Asianet Suvarna News Asianet Suvarna News

ಸಿಹಿ-ಹುಳಿ ಮಿಶ್ರಿತ ಗೋಲ್‌ ಗಪ್ಪಾ ಶೇಕ್‌, ವಿಚಿತ್ರ ಕಾಂಬಿನೇಷನ್‌ಗೆ ನೆಟ್ಟಿಗರು ಶಾಕ್‌

ಫುಡ್‌ ನಲ್ಲಿ ಎಕ್ಸಪರಿಮೆಂಟ್ ಮಾಡೋದು ಇತ್ತೀಚಿಗೆ ಟ್ರೆಂಡ್ ಆಗ್ತಿದೆ. ಯಾವುದೋ ಫುಡ್‌ನ್ನು ಇನ್ಯಾವುದರೊಂದಿಗೂ ಸೇರಿಸಿ ಹೊಸ ಕಾಂಬಿನೇಶನ್ ಮಾಡುತ್ತಾರೆ. ಇಂಥಹಾ ಫುಡ್ ಕಾಂಬಿನೇಷನ್ ಕೆಲವೊಮ್ಮೆ ಸಿಕ್ಕಾಪಟ್ಟೆ ವೈರಲ್ ಆದರೆ, ಕೆಲವೊಮ್ಮೆ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ಸ್ ಗಳಿಸುತ್ತವೆ. ಸದ್ಯಕ್ಕೆ ಎಲ್ಲರ ಗಮನ ಸೆಳೀತಾ ಇರೋದು ಗೋಲ್‌ಗಪ್ಪಾ ಶೇಕ್‌. ಆ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ.

Video Of Golgappa Shake Goes Viral On Instagram Vin
Author
First Published Sep 30, 2022, 8:31 AM IST

ಭಾರತ ವಿವಿಧತೆಯಲ್ಲಿ ಏಕತೆ ಇರುವ ದೇಶ. ಇಲ್ಲಿ ಆಯಾ ರಾಜ್ಯಕ್ಕೆ ಅಲ್ಲಿಯ ಭಾಷೆ, ಸಂಸ್ಕೃತಿ. ಆಚಾರ-ವಿಚಾರಗಳು ಇರುವ ಹಾಗೆಯೇ ಪ್ರತ್ಯೇಕವಾದ ಆಹಾರಪದ್ಧತಿಯೂ ಇದೆ. ಭಾರತೀಯರು ಪುರಾತನ ಕಾಲದಿಂದಲೂ ಆಹಾರಪ್ರಿಯರು. ಹೀಗಾಗಿಯೇ ವೆರೈಟಿ ವೆರೈಟಿ ಫುಡ್ ಮಾಡಿ ತಿನ್ನಲು ಇಷ್ಟಪಡುತ್ತಾರೆ. ಹಳೆಯ ಕಾಲದಿಂದಲೂ ಸೇವಿಸಿಕೊಂಡು ಬಂದಿರುವ ಆಹಾರಗಳನ್ನು ಮಾತ್ರವಲ್ಲದೆ ಹೊಸದಾಗಿಯೂ ಏನನ್ನಾದರೂ ಎಕ್ಸಮರಿಮೆಂಟ್ ಮಾಡುತ್ತಲೇ ಇರುತ್ತಾರೆ. ಯಾವುದೋ ಫುಡ್‌ನ್ನು ಇನ್ಯಾವುದರೊಂದಿಗೂ ಸೇರಿಸಿ ಹೊಸ ಕಾಂಬಿನೇಶನ್ ಮಾಡುತ್ತಾರೆ. ಇಂಥಹಾ ಫುಡ್ ಕಾಂಬಿನೇಷನ್ ಕೆಲವೊಮ್ಮೆ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಆದರೆ ಇನ್ನು ಕೆಲವೊಮ್ಮೆ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ಸ್ ಗಳಿಸುತ್ತವೆ. ಇನ್‌ಸ್ಟ್ರಾಗ್ರಾಂ, ಫುಡ್ ಬ್ಲಾಗರ್ಸ್ ಶುರುವಾದ ನಂತರ ದೇಶದ ಮೂಲೆ ಮೂಲೆಯ ವಿಭಿನ್ನ ರೀತಿಯ ಆಹಾರಗಳು ಎಲ್ಲರಿಗೂ ಪರಿಚಯವಾಗುತ್ತಿದೆ. 

ಫುಡ್‌ ನಲ್ಲಿ ಎಕ್ಸಪರಿಮೆಂಟ್ ಮಾಡೋದು ಇತ್ತೀಚಿಗೆ ಟ್ರೆಂಡ್ ಆಗ್ತಿದೆ. ಯಾವುದೋ ಫುಡ್‌ನ್ನು ಇನ್ಯಾವುದರೊಂದಿಗೂ ಸೇರಿಸಿ ಹೊಸ ಕಾಂಬಿನೇಶನ್ (New Combination) ಮಾಡುತ್ತಾರೆ. ಇಂಥಹಾ ಫುಡ್ ಕಾಂಬಿನೇಷನ್ ಕೆಲವೊಮ್ಮೆ ಸಿಕ್ಕಾಪಟ್ಟೆ ವೈರಲ್ ಆದರೆ, ಕೆಲವೊಮ್ಮೆ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ಸ್ ಗಳಿಸುತ್ತವೆ. ಸದ್ಯಕ್ಕೆ ಎಲ್ಲರ ಗಮನ ಸೆಳೀತಾ ಇರೋದು ಗೋಲ್‌ಗಪ್ಪಾ ಶೇಕ್‌.

ಹೊಟೇಲ್ ಮ್ಯಾನೇಜರ್‌ನಂತೆ ಸೂಟ್ ಧರಿಸಿ ಗೋಲ್ಗಪ್ಪ ಮಾರುವ ಯುವಕ

ಗೋಲ್‌ಗಪ್ಪಾ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..ಅದ್ರಲ್ಲೂ ಹುಡುಗೀರಂತೂ ಗೋಲ್‌ಗಪ್ಪಾ ಸ್ಟಾಲ್‌ನ ಹತ್ತಿರ ಎಷ್ಟು ಹೊತ್ತು ಬೇಕಾದ್ರೂ ಕ್ಯೂ ನಿಂತು ಗೋಲ್‌ಗಪ್ಪಾ ತಿನ್ತಾರೆ. ಗೋಲ್‌ಗಪ್ಪಾ  ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಸ್ಟ್ರೀಟ್ ಫುಡ್  ಆಗಿದೆ. ಸಂಜೆಯಾದ್ರೆ ಸಾಕು ರಸ್ತೆ (Road) ಬದಿಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ ಜನರು ನಿಂತು ಗೋಲ್‌ಗಪ್ಪಾ ತಿನ್ನುತ್ತಾರೆ. ಸ್ಪಲ್ಪ ಹುಳಿ, ಸ್ಪಲ್ಪ ಖಾರ (Spicy), ಸ್ಪಲ್ಪ ಸಿಹಿಯಾಗಿರೋ ಟೇಸ್ಟ್‌ಗೆ ಬೇರ್ಯಾವುದೂ ಸಾಟಿಯಾಗಲಾರದು. ಅದರಲ್ಲೂ ಕೆಲವೊಬ್ರು ಭಯ್ಯಾ ಕುಚ್ ಆರ್ ಟೀಕಾ ಅಂತ್ಹೇಳಿ ಮತ್ತಷ್ಟು ಖಾರ ಹಾಕಿಸಿಕೊಂಡು ಕಣ್ಣಲ್ಲಿ, ಬಾಯಲ್ಲಿ ನೀರು ಬರಿಸಿಕೊಂಡು ಗೋಲ್‌ಗಪ್ಪಾ ತಿನ್ನೋದನ್ನು ನೋಡಿರಬಹುದು. ಖಾರ ಕಡಿಮೆ ಹಾಕಿಸಿಕೊಂಡು ಗೋಲ್‌ಗಪ್ಪಾ ಸ್ವಾದ (Taste) ಸವಿಯುವವರು ಇನ್ನು ಕೆಲವರು. ಇವಿಷ್ಟೇ ಅಲ್ದೆ ಗೋಲ್‌ಗಪ್ಪಾದಲ್ಲಿ ಮಿಂಟ್, ಜೀರಾ, ಮಿರ್ಚಿ ಅಂತ ಕೆಲವೊಂದು ಸ್ಟಾಲ್‌ಗಳಲ್ಲಿ ಇನ್ನಷ್ಟು ವೆರೈಟಿಯಾಗಿ ಕೊಡ್ತಾರೆ. ಆದ್ರೆ ಈ ವೆರೈಟಿ ಗೋಲ್‌ಗಪ್ಪಾ ಬಗ್ಗೆ ನೀವು ಕೇಳಿರೋ ಛಾನ್ಸೇ ಇಲ್ಲ. ಯಾಕಂದ್ರೆ ಇದು ಅಂತಿಂಥಾ ಗೋಲ್‌ಗಪ್ಪಾ ಅಲ್ಲ, ಗೋಲ್‌ಗಪ್ಪಾ ಶೇಕ್‌.

ಮಿಕ್ಸರ್ ಗ್ರೈಂಡರ್‌ನಲ್ಲಿ 'ಗೋಲ್‌ಗಪ್ಪಾ ಶೇಕ್' ಮಾಡುವ ವ್ಯಕ್ತಿಯ ವೀಡಿಯೋ ಪೋಸ್ಟ್ ಪ್ರಸ್ತುತ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿದೆ. Insta-ಹ್ಯಾಂಡಲ್ 'zufiscooking' ನಿಂದ ಈ ಗೋಲ್‌ಗಪ್ಪಾ ಶೇಕ್ ಮಾಡುವ ವೀಡಿಯೋ ಅಪ್‌ಲೋಡ್ ಮಾಡಲಾಗಿದೆ. ಶೇಕ್‌ನ ತಯಾರಿಕೆಯ ವೀಡಿಯೊಗೆ ಜುಲ್ಫಿಶಾ ವಾಸಿಫ್ ಎಂಬ ಕಂಟೆಂಟ್ ರಚನೆಕಾರರು ಪ್ರತಿಕ್ರಿಯಿಸುವುದನ್ನು ನಾವು ನೋಡಬಹುದು. 'ಹದ್ ಹೋ ಗೈ' ಎಂದು ಅವರು ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ. ಗೋಲ್‌ಗಪ್ಪ ಶೇಕ್‌ನ ಮೂಲ ವೀಡಿಯೊವನ್ನು ಇನ್‌ಸ್ಟಾಗ್ರಾಂನ ಹ್ಯಾಂಡಲ್ 'ಪಂಜಾಬ್_ಬ್ಲೆಸ್ಟ್' ಅಪ್‌ಲೋಡ್ ಮಾಡಿದೆ. 

ಬ್ಲೆಂಡರ್‌ನಲ್ಲಿ ಗೋಲ್‌ಗಪ್ಪಾ, ಆಲೂಗಡ್ಡೆ ಮಿಶ್ರಣ,  ಗೋಲ್‌ಗಪ್ಪಾ ಪಾನಿ ಮತ್ತು ಚಟ್ನಿಯನ್ನು ಸೇರಿಸಲಾಗಿತ್ತದೆ. ನಂತರ ಇದನ್ನು ಗಾಜಿನೊಳಗೆ ವರ್ಗಾಯಿಸಲಾಗುತ್ತದೆ. ಬಡಿಸುವ ಮೊದಲು ದ್ರವವನ್ನು ಸಂಪೂರ್ಣ ಗೋಲ್‌ಗಪ್ಪಾ ಪೂರಿಯನ್ನು ಅಗ್ರಸ್ಥಾನದಲ್ಲಿ ಇರಿಸಲಾಗುತ್ತದೆ. ಈ ವಿಲಕ್ಷಣ ವೀಡಿಯೊ ಇಂಟರ್ನೆಟ್‌ನಲ್ಲಿ ಹಲವಾರು ಜನರ ಗಮನವನ್ನು ಸೆಳೆಯಿತು, 15 ಸಾವಿರಕ್ಕೂ ಹೆಚ್ಚು ಲೈಕ್ಸ್‌ಗಳನ್ನು ಪಡೆದುಕೊಂಡಿದೆ. ಇದಕ್ಕೆ ಜನರು ಕೂಡ ತಮಾಷೆಯ ಕಾಮೆಂಟ್‌ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಕಾಂಪಿಟೀಶನ್‌‌ಗೆ ಬಿದ್ದು ಗೋಲ್‌ಗಪ್ಪಾ ತಿಂದು ಸಂಭ್ರಮಿಸಿದ ಹಸು-ಕರು; ವಿಡಿಯೋ ವೈರಲ್!

ಫುಡ್‌ ಎಕ್ಸ್‌ಪರಿಮೆಂಟ್ ಹೆಸರಲ್ಲಿ ಎಲ್ಲಾ ಜನರು ಏನು ಮಾಡುತ್ತಾರೆಂದು ದೇವರಿಗೆ ಗೊತ್ತು ಎಂದು ಒಬ್ಬರು ಬರೆದರು. ಇನ್ನೊಬ್ಬ ವ್ಯಕ್ತಿ, 'ಇವು ರೋಗ ಮತ್ತು ಆಮ್ಲೀಯತೆಯನ್ನು ಹರಡುವ ಮಾರ್ಗಗಳು' ಎಂದು ಇನ್ನೊಬ್ಬ ವ್ಯಕ್ತಿ ಬರೆದಿದ್ದಾರೆ. ಮೂರನೇ ಬಳಕೆದಾರರು ಜನರು ಹುಚ್ಚರಾಗಿದ್ದಾರೆ ಎಂದು ಟೀಕಿಸಿದ್ದಾರೆ. ಈ ಹಿಂದೆಯೂ ವಿಲಕ್ಷಣ ಗೋಲ್‌ಗಪ್ಪಾ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮ್ಯಾಗಿಯನ್ನು ಸೇರಿಸಿ ಗೋಲ್‌ಗಪ್ಪಾ ತಯಾರಿಸಲಾಗಿತ್ತು. ಈ ವಿಡಿಯೋ ಟ್ವಿಟ್ಟರ್‌ನಾದ್ಯಂತ ಹರಿದಾಡಿತು ಮತ್ತು ಜನರು ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದರು. ಸಿಹಿ-ಹುಳಿ ರುಚಿಯ ಅದ್ಭುತ ಗೋಲ್‌ಗಪ್ಪಾ ರುಚಿ ಸವಿದವರು ಮಾತ್ರ ಇಂಥಾ ಫುಡ್ ಎಕ್ಸ್‌ಪರಿಮೆಂಟ್‌ಗೆ ಇದೆಂಥಾ ದುರಂತ ಎಂದು ಬೇಸರ ಪಟ್ಟುಕೊಳ್ಳುತ್ತಿದ್ದಾರೆ.

Follow Us:
Download App:
  • android
  • ios