ಸಿಹಿ ಕಲ್ಲಂಗಡಿಯಿಂದ ಸ್ಪೈಸಿ ಸೂಪ್..! ಇಲ್ಲಿದೆ ಸುಲಭ ರೆಸಿಪಿ
ಸಿಹಿ ಕಲ್ಲಂಗಡಿಯಿಂದ ತಯಾರಿಸಿ ಸ್ಫೈಸಿ ಸೂಪ್ | ಸಿಹಿ ಜೊತೆ ಖಾರ ಖಾರ | ಮಸಾಲೆ ಘಮ | ಸುಲಭ ರೆಸಿಪಿ ನೀವೂ ಟ್ರೈ ಮಾಡಿ
ಬೇಸಗೆ ಆರಂಭವಾಗಿ ಈಗಾಗಲೇ ಎಲ್ಲರೂ ಕಲ್ಲಂಗಡಿ ಮೊರೆಹೋಗಿದ್ದಾರೆ. ಕಲ್ಲಂಗಡಿ ಸುಡುವ ಬಿಸಿಲಿನ ನಡುವೆ ನಮ್ಮನ್ನು ಹೈಡ್ರೇಟ್ ಮಾಡುತ್ತದೆ, ಹಾಯೆನಿಸುತ್ತದೆ. ಕಲ್ಲಂಗಡಿ 90%ಕ್ಕಿಂತ ಹೆಚ್ಚು ನೀರನ್ನು ಹೊಂದಿರುತ್ತದೆ ಮತ್ತು ಇದು ಜೀವಸತ್ವಗಳು ಮತ್ತು ಖನಿಜಗಳ ಪವರ್ ಬ್ಯಾಂಕ್.
ನಮ್ಮನ್ನು ಹೈಡ್ರೇಟ್ ಮಾಡುವುದರಿಂದ ಹಿಡಿದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವವರೆಗೆ - ಕಲ್ಲಂಗಡಿ ಹಲವಾರು ಪ್ರಯೋಜನಗಳನ್ನು ದೇಹಕ್ಕೆ ನೀಡುತ್ತದೆ. ನಾವು ತಂಪಾದ ಫ್ರೆಶ್ ಕಲ್ಲಂಗಡಿ ಹಣ್ಣನ್ನು ಇಷ್ಟಪಡುತ್ತೇವೆ.
ಬೇಸಿಗೆ ಬಿಸಿ ತಣಿಸುವ ಬಸಳೆ ತಂಬುಳಿ,ಮಾವಿನಕಾಯಿ ನೀರುಗೊಜ್ಜು ಸೇರಿದಂತೆ 5 ರೆಸಿಪಿಗಳು!
ನಮ್ಮಲ್ಲಿ ಹಲವರು ಹಣ್ಣಿನೊಂದಿಗೆ ಜ್ಯೂಸ್ ಮತ್ತು ಪಾಪ್ಸಿಕಲ್ ತಯಾರಿಸಲು ಸಹ ಇಷ್ಟಪಡುತ್ತಾರೆ. ಆದರೆ ನೀವು ಎಂದಾದರೂ ಕಲ್ಲಂಗಡಿಯಿಂದ ಸೂಪ್ ತಯಾರಿಸೋ ಬಗ್ಗೆ ಯೋಚಿಸಿದ್ದೀರಾ...? ಹೌದು, ನಮ್ಮಲ್ಲಿ ಒಂದು ಪಾಕವಿಧಾನವಿದೆ. ಅದು ಕಲ್ಲಂಗಡಿಯೊಂದಿಗೆ ಮಸಾಲೆಯುಕ್ತ ಸ್ಪೈಸಿ ಸೂಪ್ ತಯಾರಿಸಲು ಸಹಾಯ ಮಾಡುತ್ತದೆ. ಇಂಟ್ರೆಸ್ಟಿಂಗ್ ಆಗಿದೆ ಅಲ್ವಾ ?
ಇದು ಹಾಟ್ ಸೂಪ್ ಅಲ್ಲ, ತಂಪಾದ ಸೂಪ್. ಇದನ್ನು ಕಲ್ಲಂಗಡಿ ಮತ್ತು ತಾಜಾ ಪುದೀನೊಂದಿಗೆ ತಯಾರಿಸಲಾಗುತ್ತದೆ. ಚೆನ್ನಾಗಿ ಮಿಶ್ರಣ ಮಾಡಿ ರುಚಿಯಾದ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಮೆಣಸಿನಕಾಯಿಯೊಂದಿಗೆ ಬೇಯಿಸಬೇಕು. ಕೆಲವು ಗಂಟೆಗಳ ಕಾಲ ತಣ್ಣಗಾಗಿಸಲಾಗುತ್ತದೆ. ಐಸ್ ಕ್ಯೂಬ್ಸ್ ಮತ್ತು ಕೆಲವು ಪುದೀನ ಎಲೆಗಳೊಂದಿಗೆ ಸರ್ವ್ ಮಾಡಬಹುದು.
ರೆಸಿಪಿ- 6 ತಿಂಗಳವರೆಗೆ ಹಾಳಾಗುವುದಿಲ್ಲ ಈ ಮಟನ್ ಉಪ್ಪಿನಕಾಯಿ!
1. ಕಲ್ಲಂಗಡಿ ಪೀಸ್ ಮತ್ತು ಪುದೀನವನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಪಕ್ಕಕ್ಕೆ ಇರಿಸಿ
2. ಬಾಣಲೆಯಲ್ಲಿ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ ಅದರಲ್ಲಿ ಸ್ವಲ್ಪ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಮೆಣಸಿನಕಾಯಿ ಸೇರಿಸಿ. ಸ್ವಲ್ಪ ಸಮಯದವರೆಗೆ ಸೌಟ್‌ನಲ್ಲಿ ತಿರುವಿ
3. ನಂತರ ಅದರಲ್ಲಿ ಕಲ್ಲಂಗಡಿ ಪುದೀನ ಮಿಕ್ಸ್ ಸೇರಿಸಿ ಮತ್ತು ಸ್ವಲ್ಪ ಸಮಯದವರೆಗೆ ಸೌಟ್ ಆಡಿಸಿ ಮಿಕ್ಸ್ ಮಾಡಿ. ಅದನ್ನು ತಣ್ಣಗಾಗಲು ಬಿಡಿ.
ನೀವು ಅದನ್ನು ಕನಿಷ್ಠ ಒಂದು ಗಂಟೆಯವರೆಗೆ ಫ್ರಿಡ್ಜ್‌ನಲ್ಲಿ ಇಡಬಹುದು. ಕೆಲವು ಪುದೀನ ಎಲೆಗಳಿಂದ ಅಲಂಕರಿಸಿ ತಣ್ಣಗೆ ಬಡಿಸಿ. ಇಷ್ಟವಿದ್ದರೆ ಕೆಲವು ಐಸ್ ಕ್ಯೂಬ್‌ಗಳನ್ನು ಸೇರಿಸಬಹುದು.