ಇವರು ಕಾಫಿ ಜತೆ ಮಿಕ್ಸ್ ಮಾಡೋದು ಹಾಲಲ್ಲ, ಆಲ್ಕೋಹಾಲ್!

ಕಾಫಿ ಸೇವನೆಗೆ ಇಂಥದ್ದೇ ಸಮಯ, ಮೂಡು ಅನ್ನುವಂಥದ್ದೇನೂ ನಮ್ಮಲ್ಲಿಲ್ಲ. ಯಾವಾಗ ಬೇಕಿದ್ದರೂ ಕುಡಿಯುತ್ತೇವೆ. ಕಾಫಿ ಜಗತ್ತಿನ ಎಲ್ಲೆಡೆ ಜನಪ್ರಿಯವಾಗಿರುವ ಪಾನೀಯ. ಆದರೆ, ಎಲ್ಲೆಡೆ ಒಂದೇ ರೀತಿಯ ಪದ್ಧತಿಯಿಲ್ಲ. ಸಾಂಪ್ರದಾಯಿಕವಾಗಿ ಕೆಲವು ವಿಭಿನ್ನ ಶೈಲಿಗಳನ್ನು ಕಾಣಬಹುದು. 
 

These people mix coffee with alcohol how safe is that

ಕಾಫಿ (Coffee) ಡಿಕಾಕ್ಷನ್ ಗೆ ಒಂದಿಷ್ಟು ಹಾಲು, ಸಕ್ಕರೆ ಬೆರೆಸಿಕೊಂಡು ಕುಡಿಯುವುದು (Drinking) ನಮ್ಮ ಸಾಮಾನ್ಯ ಪದ್ಧತಿ. ಇನ್ನು, ಕಾಫಿ ಡೇಗಳಿಗೆ ಹೋಗುವವರು ಕೆಪುಚಿನೋ (cappuccino) , ಬ್ಲಾಕ್ ಕಾಫಿ, ಕೋಲ್ಡ್ ಕಾಫಿ ಅದೂ ಇದೂ ಎಂದು ವಿಭಿನ್ನ ರೀತಿಯ ಕಾಫಿಗಳನ್ನು ಟೇಸ್ಟ್ ಮಾಡುವುದುಂಟು. 
ಕಾಫಿಯನ್ನು ವಿಶ್ವದ ಎಲ್ಲೆಡೆ ಸೇವಿಸಲಾಗುತ್ತದೆ. ಆದರೆ, ಎಲ್ಲ ಕಡೆಗಳಲ್ಲೂ ಒಂದೇ ರೀತಿಯ ಪದ್ಧತಿಯಿಲ್ಲ. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿನ ಜನರ ಕಾಫಿ ಶೈಲಿ ಭಾರೀ ಕುತೂಹಲ ಮೂಡಿಸುವಂಥದ್ದು. 

•    ಸ್ವೀಡನ್ (Sweden)
ಸ್ವೀಡನ್ ಜನರ ಪಾಲಿಗೆ ಕಾಫಿ ಎಂದರೆ ಸ್ಪೆಷಲ್. ಕೆಲಸದಲ್ಲಿ ಬ್ರೇಕ್ ತೆಗೆದುಕೊಂಡು, ನಿಮ್ಮಷ್ಟಕ್ಕೆ ನೀವು ಸಮಾಧಾನದಲ್ಲಿ ಕುಳಿತುಕೊಂಡು ಅಥವಾ ಯಾರೊಂದಿಗಾದರೂ ಮಾತನಾಡುತ್ತ ಮಾತ್ರ ಸೇವಿಸುಂಥದ್ದು. ಹೀಗೆ ಹೋಗುವಾಗ, ಬರುವಾಗ, ಕೆಲಸ ಮಾಡುತ್ತ ಕುಡಿಯುವ ಪಾನೀಯವಲ್ಲ! ಕಾಫಿಗೆ ಅವರಿಟ್ಟುಕೊಂಡಿರುವ ಹೆಸರು ಫಿಕಾ (Fika).

•    ಇಟಲಿ (Italy)
ಇಟಲಿಯಲ್ಲಿನ ಜನರಿಗೆ ಕಾಫಿ ಸೇವನೆ ಎಂದರೆ ಧರ್ಮನಿಷ್ಠೆಗೆ ಸಮ.  ಹೀಗಾಗಿ, ರಾತ್ರಿ ಸೇವನೆ ನಿಷಿದ್ಧ. ಬೆಳಗಿನ (Morning) ಸಮಯದಲ್ಲಿ ಮಾತ್ರ ಕೆಪುಚಿನೋ ಸೇವಿಸುತ್ತಾರೆ. ಎಸ್ಪ್ರೆಸ್ಸೊ (Espresso) ಎನ್ನುವ ಹೆಸರಿನಿಂದ ಕರೆಯುತ್ತಾರೆ. ಎಸ್ಪ್ರೆಸ್ಸೊ ಎಂದರೆ ವೇಗ ಎಂದರ್ಥ. ಇಲ್ಲಿ ಕಾಫಿಯನ್ನು ಕುಳಿತುಕೊಂಡು ಕುಡಿಯುವಂತಿಲ್ಲ, ನಿಂತೇ ಸೇವನೆ ಮಾಡಬೇಕು!

•    ಟರ್ಕಿ (Turky)
ಟರ್ಕಿಯಲ್ಲಿ ಕಾಫಿ ಕುರಿತಾದ ಹೇಳಿಕೆಯೊಂದು ಜನಪ್ರಿಯ. “ಕಾಫಿ ಹೇಗಿರಬೇಕೆಂದರೆ, ನರಕದಷ್ಟು ಕಪ್ಪ(Black)ಗಿರಬೇಕು, ಸಾವಿನಷ್ಟು ಶಕ್ತ(Strong)ವಾಗಿರಬೇಕು, ಪ್ರೀತಿ(Love)ಯಷ್ಟು ಸಿಹಿಯಾಗಿರಬೇಕು’. ಸೆಜ್ವ್ (Cezve) ಎಂದು ಕರೆಯಲಾಗುವ ತಾಮ್ರ ಅಥವಾ ಕಂಚಿನ ಪಾತ್ರೆಗಳಲ್ಲಿಯೇ ಕಾಫಿ ಸೇವಿಸಲಾಗುತ್ತದೆ. ಕಾಫಿಯ ಕಹಿಯನ್ನು ಹೋಗಲಾಡಿಸಲು ಟರ್ಕಿಶ್ ಕ್ಯಾಂಡಿಯನ್ನು ಮಿಕ್ಸ್ ಮಾಡಲಾಗುತ್ತದೆ. 

•    ಇಥಿಯೋಫಿಯಾ (Ethiopia)
ಅರೇಬಿಕಾ (Arabica) ಸಸ್ಯದ ಮೂಲಸ್ಥಳವೇ ಇಥಿಯೋಪಿಯಾ. ಇಲ್ಲಿ ಕಾಫಿ ರಾಷ್ಟ್ರೀಯ ಪಾನೀಯ. ಇಲ್ಲಿನ ಸಮಾರಂಭಗಳಲ್ಲಿ ಮಹಿಳೆಯರು ಝೆಬೆನಾ ಎಂದು ಕರೆಯುವ ದೊಡ್ಡದಾದ ಪಾತ್ರೆಯಲ್ಲಿ ಕಾಫಿ ಬೀಜಗಳನ್ನು ಹುರಿಯುತ್ತಾರೆ, ಅದೂ ಸಹ ಅತಿಥಿಗಳ ಎದುರು. ಇಲ್ಲಿ ಅಬೋಲ್ (Abol) (ಹೆಚ್ಚು ಸ್ಟ್ರಾಂಗ್ ಇರುತ್ತದೆ), ಟೋನಾ (Tona) ಮತ್ತು ಬರಾಕಾ (Baraka) ಎನ್ನುವ ಮೂರು ಶೈಲಿಗಳಲ್ಲಿ ಕಾಫಿ ಲಭ್ಯ.  

ವಂಚಕ ಪತಿಯ ಸುಳ್ಳು ಪತ್ತೆ ಮಾಡೋಕೆ ಇಲ್ಲಿವೆ Tips

•    ಮೆಕ್ಸಿಕೋ (Mexico)
ಆಹಾರ ತಜ್ಞರು ಸಲಹೆ ನೀಡುವುದಕ್ಕೆ ವ್ಯತಿರಿಕ್ತವಾದ ಪದ್ಧತಿಯನ್ನು ಇಲ್ಲಿ ಕಾಣಬಹುದು. ಇಲ್ಲಿನ ಜನ ಬೆಳಗ್ಗೆ ಮಾತ್ರವಲ್ಲ, ರಾತ್ರಿ ಹಾಸಿಗೆಗೆ ಹೋಗುವ ಮುನ್ನವೂ ಕಾಫಿಯನ್ನು ಕುಡಿಯುತ್ತಾರೆ. ಒಲ್ಲಾ ಎಂದು ಕರೆಯುವ ಮಡಕೆಗಳಲ್ಲೇ ಕಾಫಿಯನ್ನು ಸಿದ್ಧಪಡಿಸುತ್ತಾರೆ. ಕಂದು ಬಣ್ಣದ ಸಕ್ಕರೆಯನ್ನೇ ಬಳಸುತ್ತಾರೆ. ಸರ್ವ್ ಮಾಡುವ ಮುನ್ನ ಚಕ್ಕೆಯನ್ನು ಸೇರಿಸುತ್ತಾರೆ. 

ವೋಡ್ಕಾ ಬಾಟಲ್‌ನಲ್ಲಿ ದೀಪದೆಣ್ಣೆ ತುಂಬಿದ ಅಮ್ಮ, ಪೂಜೆಯಲ್ಲಿ ಮಗನ ಮಾನ ಹರಾಜು!

•    ಐರ್ ಲ್ಯಾಂಡ್ (Ireland)
ಇಲ್ಲಿನ ಕಾಫಿ ಆಲ್ಕೋಹಾಲ್ ಜತೆಗೆ ಬೆರೆತಿರುತ್ತದೆ. ವಿಸ್ಕಿ, ಸಕ್ಕರೆ ಹಾಗೂ ಕ್ರೀಮ್ ನೊಂದಿಗೆ ಹಾಟ್ ಕಾಫಿಯನ್ನು ಕುಡಿಯುತ್ತಾರೆ. ಈ ಪದ್ಧತಿ 1940ರ ದಶಕದಲ್ಲಿ ಬಳಕೆಗೆ ಬಂದಿದೆ. ಹಡಗೊಂದರಲ್ಲಿ ಶೆಫ್ ಆಗಿದ್ದ ಜೋಯ್ ಶೆರಿಡಾನ್ ಎಂಬಾತ ನೌಕಾಯಾನದ ಸಮಯದಲ್ಲಿ ಪ್ರಯಾಣಿಕರನ್ನು ಬೆಚ್ಚಗಿಡಲು ಆಲ್ಕೋಹಾಲ್ (Alcohol) ಬೆರೆಸುವ ಪದ್ಧತಿಗೆ ನಾಂದಿ ಹಾಡಿದ್ದ. ಅಂದಿನಿಂದಲೂ ಇದು ಫೇಮಸ್.

•    ವಿಯೆಟ್ನಾಂ (Vietnam)
ಇಲ್ಲಿಯೂ ನಮ್ಮಂತೆ ದಿನವಿಡೀ ಯಾವಾಗೆಂದರೆ ಆಗ ಕುಡಿಯಲಾಗುತ್ತದೆ. ಬ್ಲಾಕ್ ಕಾಫಿ, ದಪ್ಪನೆಯ ಹಾಲಿನೊಂದಿಗೆ ಬೆರೆಸುವ ಕಾಫಿ ಹಾಗೂ ದಪ್ಪನೆಯ ಹಾಲು ಬೆರೆತ ಕೋಲ್ಡ್ ಕಾಫಿ ಇಲ್ಲಿ ಜನಪ್ರಿಯ. ಸಾಮಾನ್ಯವಾಗಿ ರೋಬಸ್ಟಾ (Robusta) ಬೀಜಗಳನ್ನು ಮಾತ್ರ ಇಲ್ಲಿ ಬಳಕೆ ಮಾಡಲಾಗುತ್ತದೆ. ದಪ್ಪನೆಯ ಕಾಫಿ ಇಲ್ಲಿನವರ ಅಭ್ಯಾಸ.

Latest Videos
Follow Us:
Download App:
  • android
  • ios