Asianet Suvarna News Asianet Suvarna News

3.5 ನಿಮಿಷದಲ್ಲಿ ಸಿದ್ಧ ಆಗದ ಪಾಸ್ತಾ, ಕಂಪೆನಿ 40 ಕೋಟಿ ರೂ. ನೀಡುವಂತೆ ಮಹಿಳೆಯ ಡಿಮ್ಯಾಂಡ್ !

ಪಾಸ್ತಾವನ್ನು ತಯಾರಿಸಲು ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಅಸಮಾಧಾನಗೊಂಡ ಫ್ಲೋರಿಡಾದ ಮಹಿಳೆಯೊಬ್ಬರು ಅಮೇರಿಕನ್ ಆಹಾರ ಕಂಪನಿ ಕ್ರಾಫ್ಟ್ ಹೈಂಜ್ ವಿರುದ್ಧ40 ಕೋಟಿ ರೂ. ಹೆಚ್ಚು ಮೊಕದ್ದಮೆ ಹೂಡಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Woman Sues Company For Rs 40 Crore As Pasta Is Never Ready In 3.5 Minutes Vin
Author
First Published Nov 29, 2022, 10:27 AM IST

ಪಾಸ್ತಾವನ್ನು ತಯಾರಿಸಲು ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಅಸಮಾಧಾನಗೊಂಡ ಫ್ಲೋರಿಡಾದ ಮಹಿಳೆಯೊಬ್ಬರು ಅಮೇರಿಕನ್ ಆಹಾರ ಕಂಪನಿ (Food Company) ಕ್ರಾಫ್ಟ್ ಹೈಂಜ್ ವಿರುದ್ಧ40 ಕೋಟಿ ರೂ. ಹೆಚ್ಚು ಮೊಕದ್ದಮೆ ಹೂಡಿದ್ದಾರೆ. ವೆಲ್ವೀಟಾ ಮೈಕ್ರೊವೇವಬಲ್ ಮ್ಯಾಕ್ ಮತ್ತು ಚೀಸ್ ಕಪ್‌ಗಳು ತಯಾರಾಗಲು 3.5 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳುವ ಮೂಲಕ ಕ್ರಾಫ್ಟ್ ಹೈಂಜ್ ಕಂಪನಿ (ಕೆಹೆಚ್‌ಸಿ) ಫೆಡರಲ್ ಕಾನೂನನ್ನು ಉಲ್ಲಂಘಿಸಿದೆ ಎಂದು ನವೆಂಬರ್ 18ರಂದು ಸಲ್ಲಿಸಿದ ಕ್ಲಾಸ್ ಆಕ್ಷನ್ ಮೊಕದ್ದಮೆಯಲ್ಲಿ ಅಮಂಡಾ ರಮಿರೆಜ್ ಆರೋಪಿಸಿದ್ದಾರೆ.

ಕಂಪನಿ ಹೇಳುವಂತೆ 3.5 ನಿಮಿಷದಲ್ಲಿ ಪಾಸ್ತಾ ತಯಾರಿಸಲು ಸಾಧ್ಯವಿಲ್ಲ ಎಂದು ಮಹಿಳೆ (Women) ಹೇಳಿದ್ದಾರೆ. 3.5 ನಿಮಿಷದಲ್ಲಿ ಪಾಸ್ತಾ ತಯಾರು ಮಾಡಬಹುದು ಎಂದು ಕಂಪನಿ ಮ್ಯಾಕ್‌ ಮತ್ತು ಚೀಸ್‌ಗಳನ್ನು ಮಾರಾಟ (Sale) ಮಾಡಿದೆ. ಆದರೆ ಮೈಕ್ರೋಓವನ್‌ನಲ್ಲಿ ಪಾಸ್ತಾ ಬೇಯಲು 3.5 ನಿಮಿಷ ಬೇಕು. ಇನ್ನು ಅದಕ್ಕೂ ಮೊದಲಿನ ತಯಾರಿಗೆ ಹೆಚ್ಚಿನ ಸಮಯಬೇಕು. ಹಾಗಾಗಿ ಇದು ಕಾನೂನಿನ ಉಲ್ಲಂಘನೆ ಎಂದು ಮಹಿಳೆ ಹೇಳಿದ್ದಾರೆ.

ಈ ಆಹಾರದಿಂದಲೂ ತಲೆನೋವು ಬರಬಹುದು: ತಿನ್ನೋ ಮುನ್ನ ಎಚ್ಚರ!

ಪಾಸ್ತಾ ಕಂಪೆನಿಯ ವಿರುದ್ಧ ಮಹಿಳೆಯ ದೂರು
ವೆಲ್ವೀಟಾ ಪಾಸ್ತಾ ಮತ್ತು ಚೀಸ್ 3½ ನಿಮಿಷಗಳಲ್ಲಿ ಸಿದ್ಧವಾಗುತ್ತದೆ ಎಂದು ಉತ್ಪನ್ನದ ಪ್ಯಾಕೆಟ್‌ನಲ್ಲಿ ತಿಳಿಸಲಾಗಿದೆ. ಇದು ಮ್ಯಾಕರೋನಿ ಪಾಸ್ಟಾ ಮೈಕ್ರೋವೇವ್‌ನಲ್ಲಿ ಬೇಯಿಸಲು ತೆಗೆದುಕೊಳ್ಳುವ ಸಮಯವಾಗಿದೆ. ಆದರೆ ಸೂಚಿಸಿದ ಸಮಯದಲ್ಲಿ ಪಾಸ್ತಾ ಸಿದ್ಧವಾಗುತ್ತಿಲ್ಲ ಎಂದು ಮಹಿಳೆ ದೂರಿದ್ದಾರೆ. ಆದರೆ ಡಬ್ಲ್ಯುಎಫ್‌ಎಲ್‌ಎ ವರದಿಯ ಪ್ರಕಾರ, ಈ ಪ್ರಕ್ರಿಯೆಯು ಇತರ ಹಂತಗಳನ್ನು ಒಳಗೊಂಡಿರುವುದರಿಂದ ಉತ್ಪನ್ನವನ್ನು (Product) ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಫ್ಲೋರಿಡಾದ ದಕ್ಷಿಣ ಜಿಲ್ಲೆಗಾಗಿ ಯುಎಸ್ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.

ಜನರನ್ನು ಸೆಳೆಯುವ ಉದ್ದೇಶದಿಂದ ಫಾಸ್ಟ್ ಫುಡ್ ಕಂಪನಿಗಳು ಸಾಮಾನ್ಯವಾಗಿ ತಮ್ಮ ಆಹಾರ (Food)ವನ್ನು ಸೀಮಿತ ಸಮಯದಲ್ಲಿ ತಯಾರಿಸಬಹುದು ಮತ್ತು ತ್ವರಿತವಾಗಿ ಸೇವಿಸಬಹುದು ಎಂದು ಹೇಳಿಕೊಳ್ಳುತ್ತಾರೆ. ಈ ರೀತಿಯ ಜಾಹೀರಾತಿನಿಂದ (Advertisement) ಉತ್ಪನ್ನವನ್ನು ಮಾರಾಟ ಮಾಡಲಾಗುತ್ತದೆ. ಆದರೆ ಎಲ್ಲಾ ಪ್ರಾಡಕ್ಟ್‌ಗಳು ಸೂಚಿಸಿದ ಸಮಯಕ್ಕೆ ಸರಿಯಾಗಿ ಸಿದ್ಧಗೊಳ್ಳುವುದಿಲ್ಲ. ಬದಲಿಗೆ ಕೆಲವೊಮ್ಮೆ ಅದಕ್ಕಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಹೀಗಾಗಿಯೇ 3.5 ನಿಮಿಷಗಳಲ್ಲಿ ಪಾಸ್ಟಾ ಎಂದಿಗೂ ಸಿದ್ಧವಾಗುವುದಿಲ್ಲ ಎಂದು ಮಹಿಳೆ ಪಾಸ್ಟಾ ಕಂಪನಿಯ ವಿರುದ್ಧ ದೂರು ನೀಡಿದ್ದಾರೆ.

Weight Loss Tips: ಬೇಗ ತೂಕ ಇಳಿಸ್ಕೋಬೇಕಾ, ಚಪಾತಿಗೆ ತುಪ್ಪ ಹಚ್ಕೊಂಡು ತಿನ್ನಿ ಸಾಕು

40 ಕೋಟಿ ರೂ. ಪರಿಹಾರ ನೀಡುವಂತೆ ಆಗ್ರಹ
U.Sನ ಫ್ಲೋರಿಡಾದ ಮಹಿಳೆಯೊಬ್ಬರು ಅಮೆರಿಕನ್ ಆಹಾರ ಕಂಪನಿಯಾದ ಕ್ರಾಫ್ಟ್ ಹೈಂಜ್ ವಿರುದ್ಧ 40 ಕೋಟಿಗೂ ಹೆಚ್ಚು ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಏಕೆಂದರೆ ಬ್ರ್ಯಾಂಡ್ ಸೂಚಿಸಿದ ಸಮಯದ ಚೌಕಟ್ಟಿನಲ್ಲಿ ಪಾಸ್ತಾ ಎಂದಿಗೂ ಸಿದ್ಧವಾಗಿಲ್ಲ ಎಂಬ ಅಂಶದಿಂದ ಅವರು ಅತೃಪ್ತರಾಗಿದ್ದರು. ಮಹಿಳೆಯು ಅಕ್ಟೋಬರ್ ಮತ್ತು ನವೆಂಬರ್ 2022ರ ನಡುವೆಮ್ಯಾಕ್ ಮತ್ತು ಚೀಸ್ ಕಪ್‌ಗಳನ್ನು ಖರೀದಿಸಿದ್ದರು ಎಂದು ಮೊಕದ್ದಮೆಯು ಹೇಳಿಕೊಂಡರೂ, ಮಹಿಳೆಯು ತನ್ನ ಪಾಸ್ಟಾವನ್ನು ತಯಾರಿಸಲು ತೆಗೆದುಕೊಂಡ ಸಮಯವನ್ನು ಅದು ಉಲ್ಲೇಖಿಸುವುದಿಲ್ಲ. ಮಹಿಳೆ 5 ಮಿಲಿಯನ್ ಡಾಲರ್ ಅಥವಾ 40 ಕೋಟಿ 80 ಲಕ್ಷ ರೂಪಾಯಿ ಪರಿಹಾರ ಕೋರಿದ್ದಾರೆ.

ಕ್ರಾಫ್ಟ್ ಹೈಂಜ್ ಕಂಪನಿಯು ದಾವೆಯ ಬಗ್ಗೆ ಮಾಧ್ಯಮ ಹೇಳಿಕೆಯಲ್ಲಿ ಇದನ್ನು 'ಕ್ಷುಲ್ಲಕ ಮೊಕದ್ದಮೆ' ಎಂದು ಕರೆದಿದೆ. ಮಹಿಳೆಗೆ ಪರಿಹಾರ ನೀಡುವ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

Follow Us:
Download App:
  • android
  • ios