ಚಾಕೋಲೇಟ್‌ ಪ್ರಿಯರಾ ? ಹರಡ್ತಿದೆ ಸಾಲ್ಮೊನೆಲ್ಲಾ ಸೋಂಕು, ಎಚ್ಚರವಿರಲಿ

ಚಾಕೋಲೇಟ್ (Chocolate) ಅಂದ್ರೆ ಸಾಕು ಸಾಮಾನ್ಯವಾಗಿ ಎಲ್ರೂ ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ನೀವು ಕೂಡಾ ಅದೇ ಪೈಕಿನಾ ? ಹಾಗಿದ್ರೆ ಈ ವಿಚಾರ ತಿಳ್ಕೊಳ್ಳಿ ವಿಶ್ವದ ಅತ್ಯಂತ ಫೇಮಸ್ ಚಾಕೊಲೇಟ್ ಬ್ರ್ಯಾಂಡ್‌ನಲ್ಲಿ ಬ್ಯಾಕ್ಟಿರೀಯಾ (Bacteria) ಪತ್ತೆಯಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Salmonella Bacteria Found In Belgian Chocolate Plant, Worlds Biggest Vin

ಚಾಕೋಲೇಟ್ (Chocolate) ಅಂದ್ರೆ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಹಲವರ ಫೇವರಿಟ್‌. ಚಾಕೋಲೇಟ್‌ ಬಾರ್‌ಗಳಾದ್ರೂ ಸರಿ, ಚಾಕೋಲೇಟ್‌ ನಟ್ಸ್ ಆದರೂ ಸಾರಿ ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಕೆಲವರಿಗಂತೂ ಚಾಕೋಲೇಟ್ ಅದೆಷ್ಟು ಫೇವರಿಟ್ ಅಂದ್ರೆ ಊಟನಾದ್ರೂ ಬಿಟ್ಟಾರೂ ಚಾಕೋಲೇಟ್ ಅಂತೂ ಬೇಕೇ ಬೇಕು. ನೀವು ಕೂಡಾ ಇದೇ ಪೈಕಿನಾ ? ಹಾಗಿದ್ರೆ ಚಾಕೊಲೇಟ್ ಆರೋಗ್ಯಕ್ಕೆ (Health) ಒಳ್ಳೆಯದಲ್ಲ ಅನ್ನೋದು ನಿಮ್ಗೆ ಗೊತ್ತಿರ್ಬೇಕಲ್ವಾ ? ಅತಿಯಾಗಿ ಚಾಕೋಲೇಟ್ ತಿಂದ್ರೆ ಹೊಟ್ಟೆ ಕೆಡುತ್ತೆ, ಹಲ್ಲಿನ ಕುಳಿ ಬೀಳುತ್ತೆ ಹೀಗೆ ಎದುರಾಗೋ ಸಮಸ್ಯೆಗಳು ಒಂದೆರಡಲ್ಲ. ಆದ್ರೆ ಇದಲ್ಲದೆಯೂ ಚಾಕೋಲೇಟ್ ಮಾರಣಾಂತಿಕವಾಗಬಹುದು. ಯಾಕೆಂದರೆ, ವಿಶ್ವದ ಅತ್ಯಂತ ಫೇಮಸ್ ಚಾಕೊಲೇಟ್ ಬ್ರ್ಯಾಂಡ್‌ನಲ್ಲಿ ಬ್ಯಾಕ್ಟಿರೀಯಾ ಪತ್ತೆಯಾಗಿದೆ. 

ಬೆಲ್ಜಿಯಂನ ವೈಜ್ ಪಟ್ಟಣದಲ್ಲಿ ಸ್ವಿಸ್ ದೈತ್ಯ ಬ್ಯಾರಿ ಕ್ಯಾಲೆಬಾಟ್ ನಡೆಸುತ್ತಿರುವ ವಿಶ್ವದ ಅತಿದೊಡ್ಡ ಚಾಕೊಲೇಟ್ ಸ್ಥಾವರದಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಮಿಠಾಯಿ ತಯಾರಿಸುವ 73 ಗ್ರಾಹಕರಿಗೆ ಸಗಟು ಬ್ಯಾಚ್‌ಗಳಲ್ಲಿ ದ್ರವ ಚಾಕೊಲೇಟ್ ಅನ್ನು ಉತ್ಪಾದಿಸುವ ಕಾರ್ಖಾನೆಯಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು  ಸ್ವಿಸ್ ದೈತ್ಯ ಬ್ಯಾರಿ ಕ್ಯಾಲೆಬಾಟ್ ಕಂಪನಿಯ ವಕ್ತಾರರು ತಿಳಿಸಿದ್ದಾರೆ.

Chocolate Benefits: ಬಿಳಿ ಚಾಕೋಲೇಟ್‌ ತಿಂದ್ರೆ ಆರೋಗ್ಯಕ್ಕೆಷ್ಟು ಲಾಭವಿದೆ ಗೊತ್ತಾ ?

ಬ್ಯಾಕ್ಟಿರೀಯಾ ಪತ್ತೆಯಾದ ನಂತರ ತಯಾರಿಸಲಾದ ಎಲ್ಲಾ ಉತ್ಪನ್ನಗಳನ್ನು ನಿರ್ಬಂಧಿಸಲಾಗಿದೆ ಎಂದು ಸಂಸ್ಥೆಯ ವಕ್ತಾರ ಕಾರ್ನೀಲ್ ವಾರ್ಲೋಪ್ ಹೇಳಿದ್ದಾರೆ. ಬ್ಯಾರಿ ಕ್ಯಾಲೆಬಾಟ್ ಪ್ರಸ್ತುತ ಕಲುಷಿತ ಉತ್ಪನ್ನಗಳನ್ನು ಪಡೆದಿರುವ ಎಲ್ಲ ಗ್ರಾಹಕರನ್ನು ಸಂಪರ್ಕಿಸುತ್ತಿದ್ದಾರೆ. ಮುಂದಿನ ಸೂಚನೆ ಬರುವವರೆಗೂ ವೈಜ್‌ನಲ್ಲಿ ಚಾಕೊಲೇಟ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.

ಬೆಲ್ಜಿಯಂ (Belgium) ದೇಶದಲ್ಲಿ ಉತ್ಪಾದನೆಯಾದ ಚಾಕೋಲೇಟ್‌ ಇಡೀ ವಿಶ್ವಕ್ಕೆ ಸಂಕಷ್ಟ ತಂದೊಡ್ಡಿದೆ. ಕನಿಷ್ಠ 113 ದೇಶಗಳಿಗೆ ರವಾನೆಯಾಗಿರುವ ಚಾಕೋಲೇಟ್‌ ಗಳಲ್ಲಿ ಸಾಲ್ಮೊನೆಲ್ಲಾ ಟೈಫಿಮುರಿಯಮ್‌ ಎನ್ನುವ ಸೋಂಕು ಕಂಡುಬಂದಿದೆ. ಕಲುಷಿತ ನೀರು ಮತ್ತು ಆಹಾರದ ಮೂಲಕ ದೇಹ ಪ್ರವೇಶಿಸುವ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಕರುಳನ್ನು ಪ್ರವೇಶಿಸಿ ಗ್ಯಾಸ್ಟ್ರೊಇಂಟೆಸ್ಟೈನಲ್‌ (Gastrointestinal) ರೋಗವಾಗಿ ಆರೋಗ್ಯವನ್ನು ಕಂಗೆಡಿಸುವ ಸಾಧ್ಯತೆ ಅಧಿಕವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೂ (World Health Organisation) ಹೇಳಿದೆ. ಚಾಕೋಲೇಟ್ ಮೂಲಕ ಈ ಸೋಂಕು ವಿಶ್ವವ್ಯಾಪಿಯಾಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. 

ಚಾಕೊಲೇಟ್ ಸಂಸ್ಥೆಯು ತನ್ನ ಎಲ್ಲಾ ಗ್ರಾಹಕರನ್ನು ಸಂಪರ್ಕಿಸಿದೆ ಮತ್ತು ಬ್ರಸೆಲ್ಸ್‌ನ ವಾಯುವ್ಯದಲ್ಲಿರುವ ಫ್ಲಾಂಡರ್ಸ್‌ನಲ್ಲಿರುವ ಈ ವೈಜ್ ಸ್ಥಾವರಕ್ಕೆ ಜೂನ್ 25 ರಿಂದ ಅವರು ತಯಾರಿಸಿದ ಚಾಕೊಲೇಟ್‌ನಿಂದ ಮಾಡಿದ ಯಾವುದೇ ಉತ್ಪನ್ನಗಳನ್ನು ರವಾನಿಸದಂತೆ ಕೇಳಿಕೊಂಡಿದೆ. ಬೆಲ್ಜಿಯಂನ ಆಹಾರ ಸುರಕ್ಷತಾ ಸಂಸ್ಥೆ ಬ್ಯಾಕ್ಟಿರೀಯಾ ಹರಡಿರುವ ರೀತಿಯ ಕುರಿತು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. 

Winter Drinks: ಚಳಿಗಾಲಕ್ಕೆ ಹೇಳಿ ಮಾಡಿಸಿದ ಹಾಟ್ ಚಾಕೊಲೇಟ್ ಡ್ರಿಂಕ್ಸ್

ದಕ್ಷಿಣ ಬೆಲ್ಜಿಯಂನ ಕಿಂಡರ್ ಚಾಕೊಲೇಟ್‌ಗಳನ್ನು ತಯಾರಿಸುವ ಅರ್ಲೋನ್‌ನಲ್ಲಿರುವ ಫೆರೆರೊ ಕಾರ್ಖಾನೆಯಲ್ಲಿ ಸಾಲ್ಮೊನೆಲ್ಲಾದಿಂದ ಕಲುಷಿತಗೊಂಡ ಚಾಕೊಲೇಟ್‌ಗಳ ಪ್ರಕರಣದ ಕೆಲವು ವಾರಗಳ ನಂತರ ಈ ಭಯವು ಬರುತ್ತದೆ. ಸ್ವಿಸ್ ಗ್ರೂಪ್ ಬ್ಯಾರಿ ಕ್ಯಾಲೆಬಾಟ್ ಆಹಾರ ಉದ್ಯಮದ ಅನೇಕ ಕಂಪನಿಗಳಿಗೆ ಕೋಕೋ ಮತ್ತು ಚಾಕೊಲೇಟ್ ಉತ್ಪನ್ನಗಳನ್ನು ಪೂರೈಸುತ್ತದೆ, ಉದ್ಯಮದ ಹರ್ಷೆ, ಮೊಂಡೆಲೆಜ್, ನೆಸ್ಲೆ ಅಥವಾ ಯೂನಿಲಿವರ್ ಕಂಪೆನಿಗೆ ಸ್ವಿಸ್ ಗ್ರೂಪ್‌ನಿಂದಲೇ ಚಾಕೊಲೇಟ್‌ ಸರಬರಾಜು ಆಗ್ತಿದೆ.

2020-2021ರ ಆರ್ಥಿಕ ವರ್ಷದಲ್ಲಿ ಸಂಸ್ಥೆಯ ವಾರ್ಷಿಕ ಮಾರಾಟವು 2.2 ಮಿಲಿಯನ್ ಟನ್‌ಗಳಷ್ಟಿತ್ತು. ಕಳೆದ ಹಣಕಾಸು ವರ್ಷದಲ್ಲಿ, ಜ್ಯೂರಿಚ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಗುಂಪು, ವಹಿವಾಟಿನಲ್ಲಿ 7.2 ಬಿಲಿಯನ್ ಫ್ರಾಂಕ್‌ಗಳಿಗೆ 384.5 ಮಿಲಿಯನ್ ಸ್ವಿಸ್ ಫ್ರಾಂಕ್‌ಗಳ ($402 ಮಿಲಿಯನ್) ನಿವ್ವಳ ಲಾಭವನ್ನು ಗಳಿಸಿದೆ. ಈ ಗುಂಪು 13,000 ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದೆ, ವಿಶ್ವಾದ್ಯಂತ 60 ಕ್ಕೂ ಹೆಚ್ಚು ಉತ್ಪಾದನಾ ತಾಣಗಳನ್ನು ಹೊಂದಿದೆ. ಹೀಗಾಗಿ ಚಾಕೊಲೇಟ್‌ನಲ್ಲಿ ಬ್ಯಾಕ್ಟಿರೀಯಾ ಕಾಣಿಸಿಕೊಂಡಿರುವುದು ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.  

Latest Videos
Follow Us:
Download App:
  • android
  • ios