ಭೂಮಿಯ ರಕ್ಷಣೆಗೆ ಜನ ಪರಿಸರ ಸ್ನೇಹಿ ಪದ್ಧತಿಗಳನ್ನು ಅಳವಡಿಸಿಕೊಳ್ಳುತ್ತಿರುವ ಮಧ್ಯೆ ಇಲ್ಲೊಂದು ದೊಡ್ಡ ಬದಲಾವಣೆ ಇದೆ. ಹಲವು ರಾಷ್ಟ್ರಗಳಲ್ಲಿ ಪ್ಲಾಸ್ಟಿಕ್‌ನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇನ್ನೂ ಕೆಲವು ಕಡೆ ನಿಬಂಧನೆಗಳನ್ನು ವಿಧಿಸಲಾಗಿದೆ.

ಪ್ಲಾಸ್ಟಿಕ್ ತ್ಯಜಿಸುವ ನಿಟ್ಟಿನಲ್ಲಿ ಭಾರತ ಮುಂಚೂಣಿಯಲ್ಲಿದೆ. ಭಾರತದಲ್ಲಾಗುತ್ತಿರುವ ಬದಲಾವಣೆಗಳನ್ನು ಜಗತ್ತಿನ ಪ್ರಮುಖ ವ್ಯಕ್ತಿಗಳು ಗಮನಿಸುತ್ತಿದ್ದಾರೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಸಿಕ್ಕಿದೆ.

ಈ ಕಿಚನ್ ಟ್ರಿಕ್ಸ್ ಗೊತ್ತಾದ್ರೆ ಅಡುಗೆ ಮನೇಲಿ ಯಾವುದೇ ವಸ್ತು ವೇಸ್ಟ್ ಆಗೋಲ್ಲ

ಪ್ಲಾಸ್ಟಿಕ್ ಕಪ್‌ಗಳನ್ನು ಬಾಳೆ ಎಲೆಯಿಂದ ಹೇಗೆ ರಿಪ್ಲೇಸ್ ಮಾಡಬಹುದು ಎಂಬುದನ್ನು ನಾರ್ವೆಯ ಮಾಜಿ ಸಚಿವರೊಬ್ಬರು ಟ್ವೀಟ್ ಮಾಡಿದ್ದಾರೆ. ಎರಿಕ್ ಸೋಲಿಂ ಎಂಬ ನಾರ್ವೆ ಮಾಜಿ ಸಚಿವ ಬಾಳೆ ಎಲೆಯ ಐಸ್‌ಕ್ರಿಂ ಕಪ್‌ನ ಫೋಟೋ ಶೇರ್ ಮಾಡಿದ್ದಾರೆ.

ಹಸಿರು ಸ್ಫೂರ್ಥಿ - ಬಾಳೆ ಎಲೆಯ ಕಪ್‌ನಲ್ಲಿ ಐಸ್‌ಕ್ರೀಂ ಸರ್ವ್ ಮಾಡುತ್ತಿರುವ ಫೋಟೋ ಭಾರತದ್ದು. ನಾವಂದುಕೊಂಡಷ್ಟು ಮಟ್ಟಿಗೆ ಪ್ಲಾಸ್ಟಿಕ್ ನಮಗೆ ಅಗತ್ಯವಿಲ್ಲ ಎಂಬುದಕ್ಕೆ ಈ ಚಿತ್ರ ಸಾಕ್ಷಿ ಎಂದಿದ್ದಾರೆ.

ಬರೀ ವ್ಯಾಯಾಮ ಮಾಡಿದರೆ ಸ್ಲಿಮ್ ಆಗೋಲ್ಲ, ಆಹಾರದೆಡೆಗೆ ಇರಲಿ ಗಮನ!

ಬಾಳೆ ಎಲೆಯಿಂದಲೇ ಕಪ್ ಮಾಡಿ ಅದರಲ್ಲೇ ಐಸ್‌ಕ್ರೀಂ ಸರ್ವ್ ಮಾಡಲಾಗಿರುವುದನ್ನು ಫೋಟೋದಲ್ಲಿ ಕಾಣಬಹುದು. ಬಾಳೆ ಎಲೆಯನ್ನು ನೀಟಾಗಿ ಮಡಚಿ ಒಂದು ನರ್ದಿಷ್ಟ ಶೇಪ್‌ನಲ್ಲಿ ಕಪ್ ತಯಾರಿಸಲಾಗಿದೆ.