ಬೇರೇನೂ ಕೆಲ್ಸ ಇಲ್ಲ..ತಿನ್ತಾ ಕೂತ್ರೆ ಸಾಕು..ತಿಂಗಳಿಗೆ ಭರ್ತಿ 1 ಲಕ್ಷ ಸಂಬಳ !

ಸಿಕ್ಕಾಪಟ್ಟೆ ಕೆಲ್ಸ (Work) ಇರುತ್ತೆ. ಆದ್ರೆ ಕೊಡೋ ಸ್ಯಾಲರಿ (Salary) ಮಾತ್ರ ಅಷ್ಟು ಕಡಿಮೆ ಅನ್ನೋ ಮನೋಭಾವ ಎಲ್ಲರಿಗೂ ಇರುತ್ತೆ. ಹೀಗಾಗಿಯೇ ಬರೀ ಊಟ, ನಿದ್ದೆ ಮಾಡ್ತಾ ಇದ್ರೆ ಜೀವನ (Life) ಚೆನ್ನಾಗಿರುತ್ತೆ ಎಂದು ಹಲವರು ಅಂದುಕೊಳ್ತಾರೆ. ಅಂಥವರಿಗೆ ಬೆಸ್ಟ್ ಚಾಯ್ಸ್ ಇದು. ಇಲ್ಲಿ ತಿನ್ನೋದಷ್ಟೇ ಕೆಲಸ, ತಿಂಗಳಿಗೆ ಭರ್ತಿ 1 ಲಕ್ಷ ರೂ. ಸಂಬಳ.

This Company Is Offering One Lakh Salary Free To Eat  Vin

ಜೀವನೋಪಾಯಕ್ಕಾಗಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ಕೆಲಸ (Work) ಮಾಡಿಯೇ ಮಾಡ್ತಾರೆ. ಹಣ ಇಲ್ಲಾಂದ್ರೆ ಜೀವನ (Life) ನಡೆಸೋಕೆ ಹೇಗೆ ಸಾಧ್ಯ ಹೇಳಿ. ದಿನನಿತ್ಯದ ಖರ್ಚು ವೆಚ್ಚಗಳನ್ನು ಸರಿದೂಗಿಸೋಕೆ ಇನ್‌ಕಂ (Income) ಇರಲೇಬೇಕು. ಹಾಗಂತ ದಿನಪೂರ್ತಿ ಕತ್ತೆಯಂತೆ ದುಡಿಯೋದು ಯಾರಿಗೂ ಇಷ್ಟವಾಗಲ್ಲ. ದೈಹಿಕ, ಮಾನಸಿಕ ಒತ್ತಡ (Pressure)ದಿಂದ ಪಾರಾಗಬೇಕು ಅಂತ ಅನಿಸುತ್ತಿರುತ್ತೆ. ಹೀಗಾಗಿ ಕೆಲವೊಬ್ರು ಹೈ ಪೇಯ್ಡ್ ಸ್ಯಾಲರಿ ಬಿಟ್ಟು ಕಡಿಮೆ ಸಂಬಳ (Salary)ನಾದ್ರೂ ಸಾಕಪ್ಪಾ ಅಂತ ಸಣ್ಣಪುಟ್ಟ ಕೆಲ್ಸ ನೋಡ್ಕೋತಾರೆ. 

ಸಿಕ್ಕಾಪಟ್ಟೆ ಕೆಲ್ಸ ಇರುತ್ತೆ. ಆದ್ರೆ ಕೊಡೋ ಸಾಲರಿ ಮಾತ್ರ ಅಷ್ಟು ಕಡಿಮೆ ಅನ್ನೋ ಮನೋಭಾವ ಎಲ್ಲರಿಗೂ ಇರುತ್ತೆ. ಹೀಗಾಗಿಯೇ ಬರೀ ಊಟ, ನಿದ್ದೆ ಮಾಡ್ತಾ ಇದ್ರೆ ಜೀವನ ಚೆನ್ನಾಗಿರುತ್ತೆ ಎಂದು ಹಲವರು ಅಂದುಕೊಳ್ತಾರೆ. ಅಂಥವರಿಗೆ ಬೆಸ್ಟ್ ಚಾಯ್ಸ್ ಇದು. ಇಲ್ಲೊಂದು ಆನ್‌ಲೈನ್ ಮಾರುಕಟ್ಟೆಯ (Online Marketplace) ಕಂಪನಿಯೊಂದು ನಿಜವಾಗಲು ಇಂತಹದೇ ಒಂದು ಉತ್ತಮವಾದ ಕೆಲಸವನ್ನು ನೀಡುತ್ತಿದೆ. ಇಲ್ಲಿ ತಿನ್ನೋದಷ್ಟೇ ಕೆಲಸ, ತಿಂಗಳಿಗೆ ಭರ್ತಿ 1 ಲಕ್ಷ ರೂ. ಸಂಬಳ.

ಯಾವಾಗ್ಲೂ ಹಾಳುಮೂಳು ತಿನ್ತೀಯಾ ಅನ್ನೋ ಮನೆಮಂದಿಗೆ ಹೇಳಿ, ಚಾಟ್ಸ್ ಆರೋಗ್ಯಕ್ಕೆ ಒಳ್ಳೇದಂತೆ

ಕನಸಿನ ಉದ್ಯೋಗಗಳನ್ನು ನನಸಾಗಿಸುವ ಮೆಟಿರೀಯಲ್ ಮಾರ್ಕೆಟ್‌ ಡಾಟ್ ಕಾಮ್‌ ಅವರು ಮೆಕ್‌ಡೊನಾಲ್ಡ್ಸ್‌ (McDonalds), ಸಬ್ವೇ (Subway) ಮತ್ತು ಗ್ರೆಗ್ಸ್ (Greggs) ನಂತಹ ಫಾಸ್ಟ್ ಫುಡ್ ರೆಸ್ಟೋರೆಂಟ್ ಗಳಲ್ಲಿ 'ಟೇಕ್ ಅವೇ ಟೆಸ್ಟರ್' ಆಗಿ ಕೆಲಸ ಮಾಡಲು ಜನರನ್ನು ಹುಡುಕುತ್ತಿದೆ. ವೇಲ್ಸ್ ಆನ್‌ಲೈನ್ ವರದಿ ಮಾಡಿರುವಂತೆ ಈ ಕೆಲಸಕ್ಕೆ 1,000 ಪೌಂಡ್ ಎಂದರೆ ಭಾರತೀಯ ಮೌಲ್ಯದಲ್ಲಿ ಸುಮಾರು 1 ಲಕ್ಷ ರೂಪಾಯಿಗಳನ್ನು ಪಾವತಿಸುವುದಾಗಿ ಮತ್ತು ಈ ಕೆಲಸಕ್ಕೆ ಆರು ಜನರನ್ನು ಹುಡುಕುತ್ತಿದೆ ಎಂದು ಹೇಳಲಾಗಿದೆ.

ಮಾರುಕಟ್ಟೆ ಮೂಲತಃ ವ್ಯಾಪಾರಿಗಳಿಗೆ ಅತ್ಯುತ್ತಮ ಫಾಸ್ಟ್ ಫುಡ್ ಆಯ್ಕೆಗಳನ್ನು ನಿರ್ಧರಿಸಲು ಒಂದು ತಂಡವನ್ನು ನೇಮಿಸಿಕೊಳ್ಳುತ್ತಿದೆ. MaterialsMarket.com ಸಹ-ಸಂಸ್ಥಾಪಕ ಸ್ಯಾಮ್ಯುಯೆಲ್ ಹಂಟ್ ಅವರ ಪ್ರಕಾರ, ರೆಸ್ಟೋರೆಂಟ್ ಗಳಲ್ಲಿ ಮಧ್ಯಾಹ್ನದ ಊಟದ ಸಮಯದಲ್ಲಿ ಅಥವಾ ಮುಂಜಾನೆ ಫಾಸ್ಟ್ ಫುಡ್ ತಿನ್ನುವ ಅನೇಕ ವ್ಯಾಪಾರಿಗಳನ್ನು ನಾವು ನೋಡಬಹುದು. "ಫಾಸ್ಟ್ ಫುಡ್ ಆಹಾರ ಹೀಗಿರುತ್ತದೆ, ಹಾಗಿರುತ್ತದೆ ಎಂಬ ಅನೇಕ ನಕಾರಾತ್ಮಕ ಅರ್ಥಗಳನ್ನು ಹೊಂದಿದ್ದರೂ, ಈ ವ್ಯಾಪಾರಿಗಳಿಗೆ ಆ ಊಟವು ತುಂಬಾನೇ ಅನುಕೂಲಕರವಾಗಿರುತ್ತದೆ” ಎಂದು ಅವರು ಹೇಳಿದರು.

ಒಮ್ಮೆ ಆಯ್ಕೆಯಾದ ನಂತರ, ವ್ಯಕ್ತಿಯು ಹಲವಾರು ಫಾಸ್ಟ್ ಫುಡ್ ಗಳಲ್ಲಿ ಆಹಾರವನ್ನು ತಿನ್ನುವ ಅವಕಾಶವನ್ನು ಹೊಂದಿರುತ್ತಾನೆ. ಇವುಗಳಲ್ಲಿ ಮೆಕ್‌ಡೊನಾಲ್ಡ್ಸ್‌ ನ ದೊಡ್ಡ ಬಿಗ್ ಮ್ಯಾಕ್ ಮೀಲ್, ಗ್ರೆಗ್ಸ್ ಸಾಸೇಜ್, ಮತ್ತು ಆಮ್ಲೆಟ್ ಬ್ರೇಕ್ ಫಾಸ್ಟ್ ಬಾಗುಯೆಟ್, ಮತ್ತು ಸಬ್ವೇಯ ಫುಟ್ ಲಾಂಗ್ ಮೀಟ್ ಬಾಲ್ ಮರಿನಾರಾ ಸೇರಿವೆ.

Health Tips: ಕೆಲಸದ ಜತೆಜತೆಗೆ ಈ ಆಹಾರ ತಿನ್ನುವುದರಿಂದ ಇದೆ ಹಲವಾರು ಲಾಭ

ಆಹಾರದ ರುಚಿ ನೋಡುವ ಕೆಲಸ
ಆಹಾರಗಳ ರುಚಿಯನ್ನು ನೋಡುವುದು ಈ ಕೆಲಸದ ಏಕೈಕ ಜವಾಬ್ದಾರಿ ಎಂದು ನೀವು ಭಾವಿಸಿದರೆ, ನೀವು ತಪ್ಪಾಗಿ ಭಾವಿಸುತ್ತೀದ್ದೀರಿ ಅಂತ ಅರ್ಥ. ಆಹಾರವನ್ನು ಸೇವಿಸಿದ ನಂತರ, ಆ ಟೆಸ್ಟರ್ ಮಾರುಕಟ್ಟೆಗೆ ಪ್ರಮುಖ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಆಹಾರವು ಒಬ್ಬ ವ್ಯಕ್ತಿಯ ಹೊಟ್ಟೆಯನ್ನು ಎಷ್ಟು ಸಮಯದವರೆಗೆ ತುಂಬಿಸಿಟ್ಟಿರುತ್ತದೆ ಎಂಬುದನ್ನು ಮೇಲ್ವಿಚಾರಣೆ ಮಾಡಲು ಇದು ಮಾರುಕಟ್ಟೆಗೆ ಸಹಾಯ ಮಾಡುತ್ತದೆ. ಇದಲ್ಲದೆ, ವ್ಯಾಪಾರಿಗಳ ಶಕ್ತಿಯ ಮಟ್ಟವನ್ನು ಉನ್ನತ ಮಟ್ಟದಲ್ಲಿರಿಸಲು ಆಹಾರವು ಎಷ್ಟು ಪರಿಣಾಮಕಾರಿ ಎಂಬ ಕಲ್ಪನೆಯನ್ನು ಸಹ ಇದು ನೀಡುತ್ತದೆ.

ತಿಂಗಳಿಗೆ 1 ಲಕ್ಷ ರೂಪಾಯಿ ಸಂಬಳ
ಟೆಸ್ಟರ್ ಗಳು ಈ ಆಹಾರದಿಂದಾಗುವ ನಕಾರಾತ್ಮಕ ಪರಿಣಾಮಗಳನ್ನು ಸಹ ತಪ್ಪದೇ ವರದಿ ಮಾಡಬೇಕಾಗುತ್ತದೆ. ಪ್ರತಿ ಟೆಸ್ಟರ್ ಗೆ ಒಂದು ತಿಂಗಳ ಕೆಲಸಕ್ಕೆ ಸರಿ ಸುಮಾರು 1 ಲಕ್ಷ ರೂಪಾಯಿ ನೀಡಲಾಗುತ್ತದೆ. ಇದಲ್ಲದೆ, ಅವರು ಪ್ರತಿದಿನ ತಿನ್ನುವ ಪ್ರತಿ ಊಟಕ್ಕೂ ಮಾರುಕಟ್ಟೆಯು ಅವರಿಗೆ ಪಾವತಿಸುತ್ತದೆ.

Latest Videos
Follow Us:
Download App:
  • android
  • ios