ಬರೀ ಕಡಬು, ಚಿಪ್ಸ್ ಮಾತ್ರವಲ್ಲ ಹಲಸಿನ ಬಿರಿಯಾನಿಯೂ ಮಾಡಬಹುದು!

ಹಲಸಿನಂದ (Jackfruit) ಹಲವು ಪ್ರಯೋಜನಗಳಿವೆ. ದೇಹಕ್ಕೆ (Body) ಬೇಕಾದ ಹಲವು ಪೌಷ್ಟಿಕಾಂಶಗಳು, ಖನಿಜಾಂಶಗಳು ಇದರಲ್ಲಿದ್ದು, ಈ ಸೀಸನ್‌ನಲ್ಲಿ ಸಿಗುವ ಈ ಹಣ್ಣನ್ನು  ಯಾವ ಯಾವ ರೀತಿಯಲ್ಲಿ ಸಾಧ್ಯವೋ ಹಾಗೆ ಸೇವಿಸಬೇಕು. ಹಣ್ಣಿನಿಂದ ಸಾಮಾನ್ಯವಾಗಿ ಮುಳಕ, ಕಡಬು, ಪಾಯಸ....ಹೀಗೆ ಏನೇನೋ ಮಾಡಿ ತಿನ್ನಬಹುದು. ಆದರೆ, ಅದಲ್ಲದೇ ಹಲಸಿನಿಂದ ಇನ್ನೇನು ಮಾಡಬಹುದು ? 

You Can Make Tasty Biriyani By Jackfruit And Some Other Healthy Recipes Vin

ಹಲಸು ಹಣ್ಣಿನಿಂದ ಕೆಲವು ಆಹಾರ ಪದಾರ್ಥಗಳನ್ನು ಮಾಡಿ ತಿನ್ನಬಹುದು. ಇದರದ್ದೆ ಸಮಾರಾಧನೆ ಮಲೆನಾಡಿನಲ್ಲಿ ಈಗ. ಆರೋಗ್ಯಕ್ಕೆ ಒಳ್ಳೆಯದು ಎಂಬ ಕಾರಣದಿಂದ ತಿನ್ನುವುದಲ್ಲದೇ, ಮಲೆನಾಡಿಲ್ಲಿ ಸುಲಭವಾಗಿ ಸಿಗುವ ರುಚಿಕರವಾದ ಹಣ್ಣಿದು. ಎಷ್ಟು ತಿಂದರೂ ಮತ್ತಷ್ಟು ತಿನ್ನಬೇಕೆಂಬ ಚಪಲ ಹುಟ್ಟಿಸುವ ಇದರ ಎಳೇ ಕಾಯಿಯಿಂದ ಸಾಂಬಾರು, ಪಲ್ಯ, ಬೆಳೆದ ಕಾಯಿಯಿಂದ ಹಪ್ಪಳ, ಚಿಪ್ಸ್ ಮಾಡಿ ಸವಿಯಬಹುದು. ಅಷ್ಟೇ ಅಲ್ಲ ಇದರ ಬೀಜದಿಂದಲೂ ಹಲ್ವಾ ಹಾಗೂ ಅಡುಗೆ ಪದಾರ್ಥಗಳನ್ನು ಮಾಡಬಹುದು. ಹಣ್ಣು ಚಟ್ಟನ್ನಂತೂ ಎಷ್ಟು ತಿಂದರೂ ಸಾಲದು ಎನಿಸೋಲ್ಲ. ಅದಲ್ಲದೇ ಹಲಸಿನ ಹಣ್ಣು ಅಥವಾ ಕಾಯಿಯಿಂದ ಕೆಲವು ಪದಾರ್ಥಗಳನ್ನು ಮಾಡಬಹುದು. ಆಹಾರ (Food)ದಲ್ಲಿ ಹಲಸನ್ನು ಸೇರಿಸಿಕೊಳ್ಳುವುದು ಹೇಗೆ ? ಹಲಸಿನಿಂದ ಮಾಡಬಹುದಾದ ರುಚಿಕರವಾದ, ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿಲ್ಲದ ಖಾದ್ಯಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ.

ಹಲಸು ಬಿರಿಯಾನಿ (Jack Fruit Biriyani)
ಫಾಸ್ಟಾಗಿ ಮಾಡಬಹುದಾದ ಈ ಜಾಕ್‌ಫ್ರೂಟ್ ಬಿರಿಯಾನಿ (Jackfruit Biriyani) ತಯಾರಿಸುವುದು ಸುಲಭ. ಮೊದಲಿಗೆ ಇನ್ನೂ ಕಾಯಿ ಕಾಯಿ ಇಱುವ ಹಲಸಿನ ಹಣ್ಣಿನ ತುಂಡುಗಳನ್ನು ಮೊಸರು, ಉಪ್ಪು ಮತ್ತು ಮಸಾಲೆಗಳೊಂದಿಗೆ ಮಿಕ್ಸ್ ಮಾಡಿ ಸ್ಪಲ್ಪ ಹೊತ್ತು ನೆನೆಯಲು ಬಿಡಿ. ನಂತರ ಒಂದು ಪಾತ್ರೆಗೆ ತುಪ್ಪ ಹಾಕಿಕೊಂಡು ಇದಕ್ಕೆ ಮಸಾಲೆ ಸೇರಿಸಿ ಬಾಡಿಸಿಕೊಳ್ಳಿ. ಅದಕ್ಕೇ ಈರುಳ್ಳಿ, ಹಸಿಮೆಣಸು ಸೇರಿಸಿ ಫ್ರೈ ಮಾಡಿ ಮಸಾಲೆ ಸೇರಿಸಿದ ಹಲಸಿನ ತುಂಡನ್ನು ಸೇರಿಸಿಕೊಳ್ಳಿ. ನಂತರ ಇದಕ್ಕೆ ತೊಳೆದ ಅಕ್ಕಿ, ನೀರು ಸೇರಿಸಿ, ಅಗತ್ಯವಿದ್ದಷ್ಟು ಉಪ್ಪು ಸೇರಿಸಿ ಮತ್ತು ಪಾತ್ರೆಯನ್ನು ಮುಚ್ಚಿ. 10 ನಿಮಿಷದ ನಂತರ ಬಿರಿಯಾನಿ ರಿಡಿಯಾಗುತ್ತೆ. ಎಲ್ಲರಿಗೂ ಸರ್ವ್ ಮಾಡಿದರೆ ಅದರ ಮಜಾನೇ ಬೇರೆ.

Season ಇದು, ಹಸಿದ ಹೊಟ್ಟೆಗೆ ಹಲಸು ತಿಂದು ಸೊಂಪಾಗಿ ನಿದ್ರಿಸಿದರೆ?

ಹಲಸಿನ ರೋಲ್ (Jackfruit role)
ಇದೇನಿದು ಅಂತ ಆಶ್ಚರ್ಯವಾಗುತ್ತಿದ್ಯಾ? ಎಲ್ಲರೂ ಇದನ್ನು ಮಾಡುವುದು ಕಡಿಮೆ. ಆದರೆ, ಸಿಕ್ಕಾಪಟ್ಟೆ ರುಚಿಯಾಗಿರುತ್ತೆ.  ಒಂದು ಪ್ಯಾನ್‌ನಲ್ಲಿ ಸ್ವಲ್ಪ ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ, ಬೇಯಿಸಿದ ಹಲಸಿನ (ತುಂಬಾ ಹಣ್ಣಾಗಿರಬಾರದು) ತುಂಡುಗಳು ಮತ್ತು ಮಸಾಲೆ ಸೇರಿಸಿ. ಮಸಾಲೆ ಚೆನ್ನಾಗಿ ಬೇಯಿಸಿ ಟೋಸ್ಟ್ ಮಾಡಿ. ಇದಕ್ಕೆ ಸ್ವಲ್ಪ ಕೆಚಪ್, ತುರಿದ ಚೀಸ್ ಸೇರಿಸಿ ಮತ್ತು ಸ್ಟಫಿಂಗ್ ತುಂಬಿಸಿ. ಚಪಾತಿ ಅಥವಾ ಮೈದಾ ರೋಟಿ ತೆಗೆದುಕೊಂಡು ಚೀಸ್ ಸೇರಿಸಿ ಮತ್ತು 3-4 ನಿಮಿಷಗಳ ಕಾಲ ಸ್ಟಫಿಂಗ್ ಸೇರಿಸಿ ಗ್ರಿಲ್ ಮಾಡಿ. ಸಿಕ್ಕಾಪಟ್ಟೆ ಟೇಸ್ಟ್ ಎನಿಸುವ ಈ ರೋಲ್ ತಿಂದರೆ ಖುಷಿಯಾಗದಿದ್ದರೆ ಕೇಳಿ. 

ಹಲಸಿನ ಚಿಪ್ಸ್ (Raw jackfruit Chips)
ಚೆನ್ನಾಗಿ ಬೆಳೆದ ಹಲಸಿನಕಾಯಿಯನ್ನು ಸಣ್ಣಗೆ ಸೀಳಿಕೊಂಡು ನೀರಿನಲ್ಲಿ ಬೇಯಿಸಿ. ನೀರು ಸೋಸಿ ತೆಗೆದ ಬಳಿಕ ಇದಕ್ಕೆ ಉಪ್ಪು,ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ, ಅಕ್ಕಿ ಹಿಟ್ಟನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಎಣ್ಣೆಯಲ್ಲಿ ಗರಿಗರಿಯಾಗುವವರೆಗೆ ಕರಿಯಿರಿ. ಅಲ್ಲದೇ ಬೇಯಿಸದೇ ತೆಳ್ಳಗೆ ಸೀಳಿಕೊಂಡ ಹಲಸಿನ ಕಾಯಿಯನ್ನು ಎಣ್ಣೆಯಲ್ಲಿ ಕರಿದು, ಉಪ್ಪು, ಖಾರ ಸೇರಿಸಿದರೂ ನಡೆಯುತ್ತೆ. ಒಳ್ಳೆ ಎಣ್ಣೆಯಲ್ಲಿ ಕರಿದ, ಚೆನ್ನಾಗಿ ಬಲಿತ ಹಲಸಿನ ಕಾಯಿಯಿಂದ ಮಾಡಿದ ಈ ಚಿಪ್ಸನ್ನು ತಿಂಗಳಾನುಗಟ್ಟಲೆ ಇಟ್ಟು ಸವಿಯ ಬಹುದು. ಹೊರ ಮಳೆ ಬರುವಾಗಲಂತೂ ಇದನ್ನು ಸವಿಯುವ ಮಜಾವೇ ಬೇರೆ. 

ಮಾಗಿದ ಹಲಸಿನ ಹಣ್ಣಿನ ಆರೋಗ್ಯ ಲಾಭಗಳು ಹಲವು, ಸಿಕ್ಕಿದ್ರೆ ಬಿಡ್ಬೇಡಿ!

ಹಲಸಿನ ಕಬಾಬ್ (Raw Jackfruit Kabab)
ಚಿಕನ್ ಕಬಾಬ್ ಗೊತ್ತು. ಆದರೆ, ಇದೇನು ಅಂಥ ಆಚ್ಚರಿಯಾಗುತ್ತಿದ್ಯಾ? ಹೇಗೆ ಮಾಡಬೇಕು ಗೊತ್ತಾ? ಇದಕ್ಕೆ 1 ಕಪ್ ಬೇಯಿಸಿದ ಹಲಸಿನ ತುಂಡುಗಳನ್ನು ತೆಗೆದುಕೊಳ್ಳಬೇಕು. ಅವನ್ನು 1 ಕಪ್ ಬೇಯಿಸಿದ ಕಡಲೆ, ಕೊತ್ತಂಬರಿ, ಹಸಿರು ಮೆಣಸಿನಕಾಯಿ, ಕೆಂಪು ಮೆಣಸಿನ ಪುಡಿ, ಉಪ್ಪು, ಜೀರಿಗೆ ಪುಡಿ ಮತ್ತು ನಿಂಬೆ ರಸ (Lemon Juice) ದೊಂದಿಗೆ ರುಬ್ಬಿಕೊಳ್ಳಬೇಕು. ನಯವಾದ ಮಿಶ್ರಣ ಮಾಡಿಕೊಂಡು, ಅದನ್ನು ಕಾರ್ನ್‌ಫ್ಲೋರ್ ಸೇರಿಸಿ ಫ್ರೈ ಮಾಡಿ ಸವಿಯಿರಿ. ವಿಭಿನ್ನ ರುಚಿ ಇರೋ ಇದನ್ನು ಎಷ್ಟು ತಿಂದರೂ ಸಾಕು ಎನಿಸುವುದೇ ಇಲ್ಲ.

Latest Videos
Follow Us:
Download App:
  • android
  • ios