Asianet Suvarna News Asianet Suvarna News

HealthTips: ಈ ರೋಗಿಗಳು ಪಿಯರ್ಸ್ ನಿಂದ ದೂರವಿರಿ

ಹಣ್ಣು ಒಳ್ಳೆಯದು ಎಂಬ ಕಾರಣಕ್ಕೆ ಎಲ್ಲರೂ ಹಣ್ಣು ತಿನ್ನುತ್ತಾರೆ. ತಜ್ಞರ ಪ್ರಕಾರ ಈ ಪಾಲಿಸಿ ತಪ್ಪು. ಎಲ್ಲರಿಗೂ ಎಲ್ಲ ಹಣ್ಣು ಒಳ್ಳೆಯದಲ್ಲ. ಹಣ್ಣನ್ನು ಮಿತಿ ಮೀರಿ ಸೇವನೆ ಮಾಡುವ ಮೊದಲು ನನಗೆ ಇದು ಯೋಗ್ಯವೇ ಎಂಬುದನ್ನು ತಿಳಿಯಬೇಕು. 
 

Side Effect Of Eating Pear
Author
Bangalore, First Published Jul 4, 2022, 5:24 PM IST

ಪಿಯರ್ಸ್ (Pear) ಹಣ್ಣು (Fruit) ಯಾರಿಗೆ ಇಷ್ಟವಿಲ್ಲ ಹೇಳಿ. ತಿನ್ನಲು ರುಚಿಯಾದ ಇದನ್ನು ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಸೇವನೆ ಮಾಡಲು ಇಷ್ಟಪಡ್ತಾರೆ. ಹಣ್ಣು ಆರೋಗ್ಯ (Health) ಕ್ಕೆ ತುಂಬಾ ಪ್ರಯೋಜನಕಾರಿ. ವೈದ್ಯ (doctor) ರು ಸಹ ಹಣ್ಣನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಹಣ್ಣಿನಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಪಿಯರ್ಸ್ ನಲ್ಲೂ ಹಾನಿಕಾರಕ ಗುಣವಿದೆ. ತಜ್ಞರ ಪ್ರಕಾರ, ಕೆಲ ಸಮಸ್ಯೆಯಿಂದ ಬಳಲುತ್ತಿರುವವರು ಪಿಯರ್ಸ್ ಹಣ್ಣನ್ನು ಸೇವಿಸಬಾರದು. ಪಿಯರ್ಸ್ ನಲ್ಲಿ ವಿಟಮಿನ್ (Vitamin) ಗಳು, ಖನಿಜಾಂಶಗಳು, ಫೈಬರ್, ಉರಿಯೂತ ನಿವಾರಕ ಮತ್ತು ಕ್ಯಾನ್ಸರ್ (Cancer) ವಿರೋಧಿ ಗುಣಗಳಿವೆ. ಇದ್ರಿಂದ ಸಾಕಷ್ಟು ಪ್ರಯೋಜನವಿದೆ ನಿಜ. ಹಾಗಂತ ಎಲ್ಲರೂ ಇದ್ರ ಸೇವನೆ ಮಾಡಿದ್ರೆ ಆರೋಗ್ಯ ಸುಧಾರಿಸುವ ಬದಲು ಹದಗೆಡುತ್ತದೆ. ಇಂದು ನಾವು ಯಾರು ಪಿಯರ್ಸ್ ನಿಂದ ದೂರವಿರ್ಬೇಕು ಎಂಬುದನ್ನು ನಿಮಗೆ ಹೇಳ್ತೇವೆ. 

ಇವರು ಅತಿಯಾದ ಪಿಯರ್ಸ್ ಸೇವನೆ ಮಾಡ್ಬೇಡಿ :

ಚಳಿಗಾಲ (Winter) ದಲ್ಲಿ ಅನಾರೋಗ್ಯ : ಋತು ಬದಲಾದಂತೆ ವೈರಸ್ ಸೋಂಕಿನ ಸಮಸ್ಯೆ ಕಾಡಲು ಶುರುವಾಗುತ್ತದೆ. ಮಳೆಗಾಲದ ಆರಂಭ, ಚಳಿಗಾಲದ ಆರಂಭದಲ್ಲಿ ಅನೇಕರಿಗೆ ಸೋಂಕು ಕಾಣಿಸಿಕೊಳ್ಳುತ್ತದೆ. ಋತುವಿನ ಖಾಯಿಲೆಯಾದ ನೆಗಡಿ, ಕೆಮ್ಮು (Cough), ಜ್ವರ ಸಮಸ್ಯೆಗಳು ಬರಲಾರಂಭಿಸುತ್ತವೆ. ನೀವು ಸಹ ಈ ಕಾಯಿಲೆಗಳಿಂದ ಬಳಲುತ್ತಿದ್ದರೆ ಆ ಸಂದರ್ಭದಲ್ಲಿ ಪಿಯರ್ಸ್  ಸೇವಿಸಬೇಡಿ. ಪಿಯರ್ಸ್ ಗುಣದಲ್ಲಿ ತಣ್ಣನೆ ಸ್ವಭಾವ ಹೊಂದಿದೆ. ಇದನ್ನು ಸೇವಿಸುವುದರಿಂದ ನಿಮ್ಮ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು . ಆದ್ದರಿಂದ, ಶೀತ (Cold), ಕೆಮ್ಮಿನ ಸಮಯದಲ್ಲಿ ಪಿಯರ್ಸ್ ಹಣ್ಣಿನಿಂದ ದೂರವಿರುವುದು ಒಳ್ಳೆಯದು.   

ಹಣ್ಣು - ತರಕಾರಿ ಸಿಪ್ಪೆ ಬಿಸಾಕ್ತೀರ? ಹಣ್ಣಿಗಿಂತ ಹೆಚ್ಚ ಒಳ್ಳೇದು ಅದರ ಸಿಪ್ಪೆ

ಹೊಟ್ಟೆ (Stomach ) ಸಮಸ್ಯೆ : ಅನೇಕರು ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಮತ್ತೆ ಕೆಲವರಿಗೆ ಜೀರ್ಣಾಂಗಕ್ಕೆ ಸಂಬಂಧಿಸಿದ ಕೆಲ ಸಮಸ್ಯೆ ಅನುಭವಿಸುತ್ತಿರುತ್ತಾರೆ. ಮೊದಲೇ ಹೇಳಿದಂತೆ ಪಿಯರ್ಸ್ ತಂಪನೆ ಗುಣವನ್ನು ಹೊಂದಿದೆ. ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಕಳಪೆ ಜೀರ್ಣಕ್ರಿಯೆಯಿಂದಾಗಿ ಪಿಯರ್ಸ್ ಹಣ್ಣನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಹಣ್ಣು ಜೀರ್ಣಿವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.  ಇದರಿಂದಾಗಿ ಹೊಟ್ಟೆ ನೋವು, ಗ್ಯಾಸ್, ಹೊಟ್ಟೆ ಉಬ್ಬುವುದು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

ತೂಕ ಇಳಿಕೆ : ಪಿಯರ್ಸ್ ನಲ್ಲಿ ಕ್ಯಾಲೋರಿಗಳ ಪ್ರಮಾಣ ತುಂಬಾ ಕಡಿಮೆ. ಇದು ತೂಕ ನಷ್ಟಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ಕ್ಯಾಲೋರಿ ಕಡಿಮೆ ಇದೆ ಎಂಬ ಕಾರಣಕ್ಕೆ ಪಿಯರ್ಸ್ ಸೇವನೆ ಹೆಚ್ಚು ಮಾಡಿದ್ರೆ ದೇಹಕ್ಕೆ ಹೆಚ್ಚಿನ ಕ್ಯಾಲೋರಿ ಸೇರುತ್ತದೆ. ಇದ್ರಿಂದ ತೂಕ ಇಳಿಯುವ ಬದಲು ಏರಲು ಶುರುವಾಗುತ್ತದೆ. ತೂಕ ಇಳಿಸಿಕೊಳ್ಳಬೇಕು ಎನ್ನುವವರು ಇತಮಿತವಾಗಿ ಪಿಯರ್ಸ್ ಹಣ್ಣನ್ನು ತಿನ್ನಬೇಕು. ಅತಿ ಕಡಿಮೆ ಪ್ರಮಾಣದಲ್ಲಿ ಇದ್ರ ಸೇವನೆ ಮಾಡಿದ್ರೆ ಒಳ್ಳೆಯದು. 

ಡಯಾಬಿಟಿಸ್ ಇದ್ರೆ ಚಿಕನ್ ಸೈಡಿಗಿಡಿ, ಮಟನ್‌ ಟೇಸ್ಟ್ ಮಾಡಿ

ತೀವ್ರ ರಕ್ತದೊತ್ತಡ : ರಕ್ತದೊತ್ತಡವನ್ನು ನಿಯಂತ್ರಿಸಲು ಪಿಯರ್ಸ್ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಅಧಿಕವಾಗಿ ಸೇವಿಸುವುದರಿಂದ ರಕ್ತದೊತ್ತಡ ರೋಗಿಗಳಿಗೆ ಹಾನಿಕಾರಕವಾಗಬಹುದು. ನೀವು ಅದನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಹೆಚ್ಚು ಪಿಯರ್ಸ್ ಹಣ್ಣು ಸೇವಿಸಿದರೆ ಹೃದಯ ಬಡಿತ ಹೆಚ್ಚಾಗಬಹುದು. ತಲೆತಿರುಗುವಿಕೆ ಕಾಣಿಸಿಕೊಳ್ಳಬಹುದು. ದೌರ್ಬಲ್ಯ, ಮೂರ್ಛೆ ಹೋಗುವುದು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.  

ತಜ್ಞರ ಸಲಹೆ : ಪಿಯರ್ಸ್ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಹಾಗಂತ ಯಾವುದನ್ನೂ ಅತಿಯಾಗಿ ಸೇವನೆ ಮಾಡಬಾರದು. ಎಲ್ಲವನ್ನೂ ಸೀಮಿತ ಪ್ರಮಾಣದಲ್ಲಿ ಸೇವಿಸಿ. ಪಿಯರ್ಸ್ ಹಣ್ಣಿನ ಪ್ರಯೋಜನ ನಿಮಗೆ ಸಿಗಬೇಕೆಂದ್ರೆ ಅದನ್ನು ಮಿತ ಪ್ರಮಾಣದಲ್ಲಿ ತಿನ್ನಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು. 
 

Follow Us:
Download App:
  • android
  • ios