Asianet Suvarna News Asianet Suvarna News

World Coconut Day 2022: ವಿಶ್ವ ತೆಂಗಿನಕಾಯಿ ದಿನದ ಇತಿಹಾಸ ಮತ್ತು ಮಹತ್ವ,

ತೆಂಗಿನಮರವನ್ನು ಕಲ್ಪವೃಕ್ಷವೆಂದು ಕರೆಯುತ್ತಾರೆ. ಯಾಕೆಂದರೆ ಇದು ಕೇಳಿದ್ದನ್ನೆಲ್ಲಾ ಒದಗಿಸುವ, ಹಲವು ಆರೋಗ್ಯಕರ ಗುಣವುಳ್ಳ ಮರ. ವಿಶ್ವ ತೆಂಗಿನಕಾಯಿ ದಿನವನ್ನು ಸೆಪ್ಟೆಂಬರ್ 2ರಂದು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವವೇನು ಎಂಬುದನ್ನು ತಿಳಿದುಕೊಳ್ಳೋಣ.

World Coconut Day 2022: History And Significance Of Nariyal Vin
Author
First Published Sep 2, 2022, 8:39 AM IST

ಭಾರತದಲ್ಲಿ ತೆಂಗಿನ ಕಾಯಿಯನ್ನು ಬಳಸದವರು ವಿರಳ. ಅದರಲ್ಲೂ ಕರ್ನಾಟಕದ ಮಂದಿಯ ಆಹಾರಶೈಲಿಯಲ್ಲಿ ತೆಂಗಿಗೆ ಖಾಯಂ ಸ್ಥಾನ ಇರುತ್ತದೆ. ದೇಶದಲ್ಲಿ ಅತಿ ಹೆಚ್ಚು ತೆಂಗು ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕ ಅಗ್ರಪಂಕ್ತಿಗೆ ಬರುತ್ತದೆ. ತೆಂಗು ಅಕ್ಷರಶಃ ಕಲ್ಪವೃಕ್ಷ. ಇದರ ಪ್ರತಿಯೊಂದು ಭಾಗವೂ ಪ್ರಯೋಜನಕಾರಿ. ಬಾಯಿ ರುಚಿಯಿಂದ ಹಿಡಿದು ಔಷಧದವರೆಗೂ ಇದು ಉಪಯುಕ್ತವಾಗಿದೆ. ಮಾತ್ರವಲ್ಲ ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ. ತೆಂಗಿನಕಾಯಿ ಮತ್ತು ಎಳನೀರಿನ ಪ್ರಯೋಜನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಪ್ರತೀ ವರ್ಷ ವಿಶ್ವ ತೆಂಗು ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ತೆಂಗಿನಕಾಯಿ ದಿನದ ಇತಿಹಾಸ
ವಿಶ್ವ ತೆಂಗಿನಕಾಯಿ ದಿನ (World Coconut Day)ವನ್ನು ಸೆಪ್ಟೆಂಬರ್ 2ರಂದು ಆಚರಿಸಲಾಗುತ್ತದೆ. ತೆಂಗಿನಕಾಯಿಯ ಮೌಲ್ಯ ಮತ್ತು ಪ್ರಯೋಜನಗಳ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸಲು ಈ ದಿನವನ್ನು ಆಚರಿಸಲು ನಿರ್ಧರಿಸಲಾಯಿತು.. ಪ್ರಪಂಚದಾದ್ಯಂತ ಹೆಚ್ಚು ಸೇವಿಸುವ ಹಣ್ಣುಗಳಲ್ಲಿ ತೆಂಗಿನಕಾಯಿ ಸಹ ಸ್ಥಾನ ಪಡೆದಿದೆ. ಇದಲ್ಲದೆ, ಹಣ್ಣಿನ ವಿವಿಧೋದ್ದೇಶ ಸ್ವಭಾವವು ಅದನ್ನು ಆರೋಗ್ಯಕರವೆಂದು (Healthy) ಪರಿಗಣಿಸುವಂತೆ ಮಾಡಿದೆ. ತೆಂಗಿನ ಹಾಲನ್ನು ಸೌಂದರ್ಯವರ್ಧಕ (Beauty product) ಉತ್ಪನ್ನಗಳಲ್ಲಿ ಸಹ ಬಳಸುತ್ತಾರೆ. ತೆಂಗಿನಕಾಯಿ ಡ್ರೂಪ್ ಕುಟುಂಬದ ಉತ್ಪನ್ನವಾಗಿದೆ. ಮತ್ತು ಹೆಚ್ಚಾಗಿ ಉಷ್ಣವಲಯದ ದೇಶಗಳಲ್ಲಿ ಕಂಡುಬರುತ್ತದೆ. ಏಷ್ಯನ್-ಪೆಸಿಫಿಕ್ ಪ್ರದೇಶದಲ್ಲಿ ತೆಂಗಿನಕಾಯಿ ಹೆಚ್ಚು ಜನಪ್ರಿಯವಾಗಿದೆ.

ಅಬ್ಬಬ್ಬಾ! ಮನೆಯಂಗಳದಲ್ಲೇ ತೆಂಗಿನಮರವಿದ್ದರೆ ಎಷ್ಟೆಲ್ಲ ಲಾಭಗಳು!

ವಿಶ್ವ ತೆಂಗಿನಕಾಯಿ ದಿನದ ಮಹತ್ವ
ತೆಂಗಿನಕಾಯಿಯನ್ನು ಆಹಾರ (Food), ಇಂಧನ, ಔಷಧ (Medicine), ಸೌಂದರ್ಯವರ್ಧಕಗಳುಮತ್ತು ಇತರ ಹಲವು ವಸ್ತುಗಳಂತಹ ಬಹುಮುಖಿ ಬಳಕೆಗಳಿಂದಾಗಿ 'ಜೀವನದ ಮರ' ಎಂದು ಉಲ್ಲೇಖಿಸಲಾಗುತ್ತದೆ. ವಿಶ್ವ ತೆಂಗಿನಕಾಯಿ ದಿನವನ್ನು ಸೆಪ್ಟೆಂಬರ್ 2, 2009ರಂದು ಆಚರಿಸಲಾಯಿತು. ಏಷ್ಯಾ ಪೆಸಿಫಿಕ್ ತೆಂಗಿನಕಾಯಿ ಸಮುದಾಯ (APCC) ತೆಂಗಿನಕಾಯಿಗಳ ಮೌಲ್ಯ ಮತ್ತು ಸಮಾಜದ ಮೇಲೆ ಅವುಗಳ ಪ್ರಭಾವದ ಬಗ್ಗೆ ಗಮನ ಸೆಳೆಯಲು ಈ ದಿನವನ್ನು ಆಚರಿಸಲು ನಿರ್ಧರಿಸಿತು. 

ಅಂದಿನಿಂದ, UN-ESCAP (ಯುನೈಟೆಡ್ ನೇಷನ್ಸ್ ಎಕನಾಮಿಕ್ ಅಂಡ್ ಸೋಶಿಯಲ್ ಕಮಿಷನ್ ಫಾರ್ ದಿ ಏಷ್ಯಾ ಪೆಸಿಫಿಕ್) ತಮ್ಮ ಕಾರ್ಯಕ್ರಮಗಳನ್ನು ಉತ್ತೇಜಿಸಲು, ಈ ಉಷ್ಣವಲಯದ ಹಣ್ಣನ್ನು ಪ್ರಚಾರ ಮಾಡುವ ಕ್ರಮವನ್ನು ಸ್ಮರಿಸಲು ಮತ್ತು ಅದರ ಆರೋಗ್ಯದ ಬಗ್ಗೆ ಜಾಗೃ (Awareness)ತಿ ಮೂಡಿಸಲು ವಾರ್ಷಿಕವಾಗಿ ಈ ದಿನವನ್ನು ಆಯೋಜಿಸಲು APCC ಗೆ ಅಧಿಕಾರ ನೀಡಿದೆ. ತೆಂಗು ಅಭಿವೃದ್ಧಿ ಮಂಡಳಿ (CDB) ಸಹಾಯದಿಂದ ಈ ದಿನವನ್ನು ಭಾರತದಲ್ಲಿ ಕೇರಳ, ತಮಿಳುನಾಡು, ಕರ್ನಾಟಕ, ಗೋವಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಒರಿಸ್ಸಾ ಮುಂತಾದ ರಾಜ್ಯಗಳಲ್ಲಿ ಆಚರಿಸಲಾಗುತ್ತದೆ.

ಸೊಳ್ಳೆಗಳನ್ನು ದೂರವಿಡಲು ಕೊಬ್ಬರಿ ಎಣ್ಣೆ ಲೋಷನ್ ಬಳಸಿ

ವಿಶ್ವ ತೆಂಗಿನಕಾಯಿ ದಿನ 2022ರ ಥೀಮ್
ಅಂತಾರಾಷ್ಟ್ರೀಯ ತೆಂಗಿನ ಸಮುದಾಯವು ವಿಶ್ವ ತೆಂಗಿನಕಾಯಿ ದಿನದ ಥೀಮ್‌ಗಳನ್ನು ಆಯ್ಕೆ ಮಾಡುತ್ತದೆ. ಈ ವರ್ಷದ ವಿಶ್ವ ತೆಂಗಿನಕಾಯಿ ದಿನದ ಥೀಮ್ "ಉತ್ತಮ ಭವಿಷ್ಯ ಮತ್ತು ಜೀವನಕ್ಕಾಗಿ ತೆಂಗಿನಕಾಯಿ ಬೆಳೆಯುವುದು" ಎಂಬುದಾಗಿದೆ.

ತೆಂಗಿನಕಾಯಿ ಬಗ್ಗೆ ನೀವು ತಿಳಿದಿರದ ಸಂಗತಿಗಳು
ತೆಂಗಿನಕಾಯಿ ಎಂಬ ಹೆಸರು ಪೋರ್ಚುಗೀಸ್ ಪದ 'ಕೊಕೊ'ದಿಂದ ಬಂದಿದೆ, ಇದರರ್ಥ 'ತಲೆಬುರುಡೆ' ಎಂಬುದಾಗಿದೆ. ತೆಂಗಿನಕಾಯಿ ಮೊದಲು ಇಂಡೋ-ಮಲಯನ್ ಪ್ರದೇಶದಲ್ಲಿ ಎಲ್ಲೋ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತದೆ. ವೈಜ್ಞಾನಿಕವಾಗಿ ಕೊಕೊಸ್ ನ್ಯೂಸಿಫೆರಾ ಎಂದು ಕರೆಯಲ್ಪಡುವ ತೆಂಗಿನ ಮರವು 82 ಅಡಿ ಅಥವಾ 25 ಮೀಟರ್ ಎತ್ತರವನ್ನು ತಲುಪಬಹುದು.ತೆಂಗಿನಕಾಯಿಗಳು ನೀರಿನಲ್ಲಿ ಸುಲಭವಾಗಿ ತೇಲುತ್ತವೆ.

ವಿಶ್ವಾದ್ಯಂತ ಹೆಚ್ಚು ತೆಂಗಿನಕಾಯಿಯನ್ನು ಉತ್ಪಾದಿಸುವ ಮೂರು ದೇಶಗಳು ಭಾರತ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ಆಗಿದೆ. ಸಂಸ್ಕೃತದಲ್ಲಿ, ತೆಂಗಿನ ಮರವನ್ನು "ಕಲ್ಪವೃಕ್ಷ," ಅಥವಾ "ಸ್ವರ್ಗದ ಮರ" ಎಂದು ಉಲ್ಲೇಖಿಸಲಾಗುತ್ತದೆ ಏಕೆಂದರೆ ಅದು ಬದುಕುಳಿಯಲು ಅಗತ್ಯವಿರುವ ಎಲ್ಲವನ್ನೂ ಒದಗಿಸುತ್ತದೆ.

Follow Us:
Download App:
  • android
  • ios