ಶಿರಸಿ ಮಾರಿಕಾಂಬಾ ದೇವಸ್ಥಾನದ ಬಳಿ ಪುಟ್ಟದೊಂದು ಸ್ಟಾಲ್.. ಇವರ ಶ್ರದ್ಧೆ, ಶ್ರಮದಿಂದ ಪುಟ್ಟ ಸ್ಟಾಲ್ ದೊಡ್ಡದಾಗಿ ಇವತ್ತು ದೊಡ್ಡ ಹೊಟೇಲ್ ಆಗಿ ತಲೆ ಎತ್ತಿದೆ ಬಾಬಾ ಬಾಯ್ಸ್‌. ದೊಡ್ಡ ಮಟ್ಟದ ವಹಿವಾಟನ್ನು ನಡೆಸುತ್ತಿದ್ದಾರೆ. 

ವಿಭಿನ್ನವಾಗಿ ಏನಾದರೂ ಮಾಡಬೇಕು ಎಂದಿರುವ ಇವರು ಇದೀಗ ಅಲೆಮನೆ ಹಬ್ಬ ಮಾಡಿ, ಕಬ್ಬಿನ ಜ್ಯೂಸ್, ಕೇಕ್ ಸೇರಿದಂತೆ ಕಬ್ಬಿನಿಂದ ತರಹೇವಾರಿ ತಿನಿಸುಗಳನ್ನು ತಯಾರಿಸಿದ್ದಾರೆ. ಕಬ್ಬಿನಿಂದ ಇದನ್ನೆಲ್ಲಾ ತಯಾರಿಸಬಹುದಾ ಎಂದು ಅಚ್ಚರಿಯಾಗುತ್ತದೆ. ಏನೆಲ್ಲಾ ಸ್ಪೆಷಲ್ ತಯಾರಿಸಿದ್ದಾರೆ..? ನೋಡೋಣ ಬನ್ನಿ..!

ಕಲ್ಲು ಸಕ್ಕರೆ ಕೊಳ್ಳೀರೋ ನೀವೆಲ್ಲರೂ, ಉತ್ತಮ ಆರೋಗ್ಯಕ್ಕಾಗಿ!

ಜನವರಿ 8ರಿಂದ 17ರ ವರೆಗೆ ನಡೆಯುತ್ತಿರುವ ಆಲೆಮನೆ ಹಬ್ಬಕ್ಕೆ ಸ್ಥಳೀಯರು ಹಾಗೂ ಪ್ರಯಾಣಿಕರು ಹೊಸ ಆಹಾರ ಶೈಲಿಯನ್ನು ಎಂಜಾಯ್ ಮಾಡುತ್ತಿದ್ದಾರೆ.ಸಿಲಿಕಾನ್‌ ಸಿಟಿ ಪಬ್ ರೀತಿಯಲ್ಲಿ ಕಾಣುವ ಈ ಪಬ್ ಸಂಪೂರ್ಣವಾಗಿ ಆರ್ಗ್ಯಾನಿಕ್.ಕದಂಬ ಆರ್ಗ್ಯಾನಿಕ್ ಮಾರ್ಕೆಟಿಂಗ್ ಸೆಂಟರ್‌ ಹಾಗೂ ಯುಕೆ ಕೂಫೆಡ್‌ ಮತ್ತು ಹೈಹಾಕ್ಸ್‌ ಈ ಕಾರ್ಯಕ್ರಮದ ಪ್ರಯೋಜರು. ಆಲೆಮನೆ ಹಬ್ಬದ ಮೆನ್ಯೂ ಲಿಸ್ಟ್‌ನಲ್ಲಿ ಶುಗರ್‌ಕೇನ್‌ ಕೇಕ್, ಶುಗರ್‌ಕೇನ್‌ ದೋಸೆ, ನೋರೆ ಬೆಲ್ಲ, ಇಂಡಿಯನ್ ಟ್ವಿಸ್ಟರ್, ವೆಜ್ ಹಾಟ್ ಕ್ಯಾಂಡಿ, ಸ್ಪೈಸಿ ಸ್ಮೈಲಿ, ಕರದಂಟು ಹಾಗೂ ಬೆಲ್ಲ ದೊರೆಯುತ್ತದೆ.

ಪ್ರತಿದಿನ ಜೇನು ತುಪ್ಪ ಸೇವಿಸುತ್ತಿದ್ದೀರಾ? ಹಾಗಿದ್ದರೆ ಇದನ್ನು ಓದ್ಲೇ ಬೇಕು

28 ಫೆಬ್ರವರಿ 2018ರಲ್ಲಿ ಶ್ರೀ ಮಾರಿಕಾಂಬ ದೇವರ ಜಾತ್ರೆಯಲ್ಲಿ ವೇಳೆ ಆರಂಭಗೊಂಡ ದಿ ಬಾಬಾ ಬಾಯ್ಸ್‌ ತಂಡದಲ್ಲಿ ಅಮರ್,ಪ್ರಣಾವ್ ಹೆಗ್ಡೆ, ಚಿನ್ಮಯಿ ಭಟ್, ಪಂಕಚ್ ಹಾಗೂ ಶ್ರೀಧರ್ ಭಟ್‌ ತಮ್ಮ ಪಾಕೆಟ್‌ ಮನಿಯಿಂದ ನಡೆಸಿಕೊಂಡು ಹೋಗುತ್ತಿದ್ದಾರೆ.