Asianet Suvarna News Asianet Suvarna News

ರಿಷಿ ಸುನಕ್‌ಗೆ ರವಾ ಇಡ್ಲಿ ಸಿಕ್ಕಾಪಟ್ಟೆ ಇಷ್ಟವಂತೆ, ಸಿಂಪಲ್ ರೆಸಿಪಿ ಇಲ್ಲಿದೆ

ಭಾರತೀಯ ಮೂಲಕ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇನ್ಫೋಸಿಸ್ ಕಂಪನಿಯ ಕಟ್ಟಾಳುಗಳಾದ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿಯವರ ಅಳಿಯ ರಿಷಿ ಸುನಾಕ್ ಯುಕೆಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಕರ್ನಾಟಕದ ಅಳಿಯ ರಿಷಿ ಸುನಕ್ ಇಂಡಿಯನ್ ಸ್ಟೈಲ್‌ ಫುಡನ್ನು ಸಹ ತುಂಬಾ ಇಷ್ಟಪಡುತ್ತಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

UK Prime Minister Rishi Sunaks Favourite Indian Breakfast Vin
Author
First Published Oct 27, 2022, 1:33 PM IST

ಭಾರತೀಯ ಮೂಲಕ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಕರ್ನಾಟಕದ ಅಳಿಯ ರಿಷಿ ಸುನಕ್‌ ಇಂಡಿಯನ್ ಸ್ಟೈಲ್‌ ಆಹಾರವನ್ನು ಹೆಚ್ಚು ಇಷ್ಟಪಡುತ್ತಾರೆ. ಅದರಲ್ಲೂ ಸೌತ್ ಇಂಡಿಯನ್ ಫುಡ್ ಅವರಿಗೆ ಅಚ್ಚುಮೆಚ್ಚು. ಸಂದರ್ಶನವೊಂದರಲ್ಲಿ ರಿಷಿ ಸುನಕ್ ಈ ಬಗ್ಗೆ ಹೇಳಿದ್ದರು. ನನ್ನ ಪತ್ನಿ ಸೌತ್ ಇಂಡಿಯನ್ ಆಗಿದ್ದು, ನಾವಿಬ್ಬರು ಜೊತೆಗಿರುವ ಸಮಯದಲ್ಲಿ ಬ್ರೇಕ್‌ಫಾಸ್ಟ್‌ಗೆ ಇಡ್ಲಿ, ದೋಸೆ-ಸಾಂಬಾರ್‌, ಚಟ್ನಿಯನ್ನು ಸವಿಯಲು ಇಷ್ಟಪಡುತ್ತೇನೆ ಎಂದು ಹೇಳಿದ್ದರು. ಹಾಗಿದ್ರೆ ರಿಷಿ ಸುನಕ್ ಫೇವರಿಟ್ ರವಾ ಇಡ್ಲಿ ತಯಾರಿಸೋದು ಹೇಗೆ ತಿಳಿಯೋಣ.

ರವಾ ಇಡ್ಲಿ ಮಾಡುವ ವಿಧಾನ

ಬೇಕಾದ ಪದಾರ್ಥಗಳು
1 ಕಪ್ ರವೆ
ಮುಕ್ಕಾಲು ಕಪ್ ಮೊಸರು
ಅರ್ಧ ಕಪ್ ನೀರು
ಸ್ಪಲ್ಪ ಕೊತ್ತಂಬರಿ ಸೊಪ್ಪು
ಸ್ವಲ್ಪ ಬೇಕಿಂಗ್ ಸೋಡಾ 
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ: ರವೆಯನ್ನು ಪ್ಯಾನ್‌ಗೆ ಹಾಕಿ ಚೆನ್ನಾಗಿ ಹುರಿಯಿರಿ. ರವೆಯಿಂದ ಪರಿಮಳ (Smell) ಬರಲು ಆರಂಭಿಸಿದ ನಂತರ ಗ್ಯಾಸ್ ಆಫ್‌ ಮಾಡಿ ರವೆಯನ್ನು ಬೇರೊಂದು ಪಾತ್ರೆಗೆ ವರ್ಗಾಯಿಸಿ. ತಣ್ಣಗಾದ ಬಳಿಕ ಇದನ್ನು ಮಿಕ್ಸಿಂಗ್ ಬೌಲ್‌ಗೆ ವರ್ಗಾಯಿಸಿ. ಇದಕ್ಕೆ ಈಗ ಮುಕ್ಕಾಲು ಕಪ್ ಮೊಸರು (Curd) ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮೇಲಿನಿಂದ ಕೊತ್ತಂಬರಿ ಸೊಪ್ಪನ್ನು ಸೇರಿಸಿಕೊಳ್ಳಿ. ದಪ್ಪನಾದ ಬ್ಯಾಟರ್‌ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಬೇಕಾದಷ್ಟು ನೀರನ್ನು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಟ್ಟುಕೊಳ್ಳಿ. ಹಿಟ್ಟನ್ನು ಹದಿನೈದು ನಿಮಿಷದಿಂದ ಇಪ್ಪತ್ತು ನಿಮಿಷಗಳ ಕಾಲ ಹಾಗೆಯೇ ಬಿಡಿ. ಅಷ್ಟು ಸಮಯ ಕಳೆದ ನಂತರ ಹಿಟ್ಟನ್ನು ಪರಿಶೀಲಿಸಿ ಅಗತ್ಯವಿದ್ದರೆ ಮಾತ್ರ ನೀರನ್ನು ಸೇರಿಸಿಕೊಳ್ಳಿ. 

ಕರ್ನಾಟಕದ ಅಳಿಯ, ಯುಕೆ ಪ್ರಧಾನಿ ಕೈಲಿ ಕೆಂಪು ರಕ್ಷಾ ಸೂತ್ರ; ಏನಿದರ ಮಹತ್ವ?

ಈಗ ಇಡ್ಲಿ ಸ್ಟೀಮರ್‌ನ್ನು ಬಿಸಿ ಮಾಡಿ. ಪಾತ್ರೆಗಳಿಗೆ ಎಣ್ಣೆಯನ್ನು (Oil) ಹಚ್ಚಿಕೊಳ್ಳಿ. ಈಗ ಹಿಟ್ಟಿಗೆ ಬೇಕಿಂಗ್ ಸೋಡಾವನ್ನು ಬೆರೆಸಿಕೊಂಡು ಇಡ್ಲಿ ಪ್ಲೇಟ್‌ಗೆ ಹಾಕಿ. ಇದನ್ನು ಹತ್ತರಿಂದ ಹನ್ನೆರಡು ನಿಮಿಷ ಬೇಯಿಸಿದರೆ ಬಿಸಿ ಬಿಸಿಯಾದ, ರುಚಿಕರವಾದ ರವಾ ಇಡ್ಲಿ ಸವಿಯಲು ಸಿದ್ಧ. ಇದನ್ನು ಬಿಸಿ ಬಿಸಿ ಸಾಂಬಾರ್ ಹಾಗೂ ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಲು ಅದ್ಭುತವಾಗಿರುತ್ತದೆ.

ದಕ್ಷಿಣಭಾರತದ ಆಹಾರವು ತೆಂಗಿನಕಾಯಿ ಚಟ್ನಿ (Coconut chutney)ಯಿಲ್ಲದೆ ಅಪೂರ್ಣವಾಗಿದೆ. ರುಚಿಕರವಾ ದೋಸೆ, ಇಡ್ಲಿಯನ್ನು ತೆಂಗಿನಕಾಯಿ ಚಟ್ನಿಯಿಲ್ಲದೆ ಊಹಿಸಲು ಸಾಧ್ಯವಿಲ್ಲ.  ಸುವಾಸನೆಭರಿತ ತೆಂಗಿನಕಾಯಿ ಚಟ್ನಿ. ಬಿಸಿ ಬಿಸಿ ರೊಟ್ಟಿ, ಇಡ್ಲಿ, ದೋಸೆಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ. ಹಾಗಿದ್ರೆ ಸ್ವಾದಿಷ್ಟಭರಿತ ತೆಂಗಿನಕಾಯಿ ಚಟ್ನಿ ತಯಾರಿಸೋದು ಹೇಗೆ ತಿಳಿಯೋಣ.

ತೆಂಗಿನಕಾಯಿ ಚಟ್ನಿ ಮಾಡುವುದು ಹೇಗೆ ?

ಬೇಕಾದ ಪದಾರ್ಥಗಳು
ತಾಜಾ ತೆಂಗಿನಕಾಯಿ
ಎಣ್ಣೆ-1 ಸ್ಪೂನ್
ಹಸಿರು ಮೆಣಸಿನಕಾಯಿ 2
ಕರಿಬೇವಿನ ಎಲೆ ಸ್ಪಲ್ಪ
ಪುದೀನಾ ಎಲೆಗಳು ಸ್ಪಲ್ಪ
ಶುಂಠಿ ಒಂದು ಸಣ್ಣ ತುಂಡು
ಒಗ್ಗರಣೆಗೆ ಸಾಸಿವೆ, ಕರಿಬೇವು, ಒಣಮೆಣಸು

ಮಾಡುವ ವಿಧಾನ: ತಾಜಾ ತೆಂಗಿನಕಾಯಿಯನ್ನು ತೆಗೆದುಕೊಂಡು ಅದನ್ನು ಎರಡು ಭಾಗಗಳಾಗಿ ಒಡೆಯಿರಿ. ತೆಂಗಿನಕಾಯಿಯನ್ನು ಸಣ್ಣದಾಗಿ ತುರಿದಿಟ್ಟುಕೊಳ್ಳಿ. ಈಗ, ಬಾಣಲೆಯಲ್ಲಿ ಎಣ್ಣೆಯನ್ನು (Oil) ಬಿಸಿ ಮಾಡಿ, ಇದಕ್ಕೆ ಕಡಲೇಕಾಯಿಯನ್ನು ಸೇರಿಸಿ. 2-3 ನಿಮಿಷಗಳ ಕಾಲ ಹುರಿಯಿರಿ. ಅದರ ನಂತರ, ಹಸಿರು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ. ಒಂದು ನಿಮಿಷ ಹುರಿಯಿರಿ. ಇವುಗಳು ತಣ್ಣಗಾದ ಬಳಿಕ ರುಚಿಗೆ ಪುದೀನ ಎಲೆಗಳನ್ನು ಸೇರಿಸಿ.

ಮಕ್ಕಳು ದೀಪಾವಳಿ ಆಚರಿಸುವಂತ ಬ್ರಿಟನ್ ನಿರ್ಮಾಣ, ಪ್ರಧಾನಿಯಾದ ಬೆನ್ನಲ್ಲೇ ಸುನಕ್ ಮಹತ್ವದ ಘೋಷಣೆ!

ಮುಂದಿನ ಹಂತವು ಶುಂಠಿಯ (Ginger) ತುಂಡನ್ನು ಸೇರಿಸುವುದಾಗಿದೆ. ಈ ಮಿಶ್ರಣಕ್ಕೆ ಉಪ್ಪನ್ನು ಸೇರಿಸಿ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ಸಾಸಿವೆ, ಒಣಮೆಣಸು, ಕರಿಬೇವಿನ ಸೊಪ್ಪು ಸೇರಿಸಿ ಒಗ್ಗರಣೆ ಹಾಕಿಕೊಳ್ಳಿ. ಈ ರೀತಿ ತಯಾರಿಸುವ ತೆಂಗಿನ ಕಾಯಿ ಚಟ್ನಿ ತಿಂಗಳುಗಳ ವರೆಗೆ ಹಾಳಾಗದೆ ಹಾಗೇ ಇರುತ್ತದೆ. ಯಾವುದೇ ತಿನಿಸಿನ ಜೊತೆ ನೆಂಚಿಕೊಂಡು ತಿನ್ನಲು ಸಾಧ್ಯವಾಗುತ್ತದೆ. 

Follow Us:
Download App:
  • android
  • ios