ಕವಿಯ ಪಾಕ; ಟ್ರೈ ಮಾಡಿ ವಡಚಲಿಗೆ,ಹುಚ್ಚೆಳ್ಳು ಚಟ್ನಿ ರೆಸಿಪಿ

ಹಾಸನದ ಕವಿ ತಮ್ಮೂರ ಸೊಗಡಿನ ಹಲವು ಅಡುಗೆಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸಿದ್ದಾರೆ. ಯಾವ ಹೊಸ ಸಾಮಾಗ್ರಿಯ ಅವಶ್ಯಕತೆಯೂ ಇಲ್ಲದೆ ಸರಳ ಜನಪದ ತಿಂಡಿತಿನಿಸುಗಳು ಇವು

simple uchellu chutney huggi anna recipe vcs

-ಜ ನಾ ತೇಜಶ್ರೀ

1. ವಡಚಲಿಗೆ

ರಾತ್ರಿ 1 ಪಾವು ಅಕ್ಕಿಗೆ 3 ಚಮಚ ಉದ್ದಿನಬೇಳೆ ಸೇರಿಸಿ ನೆನೆಸಿ,

ಮರುದಿನ ಬೆಳಗ್ಗೆ, ನೆನೆಸಿದ ಅಕ್ಕಿ, ಉದ್ದಿನಬೇಳೆ ಜೊತೆಗೆ 1 ಚಮಚ ಜೀರಿಗೆ, 1 ಚಮಚ ಕಾಳುಮೆಣಸು ಸೇರಿಸಿ ನಯಸ್ಸಾಗಿ ರುಬ್ಬಿ ಪಾತ್ರೆಗೆ ಹಾಕಿಕೊಂಡು, ಇದಕ್ಕೆ ರುಚಿಕೆ ತಕ್ಕಷ್ಟುಉಪ್ಪು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಹಿಟ್ಟು ಸಿದ್ಧಮಾಡಿಕೊಳ್ಳುವುದು.

ಪ್ರೆಗ್ನೆನ್ಸಿಯಲ್ಲಿ ಕರೀನಾಗೆ ಕಹಿ ತಿನ್ನೋ ಬಯಕೆ..! ಗರ್ಭಿಣಿಯರು ಕಹಿ ತಿನ್ನಬಹುದಾ..? 

ಕಬ್ಬಿಣ ಅಥವಾ ಇಂಡಾಲಿಯಂ ಹೆಂಚಿನ ಮೇಲೆ ಇದನ್ನು ದೋಸೆಯಂತೆ ಹುಯ್ಯಬೇಕು. ಎಣ್ಣೆಯ ಬಳಕೆ ನಿಷಿದ್ಧ. ಹಾಗಾಗಿ ಈವತ್ತಿನ ’ನಾನ್‌ಸ್ಟಿಕ್‌’ ತವಾಗಳ ಬಗ್ಗೆ ಇದಕ್ಕೆ ಆಸಕ್ತಿ ಇಲ್ಲ. ಯಾವುದೇ ಚಟ್ನಿ, ಪಲ್ಯದ ಜೊತೆ ಇದು ಒಳ್ಳೆ ಸಹವಾಸಿ.

ಮೈ ಕೊಬ್ಬು ಸೀಯಬೇಕು ಜೊತೆಗೆ ದೇಹಕ್ಕೆ ಪೋಷಕಾಂಶವೂ ಬೇಕು ಅಂದ್ರೆ ವಡಚಲಿಗೆ ತಿನ್ನಬೇಕು! ಆಲನಹಳ್ಳಿ ಕೃಷ್ಣ ಅವರ ’ಕಾಡು’ ಕಾದಂಬರಿಯಲ್ಲಿ ಒಮ್ಮೆ ಮಾತ್ರ ಬಂದು ಹೋಗಿರುವ ಈ ವಡಚಲಿಗೆ ಅಂಚಿಗೆ ಸರಿದ ಖಾದ್ಯ ಮತ್ತು ರುಚಿಗಳಲ್ಲಿ ಒಂದು.

2. ಹುಗ್ಗಿ ಅನ್ನ

ಒಂದು ಲೋಟ ಅಕ್ಕಿಯನ್ನು ತೊಳೆದು, ಎರಡು ಲೋಟ ನೀರಿನಲ್ಲಿ ನೆನೆಸಿಟ್ಟುಕೊಳ್ಳುವುದು.

ತೆಂಗಿನಕಾಯಿ ತುರಿ- 10 ಚಮಚ, ಹಸಿರು ಮೆಣಸಿನಕಾಯಿ-5, ಜೀರಿಗೆ- 2 ಚಮಚ, ಬೆಳ್ಳುಳ್ಳಿ- 1 ಗೆಡ್ಡೆ, ಕೊತ್ತಂಬರಿ ಸೊಪ್ಪು ಸ್ವಲ್ಪ.

ಹಾಲಿನ ಜೊತೆ ಬಾಳೆಹಣ್ಣು ಸೇವಿಸುತ್ತಿದ್ದೀರಾ? ಹಾಗಿದ್ರೆ ಮಿಸ್ ಮಾಡದೇ ಇದನ್ನ ಓದಿ

ಇಷ್ಟನ್ನೂ ನುಣ್ಣಗೆ ರುಬ್ಬಿಕೊಂಡು, ಕುಕ್ಕರಿನಲ್ಲಿ ಎಣ್ಣೆ, ಸಾಸಿವೆ, ಕರಿಬೇವು ಒಗ್ಗರಣೆ ಮಾಡಿದ ನಂತರ, ರುಬ್ಬಿದ ಮಸಾಲೆ ಹಾಕುವುದು. ರುಚಿಗೆ ಬೇಕಾದಷ್ಟುಉಪ್ಪು, ಚಿಟಿಕೆ ಅರಿಶಿಣ ಸೇರಿಸಿ ಐದು ನಿಮಿಷ ಕುದಿಸಿ. ಇದಕ್ಕೆ 2-3 ಚಮಚ ಹೆಸರುಬೇಳೆ ಹಾಕಿ, ನೆನೆಸಿಟ್ಟುಕೊಂಡ ಅಕ್ಕಿ ಮತ್ತು ನೀರನ್ನು ಸೇರಿಸಿ ಎರಡು ವಿಷಲ್‌ ಬರಿಸಿದರೆ ಹುಗ್ಗಿ ಅನ್ನ ಮುಗೀತು. ಕುಕ್ಕರಿಗೆ ಹಾಕದೆ ಹಾಗೆಯೇ ನೀರು ಇಂಗಿಸಿದರೂ ನಡೆದೀತು.

ಷಷ್ಠಿಯ ದಿನ ಹಾಸನದ ಹಳ್ಳಿಹಳ್ಳಿಗಳಲ್ಲಿ ಈ ಅನ್ನ ಕಡ್ಡಾಯ, ಜೊತೆಗೆ ಮೇಲೆ ಒಂದೆರಡು ಚಮಚ ಹುಚ್ಚೆಳ್ಳು ಎಣ್ಣೆ ಅಥವಾ ಬೆಣ್ಣೆಯೂ, ಬೇಕೇ ಬೇಕು.

3. ಹುಚ್ಚೆಳ್ಳು ಚಟ್ನಿ

5-6 ಒಣಮೆಣಸಿನಕಾಯಿ ಮತ್ತು 10 ಚಮಚ ಹುಚ್ಚೆಳ್ಳನ್ನು ಎಣ್ಣೆ ಹಾಕದೆ ಹುರಿದಿಟ್ಟುಕೊಂಡು,

ಇದರ ಜೊತೆಗೆ, 10-12 ಚಮಚ ತೆಂಗಿನಕಾಯಿ ತುರಿ, 7-8 ಎಸಳು ಬೆಳ್ಳುಳ್ಳಿ, ಒಂದು ಚಮಚ ಜೀರಿಗೆ, ಎಂಟು ಎಲೆ ಕರಿಬೇವು, ಹುಣಸೆಹಣ್ಣು ಒಂದು ಬಿತ್ತ, ರುಚಿಗೆ ತಕ್ಕಷ್ಟುಉಪ್ಪು ಸೇರಿಸಿ ರುಬ್ಬಿದರೆ ಚಟ್ನಿ ರೆಡಿ.

ಹಾಲಿನ ಜೊತೆ ಬಾಳೆಹಣ್ಣು ಸೇವಿಸುತ್ತಿದ್ದೀರಾ? ಹಾಗಿದ್ರೆ ಮಿಸ್ ಮಾಡದೇ ಇದನ್ನ ಓದಿ 

(ತೆಂಗಿನಕಾಯಿ ಸೇರಿಸದೆ, ಉಳಿದ ಸಾಮಗ್ರಿಗಳನ್ನಷ್ಟೇ ಪುಡಿ ಮಾಡಿಕೊಂಡರೆ ಅದು ಹುಚ್ಚೆಳ್ಳು ಚಟ್ನಿಪುಡಿ)

ರಾಗಿರೊಟ್ಟಿಹುಚ್ಚೆಳ್‌ ಚಟ್ನಿ ತಂದಿವ್‌ನಿ ನನ್‌ಮಗನೆ...ಹಾಡು ಕೇಳಿದ್ದವರಿಗೆ ಈ ಚಟ್ನಿ ಯಾವುದರ ಜೊತೆ ಒಳ್ಳೆ ಸಂಗಾತಿ ಆದೀತೆಂದು ಗೊತ್ತೇ ಇರುತ್ತೆ!

4. ಹುರುಳಿಕಾಳು ಚಟ್ನಿ

5-6 ಚಮಚ ಹುರುಳಿಕಾಳು, ರುಚಿಗೆ ತಕ್ಕಷ್ಟುಒಣಮೆಣಸಿನಕಾಯಿಯನ್ನು ಎಣ್ಣೆ ಹಾಕದೆ ಹುರಿದುಕೊಂಡು,

ಜೊತೆಗೆ, ಕಾಲು ಬಟ್ಟಲು ತೆಂಗಿನ ತುರಿ, 1 ಗೆಡ್ಡೆ ಬೆಳ್ಳುಳ್ಳಿ, ಸ್ವಲ್ಪ ಜೀರಿಗೆ, ಕೊತ್ತಂಬರಿ ಸೊಪ್ಪು ಸ್ವಲ್ಪ, ರುಚಿಗೆ ತಕ್ಕಷ್ಟುಉಪ್ಪು ಮತ್ತು ಒಂದು ಬಿತ್ತ ಹುಣಸೆಹಣ್ಣು ಸೇರಿಸಿ ರುಬ್ಬಿ, ಸಾಸಿವೆ, ಒಣಮೆಣಸಿನಕಾಯಿ, ಕರಿಬೇವಿನ ಒಗ್ಗರಣೆ ಕೊಟ್ಟರೆ ಆಯ್ತು, ಅಕ್ಕಿರೊಟ್ಟಿಜೊತೆ ’ಉಳ್ಳಿಕಾಳು’ ಚಟ್ನಿ ಬೊಂಬಾಟ್‌.

ಶೇ. 99 ಜನ ಮೊಟ್ಟೆ ಒಡೆಯುವಾಗ ಈ ದೊಡ್ಡ ತಪ್ಪನ್ನ ಮಾಡ್ತಾರೆ 

5. ಮಜ್ಜಿಗೆ ಸಾರು

ಬೆಳ್ಳುಳ್ಳಿ 1 ಗೆಡ್ಡೆ, ಈರುಳ್ಳಿ-1 ನ್ನು ಒಂದು ಚಮಚ ಎಣ್ಣೆ ಹಾಕಿ ಹುರಿದುಕೊಂಡು, ಇದರ ಜೊತೆಗೆ ಕಾಯಿತುರಿ ಕಾಲು ಬಟ್ಟಲು, ತರಕಾರಿ ಸಾರಿನ ಪುಡಿ ಅಗತ್ಯವಿದ್ದಷ್ಟು, ಕೊತ್ತಂಬರಿ ಸೊಪ್ಪು ಸ್ವಲ್ಪ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.

ಒಗ್ಗರಣೆಗೆ, ಎಣ್ಣೆ, ಸಾಸಿವೆ, ಕರಿಬೇವು ಹಾಕಿದ ನಂತರ ರುಬ್ಬಿದ ಮಸಾಲೆ ಹಾಕಿ, ರುಚಿಗೆ ತಕ್ಕಷ್ಟುಉಪ್ಪು ಮತ್ತು ದೊಡ್ಡ ಲೋಟ ನೀರು ಸೇರಿಸಿ 7-8 ನಿಮಿಷ ಕುದಿಸಿ. ಉರಿಯಿಂದ ಇಳಿಸುವ 1 ನಿಮಿಷ ಮೊದಲು, ಅರ್ಧ ಲೋಟ ಕಡೆದ ಹುಳಿ, ತೆಳುಮಜ್ಜಿಗೆ ಸೇರಿಸಿ ಕುದಿಸಿ, ಇಳಿಸಿ.

ಮೊಸರು ಕಡೆದು ಬೆಣ್ಣೆ ತೆಗೆದ ದಿನ ಉಳಿವ ಮಜ್ಜಿಗೆಯಲ್ಲಿ ಮೂಡಿ ಬಂತು ಈ ಸಾರು...ಬಿಸಿ ಅನ್ನ, ಮೇಲೊಂದಿಷ್ಟುಬೆಣ್ಣೆಯ ಜೊತೆಗೆ ಕರುಳಿನ ಆಸೆ ನೀಗಿಸಲು!

Latest Videos
Follow Us:
Download App:
  • android
  • ios