Asianet Suvarna News Asianet Suvarna News

ಈ ಹೋಟೆಲ್‌ಗಳಲ್ಲಿ 3 ರೂಪಾಯಿಗೆ ಸಿಗುತ್ತೆ ಹೊಟ್ಟೆ ತುಂಬಾ ಊಟ!

ಒಂದು ರೂಪಾಯಿಗೆ ಒಂದು ಚಾಕೋಲೇಟ್ ಸಿಗದ ಕಾಲ ಇದು. ಹೊಟೇಲ್ ಗೆ ಹೋದ್ರೆ ಐದು ನೂರರಿಂದ ಸಾವಿರ ರೂಪಾಯಿ ಖರ್ಚಾಗುತ್ತದೆ. ಆದ್ರೆ ಅತೀ ಕಡಿಮೆ ಬೆಲೆಗೆ ಊಟವನ್ನೇ ನೀಡುವ ಹೋಟೆಲ್ ಪರಿಚಯ ಇಲ್ಲಿದೆ.
 

Pice Hotels And Hotel In Kolkata Serves Food For Three Rupees roo
Author
First Published Oct 31, 2023, 2:26 PM IST

ಹಿಂದೆ ಬ್ರಿಟೀಷರ ಆಳ್ವಿಕೆಯಲ್ಲಿ ಭಾರತದ ರಾಜಧಾನಿಯಾಗಿದ್ದ ಕೋಲ್ಕತ್ತಾ ಅನೇಕ ಗತವೈಭವವನ್ನು ಹೊಂದಿದೆ. ಬ್ರಿಟೀಷರ ಆಳ್ವಿಕೆಯ ಸಮಯದಲ್ಲಿ ಇದು ಭಾರತದ ಭದ್ರಕೋಟೆಯೂ ಆಗಿತ್ತು. ಕೋಲ್ಕತ್ತಾದಲ್ಲಿ ಹಳೆಯ ಕಾಲದ ಆಕರ್ಷಕ ಕಟ್ಟಡಗಳು, ಅಂಗಡಿಗಳು ಹಾಗೂ ಹೊಟೆಲ್ ಗಳನ್ನು ನಾವು ಕಾಣಬಹುದು. ಇಂತಹ ಹತ್ತು ಹಲವು ವೈಶಿಷ್ಟ್ಯಗಳಲ್ಲಿ ಕೋಲ್ಕತ್ತಾದ ಪೀಸ್ ಹೊಟೆಲ್ ಗಳೂ ಒಂದಾಗಿದೆ. 

ಕೋಲ್ಕತ್ತಾ (Kolkata) ದ ಈ ಹೋಟೆಲ್ (Hotel) ಗಳಲ್ಲಿ ಕಡಿಮೆ ಬೆಲೆಗೆ ರುಚಿಯಾದ ಊಟ :  ಈಗ ಕಾಳು - ಬೇಳೆ ಮುಂತಾದ ದಿನಸಿಗಳ ಬೆಲೆ ಹಾಗೂ ತರಕಾರಿಗಳ ಬೆಲೆ ಸಾಕಷ್ಟು ಏರಿಕೆಯಾಗಿದೆ. ಇದರ ಜೊತೆಗೆ ಕೂಲಿ ಕಾರ್ಮಿಕರ ತೊಂದರೆ ಹಾಗೂ ಅವರ ಸಂಬಳ ಎಲ್ಲವನ್ನೂ ನಿಭಾಯಿಸೋದು ಹೋಟೆಲ್ ಮಾಲೀಕರಿಗೆ ಕಷ್ಟ. ಹಾಗಾಗಿಯೇ ಹೋಟೆಲ್ ಆಹಾರದ ಬೆಲೆಯಲ್ಲಿ ಏರಿಕೆಯಾಗಿದೆ. ಹೋಟೆಲ್ ನಲ್ಲಿ ಕಾಫಿ, ಟೀ ಅಥವಾ ಸ್ನ್ಯಾಕ್ಸ್ ತಿನ್ನೋದು ಜನಸಾಮಾನ್ಯರಿಗೆ ಕಷ್ಟವಾಗಿದೆ. ಪ್ರತಿಯೊಂದು ವಸ್ತುವಿನ ಬೆಲೆಯೂ ಈ ರೀತಿ ಏರಿಕೆಯಾಗಿರುವ ಸಮಯದಲ್ಲಿ ಒಂದು ಹೋಟೆಲ್ ನಲ್ಲಿ ಕೇವಲ 3 ರೂಪಾಯಿಗೆ ಹೊಟ್ಟೆ ತುಂಬ ಊಟ ಸಿಗುತ್ತೆ ಅಂದ್ರೆ ನೀವು ನಂಬ್ತೀರಾ…? ನಂಬಲೇಬೇಕು. ಯಾಕಂದ್ರೆ ಕೋಲ್ಕತ್ತಾದ ಪೀಸ್ ಹೋಟೆಲ್ ನಲ್ಲಿ ದಿನವೊಂದಕ್ಕೆ ಅನೇಕ ಮಂದಿ ಕೇವಲ 3 ರೂಪಾಯಿಗೆ ಊಟ ಮಾಡಿ ಹೊಟ್ಟೆ ತುಂಬಿಸಿಕೊಳ್ತಾರೆ.

ಲಕ್ನೋದ ಪ್ರಸಿದ್ಧ ತುಂಡೆ ಕಬಾಬ್ ಪರಿಚಯಿಸಿದ Dr. Bro, ಬಾಲಿವುಡ್ ಸ್ಟಾರ್ಸ್ಗೆ ಇಷ್ಟವಿದು, ಏನಿದರ ಸ್ಪೆಷಲ್?

ಕೋಲ್ಕತ್ತಾದ ಹೋಟೆಲ್ ಸಿದ್ದೇಶ್ವರಿ ಆಶ್ರಮ್ :  ಹಿಂದೆ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಅನೇಕ ಹೊಟೆಲ್ ಗಳು ಪ್ರವಾಸಿಗರಿಗೆ ಹಾಗೂ ವಲಸೆ ಬಂದವರಿಗೆ ಅತೀ ಕಡಿಮೆ ಬೆಲೆಯಲ್ಲಿ ಊಟ ನೀಡುತ್ತಿದ್ದವು. ಈಗ ಅವುಗಳ ಪೈಕಿ ಕೆಲವೇ ಕೆಲವು ಹೋಟೆಲ್ ಗಳು ಮಾತ್ರ ಉಳಿದಿವೆ. ಕೋಲ್ಕತ್ತಾದ ಸರ್ ಸ್ಟುವರ್ಟ್ ಹಾಗ್ ಮಾರ್ಕೆಟ್ ಬಳಿ ಇರುವ ಹೋಟೆಲ್ ಸಿದ್ದೇಶ್ವರಿ ಆಶ್ರಮ್ ದಲ್ಲಿ  ಕಡಿಮೆ ಬೆಲೆಗೆ ಊಟ ಸಿಗುತ್ತದೆ. ಈ ಹೋಟೆಲ್ ಅನ್ನು 1928ರಲ್ಲಿ ಖುದಿರಾಮ್ ಸರ್ಕಾರ್ ಎನ್ನುವ ವ್ಯಕ್ತಿ ಸ್ಥಾಪಿಸಿದ ಎಂದು ಹೇಳಲಾಗುತ್ತದೆ. ಅಂದಿನಿಂದ ಇಲ್ಲಿಯವರೆಗೂ ಈ ಹೋಟೆಲ್ ಬಡ ಕೂಲಿ ಕಾರ್ಮಿಕರಿಂದ ಹಿಡಿದು ದೊಡ್ಡ ದೊಡ್ಡ ಕಚೇರಿಗಳಲ್ಲಿ ಕೆಲಸ ಮಾಡುವವರಿಗೂ ಊಟ ಕೊಡುತ್ತಿದೆ. ಹೋಟೆಲ್ ಸಿದ್ದೇಶ್ವರಿ ‘ಕೋಬಿರಾಜಿ ಜೋಲ್” ಎಂಬ ತಿಂಡಿಗೆ ಬಹಳ ಫೇಮಸ್ ಆಗಿದೆ. ಇದು ಬಾಳೆಹಣ್ಣು, ಆಲೂಗಡ್ಡೆ, ಪಪ್ಪಾಯಿಗಳನ್ನು ಬಳಸಿ ತಯಾರಿಸುವ ಮೀನಿನ ಖಾದ್ಯವಾಗಿದೆ. ಇದಕ್ಕೆ ಬಹಳ ಕಡಿಮೆ ಎಣ್ಣೆಯನ್ನು ಬಳಸಲಾಗುತ್ತದೆ. ಇದರ ಹೊರತಾಗಿ ಇನ್ನೂ ಅನೇಕ ಮೀನಿನ ಖಾದ್ಯಗಳು ಇಲ್ಲಿ ಸಿಗುತ್ತವೆ. ಇಲ್ಲಿ ಸಿಗುವ ವಿವಿಧ ರೀತಿಯ ಚಟ್ನಿಗಳು  ಬಹಳ ಪ್ರಸಿದ್ಧವಾಗಿದೆ.

ಟೊಮೆಟೊದ ಈ ಭಾಗ ವಿಷ… ತಿನ್ನುವಾಗ ಈ ತಪ್ಪು ಮಾಡಿದ್ರೆ ಅನಾರೋಗ್ಯ ಕಾಡುತ್ತೆ!

ಸ್ವಾಧೀನ ಭಾರತ ಹಿಂದೂ ಹೋಟೆಲ್  : ಸ್ವಾಧೀನ ಭಾರತ ಹಿಂದೂ ಹೋಟೆಲ್ ಕೂಡ ಕೋಲ್ಕತ್ತಾದ ಪೀಸ್ ಹೋಟೆಲ್ ಗಳಲ್ಲಿ ಒಂದು. ಇದು ಕೋಲ್ಕತ್ತಾದ ಕಾಲೇಜ್ ಸ್ಟ್ರೀಟ್ ನಲ್ಲಿದೆ. ಈ ಹೋಟೆಲ್ ಕೂಡ 1927ರಲ್ಲೇ ಆರಂಭವಾಗಿದೆ. ಇದನ್ನು ಮನ್ ಗೋಬಿಂಡೊ ಪೊಂಡಾ ಎನ್ನುವನೊಬ್ಬ ಸ್ಥಾಪಿಸಿದ್ದ. ಈ ಹೋಟೆಲ್ ನಲ್ಲಿ 28 ರೀತಿಯ ಶುದ್ಧ ಶಾಖಾಹಾರಿ ಊಟ ಸಿಗುತ್ತದೆ. 

ಜಗನ್ನಾಥ ಆಶ್ರಮ ಹೋಟೆಲ್ : 1952ರಲ್ಲಿ ಆರಂಭವಾದ ಈ ಹೋಟೆಲ್ ಕೋಲ್ಕತ್ತಾದ ಕಾಲೇಜ್ ಸ್ಟ್ರೀಟ್ ನಲ್ಲಿದೆ. ಇಲ್ಲಿ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಊಟ ಸವಿಯುತ್ತಾರೆ.

ಪರ್ಬತಿ ಹೋಟೆಲ್ :  ಕೋಲ್ಕತ್ತಾದ ಜಾದೂ ಬಾಬುರ್ ಪೇಟೆಯಲ್ಲಿರುವ ಈ ಹೋಟೆಲ್ 1960ರಲ್ಲಿ ಆರಂಭವಾಗಿದೆ. ಅಂದಿನಿಂದ ಇಂದಿನ ತನಕವೂ ಈ ಹೋಟೆಲ್ ಕಡಿಮೆ ಬೆಲೆಗೆ ರುಚಿಕರ ಭೋಜನವನ್ನು ನೀಡುತ್ತಿದೆ. ಈ ಪೀಸ್ ಹೋಟೆಲ್ ಮೀನು ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ.
 

Follow Us:
Download App:
  • android
  • ios