ಸಮೋಸಾ ಫಿಲ್ಲಿಂಗ್ ಏನು ಅಂತ ತಲೆಕೆಡಿಸ್ಕೊಳ್‌ಬೇಕಾಗಿಲ್ಲ, ಅಲ್ಲೇ ಅಚ್ಚಾಗಿದೆ ನೋಡಿ !
ಸಮೋಸಾ, ಪಫ್ಸ್ ತಿನ್ನುವ ಅಸಲೀ ಪ್ರಾಬ್ಲೆಮ್ ಅಂದರೆ ಅವನ್ನು ಓಪನ್ ಮಾಡದೆ ಅದು ವೆಜ್ ಅಥವಾ ನಾನ್‌ವೆಜ್ಜಾ ಅನ್ನೋದು ಗೊತ್ತಾಗುವುದಿಲ್ಲ. ಹೊರಪದರ ಒಂದೇ ರೀತಿ ಇರೋ ಕಾರಣ ಅದನ್ನು ಪ್ರತ್ಯೇಕಿಸಿ ತಿಳಿಯುವುದು ಕಷ್ಟ. ಆದ್ರೆ ಬೆಂಗಳೂರಲ್ಲೊಂದು ರೆಸ್ಟೋರೆಂಟ್‌ನಿಂದ ಫುಡ್ ಆರ್ಡರ್ ಮಾಡಿದ್ರೆ ಅಂಥಾ ಸಮಸ್ಯೆ ಇರೋದಿಲ್ಲ. ಅದ್ಯಾಕೆ ? ಇಲ್ಲಿದೆ ಹೆಚ್ಚಿನ ಮಾಹಿತಿ.
ಪ್ರತಿಯೊಂದು ಆಹಾರಕ್ಕೂ ವಿಭಿನ್ನ ರುಚಿಯಿರುತ್ತದೆ. ಒಂದೇ ಆಹಾರವಾದರೂ ಅದು ಬೇರೆ ಬೇರೆ ಕಡೆ ವ್ಯತ್ಯಸ್ಥ ರುಚಿಯನ್ನು ಹೊಂದಿರುತ್ತದೆ. ಹೀಗಾಗಿ ನಿರ್ಧಿಷ್ಟ ಮಳಿಗೆಯ ಆಹಾರವನ್ನು ಫೇಮಸ್ ಮಾಡಲೆಂದೇ ಮಳಿಗೆದಾರು ಆಹಾರದ ಪ್ಯಾಕೆಟ್, ಲಕೋಟೆಯಲ್ಲಿ ಅಂಗಡಿಯ ಹೆಸರನ್ನು ನಮೂದಿಸುತ್ತಾರೆ. ಇದೊಂಥರಾ ಮಾರ್ಕೆಟಿಂಗ್ ಟೆಕ್ನಿಕ್ ಆಗಿದೆ. ಆದ್ರೆ ಬೆಂಗಳೂರಿನಲ್ಲೊಂದು ಮಳಿಗೆಯ ಮಾಲೀಕರು ತಮ್ಮ ಮಳಿಗೆಯ ಆಹಾರವನ್ನು ಫೇಮಸ್ ಮಾಡಲು ಹೊಸ ಟ್ರಿಕ್ ಯೂಸ್ ಮಾಡಿದ್ದಾರೆ. ತಮ್ಮ ಮಳಿಗೆಯಲ್ಲಿ ಸಿಗೋ ಟೇಸ್ಟೀ ಸಮೋಸಾದ ಜೊತೆಗೆ ಅದರಲ್ಲಿರೋ ಫಿಲ್ಲಿಂಗ್ ಏನು ಎಂಬುದನ್ನು ಸಹ ಸಮೋಸಾದಲ್ಲೇ ಅಚ್ಚು ಹಾಕಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ, ಫಾಸ್ಟ್ ಫುಡ್ ಔಟ್‌ಲೆಟ್‌ಗಳು ತಮ್ಮ ಖಾದ್ಯಗಳನ್ನು ಲೋಗೋ ಸ್ಟ್ಯಾಂಪ್‌ಗಳೊಂದಿಗೆ ಬ್ರ್ಯಾಂಡ್ ಮಾಡುವುದನ್ನು ನೋಡುವುದು ಬಹಳ ಸಾಮಾನ್ಯವಾಗಿದೆ. ಸುಪ್ರಸಿದ್ಧ ಬರ್ಗರ್ ಮತ್ತು ಪಿಜ್ಜಾ ಅಂಗಡಿಗಳು ಅಂತಹ ಗುರುತನ್ನು ಹಾಕಿಕೊಳ್ಳುತ್ತವೆ. ಆದರೆ ಭಾರತದಲ್ಲಿ ಬೀದಿ ಆಹಾರ ಪದಾರ್ಥಗಳು (Street food) ಬ್ರ್ಯಾಂಡಿಂಗ್‌ನ ಅದೇ ಕ್ರಮವನ್ನು ಅನುಸರಿಸುತ್ತಿವೆ ಎಂದರೆ ನಂಬುವುದು ಕಷ್ಟ. ಆದ್ರೆ ಇದು ನಿಜ. ಬೆಂಗಳೂರಿನಲ್ಲಿ ಆರ್ಡರ್ ಮಾಡಿರುವ ಆಹಾರ ಇದು ಎಂದು ಗ್ರಾಹಕರು (Customeres) ಟ್ವೀಟ್‌ನಲ್ಲಿ ತಿಳಿಸಿದ್ದಾರೆ. 'ಬೆಂಗಳೂರಿನಲ್ಲಿ ನಿಜವಾದ ಆಹಾರ ಟೆಕ್ ನಾವೀನ್ಯತೆ' ಎಂದು ಅವರು ಶೀರ್ಷಿಕೆ ನೀಡಿದ್ದಾರೆ.
ದೆಹಲಿಯ ಆಹಾರ ಮಳಿಗೆಯಲ್ಲಿ ಸಿಗ್ತಿದೆ ಸ್ಟ್ರಾಬೆರಿ ಮತ್ತು ಬ್ಲೂಬೆರಿ ಸಮೋಸಾ
ಸಮೋಸಾದ ಹೊರಪದರದಲ್ಲಿ ಫಿಲ್ಲಿಂಗ್ ಬಗ್ಗೆ ಮಾಹಿತಿ
ಸಮೋಸಾ, ಭಾರತದ ಸಾಂಪ್ರದಾಯಿಕ (Traditional) ತಿಂಡಿಯಾಗಿದೆ. ಸಾಮಾನ್ಯವಾಗಿ ಸಮೋಸಾ ಬಟಾಣಿ, ಆಲೂಗಡ್ಡೆ ಮೊದಲಾದ ಮಸಾಲ ಮಿಶ್ರಣದೊಂದಿಗೆ ಬರುತ್ತದೆ. ಇದು ಸಾಮಾನ್ಯವಾಗಿ ಎಲ್ರೂ ಇಷ್ಟಪಡೋ ಸ್ನ್ಯಾಕ್ಸ್. ಸಂಜೆ ಟೀ ಜೊತೆ ಸವಿಯಲು ಚೆನ್ನಾಗಿರುತ್ತದೆ. ಸಾಮಾನ್ಯವಾಗಿ ಸಮೋಸಾ ಅಂದ್ರೆ ಬಟಾಣಿ, ಆಲೂಗಡ್ಡೆ (Potato) ಮೊದಲಾದ ಮಸಾಲ ಮಿಶ್ರಣದೊಂದಿಗೆ ಬರುತ್ತದೆ. ಆದ್ರೆ ಇದಲ್ಲದೆಯೂ ಇತ್ತೀಚಿಗೆ ವೆರೈಟಿ ಫಿಲ್ಲಿಂಗ್ ಇರೋ ಸಮೋಸಾಗಳು ಲಭ್ಯವಿದೆ. ಹೀಗಾಗಿ ರಾಶಿ ಸಮೋಸಾಗಳನ್ನು ಒಟ್ಟಿಗೆ ಮಾಡಿದರೆ, ಅವೆಲ್ಲವೂ ಒಂದೇ ರೀತಿ ಕಾಣುತ್ತವೆ. ಸಮೋಸಾದ ಹೊರಪದರವನ್ನು (Samosa Crust) ನೋಡುವ ಮೂಲಕ ಎರಡು ಪ್ರಕಾರಗಳನ್ನು ಪ್ರತ್ಯೇಕಿಸುವುದು ಸುಲಭವಲ್ಲ.
ಸಮೋಸಾಗಳನ್ನು ನೋಡಿ ಇದರಲ್ಲಿ ಯಾವುದು ಸಸ್ಯಾಹಾರಿ ಮತ್ತು ಯಾವುದು ಮಾಂಸಾಹಾರಿ ಎಂದು ತಿಳಿಯಲು ಸಾಧ್ಯವಿಲ್ಲ. ಮಾತ್ರವಲ್ಲ ಫಿಲ್ಲಿಂಗ್ ಕಾರ್ನ್, ಆಲೂಗಟ್ಟೆ, ನೂಡಲ್ಸ್ ಯಾವುದಿದೆ ಎಂದು ತಿಳಿಯುವುದಿಲ್ಲ. ಹೂರಣ ಏನೆಂದು ತಿಳಿಯಲು ಸಮೋಸವನ್ನು ಒಡೆದು ತೆರೆಯಬೇಕು.ಕೆಲವು ನಗರಗಳು ಮತ್ತು ಪಟ್ಟಣಗಳಲ್ಲಿ, ತಿಂಡಿ ತಯಾರಕರು ಒಂದು ಬ್ಯಾಚ್ ಅನ್ನು ಕೆಂಪು ಚುಕ್ಕೆಯಿಂದ ಗುರುತಿಸುವ ಮೂಲಕ ವಿಧಗಳನ್ನು ಪ್ರತ್ಯೇಕಿಸುತ್ತಾರೆ.
Food Challenge: 3 ಕೆಜಿಯ ಸಮೋಸಾವನ್ನು 5 ನಿಮಿಷದಲ್ಲಿ ಸ್ವಾಹಾ ಮಾಡಿದ ಬ್ಲಾಗರ್
ಟ್ವಿಟರ್‌ನಲ್ಲಿ ವಿಭಿನ್ನ ಸಮೋಸಾ ಫೋಟೋ ಹಂಚಿಕೊಂಡ ಗ್ರಾಹಕರು
ಆದರೆ ಹೆಚ್ಚಿನ ರೂಪಾಂತರಗಳ ಪರಿಚಯದೊಂದಿಗೆ, ತಿಂಡಿ ತಯಾರಕರು ಈಗ ವಿವಿಧ ರೀತಿಯ ಸಮೋಸಾಗಳನ್ನು ಪ್ರತ್ಯೇಕಿಸುವ ಹೊಸ ವಿಧಾನಗಳೊಂದಿಗೆ ಬಂದಿದ್ದಾರೆ. ಟ್ವಿಟರ್ ಸರಳವಾದ ಆಹಾರದ ಆವಿಷ್ಕಾರವನ್ನು ಹೈಲೈಟ್ ಮಾಡಿದ್ದು, ಮಾರಾಟಗಾರ ಮತ್ತು ಗ್ರಾಹಕರು ಎರಡು ರೀತಿಯ ಒಂದೇ ರೀತಿಯ ತಿಂಡಿ ಪದಾರ್ಥಗಳ ನಡುವೆ ವ್ಯತ್ಯಾಸವನ್ನು (Difference) ಗುರುತಿಸಲು ಸುಲಭವಾಗಿಸುತ್ತದೆ. ಶೋಭಿತ್ ಬಕ್ಲಿವಾಲ್ ಅವರು ಸಮೋಸಾಗಳ ಫೋಟೋವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ 'ಆಲೂ' ಮತ್ತು 'ನೂಡಲ್ಸ್' ಪದಗಳನ್ನು ಕೆತ್ತಲಾಗಿದೆ.
ಕಾರ್ನ್, ಚೀಸ್ ಚಿಕನ್, ಆಲೂಗೆಡ್ಡೆ ಮತ್ತು ನೂಡಲ್ಸ್‌ನಂತಹ ಫಿಲ್ಲಿಂಗ್‌ನೊಂದಿಗೆ ಸಮೋಸಾದ ವೈ ಶ್ರೇಣಿಯನ್ನು ನೀಡುವ 'ಸಮೋಸಾ ಪಾರ್ಟಿ' ಎಂಬ ರೆಸ್ಟೋರೆಂಟ್‌ನಿಂದ ಗ್ರಾಹಕರು ಟ್ರೀಟ್‌ಗೆ ಆರ್ಡರ್ ಮಾಡಿದ್ದರು. ಇದರಲ್ಲಿ ಹೀಗೆ ವಿಭಿನ್ನವಾಗಿ ಹೆಸರು ನಮೂದಿಸಿರುವುದನ್ನು ನೋಡಬಹುದು. ಒಟ್ನಲ್ಲಿ ಇನ್ಮುಂದೆ ಒಂದಷ್ಟು ಸಮೋಸಾ ಆರ್ಡರ್ ಮಾಡಿ ಫಿಲ್ಲಿಂಗ್ ಏನಿದೆಯಪ್ಪಾ ತಲೆಕೆಡಿಸ್ಕೊಳ್‌ಬೇಕಾಗಿಲ್ಲ, ಹೀಗೆ ಆಹಾರ (Food)ವನ್ನು ಪರಿಶೀಲಿಸಿ ಸುಲಭವಾಗಿ ತಿಳಿದುಕೊಳ್ಳಬಹುದು.