ರೆಸಿಪಿ- 6 ತಿಂಗಳವರೆಗೆ ಹಾಳಾಗುವುದಿಲ್ಲ ಈ ಮಟನ್ ಉಪ್ಪಿನಕಾಯಿ!
ಭಾರತೀಯ ಊಟದಲ್ಲಿ ವಿವಿಧ ತರದ ಅಡುಗೆಗಳು ಇರುತ್ತವೆ. ಮುಖ್ಯ ಪದಾರ್ಥದ ಜೊತೆ ಹಪ್ಪಳ ಸಂಡಿಗೆ ಉಪ್ಪಿನಕಾಯಿಗಳಿಗೂ ನಮ್ಮ ಊಟದಲ್ಲಿ ಆದ್ಯತೆ ನೀಡಲಾಗುತ್ತದೆ. ಉಪ್ಪಿನಕಾಯಿಗಳಲ್ಲಿ ಸಾಕಷ್ಟು ಬಗೆಗಳಿವೆ. ಮಾವಿನಕಾಯಿ, ನಿಂಬೆ ಕಾಯಿಯಿಂದ ಹಿಡಿದು ತರಕಾರಿ ಹಾಗೂ ಮಾಂಸದ ಉಪ್ಪಿನಕಾಯಿಗಳು ಸಹ ಸಿಗುತ್ತವೆ. ಆದರೆ ನೀವು ಮಟನ್ ಉಪ್ಪಿನಕಾಯಿ ಸೇವಿಸಿದ್ದೀರಾ? ಅದನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು ಹಾಗೂ 6 ತಿಂಗಳವರೆಗೆ ಶೇಖರಿಸಬಹುದು.
ಮಟನ್ ಉಪ್ಪಿನಕಾಯಿಗೆ ಬೇಕಾಗುವ ಸಾಮಗ್ರಿಗಳು: 1/ 2 ಕೆಜಿ ಮಟನ್ (ಕತ್ತರಿಸಿ ಉಪ್ಪು ನೀರಿನಲ್ಲಿ ಕುದಿಸಿ) 2 ಟೀಸ್ಪೂನ್ ಸಾಸಿವೆ, 3-4 ಒಣ ಕೆಂಪು ಮೆಣಸಿನಕಾಯಿಗಳು, 2 ಇಂಚಿನ ಶುಂಠಿ, 5-6 ಲವಂಗ, 18-20 ಕರಿಬೇವಿನ ಎಲೆಗಳು, 1 ಚಮಚ ಜೀರಿಗೆ ಪುಡಿ 1, ಚಮಚ ಸಾಸಿವೆ ಪುಡಿ, 1 ಚಮಚ ಕೆಂಪು ಮೆಣಸಿನ ಪುಡಿ, 1/2 ಟೀಸ್ಪೂನ್ ಅರಿಶಿನ ಪುಡಿ ,1/4 ಕಪ್ ವಿನೆಗರ್ 1 ನಿಂಬೆ ರಸ ಉಪ್ಪು ರುಚಿಗೆ ತಕ್ಕಷ್ಟು.
ಮಟನ್ ಉಪ್ಪಿನಕಾಯಿ ತಯಾರಿಸಲು, ಮೊದಲು ಒಂದು ಪ್ಯಾನ್‌ನಲ್ಲಿ ನಾಲ್ಕರಿಂದ ಐದು ಟೀ ಚಮಚ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಸಾಸಿವೆ, ಕರಿಬೇವಿನ ಎಲೆ, ಕೆಂಪು ಮೆಣಸಿನಕಾಯಿ, ಲವಂಗ ಮತ್ತು ಶುಂಠಿಯನ್ನು ಹಾಕಿ.
ನಂತರ ಅರಿಶಿನ ಪುಡಿ ಮತ್ತು ಕೆಂಪು ಮೆಣಸಿನ ಪುಡಿ ಸೇರಿಸಿ ಮತ್ತು ಒಂದರಿಂದ ಎರಡು ನಿಮಿಷ ಚೆನ್ನಾಗಿ ಫ್ರೈ ಮಾಡಿ.
ಸ್ವಲ್ಪ ಸಮಯದ ನಂತರ ಜೀರಿಗೆ, ಸಾಸಿವೆ ಪುಡಿ ಸೇರಿಸಿ. ಕೊನೆಯದಾಗಿ ಅದಕ್ಕೆ ಉಪ್ಪು ಸೇರಿಸಿ ಸ್ವಲ್ಪ ಸಮಯದ ನಂತರ ಗ್ಯಾಸ್ ಆಫ್ ಮಾಡಿ.
ಈಗ ಮತ್ತೊಂದು ಪ್ಯಾನಲ್ಲಿ ಜಾಸ್ತಿ ಎಣ್ಣೆ ಹಾಕಿ ಮಟನ್ ಫ್ರೈ ಮಾಡಿ. ಮಟನ್ ಹುರಿದ ನಂತರ, ಅದಕ್ಕೆ ತಯಾರಾದ ಮಸಾಲೆ ಸೇರಿಸಿ.
ಇದನ್ನು ಚೆನ್ನಾಗಿ ಕಲೆಸಿ ನಂತರ ನಿಂಬೆ ರಸ ಸೇರಿಸಿ. ಮಟನ್ ತಣ್ಣಗಾದಾಗ ಅದಕ್ಕೆ ವಿನೆಗರ್ ಸೇರಿಸಿ.
ಮಟನ್ ಅನ್ನು ಭರಣಿಯಲ್ಲಿ ಹಾಕಿ 1-2 ಟೀ ಚಮಚ ಎಣ್ಣೆಯನ್ನು ಅದರ ಮೇಲೆ ಹಾಕಿದರೆ ಮಟನ್ ಉಪ್ಪಿನಕಾಯಿ ಸಿದ್ಧ.
ಈ ಮಟನ್ ಉಪ್ಪಿನಕಾಯಿಯನ್ನು ಫ್ರಿಜ್‌ನಲ್ಲಿಟ್ಟರೆ, 6 ತಿಂಗಳು ಹಾಳಾಗುವುದಿಲ್ಲ.