Asianet Suvarna News Asianet Suvarna News

Valentine's day: ನಿಮ್ಮ ಕೈಯಾರೆ ವಿಶೇಷ ತಿಂಡಿ ತಯಾರಿಸಿ, ಸಂಗಾತಿಯ ಮನ ಗೆಲ್ಲಿ

ವ್ಯಾಲೆಂಟೈನ್ಸ್ ಡೇ ಆಚರಿಸಲು ಸಿದ್ಧತೆಗಳನ್ನು ಜೋರಾಗಿಯೇ ನಡೆಸಿರುತ್ತೀರಿ. ಹೊಸ ಹೊಸ ಸರ್ಪ್ರೈಸ್ ಗಳನ್ನು ನಿಮ್ಮ ಸಂಗಾತಿಗೆ ನೀಡುವ ಪ್ಲಾನ್ ಮಾಡಿರುತ್ತೀರಿ. ಈ ಲಿಸ್ಟ್ ನಲ್ಲಿ ನೀವೇ ತಯಾರಿ ಮಾಡುವ ವಾಲೆಂಟೈನ್ಸ್ ಸ್ಪೆಷಲ್ ರೆಸಿಪಿಯನ್ನು ಸೇರಿಸಿದರೆ ಹೇಗಿರುತ್ತೆ?

Valentines Day dinner recipes for any mood
Author
Bangalore, First Published Feb 12, 2022, 6:29 PM IST | Last Updated Feb 12, 2022, 6:29 PM IST

ಪ್ರೇಮಿಗಳ ದಿನ ಅಂದರೆ ಈ ವಾರವಿಡೀ ಒಂದಾದ ಮೇಲೊಂದರಂತೆ ಸರ್ಪ್ರೈಸ್ ಪ್ಲಾನ್ (Surprise Plan) ಗಳನ್ನು ಮಾಡಿಕೊಂಡು ನಿಮ್ಮ ಸಂಗಾತಿಯ ಮನ ಮೆಚ್ಚಿಸಲು ಪರದಾಡಿರುತ್ತೀರಿ. ಸಂಗಾತಿಗಾಗಿ ನೀವು ಎಷ್ಟೇ ಮಾಡಿದರೂ ಅದು ಕಡಿಮೆ ಅನ್ನುವ ಭಾವನೆ ಒಂದು ಕಡೆ. ಇಷ್ಟೊಂದು ವಿಶೇಷವಾಗಿರುವ ನಿಮ್ಮ ಪ್ರೇಮಿಗಾಗಿ (Lover) ನೀವೆ ಯಾಕೆ ನಿಮ್ಮ ಕೈಯಾರೆ ತಿನಸು ಮಾಡಿ ಕೊಡಬಾರದು? ಆರೋಗ್ಯಕರವಾಗಿ (Healthy) ಆಹಾರವನ್ನು ಸಿದ್ಧಪಡಿಸಿ ಈ ವ್ಯಾಲೆಂಟೈನ್ಸ್ ಡೇ ಆಚರಿಸಿಕೊಳ್ಳಿ.

ಹಾರ್ಟ್ ಶೇಪ್ ನಲ್ಲಿ ತಯಾರಿಸಲಾಗುವ ಈ ಕೆಲವು ರೆಸಿಪಿಗಳಿಂದ ನಿಮ್ಮಿಬ್ಬರ ನಡುವಿನ ಪ್ರೀತಿ, ಸಾಮರಸ್ಯ ಹೆಚ್ಚುವುದರ ಜೊತೆಗೆ ಆರೋಗ್ಯ ಕೂಡ ವೃದ್ಧಿಸುತ್ತದೆ. ಇದನ್ನು ತಿಂದರೆ ನಿಮ್ಮ ಸಂಗಾತಿ ಫುಲ್ ಖುಷಿಯಾಗಿ ಬಿಡುತ್ತಾರೆ. ಇಂತಹ ವಿಶೇಷ ತಿಂಡಿಗಳನ್ನು ಮಾಡುವ ವಿಧಾನ ಹೀಗಿದೆ ನೋಡಿ..

ದಾಲ್ಚಿನ್ನಿ ಹಾಗೂ ಜೇನುತುಪ್ಪದ ಪ್ಯಾನ್ ಕೇಕ್ (Pancake)

ಬೇಕಾಗುವ ಸಾಮಗ್ರಿಗಳು

  • 1 ಕಪ್ ಹಿಟ್ಟು (ಎಲ್ಲಾ ರೀತಿಯ)
  • 1 ಟೀ ಚಮಚ ಬೇಕಿಂಗ್ ಪೌಡರ್
  • 1 ಟೀ ಚಮಚ ಅಡುಗೆ ಸೋಡಾ
  • 1 ಟೀ ಚಮಚ ಉಪ್ಪು
  • 1 ಮೊಟ್ಟೆ (ಸ್ವಲ್ಪ ಹೊಡೆದಿರಿ)
  • 1 ಕಪ್ ಹಾಲು
  • 2 ಚಮಚ ಸಾವಯವ ದಾಲ್ಚಿನ್ನಿ ಜೇನುತುಪ್ಪ

Freezerನಲ್ಲಿ ಆಹಾರ ಇಡೋ ಮುನ್ನ ಈ ಆರ್ಟಿಕಲ್ ಓದ್ಬಿಡಿ

ಮಾಡುವ ವಿಧಾನ: 

ಒಂದು ದೊಡ್ಡ ಪಾತ್ರೆಯಲ್ಲಿ ಹಿಟ್ಟು, ಅಡುಗೆ ಸೋಡಾ, ಬೇಕಿಂಗ್ ಪೌಡರ್, ಮೊಟ್ಟೆ, ಉಪ್ಪು 1 ಕಪ್ ಹಾಲು ಮತ್ತು ದಾಲ್ಚಿನ್ನಿ ಜೇನುತುಪ್ಪವನ್ನು ಹಾಕಿ. ಇದನ್ನು ಚೆನ್ನಾಗಿ ಮಿಶ್ರಣ ಹೊಂದುವ ತನಕ ಕಲಸಿ. 

ಬಾಣಲೆಯನ್ನು ಇಟ್ಟು ಸ್ವಲ್ಪ ಬಿಸಿ ಮಾಡಿ. ಅದಕ್ಕೆ ಒಂದು ಕಪ್ನ ಕಾಲು ಭಾಗದಷ್ಟು ಅಳತೆಯ ಹಿಟ್ಟನ್ನು ಸುರಿಯಿರಿ ಹಾಗೂ ಒಂದರಿಂದ ಎರಡು ನಿಮಿಷಗಳಷ್ಟು ಕಾಲ ಇದನ್ನು ಬೇಯಿಸಿ. ಒಂದು ಬದಿ ಬೆಂದ ಮೇಲೆ ಮಡಚಿ ಹಾಕಿ ಇನ್ನೊಂದು ಬದಿಯು ಕೂಡ ಒಂದು ನಿಮಿಷಗಳಷ್ಟು ಕಾಲ ಬೇಯಿಸಿ. ಇದರ ಮೇಲ್ಭಾಗಕ್ಕೆ ಬೆಣ್ಣೆ ಹಾಗೂ ಜೇನುತುಪ್ಪದ ಮಿಶ್ರಣವನ್ನು ಹಚ್ಚಿದರೆ ಇದರ ರುಚಿ ಇನ್ನೂ ಹೆಚ್ಚುತ್ತದೆ. ಬಿಸಿಬಿಸಿ ಇರುವಾಗಲೇ ನಿಮ್ಮ ಸಂಗಾತಿಯೊಂದಿಗೆ ಇದನ್ನು ಸವಿಯಿರಿ.

ಹಾರ್ಟ್ ಶೇಪಿನ ಬ್ರೆಡ್ ಎಗ್ ಸ್ಯಾಂಡ್ ವಿಚ್ (Sandwich)

ಬೇಕಾಗುವ ಸಾಮಗ್ರಿಗಳು

  • 1 ಮೊಟ್ಟೆ
  • 1 ಬ್ರೆಡ್
  • 1 ಚಮಚ ಎಣ್ಣೆ (ಹುರಿಯಲು)
  • 1 ಚಮಚ ಉಪ್ಪು 
  • 1 ಚಮಚ ಕರಿಮೆಣಸು (Pepper)
  • 4 ಚಿಕ್ಕನ್ ಸಾಸೇಜ್ಗಳು

Relationship Tips : ಪತ್ನಿ ಮಾಡೋ ಈ ತಪ್ಪಿಗೆ ಹಾಳಾಗುತ್ತೆ ದಾಂಪತ್ಯ!

ಮಾಡುವ ವಿಧಾನ

ಬ್ರೆಡ್ ಸ್ಲೈಸಿನ (Slice) ಮಧ್ಯಭಾಗದಲ್ಲಿ ಹಾರ್ಟ್ ಶೇಪ್ ನಲ್ಲಿ ಕತ್ತರಿಸಿಕೊಳ್ಳಿ, ಕತ್ತರಿಸಿದ ಹೃದಯದ ಆಕಾರವನ್ನು ಎಸೆಯದೆ ಬದಿಗಿಟ್ಟುಕೊಳ್ಳಿ. ಈಗ ಕತ್ತರಿಸಿಕೊಂಡ ಬ್ರೆಡ್ ಸ್ಲೈಸ್ ಅನ್ನು ನಾನ್ ಸ್ಟಿಕ್ ತವಾದಲ್ಲಿ ಬೆಣ್ಣೆಯೊಂದಿಗೆ ಸ್ವಲ್ಪ ರೋಸ್ಟ್ (Roast) ಮಾಡಿಕೊಳ್ಳಿ. ಈಗ ಹೃದಯಾಕಾರವಾಗಿ ಕತ್ತರಿಸಿರುವ ಖಾಲಿ ಭಾಗದಲ್ಲಿ ಮೊಟ್ಟೆಯನ್ನು ಒಡೆದು ಹಾಕಿ, ಮುಚ್ಚಳ ಮುಚ್ಚಿ ಇದನ್ನು ಬೇಯಲು ಬಿಡಿ. ಇನ್ನೊಂದು ಬದಿಯಲ್ಲಿ ಕತ್ತರಿಸಿಕೊಂಡಿರುವ ಚಿಕನ್ ತುಂಡುಗಳನ್ನು ಕಡ್ಡಿಯ ಸಹಾಯದಿಂದ ಹಾರ್ಟ್ ಶೇಪ್ ನಲ್ಲಿ ಜೋಡಿಸಿಕೊಳ್ಳಿ, ಇದಕ್ಕೆ ಉಪ್ಪು ಹಾಗೂ ಕರಿಮೆಣಸಿನ ಪುಡಿಯನ್ನು ಹಾಕಿ ಹುರಿದುಕೊಳ್ಳಿ. ಇನ್ನು ಕತ್ತರಿಸಿ ಬದಿಗಿಟ್ಟುಕೊಂಡಿದ್ದ  ಹೃದಯಾಕಾರದ ಬ್ರೆಡ್ ಪೀಸ್ ಅನ್ನು ರೋಸ್ಟ್ ಮಾಡಿ. 

ಈ 3 ಪದಾರ್ಥವನ್ನು ಒಂದರಮಲೊಂದರಂತೆ ಜೋಡಿಸಿ ಬಿಸಿ-ಬಿಸಿ ಇರುವಾಗಲೇ ನಿಮ್ಮ ಸಂಗಾತಿಯೊಂದಿಗೆ ಸವಿಯಿರಿ.

ಇಷ್ಟು ಸುಲಭವಾಗಿ ಮನೆಯಲ್ಲಿ  ತಯಾರಿಸಬಹುದಾದ ಈ  ತಿಂಡಿಗಳನ್ನು ನೀವೇ ಮಾಡಿ ನಿಮ್ಮ ಸಂಗಾತಿಗೆ ತಿನ್ನಿಸಿ ಅವರಿಂದ ಭೇಷ್ ಅನಿಸಿಕೊಳ್ಳಿ.

 

 

Latest Videos
Follow Us:
Download App:
  • android
  • ios