Viral Tweet: ನಿವೃತ್ತಿ ನಂತ್ರ ಸಮೋಸಾ ಮಾರೋದು ದುಡ್ಡಿಗಲ್ಲವೆಂದ ಅಜ್ಜ, ಮತ್ತೇನಕ್ಕೆ?
ನಿವೃತ್ತಿ ನಂತ್ರದ ಬದುಕು ಹೇಗಿರುತ್ತೆ ಅನ್ನೋದು ನಿವೃತ್ತಿ ಹೊಂದಿದವರಿಗೆ ಮಾತ್ರ ಗೊತ್ತು. ಅದೇನೋ ನೋವು ಸದಾ ಅವರನ್ನು ಕಾಡುತ್ತಿರುತ್ತದೆ. ಈ ವಯಸ್ಸಿನಲ್ಲೂ ಖುಷಿಯಾಗಿರ್ಬೇಕೆಂದ್ರೆ ನಿಮ್ಮ ಸಂತೋಷದ ದಾರಿ ನೀವೇ ಕಂಡ್ಕೊಳ್ಳಿ.
ಮಾಡುವ ಕೆಲಸದಲ್ಲಿ ಹೆಚ್ಚೆಚ್ಚು ಹಣ ಗಳಿಸಬೇಕು, ಉದ್ಯೋಗದಲ್ಲಿ ಹೆಚ್ಚಿನ ಲಾಭ ಪಡೆಯಬೇಕೆಂದು ಪ್ರತಿಯೊಬ್ಬರೂ ಬಯಸ್ತಾರೆ. ಮುಂದಿನ ಭವಿಷ್ಯಕ್ಕಾಗಿ ಹಣ ಕೂಡಿಡುತ್ತಾರೆ. ಮಧ್ಯವಯಸ್ಸಿನಲ್ಲಿ ಜನರಿಗೆ ಮನೆ, ಮಕ್ಕಳು, ಕೆಲಸ, ಜವಾಬ್ದಾರಿ ನಿರ್ವಹಣೆಯಲ್ಲೇ ಸಮಯ ಕಳೆದು ಹೋಗುತ್ತದೆ. ತಮ್ಮ ಬಗೆಯಾಗ್ಲಿ, ಪರರ ಬಗೆಗಾಗ್ಲಿ ಆಲೋಚನೆ ಮಾಡಲು ಸಮಯವಿರೋದಿಲ್ಲ. ಒಂದಷ್ಟು ದಿನ ಕೆಲಸದಿಂದ ಬಿಡುವುಪಡೆದು ಆರಾಮವಾಗಿ ಮನೆಯಲ್ಲಿರೋಣ ಅನ್ನಿಸೋದಿದೆ. ಕೆಲವರು ಕೆಲಸಕ್ಕೆ ಕಳ್ಳ ಬೀಳ್ತಾರೆ.
ಆದ್ರೆ ಸತತ 30- 40 ವರ್ಷಗಳ ಕೆಲಸದಲ್ಲಿ ಬ್ಯುಸಿಯಾದೋರಿಗೆ ನಿವೃತ್ತಿ ಎಂಬ ಹೆಸರು ಭಯ ಹುಟ್ಟಿಸುತ್ತದೆ. ಇಡೀ ದಿನ ಕೆಲಸ ಮಾಡುವ ನಿಮಗೆ ಮನೆಯಲ್ಲಿ ಆರಾಮ ಮಾಡು ಅಂದ್ರೆ ಅದನ್ನು ಸ್ವೀಕರಿಸೋದು ಸುಲಭವಲ್ಲ.
ನಿತೃತ್ತಿಯ ನಂತ್ರ ಆರಾಮವಾಗಿ ದಿನ ಕಳೆಯುತ್ತೇನೆ ಅಂತಾ ಬ್ಯುಸಿಯಾಗಿರುವಾಗ ನೀವು ಹೇಳ್ತೀರಿ. ಆದ್ರೆ ನಿವೃತ್ತಿಯ ಜೀವನದಲ್ಲಿ ಆರಾಮ ಎಷ್ಟು ಕಷ್ಟ ಎನ್ನುವ ಅರಿವು ನಿಮಗೆ ಬರುತ್ತದೆ. ಸದಾ ಮನೆಯಲ್ಲಿ ಕುಳಿತು ಟಿವಿ ನೋಡ್ತಾ ಸಮಯ ಕಳೆಯೋದು ಸುಲಭವಲ್ಲ. ನಾಲ್ಕು ಗೋಡೆ ಮಧ್ಯೆ ಕುಳಿತು ದಿನಗಳನ್ನು ಲೆಕ್ಕ ಹಾಕುವ ಮಂದಿಯ ಆರೋಗ್ಯದಲ್ಲಿ ಏರುಪೇರಾಗುತ್ತೆ. ಬಹುತೇಕರು ಮಾನಸಿಕ ನೆಮ್ಮದಿ ಕಳೆದುಕೊಳ್ತಾರೆ. ಹಾಗಂತ ಎಲ್ಲರೂ ಮನೆಯಲ್ಲೇ ಇರ್ತಾರೆ ಎಂದಲ್ಲ. ಕೆಲವರು ಸ್ನೇಹಿತರ ಜೊತೆ ಸುತ್ತಾಟ, ಪಾರ್ಕ್ ಅಂತಾ ಓಡಾಡಿದ್ರೆ ಮತ್ತೆ ಕೆಲವರಿಗೆ ನಿವೃತ್ತಿ ನಂತ್ರವೂ ಹಣ ಗಳಿಸೋದು ಅನಿವಾರ್ಯವಾಗಿರುತ್ತದೆ. ಅಂಥವರು ಕಷ್ಟದ ಮಧ್ಯೆ ನಾಲ್ಕು ಕಾಸು ಸಂಪಾದನೆ ಮಾಡೋದು ಹೇಗೆ ಎಂದು ಹುಡುಕಾಟ ನಡೆಸ್ತಾರೆ. ಮತ್ತೆ ಕೆಲವರಿಗೆ ಹಣದ ಅಗತ್ಯತೆ ಇರೋದಿಲ್ಲವಾದ್ರೂ ಬ್ಯುಸಿಯಾಗಿರೋದು ಮುಖ್ಯವಾಗುತ್ತದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಅಜ್ಜ ಉತ್ತಮ ನಿದರ್ಶನ. ಆತ ಹೇಳಿದ ಪಾಠ ಎಲ್ಲರಿಗೂ ಮಾದರಿಯಾಗಿದೆ.
ರವೆಯಲ್ಲಿನ ಕೀಟ ಓಡಿಸಲು ಇಲ್ಲಿದೆ ಬೊಂಬಾಟ್ ಟಿಪ್ಸ್
ಆರ್ಯನ್ಶ್ ಹೆಸರಿನ ವ್ಯಕ್ತಿ ತಮ್ಮ ಟ್ವಿಟರ್ (Twitter) ಹ್ಯಾಂಡಲ್ ನಲ್ಲಿ ವಿಡಿಯೋ (Video) ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ನೀವು ಉದಯಪುರದ ಸಮೋಸಾ ಮಾರಾಟ ಮಾಡುತ್ತಿರುವ ಅಜ್ಜನನ್ನು ನೋಡ್ಬಹುದು.
ಉದಯಪುರ (Udaipur)ದ ಕೋರ್ಟ್ ಸರ್ಕಲ್ ಬಳಿ ಟ್ರಾಫಿಕ್ ಸಿಗ್ನಲ್ ಬಳಿ ನನ್ನ ಕಾರನ್ನು ನಿಲ್ಲಿಸಿದಾಗ ಜೋರಾಗಿ ಮಳೆ ಸುರಿಯುತ್ತಿತ್ತು. ಅಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರು ಬಿಸಿ ಸಮೋಸಾ ಮತ್ತು ಅವಲಕ್ಕಿ ಮಾರುತ್ತಿರುವುದನ್ನು ನಾನು ನೋಡಿದೆ. ನಾನು ಆರ್ಡರ್ ಮಾಡಿದ್ದಲ್ಲದೆ, ಈ ವಯಸ್ಸಿನಲ್ಲಿ ಏಕೆ ವಿಶ್ರಾಂತಿ ತೆಗೆದುಕೊಳ್ತಿಲ್ಲವೆಂದು ಪ್ರಶ್ನೆ ಮಾಡಿದೆ. ಅದಕ್ಕೆ ಅವರು ನೀಡಿದ ಉತ್ತರ ಕೆಲಸದ ಬಗ್ಗೆ ನನ್ನ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸಿದ ಎಂದು ಅವರು ಟ್ವಿಟ್ ಮಾಡಿದ್ದಾರೆ.
ಪ್ರತಿದಿನ ತಿನ್ನೋ ಆಹಾರಗಳೂ ಕ್ಯಾನ್ಸರ್ ಅಪಾಯ ತರಬಹುದು!
ವೃದ್ಧ ಮಾರಾಟಗಾರ ಹೇಳಿದ್ದೇನು? : ಆರ್ಯನ್ ಪ್ರಶ್ನೆಗೆ ಅಜ್ಜ ಏನು ಉತ್ತರ ನೀಡಿದರು ಎಂಬುದನ್ನು ಕೂಡ ಟ್ವಿಟ್ ಮಾಡಲಾಗಿದೆ. ಮಗನೇ, ನಾನು ಈ ವಯಸ್ಸಿನಲ್ಲಿ ಹಣಕ್ಕಾಗಿ ಕೆಲಸ ಮಾಡುವುದಿಲ್ಲ. ನನ್ನ ಮನಸ್ಸನ್ನು ಸಂತೋಷವಾಗಿಡಲು ನಾನು ಕೆಲಸ ಮಾಡುತ್ತೇನೆ. ಮನೆಯಲ್ಲಿ ಒಬ್ಬನೆ ಕುಳಿತುಕೊಳ್ಳುವುದಕ್ಕಿಂತ ಇಲ್ಲಿ ಕುಳಿತುಕೊಳ್ಳುವುದು ಉತ್ತಮ. ನನ್ನ ಆಹಾರದ ರುಚಿ ಸವಿದ ನಾಲ್ಕು ಜನರ ಸಂತೋಷದ ಮುಖ ನೋಡಿದಾಗ ನನ್ನ ಮನಸ್ಸು ತೃಪ್ತಿಗೊಳ್ಳುತ್ತದೆ ಎಂದು ಅಜ್ಜ ಹೇಳಿದ್ದಾರಂತೆ.
ವೈರಲ್ ವಿಡಿಯೋ ಮೆಚ್ಚಿಕೊಂಡ ಜನ : ಇದುವರೆಗೆ 1.2 ಮಿಲಿಯನ್ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅನೇಕ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ನೀವು ನಿಮ್ಮ ಕೆಲಸವನ್ನು ಎಂಜಾಯ್ ಮಾಡಿದ್ರೆ ಜೀವನ ಸರಳ. ಹಣ ಕೇವಲ ಔಟ್ ಕಮ್ ವರ್ಕ್ ಆಗಿದೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಅಜ್ಜನ ಕೆಲಸವನ್ನು ಕೆಲವರು ಮೆಚ್ಚಿಕೊಂಡ್ರೆ ಇನ್ನು ಕೆಲವರು ಇದು ಪಾಸಿಟಿವ್ ಎನರ್ಜಿ ತಂದುಕೊಟ್ಟಿಗೆ ಎಂದು ಕಮೆಂಟ್ ಮಾಡಿದ್ದಾರೆ.