತ್ತಾ ?
ಇವತ್ತಿನ ದಿನಗಳಲ್ಲಿ ಸಾಮಾನ್ಯವಾಗಿ ಸಕ್ಕರೆ ಇರುವ ಹಾಗೆಯೇ ಎಲ್ಲರ ಮನೆಯಲ್ಲೂ ಟೊಮೇಟೊ ಕೆಚಪ್‌ನ್ನು ಇಟ್ಟುಕೊಂಡಿರುತ್ತಾರೆ. ಮನೆಯಿಂದ ಹೊರಗಡೆ ಫ್ರೆಂಚ್ ಫ್ರೈಸ್, ಬರ್ಗರ್, ಪಿಜ್ಜಾ, ಸ್ಯಾಂಡ್ ವಿಚ್‌ಗೆ ಕೆಚಪ್ ಹಾಕಿಕೊಂಡು ತಿನ್ನುವಂತೆಯೇ, ಮನೆಯಲ್ಲಿ ದೋಸೆ, ಇಡ್ಲಿಗೆ ಕೆಚಪ್ ಸೇರಿಸಿಕೊಂಡು ತಿನ್ತಾರೆ. ಸಮೋಸಾ, ಪರೋಟ, ಮ್ಯಾಗಿ, ಫ್ರೆಂಚ್ ಫ್ರೈಸ್ ಸೇರಿಸಿ ಹಲವು ಸ್ನ್ಯಾಕ್ಸ್‌ನೊಂದಿಗೆ ಇದನ್ನು ಸೇರಿಸಿ ತಿನ್ನುವವರಿದ್ದಾರೆ. ಬೇರೆ ಹಲವು ರೀತಿಯ ಹಣ್ಣುಗಳಿಂದ ಕೆಚಪ್ ಅನ್ನು ತಯಾರಿಸುತ್ತಾರಾದರೂ ಟೊಮೇಟೊ ಕೆಚಪ್ ಹೆಚ್ಚು ಬಳಕೆಯಾಗುತ್ತದೆ.
ಟೊಮೇಟೊ, ಸಕ್ಕರೆ, ವಿನೆಗರ್ ಮತ್ತು ಇತರ ಮಸಾಲೆಗಳನ್ನು ಸೇರಿಸಿ ಟೊಮೇಟೊ ಕೆಚಪ್ ತಯಾರಿಸಲಾಗುತ್ತದೆ. ಸ್ಪಲ್ಪ ಸಿಹಿ, ಸ್ಪಲ್ಪ ಹುಳಿಯಾಗಿರುವ ಟೊಮೇಟೊ ಕೆಚಪ್ ಎಲ್ಲಾ ರೀತಿಯ ಆಹಾರದ ಜತೆಗೂ ಸುಲಭವಾಗಿ ಕಾಂಬಿನೇಶನ್ ಆಗುತ್ತದೆ. ಪುಟ್ಟ ಮಕ್ಕಳಂತೂ ಬಾಯಿ ಚಪ್ಪರಿಸಿಕೊಂಡು ಕೆಚಪ್ ತಿನ್ತಾರೆ. ಆದರೆ ನಿಮಗೆ ಗೊತ್ತಾ ಎಲ್ಲರೂ ಇಷ್ಟಪಟ್ಟು ತಿನ್ನುವ ಕೆಚಪ್, ಬಹಳಷ್ಟು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಹೀಗಾಗಿಯೇ ಕೆಚಪ್ ಆರೋಗ್ಯಕ್ಕೆ ಉತ್ತಮವಲ್ಲ ಎಂದೇ ಪರಿಗಣಿಸಲಾಗಿದೆ.
ಪಾಲಕ್ - ಟೊಮೇಟೊ ಜೊತೆಯಾಗಿ ಸೇವಿಸಿದರೆ ಸಮಸ್ಯೆಯೇ?
ಟೊಮೇಟೊ ಕೆಚಪ್ ಸೇವನೆ ಯಾಕೆ ಅಪಾಯಕಾರಿ ?
ತಜ್ಞರ ಪ್ರಕಾರ, ಅಂಗಡಿಯಲ್ಲಿ ಖರೀದಿಸಿದ ಟೊಮೇಟೊ ಕೆಚಪ್ (Tomato Ketchup) ಅನ್ನು ಹಲವಾರು ರಾಸಾಯನಿಕಗಳು ಮತ್ತು ಸಂರಕ್ಷಕಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಕೆಚಪ್ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ, ಉಪ್ಪು, ಫ್ರಕ್ಟೋಸ್, ಸಂರಕ್ಷಕಗಳು ಮತ್ತು ಕಾರ್ನ್ ಸಿರಪ್‌ನ್ನು ಹೊಂದಿರುತ್ತದೆ. ಈ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇರಿಸಿದಾಗ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೀಗಾಗಿಯೇ ಟೊಮೇಟೊ ಕೆಚಪ್ ಸೇವನೆ ಆರೋಗ್ಯ (Health)ಕ್ಕೆ ಅತ್ಯಂತ ಹಾನಿಕಾರಕವಾಗಿದೆ. ರುಚಿಕರವಾಗಿರುವ ಟೊಮೇಟೊ ಕೆಚಪ್ ಅನ್ನು ತಿನ್ನುವುದರಿಂದಾಗುವ ತೊಂದರೆಗಳೇನು ?
ಗ್ಯಾಸ್ಟ್ರಿಕ್ ಸಮಸ್ಯೆ
ಟೊಮೇಟೊಗಳು ಸಿಟ್ರಿಕ್ ಮತ್ತು ಮಾಲಿಕ್ ಆಮ್ಲದಲ್ಲಿ ಸಮೃದ್ಧವಾಗಿವೆ. ನೀವು ಅದನ್ನು ಹೆಚ್ಚು ಸೇವಿಸಿದಾಗ, ಅದು ಎದೆಯುರಿ ಅಥವಾ ಆಸಿಡ್ ರಿಫ್ಲಪ್ಸ್‌ಗೆ ಕಾರಣವಾಗಬಹುದು. ಹೀಗಾಗಿಯೇ ಗ್ಯಾಸ್ಟ್ರಿಕ್ (Gastric) ಸಮಸ್ಯೆ ಇರುವವರು ಟೊಮೇಟೊ ಕೆಚಪ್ ಅಥವಾ ಟೊಮೇಟೊ ಸೇವನೆ ಮಾಡದಂತೆ ಸಲಹೆ ನೀಡಲಾಗುತ್ತದೆ.
ದೇಹದಲ್ಲಿ ರಕ್ತ ಹೀನತೆಗೇನು ಪರಿಣಾಮಕಾರಿ ಮದ್ದು?
ಬೊಜ್ಜು
ಟೊಮೇಟೊ ಕೆಚಪ್ ಹೆಚ್ಚು ಸಕ್ಕರೆ (Sugar) ಮತ್ತು ಸಂರಕ್ಷಕಗಳನ್ನು ಹೊಂದಿರುತ್ತದೆ. ಇದು ದೇಹದಲ್ಲಿ ಕೊಬ್ಬನ್ನು ಮತ್ತು ಸ್ಥೂಲಕಾಯತೆಯನ್ನು ಹೆಚ್ಚಿಸುತ್ತದೆ. ಟೊಮೇಟೊ ಕೆಚಪ್ ಅನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿನ ಇನ್ಸುಲಿನ್ ಸಹ ಕಡಿಮೆಯಾಗುತ್ತದೆ. ಇದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಅಲರ್ಜಿಗಳು
ನೀವು ನಿಯಮಿತವಾಗಿ ಟೊಮೇಟೊ ಕೆಚಪ್ ಅನ್ನು ಸೇವಿಸಿದರೆ, ಅದು ಹಿಸ್ಟಮೈನ್ ಅನ್ನು ಒಳಗೊಂಡಿರುವುದರಿಂದ ದೇಹದಲ್ಲಿ ಹಲವಾರು ಅಲರ್ಜಿಗಳನ್ನು ಉಂಟುಮಾಡಬಹುದು. ಕೆಚಪ್‌ನ ಅಧಿಕ ಸೇವನೆಯು ವ್ಯಕ್ತಿಯಲ್ಲಿ ವಾಂತಿ ಮತ್ತು ಭೇದಿಗೆ ಕಾರಣವಾಗಬಹುದು.
ಹೃದಯ ರೋಗಗಳು
ನೀವು ನಿಯಮಿತವಾಗಿ ಟೊಮೇಟೊ ಕೆಚಪ್ ಅನ್ನು ಸೇವಿಸಿದಾಗ, ಅದು ದೇಹದಲ್ಲಿ ಫ್ರಕ್ಟೋಸ್ ಕಾರ್ನ್ ಸಿರಪ್ ಅನ್ನು ಸೇರಿಸುತ್ತದೆ. ಇದು ಹೃದಯ ಕಾಯಿಲೆ (Heart diseases) ಗಳ ಸಾಧ್ಯತಯನ್ನು ಹೆಚ್ಚಿಸುತ್ತದೆ.
ಉರಿಯೂತವನ್ನು ಉಂಟುಮಾಡುತ್ತವೆ
ಕೆಚಪ್ ಹೆಚ್ಚು ಕಾಲ ಉಳಿಯಲು ಹಲವು ರಾಸಾಯನಿಕ ಅಂಶಗಳನ್ನು ಬಳಸಿಕೊಂಡು ಇದನ್ನು ತಯಾರಿಸಲಾಗುತ್ತದೆ. ಸಾಕಷ್ಟು ಸಂರಕ್ಷಕಗಳನ್ನು ಹೊಂದಿರುವ ಆಹಾರಗಳು ದೇಹದಲ್ಲಿ ಉರಿಯೂತವನ್ನು ಉಂಟುಮಾಡುತ್ತವೆ. ಅದು ನಿಮ್ಮ ಕೀಲುಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು.
ಮೂತ್ರಪಿಂಡದ ಕಲ್ಲುಗಳ ಸಮಸ್ಯೆ
ಕೆಚಪ್‌ನಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಅಂಶವಿರುತ್ತದೆ. ಹೆಚ್ಚಿನ ಸೋಡಿಯಂ ಮತ್ತು ಸಂಸ್ಕರಿಸಿದ ಆಹಾರಗಳನ್ನು ಸೇವಿಸುವುದು ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ಮೂತ್ರಪಿಂಡದ ಕಲ್ಲುಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.