100 ಕೆಜಿಯ ಬೃಹತ್ ಐಸ್ ಕೇಕ್‌ ನಿರ್ಮಾಣ... ವಿಶ್ವದಾಖಲೆ ಬರೆದ ಕೇಕ್ ಆರ್ಟಿಸ್ಟ್

  • 100 ಕೆಜಿಯ ಬೃಹತ್ ಐಸ್ ಕೇಕ್‌ ನಿರ್ಮಿಸಿ ಪುಣೆ ಮೂಲದ ಕಲಾವಿದೆ
  • ಪ್ರಾಚಿ ಧಬಲ್ ದೇಬ್ ಅವರಿಂದ ಸಾಧನೆ
  • ಇಟಲಿಯ ಗ್ರ್ಯಾಂಡ್ ಮಿಲನ್ ಕ್ಯಾಥೆಡ್ರಲ್‌ನ ಕಲಾಕೃತಿ ನಿರ್ಮಾಣ
     
Pune cake artist make world record by making 100 kg vegan edible royal icing structure akb

ಪುಣೆಯ ಕೇಕ್‌ ಆರ್ಟಿಸ್ಟ್ ಒಬ್ಬರು ಸಂಪೂರ್ಣ ಸಸ್ಯಹಾರಿ ಆದಂತಹ 100 ಕೆಜಿ ತೂಕದ ಬೃಹತ್ ಕೇಕೊಂದನ್ನು ನಿರ್ಮಿಸುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ. ಪುಣೆ ಮೂಲದ ಈಗಾಗಲೇ ಅಂತಾರಾಷ್ಟ್ರೀಯವಾಗಿ ಮೆಚ್ಚುಗೆ ಪಡೆದ ಕೇಕ್ ಕಲಾವಿದೆ ಪ್ರಾಚಿ ಧಬಲ್ ದೇಬ್ (Prachi Dhabal Deb) ಅವರು ಈ ಸಾಧನೆ ಮಾಡಿದ್ದಾರೆ. ಅಮೆರಿಕಾದ (United Kingdom)  ವಿಶ್ವ ಪ್ರಸಿದ್ಧ ಕೇಕ್ ಐಕಾನ್ ಸರ್ ಎಡ್ಡಿ ಸ್ಪೆನ್ಸ್ ಎಂಬಿಇ (Sir Eddie Spence MBE) ಅವರ ಮಾರ್ಗದರ್ಶನದಲ್ಲಿ ರಾಯಲ್ ಐಸಿಂಗ್‌ನ ಸಂಕೀರ್ಣವಾದ ಕಲೆಯನ್ನು ಕಲಿತ ಪ್ರಾಚಿ ಈಗ ಈ ಸಾಧನೆ ಮಾಡಿದ್ದಾರೆ.

100 ಕೆಜಿಯಷ್ಟು ಎತ್ತರದ ಸಸ್ಯಾಹಾರಿ ರಾಯಲ್ ಐಸಿಂಗ್ ಕೇಕ್‌ ತಯಾರಿಸಿದ ಪ್ರಾಚಿ ಅವರ ಈ ಸಾಧನೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ಪ್ರಾಚಿಯವರು ಕೇಕ್‌ನಲ್ಲಿ ಇಟಲಿಯ ಗ್ರ್ಯಾಂಡ್ ಮಿಲನ್ ಕ್ಯಾಥೆಡ್ರಲ್‌ನ (grand Milan Cathedral) ಭವ್ಯ ಕಟ್ಟಡದ ಮರು ನಿರ್ಮಾಣ ಮಾಡಿದ್ದಾರೆ. ಇದು  ಸೌಂದರ್ಯದ ಪರಿಪೂರ್ಣ ಮಿಶ್ರಣವನ್ನು ನೀಡುತ್ತಿದೆ.

Kitchen Hacks: ಕೇಕ್ ಮಾಡುವಾಗ ವೆನಿಲ್ಲಾ ಎಸೆನ್ಸ್ ಬದಲು ಇದನ್ನು ಟ್ರೈ ಮಾಡಿ

ತಮ್ಮ ಈ ಸಾಧನೆಯ ಬಗ್ಗೆ ಮಾತನಾಡಿದ ಪ್ರಾಚಿ, ನಾನು ಈ ನನ್ನ ಕೆಲಸಕ್ಕಾಗಿ ಹಲವಾರು ವರ್ಷಗಳಿಂದ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದೇನೆ. ಅದರ ಫಲಿತಾಂಶವನ್ನು ಉದ್ಯಮವು ಸ್ವೀಕರಿಸಿದ್ದಕ್ಕಾಗಿ ನಾನು ತುಂಬಾ ಕೃತಜ್ಞಳಾಗಿದ್ದೇನೆ. ನನ್ನ ಸಾಧನೆಯನ್ನು ವಿಶ್ವ ಬುಕ್ ಆಫ್ ರೆಕಾರ್ಡ್ಸ್, ಲಂಡನ್ ಘನತೆಯ ರೀತಿಯಲ್ಲಿ ಪ್ರಮಾಣೀಕರಿಸಿ ಗುರುತಿಸಿದೆ.ಇದು ನನ್ನ ಕನಸುಗಳು ಮತ್ತು ಗುರಿಗಳನ್ನು ಮೀರಿದ ಸಾಧನೆಯಾಗಿದೆ. ಈ ಅನನ್ಯ ಮತ್ತು ಅಪೇಕ್ಷಿತ ಗೌರವಕ್ಕಾಗಿ ನಾನು ತುಂಬಾ ಕೃತಜ್ಞಳಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

ತಮ್ಮ ಸಾಧನೆಯ ಬಗ್ಗೆ ವಿವರಿಸಿದ ಪ್ರಾಚಿ ಈ ಕ್ಯಾಥೆಡ್ರಲ್ ಕಲಾಕೃತಿಯನ್ನು ನಿರ್ಮಿಸಲು ಸುಮಾರು 1,500 ತುಂಡುಗಳು ಬೇಕಾಗಿದ್ದರಿಂದ ಯೋಜನೆ ಮತ್ತು ಸಿದ್ಧತೆಗೆ ಸಾಕಷ್ಟು ಸಮಯ ತೆಗೆದುಕೊಂಡಿತು. ನಾನು ಪ್ರತಿ ತುಣುಕನ್ನು ಏಕಾಂಗಿಯಾಗಿ ಪೈಪ್ ಮಾಡಿದ್ದೇನೆ ಮತ್ತು ನಂತರ, ಆ ತುಣುಕುಗಳನ್ನು ಜೋಡಿಸಲು ಸುಮಾರು ಒಂದು ತಿಂಗಳು ತೆಗೆದುಕೊಂಡಿತು. ಈ ಕ್ಯಾಥೆಡ್ರಲ್ ರಚನೆಯ ಪ್ರತಿಯೊಂದು ಅಂಶವನ್ನು ಸರಿಯಾಗಿ ನಿರ್ಮಿಸುವುದು ಒಂದು ಸವಾಲಾಗಿತ್ತು, ಆದರೆ ನಾನು ಅದನ್ನು ರಚಿಸುವುದನ್ನು ಸಂಪೂರ್ಣವಾಗಿ ಆನಂದಿಸಿದೆ ಎಂದರು.

ಈ ಕ್ಯಾಥೆಡ್ರಲ್‌ ಸ್ಮಾರಕ ಕಲಾಕೃತಿಯೂ 6 ಅಡಿ 4 ಇಂಚು ಉದ್ದ, 4 ಅಡಿ 6 ಇಂಚು ಎತ್ತರ ಮತ್ತು 3 ಅಡಿ 10 ಇಂಚು ಅಗಲವನ್ನು ಹೊಂದಿದೆ. ಸಾಮಾನ್ಯವಾಗಿ ರಾಯಲ್ ಐಸಿಂಗ್‌ನ ಸಾಂಪ್ರದಾಯಿಕ ಪಾಕ ವಿಧಾನದಲ್ಲಿ ಮೊಟ್ಟೆಗಳನ್ನು ಬಳಸುತ್ತಾರೆ, ಆದರೆ ಭಾರತೀಯ ಮಾರುಕಟ್ಟೆಗೆ ಅದನ್ನು ಆದರ್ಶವಾಗಿಸಲು, ಪ್ರಾಚಿಯು ಭಾರತೀಯ ಕಂಪನಿ-ಶುಗಾರಿನ್‌ನ ಸಹಯೋಗದೊಂದಿಗೆ ರಾಯಲ್ ಐಸಿಂಗ್‌ನ (Vegan Royal Icing) ಮೊಟ್ಟೆ ಬಳಸದ ಸಸ್ಯಾಹಾರಿ ಉತ್ಪನ್ನವನ್ನು ಅಭಿವೃದ್ಧಿಪಡಿಸಿದರು. ಈ ಉತ್ಪನ್ನವು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಲಭ್ಯವಿದೆ.

X`mas Here I Come: ಟೇಸ್ಟೀ ಕ್ರಿಸ್ಮಸ್ ಪ್ಲಮ್ ಕೇಕ್ ಹೀಗೆ ಮಾಡಿ
 

ಪ್ರಪಂಚದಾದ್ಯಂತ ಇರುವ ಕಲಾತ್ಮಕ ಅಂಶಗಳಿಂದ ಸ್ಫೂರ್ತಿ ಪಡೆದು, ಪ್ರಾಚಿ ತಮ್ಮ ಕೇಕ್ ವಿನ್ಯಾಸಗಳಲ್ಲಿ ಇವುಗಳನ್ನು ಅಳವಡಿಸಿಕೊಂಡಿದ್ದಾರೆ. ನಾನು ಯಾವಾಗಲೂ ವಿಕ್ಟೋರಿಯನ್ ಮತ್ತು ಯುರೋಪಿಯನ್ ವಾಸ್ತುಶೈಲಿಯ ಸೌಂದರ್ಯ ಮತ್ತು ಸೊಬಗುಗಳಿಂದ ಆಕರ್ಷಿತಳಾಗಿದ್ದೆ ಮತ್ತು ಈ ಸ್ಮಾರಕಗಳ ಭವ್ಯತೆಯು ಅದ್ಭುತವಾಗಿದೆ. ನನ್ನ ಕೇಕ್‌ಗಳೊಂದಿಗೆ ಇವುಗಳನ್ನು ಮರುಸೃಷ್ಟಿಸಲು ನಾನು ಇಷ್ಟಪಡುತ್ತೇನೆ ಎಂದು ಪ್ರಾಚಿ ಹೇಳಿದರು.ಭಾರತದ ಅಗ್ರ ರಾಯಲ್ ಐಸಿಂಗ್ ಕಲಾವಿದರಲ್ಲಿಪ್ರಾಚಿ ಒಬ್ಬರಾಗಿದ್ದು, ಈ ಬಿರುದು ಪಡೆಯುವುದು ಸಾಧಾರಣ ಕೆಲಸವಲ್ಲಈ ಸೂಕ್ಷ್ಮ ಕಲೆಗೆ ಹೆಚ್ಚಿನ ಪ್ರಮಾಣದ ತಾಳ್ಮೆ ಮತ್ತು ಕೌಶಲ್ಯಗಳು ಬೇಕಾಗುತ್ತವೆ ಮತ್ತು ಇದು ಪ್ರಪಂಚದಾದ್ಯಂತ ಬಹಳ ಸೀಮಿತವಾದ ವಾಣಿಜ್ಯ ಯಶಸ್ಸನ್ನು ಕಂಡುಕೊಳ್ಳುತ್ತದೆ .

Latest Videos
Follow Us:
Download App:
  • android
  • ios