ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತದ ಬಗ್ಗೆ ಗೌತಮ್ ಗಂಭೀರ್ ಆಘಾತ ವ್ಯಕ್ತಪಡಿಸಿದ್ದಾರೆ. ಜನರ ಸುರಕ್ಷತೆಗೆ ಆದ್ಯತೆ ನೀಡಬೇಕು ಮತ್ತು ರೋಡ್‌ಶೋಗಳ ಬದಲು ಒಳಾಂಗಣ ಕ್ರೀಡಾಂಗಣಗಳಲ್ಲಿ ಸಂಭ್ರಮಾಚರಣೆಗಳನ್ನು ಆಯೋಜಿಸಬೇಕು ಎಂದು ಅವರು ಹೇಳಿದ್ದಾರೆ

ಮುಂಬೈ (ಜೂ.6): ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತಕ್ಕೆ ಭಾರತದ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌ ಆಘಾತ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆ ಮುಂದೆ ಯಾವತ್ತೂ ನಡೆಯಬಾರದು ಎಂದಿದ್ದಾರೆ.

ಭಾರತ ಟೆಸ್ಟ್‌ ತಂಡದ ನೂತನ ನಾಯಕ ಶುಭ್‌ಮನ್‌ ಗಿಲ್‌ ಜೊತೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾವು ಜವಾಬ್ದಾರಿಯುತ ಮನುಷ್ಯರಾಗಬೇಕು. ಇಂತಹ ರೋಡ್‌ಶೋಗಳ ಬಗ್ಗೆ ನನಗೆ ವಿರೋಧವಿದೆ.

ನಮಗೆ ಇಲ್ಲಿ ಜನರ ಜೀವ ಮುಖ್ಯ. ಸಂಭ್ರಮಾಚರಣೆ ನಡೆಸುವುದಿದ್ದರೆ ಒಳಾಂಗಣ ಕ್ರೀಡಾಂಗಣಗಳಲ್ಲಿ ಆಯೋಜಿಸಬೇಕು’ ಎಂದಿದ್ದಾರೆ. ಸೂಕ್ತ ಸಿದ್ಧತೆ ನಡೆಸಲು ಆಗದಿದ್ದರೆ ನಾವು ರೋಡ್‌ಶೋ ನಡೆಬಾರದು. ಪ್ರೇಕ್ಷಕರು ತುಂಬಾ ಉತ್ಸಾಹದಲ್ಲಿರುತ್ತಾರೆ. ಹೀಗಾಗಿ ಎಲ್ಲಾ ಆಯಾಮಗಳಲ್ಲೂ ನಾವು ಜವಾಬ್ದಾರಿಯುತವಾಗಿ ವರ್ತಿಸಬೇಕಾದ ಅಗತ್ಯವಿದೆ’ ಎಂದಿದ್ದಾರೆ.