ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರದಂತೆ ತಡೆಯಲು ಮಹಿಳೆಯೊಬ್ಬರು ಬಳಸಿದ ವಿಶಿಷ್ಟ ಟೆಕ್ನಿಕ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 

ಇತ್ತೀಚಿನ ದಿನಗಳಲ್ಲಿ ಹಳ್ಳಿಯ ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಎಂಥ ಸಂಚಲನ ಸೃಷ್ಟಿಸಿದ್ದಾರೆಂದರೆ ಜನರು "ಇಂಜಿನಿಯರಿಂಗ್ ಕಾಲೇಜುಗಳು ಅವರಿಂದ ಸಲಹೆ ಪಡೆಯಬೇಕು!" ಎಂದು ಹೇಳುತ್ತಿದ್ದಾರೆ. ಯಾಕೆ ಅಂತೀರಾ?, ಈರುಳ್ಳಿ ಕತ್ತರಿಸುವಾಗ ಮಹಿಳೆ ಕಣ್ಣೀರು ಬರದಂತೆ ಅಳವಡಿಸಿಕೊಂಡ ಟೆಕ್ನಿಕ್ ಈಗ ವೈರಲ್ ಆಗಿದೆ. ಅದರಲ್ಲೂ ಬಳಕೆದಾರರ ಪ್ರತಿಕ್ರಿಯೆ ನೋಡಿದರೆ ನೀವು ಬಿದ್ದು ಬಿದ್ದು ನಗಲು ಪ್ರಾರಂಭಿಸುತ್ತೀರಿ.

ಈರುಳ್ಳಿ ಕತ್ತರಿಸಲು ಅದ್ಭುತ ಉಪಾಯ
ವಿಡಿಯೋದಲ್ಲಿ, ಹಳ್ಳಿಯ ಓರ್ವ ಮಹಿಳೆ ತನ್ನ ಅಂಗಳದಲ್ಲಿರುವ ತೆರೆದ ಅಡುಗೆಮನೆಯಲ್ಲಿ ಕುಳಿತು ಈರುಳ್ಳಿ ಕತ್ತರಿಸುತ್ತಿರುವುದನ್ನು ಕಾಣಬಹುದು. ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವುದು ಈಗ ಸಾಮಾನ್ಯ ಸಮಸ್ಯೆಯಾಗಿದೆ, ಆದರೆ ಇದನ್ನು ತಪ್ಪಿಸಲು ಮಹಿಳೆ ಕಂಡುಕೊಂಡ ಮಾರ್ಗವು ಯಾವುದೇ ವೈಜ್ಞಾನಿಕ ಆವಿಷ್ಕಾರಕ್ಕಿಂತ ಕಡಿಮೆಯಿಲ್ಲ. ಹೌದು, ಮಹಿಳೆ ತನ್ನ ತಲೆಯ ಮೇಲೆ ಸೆರಗು ಹಾಕಿಕೊಂಡಿದ್ದಾರೆ. ಆ ನಂತರ ಎಚ್ಚರಿಕೆಯಿಂದ ತನ್ನ ಕಣ್ಣುಗಳ ಮೇಲೆ ಅಗಲವಾದ ಪಾರದರ್ಶಕ ಟೇಪ್ ಅನ್ನು ಅಂಟಿಸಿಕೊಂಡಿದ್ದಾರೆ. ಇದು ಅವರ ಹಣೆ ಮತ್ತು ಕಣ್ಣುಗಳನ್ನು ಸಂಪೂರ್ಣವಾಗಿ ಆವರಿಸುತ್ತದೆ. ಕುತೂಹಲಕಾರಿ ವಿಷಯವೆಂದರೆ ಅದೇ ಟೇಪ್ ಮಹಿಳೆಯ ಪಲ್ಲುವಿಗೆ ಸಹ ಅಂಟಿಕೊಂಡಿದ್ದು, ಅವರ ಜುಗಾಡ್ ಟೆಕ್ನಿಕ್ ಅನ್ನು ಇನ್ನಷ್ಟು ಮಸ್ತ್ ಆಗಿದೆ.

ಬಳಕೆದಾರರ ಪ್ರತಿಕ್ರಿಯೆ
ಈ ದೇಶೀಯ ತಂತ್ರಜ್ಞಾನವನ್ನು ನೋಡಿದ ಜನರು ತಮ್ಮ ನಗುವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಕೆಲವರು "ನಾಸಾ ಜನರು ಆಂಟಿಯಿಂದ ಕಲಿಯಬೇಕು" ಎಂದು ಹೇಳಿದರೆ, ಮತ್ತೆ ಕೆಲವರು "ಇದು ಭಾರತದ ನಿಜವಾದ ಬುದ್ಧಿಶಕ್ತಿ", “ಈ ಜುಗಾಡ್ ಭಾರತದಿಂದ ಹೊರಗೆ ಹೋಗಬಾರದು”, "ಇದು ಡಿಜಿಟಲ್ ಇಂಡಿಯಾ. ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ. ಮೊದಲು ಅಂತಹ ತಂತ್ರಜ್ಞಾನ ಇರಲಿಲ್ಲ. ಈಗ ಹೊಸ ತಂತ್ರಜ್ಞಾನಗಳು ಭಾರತಕ್ಕೆ ಬರುತ್ತಿವೆ" ಎಂದಿದ್ದಾರೆ. ಹಾಗೆಯೇ ಡೊನಾಲ್ಡ್ ಟ್ರಂಪ್ ಅವರನ್ನೂ ಈ ವಿಷಯದಲ್ಲಿ ಎಳೆದಿದ್ದಾರೆ. "ಈ ಸುದ್ದಿ ಅಮೆರಿಕಕ್ಕೆ ತಿಳಿದರೆ, ಟ್ರಂಪ್ ಅಂಕಲ್ ವಿಶ್ವಯುದ್ಧವನ್ನೇ ಆರಂಭಿಸುತ್ತಾರೆ", "ಇಂತಹ ಜನರು ಮಾತ್ರ ಭಾರತದಲ್ಲಿ ಜನಿಸುತ್ತಾರೆ". ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

Scroll to load tweet…

ವಿಡಿಯೋದಲ್ಲಿ ಮಹಿಳೆ ಒಂದೇ ಒಂದು ಹನಿ ಕಣ್ಣೀರು ಸುರಿಸದೆ, ಈರುಳ್ಳಿಯನ್ನು ಬಹಳ ಸುಲಭವಾಗಿ ಕತ್ತರಿಸುವುದನ್ನು ಕಾಣಬಹುದು. ಈಗ ಎಷ್ಟು ಬೇಕೋ ಅಷ್ಟು ಕತ್ತರಿಸಿಬಹುದು ಎಂದು ಮನಸ್ಸಿನಲ್ಲಿ ಹೇಳುತ್ತಿರುವಂತೆ ಆಕೆಯ ಮುಖದಲ್ಲಿ ಸಂತೃಪ್ತ ನಗು ಕಾಣುತ್ತಿದೆ. ಇಷ್ಟೇ ಅಲ್ಲ, ಹಿನ್ನೆಲೆಯಲ್ಲಿ ಹಳ್ಳಿಯ ಅಡುಗೆಮನೆಯ ಗದ್ದಲ, ದೇಸಿ ಶೈಲಿ ಮತ್ತು ಮಹಿಳೆಯ ಆತ್ಮವಿಶ್ವಾಸದ ದೇಹಭಾಷೆ ಇಡೀ ವಾತಾವರಣವನ್ನು ವಿಡಿಯೋದಲ್ಲಿ ಹೆಚ್ಚು ಮೋಜಿನಿಂದ ಕೂಡಿಸಿದೆ.

ಕೋಪಗೊಂಡ ಗೂಳಿ
ಇದು ಮತ್ತೊಂದು ವಿಡಿಯೋ. ಇದರಲ್ಲಿ ಗೂಳಿ ಜನರ ಮೇಲೆ ದಾಳಿ ಮಾಡಿ ಇಡೀ ಸಮಾರಂಭವನ್ನೇ ಹಾಳು ಮಾಡಿರುವುದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈಗ ಬಳಕೆದಾರರು ವಿಡಿಯೋಗೆ ಸಂಬಂಧಿಸಿದಂತೆ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

Scroll to load tweet…

ಆಗಿದ್ದೇನು?
ವಿಡಿಯೋದಲ್ಲಿ ಉದ್ಯಾನದಲ್ಲಿ ವೇದಿಕೆಯ ಮೇಲೆ ಮ್ಯೂಸಿಕ್ ಬ್ಯಾಂಡ್ ಪ್ರದರ್ಶನ ನೀಡುವುದನ್ನು ತೋರಿಸಲಾಗಿದೆ. ಜನರು ಚಪ್ಪಾಳೆ ತಟ್ಟುತ್ತಾ ನೃತ್ಯ ಮಾಡುತ್ತಿದ್ದಾರೆ. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿರುತ್ತದೆ. ಆದರೆ ಅಲ್ಲಿಯೇ ನಿಂತಿದ್ದ ಒಂದು ದೊಡ್ಡ ಬಿಳಿ ಗೂಳಿ ಇದ್ದಕ್ಕಿದ್ದಂತೆ ಚಂಗನೆ ಹಾರುತ್ತದೆ. ಅದಕ್ಕೆ ಹಾಡುಗಳೆಂದರೆ ಅಲರ್ಜಿ ಇರುವಂತೆ ಕಾಣುತ್ತಿದೆ. ಸ್ವಲ್ಪ ಹೊತ್ತು ಸೈಲೆಂಟಾಗಿ ನಿಂತಿರುತ್ತದೆ. ಆದರೆ ಬ್ಯಾಂಡ್‌ನ ಸಂಗೀತವು ಹೆಚ್ಚಾದ ತಕ್ಷಣ ವೇದಿಕೆಯನ್ನು ಏರಿ ಗಲಾಟೆ ಮಾಡಿದೆ. ಈ ದೃಶ್ಯ ನೋಡಿದರೆ ಗಿಟಾರ್, ಡ್ರಮ್ಸ್ ಮತ್ತು ಸ್ಪೀಕರ್‌ಗಳು ಹಾರುತ್ತಿರುವಂತೆ ಕಾಣುತ್ತದೆ. ಇಲ್ಲಿಯವರೆಗೆ ನುಡಿಸುವುದರಲ್ಲಿ ಮಗ್ನರಾಗಿದ್ದ ಬ್ಯಾಂಡ್ ಸದಸ್ಯರು ಇದ್ದಕ್ಕಿದ್ದಂತೆ ಲಯ ತಪ್ಪಿದ್ದಾರೆ. ಕೆಲವರು ಡ್ರಮ್‌ಗಳನ್ನು ಬಿಟ್ಟು ಓಡಿಹೋಗಿದ್ದಾರೆ. ಕೆಲವರು ಸ್ಪೀಕರ್‌ಗಳ ಹಿಂದೆ ಅಡಗಿಕೊಂಡಿದ್ದಾರೆ. ಮತ್ತೆ ಕೆಲವರು ಇದು ಕನಸೋ ಎಂದು ಇನ್ನೂ ಯೋಚಿಸುತ್ತಿರಬಹುದು. ಒಟ್ಟಾರೆ ಆ ಗೂಳಿ ಇಡೀ ವೇದಿಕೆಯನ್ನೇ ಆಕ್ರಮಿಸಿದೆ.

ವಿಡಿಯೋಗೆ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದು, ಈ ಎರಡೂ ವಿಡಿಯೋ ಸದ್ಯ ಇನ್‌ಸ್ಟಾಗ್ರಾಮ್ ರೀಲ್ಸ್ ಜಗತ್ತಿನಲ್ಲಿ 'ವೈರಲ್' ಆಗಲು ಬೇಕಾದ ಎಲ್ಲಾ ಅಂಶಗಳನ್ನು ಹೊಂದಿದೆ.