ಕಂಗನಾ ರನೌತ್ ತಿಂದ ನಮ್ಮ ಕರಾವಳಿಯ ಫುಡ್‌ ಯಾವ್ದು ಗೊತ್ತಾ?

ಕರಾವಳಿ ಅದರಲ್ಲೂ ದಕ್ಷಿಣ ಕನ್ನಡ, ಉಡುಪಿ ಕಡೆ ಬಹಳ ಫೇಮಸ್ ಆಗಿರೋ ಈ ತಿನಿಸನ್ನು ಉತ್ತರ ಭಾರತದಲ್ಲೂ ತಯಾರಿಸುತ್ತಾರೆ. ಅದಕ್ಕೆ ಪತ್ರೊಡೆ ಅಂತಾರೆ ಅನ್ನೋದು ಹೆಚ್ಚಿನವರಿಗೆ ಗೊತ್ತಾದದ್ದು ಕಂಗನಾ ಅವರ ಈ ಪೋಸ್ಟ್ ನೋಡಿದ ಮೇಲೆ. ತನ್ನ ಪೋಸ್ಟ್ ಜೊತೆಗೆ ಕೆಸುವಿನ ಎಲೆ, ಪತ್ರೊಡೆಯ ಫೋಟೋವನ್ನೂ ಪೋಸ್ಟ್ ಮಾಡಿದ್ದಾರೆ.

Pathrode recipe as told by Kangana Ranaut

‘ಇವತ್ತು ಅಮ್ಮ ನನ್ನ ಫೇವರಿಟ್ ಪತ್ರೊಡೆ ಮಾಡಿದ್ರು. ಕೆಸುವಿನ ಎಲೆ ಮೇಲೆ ಕಡಲೆ ಬೇಳೆ ಪೇಸ್ಟ್, ಜೊತೆಗೆ ಹರ್ಬ್‌ಗಳು. ಇವುಗಳನ್ನು ಹಬೆಯಲ್ಲಿ ಬೇಯಿಸಿ ಆಮೇಲೆ ತವಾದಲ್ಲಿ ತುಪ್ಪ ಹಾಕಿ ಫ್ರೈ ಮಾಡ್ಬೇಕು. ಏನ್ ಟೇಸ್ಟ್ ಗೊತ್ತಾ?’ 
ಇದು ಯಾವ್ದೋ ಕುಕ್ಕರಿ ಶೋನಲ್ಲಿ ಯಾರೋ ಹೇಳಿದ ಮಾತಲ್ಲ. ಬಾಲಿವುಡ್ ಕ್ವೀನ್ ಕಂಗನಾ ರಾನೌತ್ ಟ್ವೀಟ್ ಮಾಡಿದ್ದು. ಕರಾವಳಿ ಅದರಲ್ಲೂ ದಕ್ಷಿಣ ಕನ್ನಡ, ಉಡುಪಿ ಕಡೆ ಬಹಳ ಫೇಮಸ್ ಆಗಿರೋ ಈ ತಿನಿಸನ್ನು ಉತ್ತರ ಭಾರತದಲ್ಲೂ ತಯಾರಿಸುತ್ತಾರೆ. ಅದಕ್ಕೆ ಪತ್ರೊಡೆ ಅಂತಾರೆ ಅನ್ನೋದು ಹೆಚ್ಚಿನವರಿಗೆ ಗೊತ್ತಾದದ್ದು ಕಂಗನಾ ಅವರ ಈ ಪೋಸ್ಟ್ ನೋಡಿದ ಮೇಲೆ. ತನ್ನ ಪೋಸ್ಟ್ ಜೊತೆಗೆ ಕೆಸುವಿನ ಎಲೆ, ಪತ್ರೊಡೆಯ ಫೋಟೋವನ್ನೂ ಪೋಸ್ಟ್ ಮಾಡಿದ್ದಾರೆ. ಡಿಟ್ಟೋ ನಮ್ ಪತ್ರೊಡೆನೇ!

ತನ್ನಮ್ಮ ಮಾಡೋ ಈ ರೆಸಿಪಿ ತನಗೆ ಭಲೇ ಪಸಂದು ಅಂತ ಕಂಗನಾ ಹೇಳ್ತಿದ್ರೆ ಕೆಲವ್ರು ಕಂಗನಾ ಅಮ್ಮ ಏನಾದ್ರೂ ದಕ್ಷಿಣ ಭಾರತ ಮೂಲದವರಿರಬಹುದಾ ಅಂತ ಹುಡುಕಿದ್ದೇ ಹುಡುಕಿದ್ದು. ಆದರೆ ಆ ಬಗೆಯ ವಿವರಗಳು ಸಿಗದ ಕಾರಣ, ಜೊತೆಗೆ ಅವರು ಮಾಡಿದ ರೆಸಿಪಿ ನಮ್ಮ ಪತ್ರೊಡೆ ರೆಸಿಪಿಗಿಂತ ತುಸು ಭಿನ್ನವಾಗಿದ್ದ ಕಾರಣ ಅವರು ನಮ್ಮೂರ ಕಡೆಯವರಲ್ಲ ಅನ್ನೋದು ಗೊತ್ತಾಯ್ತು.  ಕಂಗನಾ ತಾಯಿ ಆಶಾ ಸ್ಕೂಲ್ ಟೀಚರ್. ತನ್ನ ಕುಡುಕ ಗಂಡನಿಂದ ಸಾಕಷ್ಟು ನೋವು ಅನುಭವಿಸಿದವರು. ಸದ್ಯಕ್ಕೀಗ ಮಗಳ ಜೊತೆಗೆ ಖುಷಿಯಿಂದ ದಿನ ಕಳೆಯುತ್ತಿದ್ದಾರೆ. ಜೊತೆಗೆ ಮಗಳ ಆರೈಕೆಯನ್ನೂ ಮಾಡುತ್ತಿದ್ದಾರೆ. ಸದ್ಯಕ್ಕ ಮಗಳಿಗೆ ಬಲು ಪ್ರಿಯವಾದ ಪತ್ರೊಡೆಯನ್ನು ತಯಾರಿಸಿ ಮಗಳ ಕೈಯಿಂದ ಮತ್ತಷ್ಟು ಮುದ್ದು ಮಾಡಿಸಿಕೊಂಡಿದ್ದಾರೆ.  ಇದನ್ನೋದಿದ ಮೇಲೆ ನಿಮಗೂ ಪತ್ರೊಡೆ ತಿನ್ನಬೇಕು ಅನ್ನೋ ಆಸೆಯಾದ್ರೆ ಮಜಬೂತಾದ ಪತ್ರೊಡೆ ರೆಸಿಪಿ ಇಲ್ಲಿದೆ.

 

 

ರುಚಿ ರುಚಿ ಪತ್ರೊಡೆ
ಬೇಕಾಗುವ ಸಾಮಗ್ರಿ : ದೊಡ್ಡದಾಗಿದ್ದರೆ 20, ಚಿಕ್ಕದಾಗಿದ್ರೆ 25 ಕೆಸುವಿನ ಎಲೆ, ದೋಸೆ ಅಕ್ಕಿ ೫೦೦ ಗ್ರಾಮ್, ಒಂದು ದೊಡ್ಡ ಕಪ್ ತೆಂಗಿನ ತುರಿ, 5 ಚಮಚ ಧನಿಯಾ ಕಾಳು, ೧೦ ಅಥವಾ ಹೆಚ್ಚು. ಖಾರ ಬೇಕು ಅಂದ್ರೆ ೧೨ ಬ್ಯಾಡಗಿ ಮೆಣಸು, ಕಾಲು ಕಪ್ ಬೆಲ್ಲದ ಪುಡಿ, ನಿಂಬೆ ಗಾತ್ರದ ಹುಣಸೇ ಹಣ್ಣು, ರುಚಿಗೆ ತಕ್ಕಷ್ಟು ಉಪ್ಪು. ಜೊತೆಗೆ ಕರಿಯಲು ತುಪ್ಪ.

ಪಾರಿಜಾತ ಪುರಾಣ; ಆರೋಗ್ಯಕ್ಕೆ ರಾಮಬಾಣ 

ಮಾಡುವ ವಿಧಾನ
- ಸಂಜೆ ಪತ್ರೊಡೆ ಮಾಡೋದಿದ್ರೆ ಬೆಳಗ್ಗೆ ಅಕ್ಕಿ ನೆನೆ ಹಾಕಿ.
- ಶುರುವಿಗೆ ಬ್ಯಾಡಗಿ ಮೆಣಸು, ಬೆಲ್ಲ, ಹುಣಸೇ ಹಣ್ಣು, ಧನಿಯಾ, ತೆಂಗಿನ ತುರಿ ಹಾಕಿ ನೀರು ಕಡಿಮೆ ಹಾಕಿ ಗಟ್ಟಿಯಾಗಿ ರುಬ್ಬಿ. ಬಳಿಕ ಇದಕ್ಕೆ ಅಕ್ಕಿ, ಉಪ್ಪು ಸೇರಿಸಿ ಇನ್ನೊಮ್ಮೆ ರುಬ್ಬಿ.
- ಹಿಟ್ಟು ದಪ್ಪಗಿರಬೇಕು. ದೋಸೆ ಹಿಟ್ಟಿಗಿಂತಲೂ ದಪ್ಪಗೆ. ಹಾಗಾಗಿ ನೀರು ಹೆಚ್ಚು ಸೇರಿಸಬೇಕು. ರುಬ್ಬಲು ಬೇಕಾದಷ್ಟೇ ಹಾಕಿ.
- ಈಗ ಕೆಸುವಿನೆಲೆಗಳನ್ನು ಚೆನ್ನಾಗಿ ತೊಳೆದು ಒರೆಸಿ. ಕೆಸುವಿನೆಲೆ ಕಟ್ ಮಾಡುವಾಗ ಕೈಗೆ ಅದರ ದಂಟಿನ ರಸ ತಾಗಿದ್ರೆ ಅಥವಾ ಬಟ್ಟೆಗೆ ತಾಗಿದ್ರೆ ಕಲೆಯಾಗುತ್ತೆ. ಕೈಯನ್ನು ಕೊಬ್ಬರಿ ಎಣ್ಣೆಯಲ್ಲಿ ತಿಕ್ಕಿ ಬಳಿಕ ತೊಳೆದರೆ ಸರಿಯಾಗುತ್ತೆ. ಆದರೆ ಬಟ್ಟೆಗೆ ತಾಗಿದ್ರೆ ಬೇಗ ಹೋಗಲ್ಲ. ಹೀಗಾಗಿ ಸ್ವಲ್ಪ ಎಚ್ಚರಿಕೆಯಲ್ಲಿ ಮ್ಯಾನೇಜ್ ಮಾಡಬೇಕು.

ಸೇವಿಸುವ ಆಹಾರಕ್ಕೂ ಮನಸಿಗೂ ಸಂಬಂಧವಿದೆ: ಒತ್ತಡ ನಿವಾರಿಸೋ ಆಹಾರಗಳಿವು 
- ಕೆಸುವಿನೆಲೆ ಹಿಂಭಾಗದ ನಾರುಗಳನ್ನು ತೆಗೆಯಿರಿ. ಎಲೆ ಎಲ್ಲೂ ಹರಿಯದಂತೆ ಎಚ್ಚರಿಕೆ ವಹಿಸಿ, ಹರಿದರೆ ಪತ್ರೊಡೆ ಚೆನ್ನಾಗಾಗಲ್ಲ.
- ಈಗ ಎಲೆಯನ್ನು ನೀಟಾಗಿ ಹರಡಿ ಅದರ ಹಿಂಭಾಗಕ್ಕೆ ರೆಡಿ ಮಾಡಿಕೊಂಡ ಹಿಟ್ಟನ್ನು ತೆಳ್ಳಗೆ ಹಚ್ಚಿ. ಈಗ ಈ ಎಲೆ ಮೇಲೆ ಇನ್ನೊಂದು ಎಲೆ ಇಡಿ. ಅದರ ಮುಂಭಾಗಕ್ಕೆ ಹಿಟ್ಟನ್ನು ತೆಳ್ಳಗೆ ಹಚ್ಚಿ. ಇದರ ಮೇಲೆ ಇನ್ನೊಂದು ಎಲೆ ಇಡಿ. ಅದಕ್ಕೂ ಹೀಗೇ ಹಿಟ್ಟು ಹಚ್ಚಿ.
- ಬಳಿಕ ಎಲೆಯ ಬದಿಯನ್ನು ಒಳಭಾಗಕ್ಕೆ ಮಡಚಿ ಅದರ ಮೇಲೆ ಹಿಟ್ಟು ಹಚ್ಚಿ.
- ಹಾಸಿಗೆ ಮಡಚಿದಂತೆ ಮಡಚಿ, ಒಂದೊಂದು ಫೋಲ್ಡ್ ಗೂ ಹಿಟ್ಟು ಹಚ್ಚುತ್ತಾ ಬನ್ನಿ. ಕೊನೆಯಲ್ಲಿ ಮುಂಭಾಗ ಹಿಂಭಾಗಕ್ಕೂ ಹಿಟ್ಟು ಸವರಿ.
- ಹೀಗೆ ಮೂರು ಮೂರು ಎಲೆಗಳನ್ನು ಒಟ್ಟೊಟ್ಟಿಗೆ ಮಡಚಿ ಹಬೆಯಲ್ಲಿ ಅರ್ಧ ಗಂಟೆ ಬೇಯಿಸಿ.
- ಬಳಿಕ ಇದನ್ನು ನೀಟಾಗಿ ಕಟ್ ಮಾಡ್ಕೊಂಡು ಬೇಕಿದ್ರೆ ತವಾ ಮೇಲೆ ತುಪ್ಪದಲ್ಲಿ ಕೆಂಪಗೆ ಫ್ರೈ ಮಾಡ್ಕೊಂಡು ಕಾಯಿ ಚಟ್ನಿ ಜೊತೆಗೆ ತಿನ್ನಿ. 

ಅನ್ನ‌ ಸಾರು, ಮಿಡಿ ಉಪ್ಪಿನಕಾಯಿ ನನ್ನ ಫೇವರೆಟ್ ಅಂತಾರೆ ದೀಪಿಕಾ 

Latest Videos
Follow Us:
Download App:
  • android
  • ios