Asianet Suvarna News Asianet Suvarna News

ಅತ್ಯಂತ ರುಚಿಕರ ಈ ಪಾನ್ ಬೀಡಾ ಬೆಲೆ ಊಹಿಸಲು ಸಾಧ್ಯವಿಲ್ಲ, ಆದರೂ ಭಾರಿ ಬೇಡಿಕೆ!

ಊಟದ ಬಳಿಕ ಪಾನ್ ಬೀಡಾ ಹಾಕಿಕೊಳ್ಳುವುದು ವಾಡಿಕೆ. ಇದೀಗ ಪಾನ್ ಬೀಡಾದಲ್ಲೂ ಹಲವು ವೈರೈಟಿಗಳಿವೆ. ಆದರೆ ಭಾರತದ ಈ ಪಾನ್ ಬೀಡಾ ಭಾರಿ ಜನಪ್ರಿಯ. ಇದರ ಬೆಲೆ ಕೇಳಿದರೆ ತಲೆತಿರುಗುವು ಗ್ಯಾರಂಟಿ.

World most expensive paan beeda cost rs 1 lakh shocks internet ckm
Author
First Published Aug 18, 2024, 6:25 PM IST | Last Updated Aug 18, 2024, 6:25 PM IST

ಮುಂಬೈ(ಆ.18) ಭಾರತೀಯ ಸಂಪ್ರದಾಯದಲ್ಲಿ ಊಟದ ಬಳಿಕ ಪಾನ್ ಬೀಡಾ ಹಾಕಿಕೊಳ್ಳುವುದು ವಾಡಿಕೆ. ಭಾರತೀಯ ಊಟದಲ್ಲಿ ಪಾನ್ ಬೀಡಾಗೆ ವಿಶೇಷ ಮಹತ್ವವಿದೆ. ದೇಶದ ಯಾವುದೇ ಮೂಲೆಯಲ್ಲಿ ಪಾನ್ ಬೀಡಾ ಸ್ಟಾಲ್‌ಗಳು ಲಭ್ಯವಿದೆ. ಬಗೆ ಬಗೆಯ ಪಾನ್ ಬೀಡಾಗಳು ಇದೀಗ ಮಾರುಕಟ್ಟೆ ಪ್ರವೇಶಿಸಿದೆ. ಪಾನ್ ಬೀಡಾ ಬೆಲೆ ಸಾಮಾನ್ಯವಾಗಿ 20 ರೂಪಾಯಿಂದ ಆರಂಭಗೊಂಡು, 200, 500 ರೂಪಾಯಿ ವರೆಗೂ ಇದೆ.  ಇದರ ನಡುವೆ ವಿಶೇಷ ಪಾನ್ ಬೀಡಾ ಒಂದು ಭಾರಿ ಕೋಲಾಹಲ ಸೃಷ್ಟಿಸಿದೆ. ಇದು ವಿಶ್ವದ ಅತ್ಯಂತ ದುಬಾರಿ ಪಾನ್ ಬೀಡಾ. ಇದರ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿ.

ಬರೋಬ್ಬರಿ 1 ಲಕ್ಷ ರೂಪಾಯಿ ಪಾನ್ ಬೀಡಾ ಯಾರು ತಿನ್ನುತ್ತಾರೆ ಎಂದು ಮೂಗು ಮುರಿಯಬೇಡಿ. ಈ ಪಾನ್ ಬೀಡಾಗೆ ಎಲ್ಲಿಲ್ಲದ ಬೇಡಿಕೆ ಇದೆ. ಮುಂಬೈನ ಮಹೀಮ್ ಪಾನ್ ಸ್ಟಾಲ್ ಈ ವಿಶೇಷ ಪಾನ್ ಬೀಡಾ ಮಾರಾಟ ಮಾಡುತ್ತಿದೆ. ಎಂಬಿಎ ಪದವೀಧರ ನೌಶದ್ ಶೇಕ್ ಈ ಸ್ಟಾಲ್ ಮಾಲೀಕ. ಕಾರ್ಪೋರೇಟ್ ಉದ್ಯೋಗದ ಕಡೆ ಮುಖ ಮಾಡದ ನೌಶಾದ್ ಕುಟುಂಬದ ಪಾರಂಪರಿಕ ಪಾನ್ ಬೀಡಾ ಸ್ಟಾಲ್ ನಡೆಸುತ್ತಿದ್ದಾರೆ.

ಇದು ದುಬೈನ ಅತ್ಯಂತ ದುಬಾರಿ ಚಾಕೋಲೇಟ್, ನಿಮ್ಮ ಮನಸ್ಸಿನಲ್ಲಿ ಬೇರೆ ಚಿತ್ರಣ ಬಂದ್ರೆ ಅಚ್ಚರಿಯಿಲ್ಲ!

ಈ ಪಾನ್ ಬೀಡಾ ಮೇಲೆ ಚಿನ್ನದ ಫೊಯ್ಲ್ ಮೂಲಕ ಅಲಂಕಾರ ಮಾಡಲಾಗುತ್ತದೆ. ಜೊತೆಗೆ ಒಣ ಹಣ್ಣುಗಳಿಂದಲೇ ಈ ಪಾನ್ ಪೀಡಾ ತಯಾರಿಸಲಾಗುತ್ತದೆ. ವಿಶೇಷವಾಗಿ ಈ ಪಾನ್ ಬೀಡಾವನ್ನು ಮದುವೆಯಾಗುವ ನವ ಜೋಡಿಗಳಿಗೆ ನೀಡಲು ಖರೀದಿಸುತ್ತಾರೆ. ಆರ್ಡರ್ ಮೂಲಕ ಈ ಪಾನ್ ಬೀಡಾ ವಿತರಣೆಯಾಗುತ್ತಿದೆ. ನವ ಜೋಡಿ ಊಟದ ಬಳಿಕ ಈ ಪಾನ್ ಬೀಡಾ ಸೇವಿಸಿದರೆ ಉತ್ಸಾಹ, ಶಕ್ತಿ ಸಾಮರ್ಥ್ಯ ವೃದ್ಧಿಸಲಿದೆ ಅನ್ನೋದು ಇದರ ವಿಶೇಷ. 

ಜೊತೆಗೆ ಈ ಪಾನ್ ಬೀಡಾ ವಿಶೇಷವಾಗಿ ತಯಾರಿಸಲಾಗುತ್ತದೆ. ಎಲ್ಲವೂ ಆರ್ಗಾನಿಕ್ ವಸ್ತುಗಳನ್ನೇ ಬಳಸಲಾಗುತ್ತದೆ. ಇದಕ್ಕೆ ಲವ್ ಪಾನ್ ಅನ್ನೋ ಹೆಸರು ಕೂಡ ಇದೆ. ಹಲವು ಮದುವೆ ಸೇರಿದಂತೆ ಇತರ ಕಾರ್ಯಕ್ರಮಗಳಲ್ಲಿ ಈ ಪಾನ್ ಬೀಡಾವನ್ನು ಬಳಸುತ್ತಾರೆ. ಮದುವೆ ಸೀಸನ್ ಸಮಯದಲ್ಲಿ ಮಹೀಮ್ ಪಾನ್ ಸ್ಟಾಲ್‌ಗೆ ಪೂರೈಕೆ ದೊಡ್ಡ ಸವಾಲಾಗುತ್ತದೆ ಎಂದು ಮಾಲೀಕರು ಹೇಳುತ್ತಾರೆ. ಲವ್ ಪಾನ್ ಬೀಡಾ ತಯಾರಿಸಲು ಕೆಲ ಸಮಯ ಹಿಡಿಯಲಿದೆ. ಪ್ರತಿಯೊಂದು ಪಾನ್ ಬೀಡಾವನ್ನು ಅತ್ಯಂತ ವಿಶೇಷ ರೀತಿಯಲ್ಲಿ ತಯಾರಿಸಲಾಗುತ್ತದೆ. ಹೀಗಾಗಿ ಬೇಡಿಕೆ ಹೆಚ್ಚಾಗುವ ಸಮಯದಲ್ಲಿ ಪೂರೈಕೆ ದೊಡ್ಡ ಸವಾಲಾಗುತ್ತದೆ ಎಂದಿದ್ದಾರೆ.

 

 

ಈ ಪಾನ್ ಬೀಡಾ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಹಲವರು ಅಚ್ಚರಿಗೊಂಡಿದ್ದಾರೆ. ಇಷ್ಟೊಂದು ಮೊತ್ತದ ಪಾನ್ ಬೀಡಾ ಇದೆ ಅನ್ನೋದು ಈಗಲೇ ಗೊತ್ತಾಗಿದೆ. ಇದನ್ನು ತಿನ್ನುವ ಸಾಹಸ ಮಾಡುವುದಿಲ್ಲ. ಇದರ ಬದಲು 1 ಲಕ್ಷ ರೂಪಾಯಿ ಬಂಡವಾಳ ಹೂಡಿ ನಾನೇ ಪಾನ್ ಸ್ಟಾಲ್ ಇಡುತ್ತೇನೆ ಎಂದು ಕಮೆಂಟ್ ಮಾಡಿದ್ದಾರೆ.

ವಿಶ್ವದ ಟಾಪ್ 100 ಐಸ್ ಕ್ರೀಂಗಳ ಪಟ್ಟಿಯಲ್ಲಿ ಸ್ಥಾನ ಪಡೆದ ರಾಜ್ಯದ 5 ಐಸ್‌ಕ್ರೀಂಗಳು! ಇಲ್ಲಿದೆ ನೋಡಿ

Latest Videos
Follow Us:
Download App:
  • android
  • ios