Wine Varieties: ಐಸ್ ವೈನ್ ಟೇಸ್ಟ್ ಮಾಡಿದ್ದೀರಾ ?

ಅಲ್ಕೋಹಾಲ್ ಆರೋಗ್ಯ (Health)ಕ್ಕೆ ಒಳ್ಳೆಯದಲ್ಲ ಅನ್ನೋ ಹಲವರು ವೀಕೆಂಡ್, ಪಾರ್ಟಿ (Party) ಅಂತ ಬಂದಾಗ ಕುಡಿಯೋದು ವೈನ್. ಆದ್ರೆ ಪ್ರತಿ ಸಾರಿನೂ ಒಂದೇ ರೀತಿಯ ವೈನ್ (Wine) ಕುಡ್ದು ಬೋರಾಗಿದ್ಯಾ ? ಹಾಗಿದ್ರೆ ಐಸ್ ವೈನ್ ಟೇಸ್ಟ್ (Taste) ಮಾಡಿ. ಇದ್ರ ಡಿಫರೆಂಟ್ ಟೇಸ್ಟ್‌ಗೆ ನೀವು ಫಿದಾ ಆಗೋದು ಖಂಡಿತ.

What actually is Ice wine

ಅಲ್ಕೋಹಾಲ್ (Alcohol) ಹಲವರ ವೀಕ್‌ನೆಸ್. ಆದರೆ ಆರೋಗ್ಯದ ಬಗ್ಗೆ ಸ್ಪಲ್ಪ ಕಾಳಜಿ ವಹಿಸುವವರು ವಿಸ್ಕಿ, ಬ್ರಾಂಡಿ ಬೇಡ ಅಂತ ವೈನ್ ಗ್ಲಾಸ್ ಹಿಡಿಯುತ್ತಾರೆ. ದಿನದ ಕೊನೆಯಲ್ಲಿ ಒಂದು ಗ್ಲಾಸ್ ವೈನ್ (Wine) ಇದ್ರೆ ಸಾಕಪ್ಪಾ ಎನ್ನುವವರು ಹಲವರು. ವೈನ್ ಇನ್ಸಿಟ್ಯೂಟ್ ಪ್ರಕಾರ ವಯಸ್ಕರು ವರ್ಷಕ್ಕೆ ಸುಮಾರು 2.95 ಗ್ಯಾಲನ್ ವೈನ್ ಕುಡಿಯುತ್ತಾರೆ ಎಂದು ತಿಳಿದುಬಂದಿದೆ. ಚಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ವೈನ್ ಅಧಿಕವಾಗಿ ತಯಾರಿಸುತ್ತಾರೆ ಮತ್ತು ಕುಡಿಯುತ್ತಾರೆ. ವಿವಿಧ ರೀತಿಯ ಹಣ್ಣುಗಳಿಂದ ವೈನ್‍ನ್ನು ತಯಾರಿಸಲಾಗುತ್ತದೆ. ಹೆಚ್ಚಾಗಿ ದ್ರಾಕ್ಷಿ (Grapes)ಯನ್ನು ಬಳಸಿ ವೈನ್ ತಯಾರಿಸುತ್ತಾರೆ. ಆದ್ರೆ ನಿಮ್ಗೆ ಒಂದೇ ರೀತಿಯ ವೈನ್‍ ಕುಡ್ದು ಬೋರಾಗಿದ್ಯಾ ? ಹಾಗಿದ್ರೆ ಈ ಸ್ಪೆಷಲ್ ಐಸ್ ವೈನ್ ಬಗ್ಗೆ ತಿಳ್ಕೊಳ್ಳಿ.

ಐಸ್ ವೈನ್ ಎಂದರೇನು ?
ಐಸ್ ವೈನ್‌ನ್ನು ಲಿಕ್ವಿಡ್ ಗೋಲ್ಡ್ ( Liquid Gold) ಎಂದು ಸಹ ಕರೆಯುತ್ತಾರೆ. ದ್ರಾಕ್ಷಿಯನ್ನು ಘನೀಕರಿಸಿದಾಗ ಮತ್ತು ವಿಶೇಷವಾಗಿ ತಾಪಮಾನವು 8 ಡಿಗ್ರಿ ಸೆಲ್ಸಿಯಸ್ ಇಳಿದಾಗ ಕೊಯ್ಲು ಮತ್ತು ಒತ್ತುವ ಮೂಲಕ ಈ ವೈನ್‌ನ್ನು ತಯಾರಿಸಲಾಗುತ್ತದೆ. ವಿಶಿಷ್ಟವಾದ ರುಚಿ, ಸುವಾಸನೆ ಮತ್ತು ವಿನ್ಯಾಸವು ಹಣ್ಣಿನ ತಿರುಳಿನೊಂದಿಗೆ ಉಳಿಯುವ ದ್ರಾಕ್ಷಿ ರಸ ಮತ್ತು ಹಿಮಾವೃತ ಹರಳುಗಳ ಸಂಯೋಜನೆಯಿಂದ ಬರುತ್ತದೆ. ಈ ರಸವನ್ನು ಐಸ್ ವೈನ್ ತಯಾರಿಸಲು ಬಳಸಲಾಗುತ್ತದೆ. ಅದಕ್ಕಾಗಿಯೇ ಈ ವೈನ್‌ನ ಸುವಾಸನೆ ಮತ್ತು ವಿನ್ಯಾಸವು ಪ್ರಪಂಚದಾದ್ಯಂತದ ಇತರ ವೈನ್ ರೂಪಾಂತರಗಳಿಗೆ ಹೋಲಿಸಿದರೆ ಹೆಚ್ಚು ವಿಭಿನ್ನವಾಗಿದೆ.

Drinking Ritual: ಕುಡಿಯುವ ಮೊದಲು ಮದ್ಯವನ್ನು ನೆಲಕ್ಕೆ ಸಿಂಪಡಿಸುವುದೇಕೆ ?

ಐಸ್ ವೈನ್ ಮೂಲವೆಲ್ಲಿ ?
ದ್ರಾಕ್ಷಿಯನ್ನು ತಿಂಗಳುಗಟ್ಟಲೆ ಹುಳಿ ಬರಿಸಿ ವೈನ್ ಮಾಡುವ ಪರಿಕಲ್ಪನೆ ಹೊಸದಲ್ಲ. ಪ್ರಾಚೀನ ರೋಮನ್ ಯುಗದಲ್ಲಿಯೇ ವೈನ್ ಅನ್ನು ರೀತಿಯಾಗಿ ತಯಾರಿಸಲಾಗುತ್ತಿತ್ತು. ಆದರೆ ಈ ರೀತಿಯ ಐಸ್ ವೈನ್, ಕೆನಡಾದಲ್ಲಿ ಸುಮಾರು 50 ವರ್ಷಗಳಷ್ಟು ಹಿಂದೆಯೇ ತಯಾರಿಸಲಾಗುತ್ತಿತ್ತು ಎಂದು ತಿಳಿದುಂದಿದೆ. ಡಿಜಿಟಲ್ ಜರ್ನಲ್ ಕಾಟೇಜ್ ಲೈಫ್‌ನಲ್ಲಿ ಪ್ರಕಟವಾದ ಲೇಖನದ ಪ್ರಕಾರ ಬ್ರಿಟಿಷ್ ಕೊಲಂಬಿಯಾದ ಒಕಾನಗನ್ ವ್ಯಾಲಿ ನಂತರ ಒಂಟಾರಿಯೊದ ನಯಾಗರಾ ಲೇಕ್ ಬಳಿಯ ಚಳಿಯ ಪ್ರದೇಶಗಳಲ್ಲಿ ಈ ಐಸ್ ವೈನ್‌ನ್ನು ಮೊದಲ ಬಾರಿಗೆ ತಯಾರಿಸಲಾಯಿತು. .

ಐಸ್ ವೈನ್ ತಯಾರಿಸುವುದು ಹೇಗೆ ?
ವಿವಿಧ ರೀತಿಯ ದ್ರಾಕ್ಷಿಗಳನ್ನು ಸೇರಿಸಿ ಐಸ್ ವೈನ್ ತಯಾರಿಸಲಾಗುತ್ತದೆ. ರೈಸ್ಲಿಂಗ್, ಚೆನಿನ್ ಬ್ಲಾಂಕ್, ವಿಡಾಲ್ ಬ್ಲಾಂಕ್, ಕ್ಯಾಬರ್ನೆಟ್ ಫ್ರಾಂಕ್, ಗೆವೂರ್ಜ್‌ಟ್ರಾಮಿನರ್, ಪಿನೋಟ್ ಗ್ರಿಸ್, ಗೆವರ್ಜ್‌ಟ್ರಾಮಿನರ್, ಶಿರಾಜ್, ಕ್ಯಾಬರ್ನೆಟ್ ಸುವಿಗ್ನಾನ್ ಮತ್ತು ಮೆರ್ಲಾಟ್‌ ಮೊದಲಾದ ದ್ರಾಕ್ಷಿಗಳನ್ನು ವೈನ್ ತಯಾರಿಸುವ ಸಂದರ್ಭದಲ್ಲಿ ಸೇರಿಸುತ್ತಾರೆ. ಇದು ಆಕರ್ಷಕ ಹಳದಿ ಗುಲಾಬಿ ಬಣ್ಣವನ್ನು ಉತ್ಪಾದಿಸುತ್ತದೆ, ಇದು ಚಿನ್ನವನ್ನು ಹೋಲುತ್ತದೆ ಮತ್ತು ಅದಕ್ಕಾಗಿಯೇ ಐಸ್ ವೈನ್‌ನ್ನು 'ದ್ರವ ರೂಪದ ಚಿನ್ನ' ಎಂದು ಕರೆಯುತ್ತಾರೆ. ವಿಶೇಷವಾಗಿ ತಯಾರಿಸಲಾಗುವ ಈ ಐಸ್ ವೈನ್ ಬೆಲೆ ಸುಮಾರು 3769 ರೂ. ಆಗಿದೆ.

ರೆಡ್ ವೈನ್‌ ಹೊಟ್ಟೆಗಲ್ಲ, ಸ್ವಲ್ಪ ಮುಖಕ್ಕೂ ಹಾಕ್ಕೊಳಿ..!

ಐಸ್ ವೈನ್‌ನ ವಿಶೇಷತೆಯೆಂದರೆ, ಹಳೆಯ ದ್ರಾಕ್ಷಿಯನ್ನು ಬಳಸಿ ಇದನ್ನು ತಯಾರಿಸಲಾಗುವುದಿಲ್ಲ. ತಾಜಾವಾಗಿರುವ ದ್ರಾಕ್ಷಿಗಳನ್ನು ಬಳಸಿ ಮಾತ್ರ ಇದನ್ನು ತಯಾರಿಸಬಹುದು. ಅತ್ಯಾಕರ್ಷಕ ರುಚಿ, ಸುವಾಸನೆಯ ವೈನ್‌ನ್ನು ಸಿದ್ಧಪಡಿಸಬಹುದು.

ಒಂದೊಂದು ಪ್ರದೇಶದಲ್ಲಿ ಈ ವೈನ್‌ನ್ನು ಒಂದೊಂದು ರೀತಿ ಸೇವಿಸಲಾಗುತ್ತದೆ. ಶೀತ ಪ್ರದೇಶಗಳಲ್ಲಿ ಈ ವೈನ್‌ನ್ನು ಹೆಚ್ಚಾಗಿ ಮಸಾಲೆಯುಕ್ತ ಮೆಣಸಿನಕಾಯಿಗಳು, ಸಾಸಿವೆ, ಮೇಲೋಗರಗಳು ಮತ್ತು ಸಲಾಡ್‌ (Salad)ಗಳಂತಹ ಸುವಾಸನೆಯ ಆಹಾರಗಳೊಂದಿಗೆ ಸೇವಿಸುತ್ತಾರೆ. ಇನ್ನು ಕೆಲವೆಡೆ ಚೀಸ್ (Cheese), ಬೆಣ್ಣೆಯೊಂದಿಗೆ ಸವಿಯುತ್ತಾರೆ. ಇನ್ಯಾಕೆ ತಡ, ನೀವು ಸಹ ವೈನ್ ಪ್ರಿಯರಾಗಿದ್ದರೆ ಐಸ್ ವೈನ್‌ನ್ನು ಟೇಸ್ಟ್ ಮಾಡೋದನ್ನು ಮರೀಬೇಡಿ.

Latest Videos
Follow Us:
Download App:
  • android
  • ios