ಹತ್ತೇ ನಿಮಿಷದಲ್ಲಿ ತವಾ ಪಲಾವ್, ಮಾಡೋದು ಈಝಿ, ತಿನ್ನೋಕು ಟೇಸ್ಟೀ

ಎಲ್ಲಾ ತರಕಾರಿ (Vegetables)ಗಳನ್ನು ಸೇರಿಸಿಕೊಂಡು ಮಾಡುವ ವೆಜಿಟೇಬಲ್ ಪಲಾವ್ (Pulav) ತಿನ್ನೋಕು ಟೇಸ್ಟ್‌, ಆರೋಗ್ಯ (Health)ಕ್ಕೂ ಒಳ್ಳೇದು. ಆದ್ರೆ ಯಾವಾಗ್ಲೂ ಒಂದೇ ರೀತಿಯ ಪಲಾವ್ ಮಾಡಿ ತಿನ್ನೋದು ಆದ್ರೆ ಯಾರಿಗಾದ್ರೂ ಬೇಜಾರೇ. ಹೀಗಾಗಿ ಸ್ಪೆಷಲ್‌ ತವಾ ಪಲಾವ್ (Tawa Pulav) ಮಾಡೋದು ಹೇಗೆ ನಾವ್ ಹೇಳ್ತೀವಿ. 

Quick Lunch Recipe: How To Make Tawa Pulao In Just 10 Minutes Vin

ಭಾರತೀಯರು ಆಹಾರ (Food)ಪ್ರಿಯರು. ರುಚಿಕರವಾದ ಭಕ್ಷ್ಯಗಳನ್ನು ಸವಿಯಲು ಇಷ್ಟಪಡುತ್ತಾರೆ. ಅದರಲ್ಲೂ ದಕ್ಷಿಣಭಾರತದವರು ಹೆಚ್ಚಾಗಿ ರೈಸ್‌ (Rice bath) ಐಟಂಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಅದರಲ್ಲೊಂದು ಪಲಾವ್‌ (Pulav). ಇದನ್ನುಬ ತಯಾರಿಸುವ ಸಂದರ್ಭ ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳನ್ನು ಸೇರಿಸುವ ಕಾರಣ ಇದು ಆರೋಗ್ಯ (Health)ಕ್ಕೂ ಒಳ್ಳೆಯದು. ಆಹಾರ ಎಂದರೆ ಬಾಯಿ ರುಚಿಯ ಜತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. ದಿನ ನಿತ್ಯ ರುಚಿಕರ ಹಾಗೂ ಆರೋಗ್ಯಕರ ತಿಂಡಿ ಮಾಡುವುದು ಕಷ್ಟವೇ ಹೌದು. ಆರೋಗ್ಯದ ಜತೆಗೆ ಮನೆಯ ಹಿರಿಯರಿಂದ ಕಿರಿಯವರೆಗೆ ಎಲ್ಲರೂ ಇಷ್ಟಪಡುವ, ರುಚಿಗೂ (Taste) ಸೈ ಎನಿಸುವ ತಿಂಡಿ ತರಕಾರಿ ಪಲಾವ್‌. ಆದ್ರೆ ತರಕಾರಿಯನ್ನು ಸೇರಿಸಿ, ಕುಕ್ಕರ್‌ಗೆ ಅಕ್ಕಿಯನ್ನು ಸೇರಿಸಿ ಪಲಾವ್‌ ಮಾಡುವ ವಿಧಾನ ಎಲ್ಲರಿಗೂ ಗೊತ್ತು. 

ದಕ್ಷಿಣ ಹಾಗೂ ಉತ್ತರ ಭಾರತದ ಎಲ್ಲೆಡೆ ತನ್ನದೇ ಶೈಲಿಯಲ್ಲಿ ತಯಾರಿಸುವ ಪಲಾವ್‌ ಅನ್ನು ಹತ್ತಾರು ವಿಧಾನಗಳಲ್ಲಿ ತಯಾರಿಸಬಹುದು. ನಾವಿಲ್ಲಿ ಸಿಂಪಲ್‌ ಹಾಗೂ ಶೀಘ್ರದಲ್ಲೇ ತಯಾರಿಸಬಹುದಾದ ಪಲಾವ್‌ ರೆಸಿಪಿಯನ್ನು ತಿಳಿಸಿಕೊಡಲಿದ್ದೇವೆ. ತವಾ ಪಲಾವ್ ಮಾಡೋದು ಹೇಗೆಂದು ನಿಮ್ಗೆ ಗೊತ್ತಿದ್ಯಾ. ಆ ಕುರಿತಾದ ಸಿಂಪಲ್ ರೆಸಿಪಿ ಇಲ್ಲಿದೆ. 

ಮಧುಮೇಹಿಗಳು ಹಲಸಿನ ಹಣ್ಣು ಅಥವಾ ಕಾಯಿ ಯಾವುದು ತಿಂದ್ರೆ ಒಳ್ಳೇದು ?

ಕೇವಲ 10 ನಿಮಿಷಗಳಲ್ಲಿ ತವಾ ಪಲಾವ್ ಮಾಡುವುದು ಹೇಗೆ ?

ವೀಕೆಂಡ್‌ಗಳು ಕೆಲವೊಮ್ಮೆ ಹೆಚ್ಚು ಕೆಲಸದಿಂದಾಗಿ ಒತ್ತಡವನ್ನು ಅನುಭವಿಸಬೇಕಾಗುತ್ತದೆ. ಮನೆ ಕೆಲಸ, ತಿನ್ನಲು ಆಹಾರವನ್ನು ಸಿದ್ಧಪಡಿಸುವುದು ಇಂಥಾ ಸಂದರ್ಭದಲ್ಲಿ ಸವಾಲಾಗಿ ಪರಿಣಮಿಸುತ್ತದೆ. ಹೀಗಿರುವಾಗ ನಾವೇನು ​​ಮಾಡಬೇಕು ? ಊಟವನ್ನು ಬಿಟ್ಟು ಬಿಡುವ ಅಭ್ಯಾಸ ಒಳ್ಳೆಯದಲ್ಲ. ಹೊರಗಿನಿಂದ ಫುಡ್ ಆರ್ಡರ್ ಮಾಡಿದರೂ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇಂಥಾ ಸಂದರ್ಭದಲ್ಲಿ ತ್ವರಿತ ಪಾಕವಿಧಾನಗಳನ್ನು ನೋಡಿಕೊಳ್ಳಬೇಕಾಗುತ್ತದೆ. ಅಂಥಹಾ ಒಂದು ರೆಸಿಪಿ ಪಲಾವ್‌. ಇದನ್ನು ನೀವು ಕೇವಲ ಹತ್ತೇ ನಿಮಿಷದಲ್ಲಿ ತಯಾರಿಸಬಹುದು. ಮೊದಲಿನಿಂದ ಪಾಕವಿಧಾನವನ್ನು ಪ್ರಾರಂಭಿಸಿದರೆ, ಖಾದ್ಯವನ್ನು ತಯಾರಿಸಲು 20-30 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಹಾಗಿದ್ರೆ ಇದನ್ನು ಮಾಡುವುದು ಹೇಗೆ ತಿಳಿದುಕೊಳ್ಳೋಣ.

ತವಾ ಪಲಾವ್ ಮಾಡಲು ಬೇಕಾದ ಪದಾರ್ಥಗಳು
ಹೂಕೋಸು, ಬೀನ್ಸ್, ಕ್ಯಾರೆಟ್,(ನಿಮಗಿಷ್ಟವದಾದ ಇತರ ತರಕಾರಿಗಳನ್ನು ಸೇರಿಸಿಕೊಳ್ಳಬಹುದು) ತುಪ್ಪ, ಈರುಳ್ಳಿ, ಟೊಮೇಟೊ, ಗರಂ ಮಸಾಲಾ, ಉಪ್ಪು, ಕೊತ್ತಂಬರಿ ಸೊಪ್ಪು, ಪುದೀನ, ಬೇಯಿಸಿದ ಅನ್ನ

ಮಾಡುವ ವಿಧಾನ
ಮೊದಲು ನಿಮಗಿಷ್ಟವಾದ ತರಕಾರಿಗಳನ್ನು ಕತ್ತರಿಸಿಟ್ಟುಕೊಂಡು ಬೇಯಿಸಿಕೊಳ್ಳಿ. ನಂತರ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದರಲ್ಲಿ ಈರುಳ್ಳಿ ಹಾಕಿ. ಈರುಳ್ಳಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ನಂತರ ತರಕಾರಿಗಳು, ಟೊಮೆಟೊ ಮತ್ತು ಗರಂ ಮಸಾಲಾ ಸೇರಿಸಿ. ನಂತರ ಮೊದಲೇ ಬೇಯಿಸಿದ ಅನ್ನ, ಉಪ್ಪು ಸೇರಿಸಿ ಮತ್ತು ತವಾದಲ್ಲಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪಿನಿಂದ ಅಲಂಕರಿಸಿ, ಬಿಸಿಯಾಗಿ ಬಡಿಸಿ.

ಫುಡ್ ಪಾಯ್ಸನ್‌ ಯಾಕಾಗುತ್ತೆ ? ತಕ್ಷಣವೇ ಕಡಿಮೆಯಾಗಲು ಏನು ಮಾಡ್ಬೋದು ?

ರಾತ್ರಿ ಅನ್ನ ತಿನ್ನುವುದರಿಂದಾಗುವ ದುಷ್ಪರಿಣಾಮಗಳು

ಅನ್ನ ಬೇಗ ಜೀರ್ಣವಾಗುತ್ತದೆ, ದೇಹಕ್ಕೆ ನಿಶ್ಯಕ್ತಿ ಆವರಿಸುತ್ತದೆ: ಅಕ್ಕಿಯು ಪಿಷ್ಟ ಮತ್ತು ಕಾರ್ಬೋಹೈಡ್ರೇಟ್‌ಗಳಲ್ಲಿ ಅಧಿಕವಾಗಿದೆ ಮತ್ತು ಸುಲಭವಾಗಿ ಒಡೆಯುತ್ತದೆ. ಆದ್ದರಿಂದ ಹೌದು, ನೀವು ಅದನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು. ಆದರೆ ಅಕ್ಕಿಯು ನಿಮ್ಮ ರಕ್ತದಲ್ಲಿನ ಗ್ಲೂಕೋಸ್ (Glucose) ಮಟ್ಟದಲ್ಲಿ ತ್ವರಿತ ಏರಿಕೆಗೆ ಕಾರಣವಾಗುವ ಖಾದ್ಯವಾಗಿದ್ದು ಅದು ಸುಲಭವಾಗಿ ಒಡೆಯುತ್ತದೆ ಮತ್ತು ಇದರರ್ಥ ನೀವು ತ್ವರಿತವಾಗಿ ಚೈತನ್ಯವನ್ನು ಕಳೆದುಕೊಳ್ಳುತ್ತೀರಿ.

ನೀವು ಊಟಕ್ಕೆ ಅನ್ನವನ್ನು ಸೇವಿಸಿದಾಗ, ಆಹಾರವು ಸುಲಭವಾಗಿ ಜೀರ್ಣವಾಗುವುದರಿಂದ ಈ ತ್ವರಿತ ಶಕ್ತಿಯು ಉಂಟಾಗುತ್ತದೆ. ಆದರೆ ನೀವು ಮುಂದಿನ ಕೆಲವು ಗಂಟೆಗಳ ಕಾಲ ನಿದ್ರಿಸಲಿರುವುದರಿಂದ, ನಿಮ್ಮ ದೇಹವು ಈ ಹಲವು ಗಂಟೆಗಳವರೆಗೆ ಯಾವುದೇ ಪೋಷಣೆಯನ್ನು ಪಡೆಯುವುದಿಲ್ಲ. ಇದರರ್ಥ, ನೀವು ಎದ್ದಾಗ, ನೀವು ತಿಂದ ಅನ್ನವು ಬೇಗನೆ ಜೀರ್ಣವಾಗುವುದರಿಂದ ಮತ್ತು ರಾತ್ರಿಯಲ್ಲಿ ಹಸಿವು ಉಂಟಾಗುತ್ತದೆ.

ತೂಕ ಹೆಚ್ಚಳದ ಸಮಸ್ಯೆ: ತೂಕ (Weight) ಹೆಚ್ಚಾಗಲು ಕಾರಣವಾಗುವ ಅಂಶಗಳಲ್ಲಿ ಅಕ್ಕಿ ಕೂಡ ಒಂದಾಗಿದೆ ಏಕೆಂದರೆ ಇದು ಕಾರ್ಬೋಹೈಡ್ರೇಟ್‌ಗಳ ರೂಪದಲ್ಲಿ ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿದ್ದು ಅದನ್ನು ಬಳಸದಿದ್ದರೆ, ನಿಮ್ಮ ದೇಹದಲ್ಲಿ ಕೊಬ್ಬಾಗಿ ಸಂಗ್ರಹಿಸುತ್ತದೆ. ಬೇಯಿಸಿದ ಅಕ್ಕಿಯಲ್ಲಿ ಕೊಬ್ಬಿನ ಅಂಶಗಳಿವೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದರಿಂದ ನಿಮಗೆ ಬೊಜ್ಜು ಬರಬಹುದು. ಈಗಾಗಲೇ ನಿಮಗೆ ಬೊಜ್ಜು ಇದ್ದರೆ, ಅತಿ ಕಡಿಮೆ ಪ್ರಮಾಣದಲ್ಲಿ ಅನ್ನವನ್ನು ಸೇವಿಸಿ. 

Latest Videos
Follow Us:
Download App:
  • android
  • ios