Viral Video: 500ರ ನೋಟು ಸ್ಟಫ್‌ ಮಾಡಿ ಪರಾಠ ತಯಾರಿಸಿದ ಮಹಿಳೆ, ಮುಂದೇನಾಯ್ತು ಗೊತ್ತಾ?

ಸಾಮಾಜಿಕ ಜಾಲತಾಣದಲ್ಲಿ ಅಡುಗೆಗೆ ಸಂಬಂಧಿಸಿದ ಅನೇಕ ವಿಡಿಯೋ, ಫೋಟೋಗಳು ವೈರಲ್ ಆಗ್ತಿರುತ್ತವೆ. ಕೆಲ ವಿಡಿಯೋಗಳು ಜನರ ಮನಸ್ಸು ಕದ್ರೆ ಮತ್ತೆ ಕೆಲವು ಟೀಕೆಗೆ ಗುರಿಯಾಗ್ತವೆ. ಇನ್ನೊಂದಿಷ್ಟು ವಿಡಿಯೋ ಅಚ್ಚರಿ ಹುಟ್ಟಿಸುತ್ತದೆ. ಈಗ ಮಹಿಳೆಯೊಬ್ಬಳ ಪರಾಠ ವಿಡಿಯೋ ವೈರಲ್ ಆಗಿದೆ.
 

Woman Stuffs Rs Five Hundred In Paratha And This Is What Happens When Its Cooked

ಪರಾಠ ಯಾರಿಗೆ ತಿಳಿದಿಲ್ಲ ಹೇಳಿ? ಭಾರತೀಯ ಪಾಕಪದ್ಧತಿಯಲ್ಲಿ ಅತ್ಯಂತ ನೆಚ್ಚಿನ ಆಹಾರಗಳಲ್ಲಿ ಪರಾಠ ಕೂಡ ಒಂದು. ಪರಾಠವನ್ನು ನಾನಾ ಬಗೆಯಲ್ಲಿ ತಯಾರಿಸಲಾಗುತ್ತದೆ. ಹಿಟ್ಟಿಗೆ ಬೇರೆ ಬೇರೆ ತರಕಾರಿಯ ಹೂರಣ ಮಾಡಿ, ರುಚಿಯಾದ ಪರಾಠ ತಯಾರಿಸಲಾಗುತ್ತದೆ. ಆಲೂ ಪರಾಠ, ಪನೀರ್ ಪರಾಠ, ಎಗ್ ಪರಾಠ ಹೀಗೆ ನಾನಾ ಪರಾಠವನ್ನು ನಾವು ಬೆಳಗಿನ ಉಪಹಾರಕ್ಕೆ ಹಾಗೂ ಮಧ್ಯಾಹ್ನದ ಊಟಕ್ಕೆ ಸೇವನೆ ಮಾಡ್ತೇವೆ. ನೀವು ವೆರೈಟಿಸ್ ಪರಾಠ ಬಗ್ಗೆ ಕೇಳಿರಬಹುದು ಆದ್ರೆ ಹಣದ ಪರಾಠ ಬಗ್ಗೆ ಕೇಳಿದ್ದೀರಾ? ಇಲ್ಲ ಅಲ್ವಾ? ನೋಟಿನ ಪರಾಠ ಮಾಡೋದಾ? ನಮಗೇನು ಹುಚ್ಚಾ ಅಂತಾ ಕೇಳ್ಬೇಡಿ. 

ಕೆಲವರು ಸಾಮಾಜಿಕ ಜಾಲತಾಣ (Social Network) ದಲ್ಲಿ ಹೊಸ ಹೊಸ ಪ್ರಯೋಗ ಮಾಡ್ತಿರುತ್ತಾರೆ. ಈಗ ನೋಟಿನ ಪರಾಠ (Paratha) ವೀಡಿಯೊ ಇಂಟರ್ನೆಟ್‌ (Internet) ನಲ್ಲಿ ವೈರಲ್ ಆಗಿದೆ. ಮಹಿಳೆಯೊಬ್ಬರು ವಿಶಿಷ್ಟ ರೀತಿಯಲ್ಲಿ ಪರಾಠ ತಯಾರಿಸುವ ವಿಡಿಯೋ (Video) ಅಂತರ್ಜಾಲದಲ್ಲಿ ಹರಿದಾಡಿದೆ. ಇನ್ಸ್ಟಾಗ್ರಾಮ್ ನಲ್ಲಿ @janu9793 ಹೆಸರಿನ ಬಳಕೆದಾರರು  ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.  ಪೈಸಾ ಒ ಪೈಸಾ ಎಂದು ಶೀರ್ಷಿಕೆ ಹಾಕಿದ್ದಾರೆ. 

ಆಹಾರ ಎದುರಿಗಿದ್ದರೂ ತಿನ್ನದೇ ಮೊಬೈಲ್ ಒತ್ತುವ ಗ್ರಾಹಕರು: ಸ್ಮಾರ್ಟ್‌ಫೋನ್ ನಿಷೇಧಿಸಿದ ಹೊಟೇಲ್‌

ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಪರಾಠ ಹಿಟ್ಟನ್ನು ಲಟ್ಟಣಿಸಿ, ಅದ್ರ ಮೇಲೆ 500 ರೂಪಾಯಿ ನೋಟನ್ನು ಇಡುತ್ತಾರೆ. ನಂತ್ರ ನೋಟನ್ನು ಹಿಟ್ಟಿನಿಂದ ಕವರ್ ಮಾಡಿ ಮತ್ತೆ ಲಟ್ಟಿಸುತ್ತಾರೆ. ಆ ನಂತ್ರ ಅವರು ಇದನ್ನು ಒಲೆಯ ಮೇಲಿರುವ ತವಾಗೆ ಹಾಕಿ ಚೆನ್ನಾಗಿ ಬೇಯಿಸುತ್ತಾರೆ. ಇದಾದ್ಮೇಲೆ ಜನರು ಶಾಕ್ ಆಗುವ ಘಟನೆ ನಡೆಯುತ್ತದೆ. ಮಹಿಳೆ ನೋಟು ಹಾಕಿ ಮಾಡಿರುವ ಪರಾಠ ತೆರೆದಾಗ 500 ರೂಪಾಯಿಗಳ ಬದಲಿಗೆ 2000 ರೂಪಾಯಿಯ ನೋಟ ನಿಮಗೆ ಕಾಣಿಸುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪರ ಹಾಗೂ ವಿರೋದಿ ಕಮೆಂಟ್ ಪಡೆದಿದೆ. ಈ ವಿಡಿಯೋವನ್ನು 5.7 ಮಿಲಿಯನ್ ಬಾರಿ ವೀಕ್ಷಣೆ ಮಾಡಲಾಗಿದೆ. 86 ಸಾವಿರ ಲೈಕ್ಸ್ ಬಂದಿದೆ. 700ಕ್ಕೂ ಹೆಚ್ಚು ಕಮೆಂಟ್ಸ್ ಬಂದಿದೆ.  

ಪರಾಠದೊಳಗೆ 500 ರೂಪಾಯಿ ನೋಟನ್ನು ಹಾಕಿ ನಂತ್ರ 2 ಸಾವಿರ ರೂಪಾಯಿ ನೋಟು ತೆಗೆದ ಮಹಿಳೆ ಜನರಿಗೆ ಮೋಸ ಮಾಡಿದ್ದಾರೆ ಎಂದು ಕೆಲವರು ಕೋಪ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಇದು ಎಡಿಟೆಡ್ ಎಂದಿದ್ದಾರೆ.  ಸೋಷಿಯಲ್ ಮೀಡಿಯಾದಲ್ಲಿ ನೀವು ಏನು ಬೇಕಾದರೂ ಮಾಡಿ, ಆದರೆ ದಯವಿಟ್ಟು ಹಣವನ್ನು ಅವಮಾನಿಸಬೇಡಿ. ಜನರು ಸಹ ಇಂಥಹ ಜನರನ್ನು ಬೆಂಬಲಿಸುವುದನ್ನು ತಪ್ಪಿಸಬೇಕು ಎಂದು ಬಳಕೆದಾರನೊಬ್ಬ  ಕಮೆಂಟ್ ಮಾಡಿದ್ದಾನೆ.  500 ರೂಪಾಯಿ  ನೋಟು 2000 ರೂಪಾಯಿ ಆಗಿದೆ ವಾವ್ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇದು ಎಡಿಟಿಂಗ್ ಕಮಾಲ್ ಎಂದು ಇಬ್ಬೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. 

Mango Benefit : ಮಧುಮೇಹಿಗಳಿಗೆ ಮಾವು ನಿಷಿದ್ಧ, ಆದ್ರೆ ಹೀಗ್ ತಿನ್ನಬಹುದು!

500 ರೂಪಾಯಿ ಅಸಲಿ ನೋಟ್ ಆಗಿದ್ರೆ 2 ಸಾವಿರ ರೂಪಾಯಿ ನಕಲಿ ನೋಟ್. ನಮಗೆ ಈ ಅಸಲಿ – ನಕಲಿ ಆಟ ಬೇಡ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಜಗತ್ತಿನಲ್ಲಿ ಹುಚ್ಚರ ಸಂಖ್ಯೆ ಕಡಿಮೆಯೇನಿಲ್ಲ ಎಂದು ಇನ್ನೊಬ್ಬರು ಟೀಕಿಸಿದ್ದಾರೆ. ಇಂಥ ಬೇಡದ ಕೆಲಸಕ್ಕೆ ಜನರು ಫ್ರೀ ಇರ್ತಾರೆ ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಆಹಾರಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರುತ್ತವೆ. ಜನರು ಹೊಸ ಹೊಸ ಪ್ರಯೋಗ ಮಾಡಿ ಅದನ್ನು ಪೋಸ್ಟ್ ಮಾಡ್ತಿರುತ್ತಾರೆ. ವರ್ಷಗಳ ಹಿಂದೆ, ಐಸ್ ಕ್ರೀಮ್ ತುಂಬಿದ ಪರಾಠ ವೈರಲ್ ಆಗಿತ್ತು.  ಪರಾಠಕ್ಕೆ ಐಸ್ ಕ್ರೀಂ ಹಾಕಿ ಸರ್ವ್ ಮಾಡ್ತಿದ್ದ ಟ್ವಿಟರ್ ಪೋಸ್ಟ್ ಅನೇಕರ ಗಮನ ಸೆಳೆದಿತ್ತು. 
 

 
 
 
 
 
 
 
 
 
 
 
 
 
 
 

A post shared by Janu Khan (@janu9793)

Latest Videos
Follow Us:
Download App:
  • android
  • ios