Asianet Suvarna News Asianet Suvarna News

X`mas Here I Come: ಟೇಸ್ಟೀ ಕ್ರಿಸ್ಮಸ್ ಪ್ಲಮ್ ಕೇಕ್ ಹೀಗೆ ಮಾಡಿ

ಕೇಕ್(Cake) ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಬರ್ತ್ ಡೇ(Birthday), ಆನಿವರ್ಸರಿ, ಪ್ರಮೋಶನ್ ಹೀಗೆ ಹಲವು ನೆಪದಲ್ಲಿ ಕೇಕ್ ಮಾಡಿ ಎಲ್ಲರೂ ತಿನ್ತಾರೆ. ಕ್ರಿಸ್ ಮಸ್(Christmas), ನ್ಯೂ ಇಯರ್ ಬಂತು ಅಂದ್ರೆ ಕಲರ್ ಫುಲ್‍ ಕೇಕ್ ಗಳ ಸೇಲ್ ಫುಲ್ ಜೋರು. ಹಾಗಿದ್ರೆ, ಕ್ರಿಸ್ ಮಸ್‍ಗೆ ಮನೆಯಲ್ಲೇ ಸಿಂಪಲ್ ಆಗಿ ಕೇಕ್ ಮಾಡೋಕೆ ಟ್ರೈ ಮಾಡಿದ್ರೆ ಹೇಗೆ..

Plum Cake recipe for Christmas Eve,  try this one
Author
Bengaluru, First Published Dec 12, 2021, 10:13 AM IST

ಕ್ರಿಸ್ ಮಸ್(Christmas) ಹಾಗೂ ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ಕ್ರಿಸ್ ಮಸ್ ಹಬ್ಬ ಬಂತು ಎಂದಾಗ ಎಲ್ಲರಿಗೂ ಸಾಂತಾಕ್ಲಾಸ್(Santa Claus), ಕ್ರಿಸ್ ಮಸ್ ಟ್ರೀ(Christmas Tree), ಗಿಫ್ಟ್(Gift)ಗಳು ನೆನಪಾಗೋದು ಸಹಜ. ಆದರೆ ಎಲ್ಲಕ್ಕಿಂತಲೂ ಹೆಚ್ಚಾಗಿ ಕ್ರಿಸ್ ಮಸ್ ಎಂದಾಗ ಥಟ್ಟಂತ ನೆನಪಾಗೋದು ಪ್ಲಮ್ ಕೇಕ್(Plum Cake). ಆ ಟೈಮ್ ನಲ್ಲಿ ಮಾಲ್, ಬೇಕರಿಗಳಲ್ಲಿ ಸಹ ರುಚಿಕರವಾದ ಪ್ಲಮ್ ಕೇಕ್ ಗಳು ಸಿದ್ಧಗೊಳ್ಳುತ್ತವೆ. ಹೆಚ್ಚು ಡ್ರೈ ಫ್ರೂಟ್ಸ್(Dry Fruits)ಗಳನ್ನು ಒಳಗೊಂಡಿರುವ ಕೇಕ್ ನೋಡೋದಕ್ಕೆ ಅಟ್ರ್ಯಾಕ್ಟಿವ್ ಆಗಿರೋ ಕಾರಣ ಜನರು ಮುಗಿಬಿದ್ದು ಖರೀದಿಸುತ್ತಾರೆ. 

ಆದರೆ ಹೊರಗಿನಿಂದ ತಂದಿರೋ ಕೇಕ್(Cake) ಬೇಡ, ಮನೆಯಲ್ಲಿ ಮಾಡಿದ್ರೆ ಚೆನ್ನಾಗಿರ್ತಿತ್ತು ಅನ್ನೋರು ಇದ್ದಾರೆ. ಅಂಥವರು ಮನೆಯಲ್ಲಿಯೇ ಸಾಂಪ್ರದಾಯಿಕ ಪ್ಲಮ್ ಕೇಕ್ ತಯಾರಿಸಬಹುದು. ಹಾಗಿದ್ರೆ ಸಿಂಪಲ್ ಮತ್ತು ಟೇಸ್ಟೀ(Tasty) ಪ್ಲಮ್ ಕೇಕ್ ತಯಾರಿಸುವುದು ಹೇಗೆ..?ಕೇಕ್ ತಯಾರಿಸುವ ಸಂದರ್ಭ ಗಮನಿಸಬೇಕಾದ ಹಲವು ವಿಚಾರಗಳ ಬಗ್ಗೆ ತಿಳಿದುಕೊಳ್ಳೋಣ..

Eggless Sponge cake: ಮೊಟ್ಟೆ ಬದಲು ಇವನ್ನು ಬಳಸಿ ಮಾಡಿ ಸಾಫ್ಟ್ ಕೇಕ್‌!

ಪ್ಲಮ್ ಕೇಕ್ ಅನ್ನು ಬೇಯಿಸುವ ಮೊದಲು, ಅದರಲ್ಲಿ ಬಳಸಲಾಗುವ ತಾಜಾ ಹಣ್ಣುಗಳು ಮತ್ತು ಒಣ ಹಣ್ಣುಗಳನ್ನು ಅಲ್ಕೋಹಾಲ್(Alcohol)ನಲ್ಲಿ ನೆನೆಸಲಾಗುತ್ತದೆ. ಈ ರೀತಿ ಡ್ರೈ ಫ್ರೂಟ್ಸ್ ಗಳನ್ನು ಅಲ್ಕೋಹಾಲ್ ನಲ್ಲಿ ಎಷ್ಟು ಸಮಯ ನೆನೆಸುತ್ತೇವೆ ಅನ್ನೋದು ಮುಖ್ಯವಾಗುತ್ತದೆ. ಹಣ್ಣುಗಳನ್ನು ಹೆಚ್ಚು ಸಮಯ ಅಲ್ಕೋಹಾಲ್ ನಲ್ಲಿ ನೆನೆಸಿದಷ್ಟೂ ಕೇಕ್ ಹೆಚ್ಚು ಮೃದುವಾಗುತ್ತದೆ ಮತ್ತು ರುಚಿಕರವಾಗುತ್ತದೆ.

ಸ್ವಾದಿಷ್ಟಕರ ಪ್ಲಮ್ ಕೇಕ್ ಮಾಡಲು, ಮೊದಲು ಸುಮಾರು 500 ಗ್ರಾಂ ಒಣ ಹಣ್ಣುಗಳನ್ನು ತೆಗೆದುಕೊಂಡು ಅವುಗಳನ್ನು ರಮ್ ಅಥವಾ ಬ್ರಾಂಡಿಯಲ್ಲಿ ನೆನೆಸಿಡಬೇಕು. ಅಥವಾ  ವಿಸ್ಕಿಗೆ ಸ್ಪಲ್ಪ ಏಲಕ್ಕಿಯನ್ನು ಸೇರಿಸಿಟ್ಟು ಡ್ರೈ ಫ್ರೂಟ್ಸ್ ಗಳನ್ನು ನೆನೆಸಿಡಬಹುದು.

ಕೇಕ್ ತಿನ್ನೋಂದ್ರಿಂದಾನೂ ಪ್ರಯೋಜನಗಳಿವೆ ಅನ್ನೋದು ಗೊತ್ತಾ?

ಕೇಕ್’ಗೆ ಬಳಸುವ ಒಣಹಣ್ಣುಗಳಲ್ಲಿ ಖರ್ಜೂರ, ಬಾದಾಮಿ, ಅಂಜೂರ, ಒಣದ್ರಾಕ್ಷಿ, ವಾಲ್ನಟ್, ಚೆರ್ರಿಗಳು, ಕ್ರ್ಯಾನ್‌ಬೆರಿಗಳು ಒಳಗೊಂಡಿರಬೇಕು. ಎಲ್ಲಾ ಒಣ ಹಣ್ಣುಗಳನ್ನು ನುಣ್ಣಗೆ ಕತ್ತರಿಸಿ ಜಾರ್ ನಲ್ಲಿ ಮಿಕ್ಸ್ ಮಾಡಿಕೊಳ್ಳಬೇಕು. ಪಾಕವಿಧಾನಕ್ಕೆ ಸೇರಿಸಲಾದ ಡ್ರೈ ಫ್ರೂಟ್ಸ್ ಗಳನ್ನು ನಿಮ್ಮ ಆಯ್ಕೆ ಮತ್ತು ಆದ್ಯತೆಗೆ ಅನುಗುಣವಾಗಿ ಬದಲಾಯಿಸಿಕೊಳ್ಳಬಹುದು. ಇದಕ್ಕೆ ನಿಮ್ಮ ನೆಚ್ಚಿನ ಅಲ್ಕೋಹಾಲ್ ಅನ್ನು ಸುರಿಯಬೇಕು. ನಂತರ ಇದಕ್ಕೆ ಕೆಲವು ಕಿತ್ತಳೆ ಸಿಪ್ಪೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

ಜಾರ್ ಅನ್ನು ಗಟ್ಟಿಯಾಗಿ ಮುಚ್ಚಿ ಇದನ್ನು ತೇವಾಂಶವಿಲ್ಲದ ರೂಮಿನಲ್ಲಿ ಇರಿಸಬೇಕು. ಈ ರೀತಿ ಒಣ ಹಣ್ಣುಗಳನ್ನು ಸುಮಾರು ಎರಡು ವಾರಗಳ ವರೆಗೆ ಅಲ್ಕೋಹಾಲ್ ನಲ್ಲಿ ನೆನೆಸಬೇಕು. ಈ ನಡುವೆ ಆಗೊಮ್ಮೆ ಈಗೊಮ್ಮೆ ಇದರಲ್ಲಿ ಅಲ್ಕೋಹಾಲ್ ಪ್ರಮಾಣ ಕಡಿಮೆಯಾಗುತ್ತಿದೆಯಾ ಎಂಬುದನ್ನು ಗಮನಿಸಿ ಹೆಚ್ಚು ಸೇರಿಸಿಕೊಳ್ಳಬಹುದು.

ಅಲ್ಕೋಹಾಲ್ ನ ಘಾಟನ್ನು ಇಷ್ಟಪಡದವರು ಪ್ಲಮ್ ಕೇಕ್ ತಯಾರಿಸುವ ಸಂದರ್ಭದಲ್ಲಿ ಹಣ್ಣುಗಳನ್ನು ಅಲ್ಕೋಹಾಲ್ ನಲ್ಲಿ ನೆನೆಸಿಡುವ ಬದಲು ಕಿತ್ತಳೆ ರಸ ಅಥವಾ ದ್ರಾಕ್ಷಿ ರಸದಲ್ಲಿ ನೆನೆಸಿಡಬಹುದು. ಅಥವಾ ಚೆರ್ರಿ ಸಿರಪ್ ಅನ್ನು ಸೇರಿಸುವುದರಿಂದಲೂ ಕೇಕ್ ಹೆಚ್ಚು ರುಚಿಕರವಾಗಿ ಸಿದ್ಧಗೊಳ್ಳುತ್ತದೆ. ಆದರೆ, ಇದನ್ನು ಸೇರಿಸುವುದು ಕಡ್ಡಾಯವೇನಲ್ಲ. ಪ್ಲಮ್ ಕೇಕ್ ಡ್ರೈ ಆಗಿರಲಿ ಎಂದು ಬಯಸಿದಲ್ಲಿ ಮಾತ್ರ ನೀವು ಚೆರ್ರಿ ಸಿರಪ್(Cheri Syrup) ಅನ್ನು ಸೇರಿಸಿಕೊಳ್ಳಬಹುದು. ಇಲ್ಲವಾದಲ್ಲಿ ಅಗತ್ಯವಿಲ್ಲ.

ಸಿಂಪಲ್, ಟೇಸ್ಟಿ ಕೇಕ್ ರೆಸಿಪಿ ಇಲ್ಲಿದೆ....

ಕ್ರಿಸ್ ಮಸ್ ಅಥವಾ ನ್ಯೂ ಇಯರ್ ಗೆ ಮೊದಲು ವಾರಗಳ ಮುಂಚಿತವಾಗಿ ನೀವು ಕೇಕ್ ತಯಾರಿಸಿಟ್ಟಲ್ಲಿ ಟೇಸ್ಟೀ ಕೇಕ್ ಸಿದ್ಧಗೊಳ್ಳುತ್ತದೆ. ಸಿಂಪಲ್ ಆಂಡ್ ಟೇಸ್ಟಿಯಾದ ಪ್ಲಮ್ ಕೇಕ್ ನ್ನು ನೀವು ಈ ರೀತಿ ಮನೆಯಲ್ಲಿಯೇ ಸಿದ್ಧಪಡಿಸಬಹುದು.

ಪ್ಲಮ್ ಕೇಕ್ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಮೈದಾ-1 ಕಪ್
ಡ್ರೈ ಫ್ರೂಟ್ಸ್ ಅಗತ್ಯವಿರುವಷ್ಟು
ಬೇಕಿಂಗ್ ಪೌಡರ್ ½ ಟೀ ಸ್ಪೂನ್
ವೆನಿಲ್ಲಾ ಎಸೆನ್ಸ್-3/4 ಡ್ರಾಪ್ಸ್
ಮೊಟ್ಟೆ-3
ಬೆಣ್ಣೆ-1/2 ಕಪ್
ಲಿಂಬೆ ತಿರುಳಿನ ಹುಡಿ- 1 ಟೀ ಸ್ಪೂನ್
ಚೆರ್ರಿ-ಅಲಂಕಾರಕ್ಕಾಗಿ

ಮಾಡುವ ವಿಧಾನ:

ಓವನ್(Oven) ಅನ್ನು 160 ಡಿಗ್ರಿ ಉಷ್ಣತೆಯಲ್ಲಿ ಬಿಸಿ ಮಾಡಿ. ಮೈದಾ ಹಾಗೂ ಬೇಕಿಂಗ್ ಪೌಡರ್(Baking Powder)ನ್ನು ಜರಡಿ ಹಿಡಿದು ಸಿದ್ಧಪಡಿಸಿಟ್ಟುಕೊಳ್ಳಿ. ಡ್ರೈಫ್ರೂಟ್ಸ್ ಗಳನ್ನು ಳನ್ನು ಕತ್ತರಿಸಿ ಚೆನ್ನಾಗಿ ಮಿಕ್ಸ್ ಮಾಡಿಟ್ಟುಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಬೆಣ್ಣೆ, ವೆನಿಲ್ಲಾ ಎಸೆನ್ಸ್, ಮೊಟ್ಟೆ, ಲಿಂಬೆ ತಿರುಳಿನ ಹುಡಿಯನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಇದಕ್ಕೆ ಮೈದಾ ಹಾಗೂ ಬೇಕಿಂಗ್ ಪೌಡರ್ ಅನ್ನು ನಿಧಾನವಾಗಿ ಸೇರಿಸಿಕೊಂಡು ಮಿಕ್ಸ್ ಮಾಡುತ್ತಾ ಹೋಗಿ. ಇದಕ್ಕೆ ಡ್ರೈ ಫ್ರೂಟ್ಸ್ ಸೇರಿಸಿ ಪಾಕ ಹದಕ್ಕೆ ಬಂದ ನಂತರ ಬಟರ್(Butter)ನೊಂದಿಗೆ ಕೇಕ್ ಟಿನ್ ಅನ್ನು ಗ್ರೀಸ್ ಮಾಡಿ ಈ ಮಿಶ್ರಣವನ್ನು ಅದಕ್ಕೆ ಹಾಕಿ. ಸುಮಾರು 15ರಿಂದ 20 ನಿಮಿಷಗಳ ಕಾಲ ಓವನ್ ನಲ್ಲಿ ಬೇಯಿಸಿ ಆರಲು ಬಿಡಿ. ಕೇಕ್ ನ ಮೇಲೆ ಚೆರ್ರಿಯನ್ನುಇಟ್ಟು ಅಲಂಕರಿಸಿ. ಈಗ ರುಚಿಯಾದ ಪ್ಲಮ್ ಕೇಕ್ ಸವಿಯಲು ಸಿದ್ಧ.

Follow Us:
Download App:
  • android
  • ios