Winter Food: ಚಳಿಗಾಲದಲ್ಲಿ ಮಕ್ಕಳಿಗೆ ಮಾಡ್ಕೊಡಿ ರಾಗಿ ರೆಸಿಪಿ

ಮಕ್ಕಳಿಗೆ ಆರೋಗ್ಯಕ ತಿಂಡಿ ನೀಡೋದು ಸುಲಭವಲ್ಲ. ರಾಗಿಯಂತ ಆಹಾರ ಸೇವನೆ ಮಾಡಲು ಮಕ್ಕಳು ಹಿಂದೇಟು ಹಾಕ್ತಾರೆ. ಅವರ ಆರೋಗ್ಯ ವೃದ್ಧಿಯಾಗ್ಬೇಕೆಂದ್ರೆ ಬೇರೆ ಬೇರೆ ವಿಧಾನದಲ್ಲಿ ನೀವು ಮಕ್ಕಳಿಗೆ ರಾಗಿ ತಿನ್ನಿಸಬೇಕು. ನಾವಿಂದು ಮಕ್ಕಳಿಗೆ ಇಷ್ಟವಾಗುವ ರಾಗಿ ಆಹಾರವನ್ನು ಹೇಳ್ತೆವೆ.
 

Winter Ragi Recipes

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳೋದು ಸವಾಲಿನ ಸಂಗತಿ. ಯಾಕೆಂದ್ರೆ ಈ ಋತುವಿನಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆ ನಮ್ಮನ್ನು ಕಾಡುತ್ತದೆ. ಹಾಗಾಗಿ ಜನರು ಆಹಾರ ಸೇವನೆಯಲ್ಲಿ ಕೆಲ ಬದಲಾವಣೆ ಮಾಡ್ತಾರೆ. ಚಳಿಗಾಲಕ್ಕೆಂದೇ ಸೀಮಿತವಾಗಿರುವ ತರಕಾರಿ ತಿನ್ನಲು ಮುಂದಾಗ್ತಾರೆ. ಈ ಚಳಿಗಾಲದ ಡಯಟ್ ನಲ್ಲಿ ರಾಗಿ ಕೂಡ ಸೇರಿದೆ. ರಾಗಿ ರೊಟ್ಟಿ ತಿನ್ನಲು ಜನರು ಹೆಚ್ಚು ಇಷ್ಟಪಡ್ತಾರೆ. ರಾಗಿ (Millet) ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ರಾಗಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ವಿಟಮಿನ್ ಬಿ, ಫೈಬರ್, ಪ್ರೊಟೀನ್, ಕಾರ್ಬೋಹೈಡ್ರೇಟ್, ಕಬ್ಬಿಣದಂತಹ ಅನೇಕ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಮೆದುಳಿನ ಆರೋಗ್ಯ (Health) ಕ್ಕಾಗಿ ನೀವು ಮಕ್ಕಳಿಗೆ ರಾಗಿ ರೊಟ್ಟಿಯನ್ನು ನೀಡಬಹುದು. 

ಕೆಲ ಮಕ್ಕಳಿಗೆ ರಾಗಿ ರೊಟ್ಟಿ ಇಷ್ಟವಾಗುವುದಿಲ್ಲ. ರಾಗಿ ಗಂಜಿಯನ್ನು ಕೂಡ ಅವರು ತಿನ್ನೋದಿಲ್ಲ. ಇಂಥ ಸಂದರ್ಭದಲ್ಲಿ ನೀವು ರಾಗಿಯ ರುಚಿ ರುಚಿ ತಿಂಡಿ ಮಾಡಿ ಮಕ್ಕಳಿ (Children) ಗೆ ನೀಡಬಹುದು. ನಾವಿಂದು ಚಳಿಗಾಲದಲ್ಲಿ ಮಾಡಬಹುದಾದ, ಮಕ್ಕಳ ಆರೋಗ್ಯಕ್ಕೆ ಯೋಗ್ಯವಾದ ರಾಗಿ ರೆಸಿಪಿ ಬಗ್ಗೆ ನಿಮಗೆ ಮಾಹಿತಿ ನೀಡ್ತೆವೆ.

ರಾಗಿ ಬರ್ಫಿ ಮಾಡಲು ಬೇಕಾಗುವ ವಸ್ತು: ಕಾಲು ಕಪ್ ರಾಗಿ ಹಿಟ್ಟು, 1 ಕಪ್  ಬೆಲ್ಲ, ಬಾದಾಮಿ ಪುಡಿ ಕಾಲು ಕಪ್, ಗೋಡಂಬಿ ಪುಡಿ ಸ್ವಲ್ಪ, ಹಾಲು ಕಾಲು ಕಪ್, ತುಪ್ಪ 3 ಚಮಚ.

ರಾಗಿ ಬರ್ಫಿ ಮಾಡುವ ವಿಧಾನ: ಮೊದಲು ಬಾಣಲೆಗೆ ತುಪ್ಪವನ್ನು ಹಾಕಿ ಬಿಸಿ ಮಾಡಿ. ನಂತ್ರ ತುಪ್ಪಕ್ಕೆ ರಾಗಿ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅದು ಗಂಟು ಬರದಂತೆ ಕೈ ಆಡಿಸುತ್ತಿರಿ. ಹತ್ತು ನಿಮಿಷ ರಾಗಿ ಹಿಟ್ಟು ತುಪ್ಪದಲ್ಲಿ ಚೆನ್ನಾಗಿ ಹುರಿದ ನಂತ್ರ ಅದಕ್ಕೆ ಬೆಲ್ಲವನ್ನು ಸೇರಿಸಿ. ಬೆಲ್ಲ ಕರಗಿದ ನಂತ್ರ ಅದಕ್ಕೆ ಬಾದಾಮಿ ಮತ್ತು ಗೋಡಂಬಿ ಪುಡಿಯನ್ನು ಸೇರಿಸಿ. ಮಿಶ್ರಣವು ದಪ್ಪವಾಗಲು ಪ್ರಾರಂಭಿಸಿದಾಗ  ಹಾಲು ಸೇರಿಸಿ. ಮಿಶ್ರಣ ಗಂಟಾಗದಂತೆ ಕೈ ಆಡಿಸುತ್ತಲೇ ಇರಬೇಕು.  ಮಿಶ್ರಣ ಸ್ವಲ್ಪ ಗಟ್ಟಿಯಗ್ತಿದ್ದಂತೆ ಒಂದು ಪಾತ್ರೆಗೆ ತುಪ್ಪ ಸವರಿ ಅದಕ್ಕೆ ಈ ಮಿಶ್ರಣವನ್ನು ಹಾಕಬೇಕು. ನಂತ್ರ ಬರ್ಫಿ ಆಕಾರದಲ್ಲಿ ಕತ್ತರಿಸಬೇಕು. ತಣ್ಣಗಾದ ನಂತ್ರ ರಾಗಿ ಬರ್ಫಿ ಸೇವಿಸಲು ಸಿದ್ಧವಾಗುತ್ತದೆ. 

ರಾಗಿ ಉತ್ತಪ್ಪ: ರಾಗಿ ಉತ್ತಪ್ಪ ಮಾಡುವುದು ಕೂಡ ಸುಲಭ. ಇದಕ್ಕೆ ಬೇಕಾಗುವ ಪದಾರ್ಥಗಳು : ಒಂದು ಕಪ್ ರಾಗಿ ಹಿಟ್ಟು, ಎರಡು ಚಮಚ ಗೋಧಿ ಹಿಟ್ಟು. ಒಂದು ಈರುಳ್ಳಿ, ಒಂದು ಟೊಮೊಟೊ, ನಾಲ್ಕು ಹಸಿ ಮೆಣಸಿನ ಕಾಯಿ, ಒಂದು ಚಮಚ ಎಳ್ಳು, ಒಂದು ಚಮಚ ಜೀರಿಗೆ, ಸ್ವಲ್ಪ ಕೊತ್ತಂಬರಿ ಸೊಪ್ಪು. ಕಾಲು ಕಪ್ಪ ಮೊಸರು, ಚಿಕ್ಕದಾಗಿ ಕತ್ತರಿಸಿದ ಡೊಳ್ಳು ಮೆಣಸಿನ ಕಾಯಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ರಾಗಿ ಉತ್ತಪ್ಪ ಮಾಡುವ ವಿಧಾನ: ರಾಗಿಗೆ ಗೋಧಿ ಹಿಟ್ಟು, ಪುಡಿ ಮಾಡಿದ ಜೀರಿಗೆ ಹಾಕಿ ಅದಕ್ಕೆ ಮೊಸರನ್ನು ಸೇರಿಸಿ, ಸ್ವಲ್ಪ ಸ್ವಲ್ಪ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಮಿಶ್ರಣವನ್ನು ಸಿದ್ಧಪಡಿಸಿ. ಅರ್ಧ ಗಂಟೆ ಮಿಶ್ರಣವನ್ನು ಹಾಗೆ ಬಿಡಿ. ನಂತ್ರ ತವಾ ಬಿಸಿ ಮಾಡಿ, ಅದರ ಮೇಲೆ ಮಿಶ್ರಣವನ್ನು ದೋಸೆ ಆಕಾರದಲ್ಲಿ ಹಾಕಿ. ಅದ್ರ ಮೇಲೆ ಕತ್ತರಿಸಿದ ಟೊಮೊಟೊ, ಈರುಳ್ಳಿ, ಡೊಳ್ಳು ಮೆಣಸಿನಕಾಯಿಯನ್ನು ಹಾಕಿ. ಎಳ್ಳು ಮತ್ತು ಕೊತ್ತಂಬರಿ ಸೊಪ್ಪು ಹಾಗೂ ಮೆಣಸಿನಕಾಯಿಯನ್ನು ಹಾಕಿ. ನಂತ್ರ ಉತ್ತಪ್ಪವನ್ನು ಕೆಳಗೆ ಹಾಗೂ ಮೇಲೆ ಸರಿಯಾಗಿ ಬೇಯಿಸಿ ತಿನ್ನಿ. ಇದು ಅತ್ಯಂತ ರುಚಿಕರ ಹಾಗೂ ಆರೋಗ್ಯಕರ ರೆಸಿಪಿಯಾಗಿದೆ.

AYURVEDA TIPS : ಚಳಿಗಾಲದಲ್ಲಿ ಕಫ ಹೆಚ್ಚು ಮಾಡುತ್ತಾ ಮೊಸರು?

ರಾಗಿ ಕೇಕ್: ಇದು ಮಕ್ಕಳಿಗೆ ಫೆವರೆಟ್. ಇದನ್ನು ಮಾಡಲು ಬೇಕಾಗುವ ಪದಾರ್ಥಗಳು ಐದಾರು ಬರ್ಬನ್ ಬಿಸ್ಕತ್, ಮುಕ್ಕಾಲು ಕಪ್ ಸಕ್ಕರೆ, ಎರಡು ಸ್ಪೂನ್ ತುಪ್ಪ, ಅರ್ಧ ಕಪ್ ನೆನೆಸಿದ ರಾಗಿ. ಒಂದು ಕಪ್ ಮೈದಾ ಹಾಗೂ ಒಂದು ಚಮಚ ಬೇಕಿಂಗ್ ಪೌಡರ್.

ಚಳಿಗಾಲದಲ್ಲಿ ತಪ್ಪಿಯೂ ಇಂಥಾ ಆಹಾರ ತಿನ್ಬೇಡಿ, ಅಸ್ತಮಾ ಸಮಸ್ಯೆ ಕಾಡುತ್ತೆ

ರಾಗಿ ಕೇಕ್ ಮಾಡುವ ವಿಧಾನ: ಮೊದಲು ಬರ್ಬನ್ ಬಿಸ್ಕತ್ತನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ನಂತ್ರ ಸಕ್ಕರೆ ಪುಡಿ ಮಾಡಿ. ಈ ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿದ ನಂತ್ರ ಅದಕ್ಕೆ ನೆನೆಸಿಟ್ಟ ರಾಗಿಯನ್ನು ಮಿಕ್ಸಿ ಮಾಡಿ, ಅದನ್ನು ಜರಡಿ ಹಿಡಿದು ಹಾಕಬೇಕು. ಒಂದು ಕಪ್ ಮೈದಾ ಹಾಗೂ ಒಂದು ಚಮಚ ಬೇಕಿಂಗ್ ಪೌಡರನ್ನು ಈ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಒಂದು ಕುಕ್ಕರ್ ಪಾತ್ರೆಗೆ ತುಪ್ಪ ಸವರಿ ಅದಕ್ಕೆ ಮಿಶ್ರಣವನ್ನು ಹಾಕಿ, ಕುಕ್ಕರ್ ನಲ್ಲಿ ಹಾಗೆ ಇಡಿ. ಕುಕ್ಕರ್ ಸಿಟಿ ಹಾಕದೆ 30 ನಿಮಿಷ ಬೇಯಿಸಿದ್ರೆ ಕೇಕ್ ಸಿದ್ಧವಾಗುತ್ತದೆ. 

Latest Videos
Follow Us:
Download App:
  • android
  • ios