Rice Based Snacks: ಅನ್ನ ತಿನ್ನೋಕೆ ಬೇಜಾರಾ ? ರೈಸ್ ಸ್ನ್ಯಾಕ್ಸ್ ಮಾಡಿ
ಚಿತ್ರಾನ್ನ, ಫ್ರೈಡ್ ರೈಸ್ (Fried Rice), ಬಿರಿಯಾನಿ (Biriyani) ಅಂತ ಮೂರು ಹೊತ್ತು ಅನ್ನ (Rice) ತಿನ್ನೋಕೆ ಬೇಜಾರ ? ಹಾಗಿದ್ರೆ ಅನ್ನದಿಂದ ಮಾಡೋ ಕೆಲವೊಂದು ಸ್ನ್ಯಾಕ್ಸ್ (Snacks) ಟೇಸ್ಟ್ ಮಾಡಿ. ನಿಮ್ಗೆ ಇಷ್ಟ ಆಗೋದ್ರಲ್ಲಿ ಡೌಟೇ ಇಲ್ಲ.
ಭಾರತೀಯ ಜೀವನಶೈಲಿ (Lifestyle) ಎಲ್ಲಕ್ಕಿಂತ ವಿಭಿನ್ನ. ಇಲ್ಲಿನ ಆಹಾರಪದ್ಧತಿಯಲ್ಲಿ ಅನ್ನವಿಲ್ಲದ ಊಟವನ್ನು ಊಹಿಸಲೂ ಸಾಧ್ಯವಿಲ್ಲ. ಕೆಲವೊಬ್ಬರು ರಾತ್ರಿಯ ಊಟಕ್ಕೆ ಚಪಾತಿ, ರೋಟಿ, ದೋಸೆಯನ್ನು ಇಷ್ಟಪಡುತ್ತಾರದೂ ಹೆಚ್ಚಿನವರು ದೋಸೆಯನ್ನೇ ತಿನ್ನುತ್ತಾರೆ. ಅಕ್ಕಿ ಭಾರತೀಯ ಆಹಾರದ ಅತ್ಯಂತ ಪ್ರಮುಖ ಭಾಗವಾಗಿದೆ. ಈ ಬಹುಮುಖ ಧಾನ್ಯವನ್ನು ನಮ್ಮ ದೇಶದಲ್ಲಿ ಅದರ ಎಲ್ಲಾ ರೂಪಗಳಲ್ಲಿ ವ್ಯಾಪಕವಾಗಿ ಸೇವಿಸಲಾಗುತ್ತದೆ. ಫ್ರೈಡ್ ರೈಸ್, ಬಿರಿಯಾನಿ, ಪುಲಾವ್, ಆವಿಯಲ್ಲಿ ಬೇಯಿಸಿದ ಅನ್ನದವರೆಗೆ, ಭಾರತೀಯರು ಈ ಎಲ್ಲಾ ರುಚಿಕರವಾದ ರೀತಿಯಲ್ಲಿ ಅನ್ನವನ್ನು ತಿನ್ನಲು ಇಷ್ಟಪಡುತ್ತಾರೆ.
ಅಕ್ಕಿ ಯಾವಾಗಲೂ ಭಾರತೀಯ ಆಹಾರಪದ್ಧತಿಯ ಒಂದು ಮುಖ್ಯ ಭಾಗವಾಗಿದೆ. ಇದನ್ನು ಗ್ರೇವಿ ಜೊತೆಗೆ ಸೈಡ್ ಡಿಶ್ (Side Dish) ಆಗಿ ನೀಡಲಾಗುತ್ತದೆ. ಆದರೆ ಕೆಲವೊಬ್ಬರಿಗೆ ಅನ್ನವನ್ನು ತಿನ್ನಲು ಇಷ್ಟವಿರುವುದಿಲ್ಲ. ಹೀಗಿದ್ದಾಗ ಅಕ್ಕಿಯನ್ನು ಬಳಸಿ ನೀವು ಮಾಡಬಹುದಾದ ಕೆಲವು ಉತ್ತಮವಾದ, ರುಚಿಕರವಾದ ತಿಂಡಿಗಳ ಲಿಸ್ಟ್ ಇಲ್ಲಿದೆ.
Work From Home Snacks: ಕೆಲ್ಸದ ಮಧ್ಯೆ ಏನೇನೋ ತಿನ್ಬೇಡಿ. ಹೆಲ್ದಿ ಫುಡ್ ಲಿಸ್ಟ್ ಇಲ್ಲಿದೆ
ರೈಸ್ ಪಾಪ್ಸ್
ಊಟ-ತಿಂಡಿಯ ನಡುವೆ ತಿನ್ನಲು ಇದು ಅತ್ಯುತ್ತಮ ಆಹಾರವಾಗಿದೆ. ಬೆಳಗ್ಗಿನ ಬ್ರೇಕ್‌ಫಾಸ್ಟ್ (Breakfast) ಇದನ್ನು ತಯಾರಿಸಿ ತಿನ್ನಬಹುದು, ರೈಸ್ ಪಾಪ್ಸ್ ತಯಾರಿಸಲು ಎಣ್ಣೆಗೆ ಸಾಸಿವೆ, ಹಿಂಗು, ನಿಂಬೆರಸ, ಹಸಿರು ಮೆಣಸಿನಕಾಯಿ, ಕರಿಬೇವಿನ ಎಲೆಗಳನ್ನು ಹಾಕಬೇಕು. ಇದಕ್ಕೆ ಕೊತ್ತಂಬರಿ, ಬೆಳ್ಳುಳ್ಳಿ, ಒಣಮೆಣಸು ರುಬ್ಬಿದ ಪೇಸ್ಟ್ ಹಾಕಿಕೊಳ್ಳಬೇಕು. ಇದಕ್ಕೆ ಬೇಯಿಸಿದ ಅನ್ನ ಸೇರಿಸಿ ಉಂಡೆ ಮಾಡಿಟ್ಟುಕೊಳ್ಳಬೇಕು. ಈಗ ಟೇಸ್ಟೀ ರೈಸ್ ಪಾಪ್ ರೆಡಿ. ಹಸಿರು ಚಟ್ನಿ ಅಥವಾ ಟೊಮೆಟೊ ಕೆಚಪ್‌ನೊಂದಿಗೆ ಇದನ್ನು ತಿನ್ನಲು ರುಚಿಕರವಾಗಿರುತ್ತದೆ.
ಅಕ್ಕಿ ವಡೆ
ಅಕ್ಕಿ ವಡೆಯನ್ನು ಅಕ್ಕಿ, ಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಬೆಳ್ಳುಳ್ಳಿ ಮತ್ತು ಸೌಮ್ಯವಾದ ಮಸಾಲೆಗಳೊಂದಿಗೆ ತಯಾರಿಸಲಾಗುತ್ತದೆ. ನೆನೆಸಿಟ್ಟ ಅಕ್ಕಿಯನ್ನು ರುಬ್ಬಿ, ಮೇಲೆ ಹೇಳಿದ ಮಸಾಲೆಗಳನ್ನು ಸೇರಿಸಿ ಇದನ್ನು ತಯಾರಿಸಬಹುದು. ಸಂಜೆ ಟೀ (Tea) ಜೊತೆ ಸ್ನ್ಯಾಕ್ಸ್ ಜತೆ ಸವಿಯಲು ಇದು ಚೆನ್ನಾಗಿರುತ್ತದೆ.
ರೈಸ್ ಕಟ್ಲೆಟ್
ಸಂಜೆಯ ಟೀ ಜತೆ ಕುರುಕುಲು ತಿಂಡಿ ತಿನ್ನಲು ಚೆನ್ನಾಗಿರುತ್ತೆ. ಅದರಲ್ಲೂ ರೈಸ್ ಕಟ್ಲೆಟ್ (Rice Cutlet) ಟೀ ಜತೆ ಸವಿಯಲು ಬೆಸ್ಟ್. ಇದನ್ನು ತಯಾರಿಸಲು ಬೇಯಿಸಿದ ಆಲೂಗಡ್ಡೆ ಸೇರಿಸಿ ಹಸಿರು ಮೆಣಸಿನಕಾಯಿ, ಶುಂಠ-ಬೆಳ್ಳುಳ್ಳಿ ಪೇಸ್ಟ್, ಅಚ್ಚ ಖಾರದ ಪುಡಿ, ಕರಿಬೇವಿನ ಎಲೆಗಳು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಉಂಡೆಕಟ್ಟೆ ಕೈಯಲ್ಲಿಟ್ಟು ಚಪ್ಪಟೆ ಆಕಾರ ಮಾಡಿಕೊಂಡು ಎಣ್ಣೆಯಲ್ಲಿ ಕೆಂಬಣ್ಣ ಬರುವರರೆಗೂ ಹುರಿದುಕೊಳ್ಳಬೇಕು. ಈ ಪಾಕವಿಧಾನವು ತುಂಬಾ ಸರಳವಾಗಿದೆ ಮತ್ತು ತ್ವರಿತವಾಗಿ ತಯಾರಿಸಲಾಗುತ್ತದೆ. ಎಲ್ಲಾ ವಯಸ್ಸಿನ ಜನರು ಈ ರೈಸ್ ಕಟ್ಲೆಟ್ ಇಷ್ಟಪಟ್ಟು ತಿನ್ನುತ್ತಾರೆ.
Winter Special: ಎಳ್ಳು - ಡ್ರೈ ಫ್ರೂಟ್ ಟೇಸ್ಟಿ ಹಾಗೂ ಹೆಲ್ದಿ ಚಿಕ್ಕಿ ರೆಸಿಪಿ!
ಕಡಲೇಕಾಯಿ ಅಕ್ಕಿ ಸ್ನ್ಯಾಕ್ಸ್
ನೀವು ಗರಿಗರಿಯಾದ ತಿಂಡಿಯನ್ನು ಸವಿಯಲು ಇಷ್ಟಪಡುವವರಾಗಿದ್ದರೆ, ಕಡಲೇಕಾಯಿ ಅಕ್ಕಿ ತಿಂಡಿ ನಿಮಗೆ ಇಷ್ಟವಾಗಬಹುದು. ಇದನ್ನು ತಯಾರಿಸಲು ಮಸಾಲೆ ಮಿಶ್ರಣವನ್ನು ಸೇರಿಸಿದ ಬೇಯಿಸಿದ ಅನ್ನವನ್ನು ಸಣ್ಣ ಚೆಂಡುಗಳಾಗಿ ಮಾಡಿಕೊಳ್ಳಲಾಗುತ್ತದೆ. ನಂತರ ಇದನ್ನು ಹುರಿದ ಕಡಲೆಕಾಯಿ ಪುಡಿಯಲ್ಲಿ ಅದ್ದಿ ತೆಗೆದು ಎಣ್ಣೆಯಲ್ಲಿ ಹುರಿಯಲಾಗುತ್ತದೆ.
ಅಕ್ಕಿ ಪಾಪಡ್
ಅಕ್ಕಿ ಹಪ್ಪಳ (Papad)ವನ್ನು ಬೇಯಿಸಿದ ಅಕ್ಕಿ ಹಾಗೂ ಉದ್ದಿನಬೇಳೆಯನ್ನು ಸೇರಿಸಿ ತಯಾರಿಸಲಾಗುತ್ತದೆ. ನೆನೆಸಿಟ್ಟ ಅಕ್ಕಿ ಹಾಗೂ ಉದ್ದಿನಬೇಳೆಯನ್ನು ರುಬ್ಬಿ,ಪೇಸ್ಟ್ ಮಾಡಿದ ಮಸಾಲೆಯನ್ನು ಸೇರಿಸಿಕೊಳ್ಳಬೇಕು. ನಂತರ ಇದನ್ನು ಸಣ್ಣ ದೋಸೆಯಂತೆ ಹೊಯ್ಡುಕೊಂಡು ಬಿಸಿಲಿನಲ್ಲಿ ಒಣಗಿಸಿಕೊಳ್ಳಬೇಕು. ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಇದರರ್ಥ ನೀವು ರೆಡಿಮೇಡ್ ಪಾಪಡ್ ಅನ್ನು ಖರೀದಿಸುವುದನ್ನು ತಪ್ಪಿಸಬಹುದು ಮತ್ತು ನೀವು ಹಂಬಲಿಸಿದಾಗಲೆಲ್ಲಾ ಇದನ್ನು ಮನೆಯಲ್ಲಿಯೇ ತಾಜಾವಾಗಿ ತಯಾರಿಸಬಹುದು.