ದೋಸೆ ಅಂದ್ರೆ ಅನೇಕರು ಬಾಯಿ ಬಾಯಿ ಬಿಡ್ತಾರೆ. ದಕ್ಷಿಣ ಭಾರತೀಯರಿಗೆ ಇದು ಕಾಮನ್ ಆದ್ರೂ ಉತ್ತರ ಭಾರತದ ಜನರಿಗೆ ದೋಸೆ ಅಪರೂಪ. ಈ ದೋಸೆ ತಿನ್ನೋದು ಮಾತ್ರವಲ್ಲ ಅದನ್ನು ಉಚ್ಚರಿಸೋದು ಕೂಡ ಸದಾ ಚರ್ಚೆಯಾಗ್ತಿರುತ್ತದೆ.
ದಕ್ಷಿಣ ಭಾರತೀಯರ ಇಷ್ಟದ ಆಹಾರಗಳಲ್ಲಿ ದೋಸೆ, ಇಡ್ಲಿ ಮೊದಲ ಸ್ಥಾನದಲ್ಲಿದೆ. ಅನೇಕರಿಗೆ ಪ್ರತಿ ದಿನ ದೋಸೆ ತಿಂದ್ರೂ ಬೇಸರ ಬರೋದಿಲ್ಲ. ದೋಸೆಗೆ ಚಟ್ನಿ, ಬಾಜಿ ಹೀಗೆ ವೆರೈಟಿ ಖಾದ್ಯ ತಯಾರಿಸಿಕೊಂಡು ಸೇವನೆ ಮಾಡಿದ್ರೆ ಅದ್ರ ಮಜವೇ ಬೇರೆ. ಬೆಳಿಗ್ಗೆ ಉಪಹಾರಕ್ಕೆ ದೋಸೆ ತಿಂದ್ರೆ ಇಡೀ ದಿನ ಆರಾಮವಾಗಿರಬಹುದು ಎನ್ನುವವರಿದ್ದಾರೆ.
ದೋಸೆ (Dosa) ಯಲ್ಲಿ ಸಾಕಷ್ಟು ವರೈಟಿ ಇದೆ. ರಾಗಿ ದೋಸೆ, ಅಕ್ಕಿ ದೋಸೆ, ಗೋಧಿ ದೋಸೆ, ಮಸಾಲಾ ದೋಸೆ ಹೀಗೆ ಬೇರೆ ಬೇರೆ ತರಹದ ದೋಸೆಗಳನ್ನು ನಾವು ಸಿದ್ಧಪಡಿಸಬಹುದು. ಸಾಮಾಜಿಕ ಜಾಲತಾಣ (Social Network) ದಲ್ಲಿ ದೋಸೆ ಹೇಗೆ ತಯಾರಿಸ್ಬೇಕು ಎನ್ನುವ ರೆಸಿಪಿಗಳು ಸಾಕಷ್ಟು ಸಿಗುತ್ವೆ. ಹಾಗೆಯೇ ಎಲ್ಲೆಲ್ಲಿ ರುಚಿಯಾದ ದೋಸೆ ತಯಾರಿಸ್ತಾರೆ ಎಂಬ ಬಗ್ಗೆಯೂ ಅನೇಕ ವಿಡಿಯೋ (Video) ಗಳನ್ನು ನಾವು ನೋಡ್ಬಹುದು. ಸಂಡೆ ಬಂದ್ರೆ ವೆರೈಟಿ ದೋಸೆ ಹುಡುಕಿಕೊಂಡು ಹೋಗುವ ಜನರಿದ್ದಾರೆ. ದಕ್ಷಿಣ ಭಾರತದಲ್ಲಿ ಅನೇಕರ ಜೀವನಕ್ಕೆ ದೋಸೆ ಆಧಾರವಾಗಿದೆ. ಬೀದಿ ಬದಿಯಲ್ಲಿಯೂ ನೀವು 101 ವೆರೈಟಿ ದೋಸೆ, ದೋಸೆ ಕೆಫೆ ಹೀಗೆ ಅನೇಕ ಅಂಗಡಿಗಳನ್ನು ನೋಡ್ಬಹುದು. ಈಗ ಸಾಮಾಜಿಕ ಜಾಲತಾಣದಲ್ಲಿ ನೀನಾ ಗುಪ್ತಾ ದೋಸೆ ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದೆ.
Healthy Food : ಹೀರೆಕಾಯಿ ತಿಂದು ಆರೋಗ್ಯ ಕಾಪಾಡ್ಕೊಳ್ಳಿ
ಟ್ವಿಟರ್ ನಲ್ಲಿ ನೀನಾ ಗುಪ್ತಾ ದೋಸೆ ತಿನ್ನುತ್ತಿರುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅನುಭಾ ಹೆಸರಿನ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಚಿಕ್ಕ ಕ್ಲಿಪ್ ನಲ್ಲಿ ನೀನಾ ಗುಪ್ತಾ ದೋಸೆ ತಿನ್ನುತ್ತಿರುವುದನ್ನು ನೋಡಬಹುದು. ಜೀವನದಲ್ಲಿ ಇಡ್ಲಿ ದೋಸೆಗೆ ಸಾಟಿ ಇಲ್ಲ. ಅನೇಕ ದಿನಗಳ ನಂತ್ರ ದೋಸಾ ತಿನ್ನುತ್ತಿದ್ದೇನೆ ಎಂದು ನೀನಾ ಗುಪ್ತಾ ಹೇಳಿದ್ದಾರೆ. ನೀನಾ ದೋಸೆಗೆ ಆಲೂಗಡ್ಡೆ ಪಲ್ಯ ಹಾಗೂ ಬಾಜಿ ಸೇವನೆ ಮಾಡ್ತಿರೋದನ್ನು ನೀವು ನೋಡ್ಬಹುದು.
ನೀನಾ ಗುಪ್ತಾ ದೋಸೆ ಹೆಸರನ್ನು ಸರಿಯಾಗಿ ಉಚ್ಚಾರ ಮಾಡ್ತಿದ್ದಾರೆ ನೀವ್ಯಾಕೆ ತಡೆಯುತ್ತೀರಿ? ಇದೇ ಕಾರಣಕ್ಕೆ ರಾಣಿ ಇವರು ಎಂದು ಅನುಭಾ ಶೀರ್ಷಿಕೆ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನೀನಾ ಗುಪ್ತಾರ ಈ ವಿಡಿಯೋ ವೈರಲ್ ಆಗಿದೆ. 31.4 ಸಾವಿರಕ್ಕೂ ಹೆಚ್ಚು ಬಾರಿ ಈ ವಿಡಿಯೋವನ್ನು ವೀಕ್ಷಣೆ ಮಾಡಲಾಗಿದೆ.
Health Tips: ಮಕ್ಕಳ ಶಕ್ತಿ ಹೆಚ್ಚಿಸಲು ಅಪ್ಪಿತಪ್ಪಿಯೂ ಇದನ್ನು ನೀಡ್ಬೇಡಿ
ದೋಸ್ತ್ಯಾ, ದೊಸಾಯ್,ದೋಷಾ, ದೋಸಾ, ದ್ವಾಸೆ ಹೀಗೆ ಯಾವುದೇ ಡಿ ಪದವನ್ನು ಉಚ್ಚರಿಸಿ. ಆದ್ರೆ ಡಿ ದಿಂದ ಬರುವ ಡೋಂಕಿ ಪದವನ್ನು ಬಳಸಬೇಡಿ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.
ಈ ಸೌಂಡ್ ರೆಡಿಕ್ಯುಲಸ್ ಆಗಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಅದು ದೋಸೆ ಕಂಡ್ರೋ ದೋಸಾ ಅಲ್ಲ. ಮಂಕ್ ಮೂದೇವಿಗಳು ಅಂತ ಇನ್ನೊಬ್ಬರು ಕನ್ನಡದಲ್ಲಿ ಕಮೆಂಟ್ ಮಾಡಿದ್ದಾರೆ. ದೋಸಾ ಅನ್ನೋದು ಪಂಜಾಬಿ ಉಚ್ಚಾರವೆಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ದೋಸೆ, ದೋಸಾ ಬಗ್ಗೆಯೇ ಅನೇಕರು ಇದ್ರಲ್ಲಿ ಚರ್ಚೆ ನಡೆಸಿದ್ದಾರೆ.
ನೀನಾ ಗುಪ್ತಾ ಹಿಂದಿ ಚಿತ್ರರಂಗದಲ್ಲಿ ಯಶಸ್ವಿ ನಟಿ ಮತ್ತು ಚಲನಚಿತ್ರ ನಿರ್ದೇಶಕಿ ಮತ್ತು ನಿರ್ಮಾಪಕಿಯಾಗಿದ್ದಾರೆ. ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಮೂರು ಫಿಲ್‌್ಾಫೇರ್ ಪ್ರಶಸ್ತಿಗಳು ಮತ್ತು ಎರಡು ಸ್ಕ್ರೀನ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈಗಲೂ ಯಂಗ್ ಆಗಿ ಕಾಣುವ ನೀನಾ ಗುಪ್ತಾ ತಮ್ಮ ಅಭಿನಯದಿಂದ ಅಭಿಮಾನಿಗಳ ಮನಸ್ಸು ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಗಾಯಕ ಬೆನ್ನಿ ದಯಾಳ್ ದೋಸೆ ವಿಡಿಯೋ ವೈರಲ್ ಆಗಿತ್ತು. ಚಂಡಿಗಡದಲ್ಲಿ ದೋಸಂ ಎಂಬ ಹೊಟೇಲ್ ಗೆ ಹೋಗಿದ್ದ ಅವರು ಪೋಸ್ಟ್ ಮಾಡಿದ್ದ ವಿಡಿಯೋ ಬಗ್ಗೆ ಅನೇಕರು ಚರ್ಚೆ ನಡೆಸಿದ್ದರು.
