National Sandwich Day: ಜಂಕ್‌ಫುಡ್ ಸೈಡಿಗಿಡಿ, ಹೆಲ್ದೀ ಸ್ಯಾಂಡ್‌ವಿಚ್ ತಿನ್ನಿ
ಸಿಕ್ಕಾಪಟ್ಟೆ ಹಸಿವು..ಸಿಂಪಲ್ ಆಗಿ ಥಟ್ಟಂತ ಏನಾದ್ರೂ ಫುಡ್ ರೆಡಿ ಮಾಡ್ಬೇಕು, ಹಾಗೆಯೇ ಹೆಲ್ದೀಯಾಗಿರ್ಬೇಕು. ಈ ರೀತಿಯಾದಾಗ ನೀವು ಸುಲಭವಾಗಿ ಮಾಡಬಹುದಾದ ಸ್ಯಾಂಡ್‌ವಿಚ್ ರೆಸಿಪಿಗಳನ್ನು ಟ್ರೈ ಮಾಡ್ಬೋದು. ಇದನ್ನು ಬೆಳಗಿನ ಉಪಾಹಾರಕ್ಕಾಗಿ ಅಥವಾ ಸಂಜೆಯ ಸಮಯದಲ್ಲಿ ಸೇವಿಸಬಹುದು.
ಆಧುನಿಕ ಜೀವನಶೈಲಿಯು ನಮ್ಮನ್ನು ವೇಗದ ಮತ್ತು ಒತ್ತಡದ ಜೀವನದಲ್ಲಿ ಸಿಲುಕಿಸಿದೆ. ಸಮಯದ ಕೊರತೆಯು ಯಾವಾಗಲೂ ನಮ್ಮ ದೈನಂದಿನ ಉಪಾಹಾರವನ್ನು ತ್ಯಜಿಸುವಂತೆ ಮಾಡುತ್ತಿದೆ. ಸಂಜೆ ಹಸಿವಾದರೂ ಸ್ನ್ಯಾಕ್ಸ್ ತಯಾರಿಸಲು ಹೆಚ್ಚು ಸಮಯ ಬೇಕು ಅನ್ನೋ ಕಾರಣಕ್ಕೆ ಜಂಕ್‌ಫುಡ್ ತಿನ್ನುವಂತಾಗುತ್ತಿದೆ. ಆದರೆ ಇಂಥಾ ಸಮಯದಲ್ಲಿ ನೀವು ಈಝಿಯಾಗಿ ರೆಡಿ ಮಾಡಬಹುದಾಗಿರುವಂತದ್ದು ಸ್ಯಾಂಡ್‌ವಿಚ್. ಇದು ಸಿಂಪಲ್ ಮತ್ತು ಟೇಸ್ಟೀ ಆಹಾರ. ಸ್ಯಾಂಡ್‌ವಿಚ್ ಡೇ ದಿನವಾದ ಇಂದು ಕೆಲವು ಸಿಂಪಲ್ ಸ್ಯಾಂಡ್‌ವಿಚ್‌ಗಳ ರೆಸಿಪಿ ಇಲ್ಲಿದೆ.
ಬಟಾಣಿ ಮತ್ತು ಆಲೂಗಡ್ಡೆ ಸ್ಯಾಂಡ್‌ವಿಚ್
ಬೇಕಾದ ಪದಾರ್ಥಗಳು
1 ದೊಡ್ಡ ಬೌಲ್ ಬೇಯಿಸಿದ ಬಟಾಣಿ
3 ಬೇಯಿಸಿ, ತುರಿದಿಟ್ಟ ಆಲೂಗಡ್ಡೆ
2 ಕತ್ತರಿಸಿದ ಹಸಿರು ಮೆಣಸಿನಕಾಯಿ
1/4 ಟೀಸ್ಪೂನ್ ಕೊತ್ತಂಬರಿ ಪುಡಿ
1/4 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
2 ಟೀಸ್ಪೂನ್ ಆಲಿವ್ ಎಣ್ಣೆ
6 ಬ್ರೆಡ್
ಬೆಣ್ಣೆ
ನಿಮ್ಮ ರುಚಿಗೆ ತಕ್ಕಂತೆ ಉಪ್ಪು
ಮಾಡುವ ವಿಧಾನ
ಪ್ಯಾನ್ ಬಿಸಿ ಮಾಡಿ,ಇದಕ್ಕೆ ಆಲಿವ್ ಎಣ್ಣೆ ಹಾಕಿಕೊಂಡು, ಹಸಿರು ಮೆಣಸಿನಕಾಯಿಗಳನ್ನು (Green chillies) ಸೇರಿಸಿ ಹುರಿಯಿರಿ. ಇದಕ್ಕೆ ಆಲೂಗಡ್ಡೆ ಸೇರಿಸಿ. ಕರಿಬೇವು, ಬೇಯಿಸಿದ ಬಟಾಣಿ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಮತ್ತು ಉಪ್ಪು ಸೇರಿಸಿ. ಆಲೂಗಡ್ಡೆ (Potato) ಮತ್ತು ಬಟಾಣಿಗಳನ್ನು ಮ್ಯಾಶ್ ಮಾಡಿ ಮತ್ತು ಅವುಗಳನ್ನು ಒಂದೆರಡು ನಿಮಿಷ ಬೇಯಲು ಬಿಡಿ. ಈ ಹೂರಣವನ್ನು ತಣ್ಣಗಾಗಲು ಬಿಡಿ. ಸ್ಪಲ್ಪ ಹೊತ್ತಿನ ನಂತರ ಬ್ರೆಡ್ ಮಧ್ಯೆ ಈ ಫಿಲ್ಲಿಂಗ್ ಸೇರಿಸಿ ತವಾಗೆ ಬೆಣ್ಣೆ (Butter) ಹಾಕಿಕೊಂಡು ಬ್ರೆಡ್ ಎರಡೂ ಬದಿಯಲ್ಲಿ ಚೆನ್ನಾಗಿ ಬಿಸಿ ಮಾಡಿಕೊಳ್ಳಿ. ಅಥವಾ ಸ್ಯಾಂಡ್‌ವಿಚ್ ಮೇಕರ್ ಗೆ ಹಾಕಿ ತೆಗೆಯಬಹುದು.
ಬರೋಬ್ಬರಿ 23 ವರ್ಷದಿಂದ ಸ್ಯಾಂಡ್‌ವಿಚ್ ಬಿಟ್ಟು ಬೇರೇನೂ ತಿಂದೇ ಇಲ್ಲ ಈಕೆ !
ಗ್ರಿಲ್ಡ್ ಚೀಸ್ ಸ್ಯಾಂಡ್‌ವಿಚ್
ಬೇಕಾದ ಪದಾರ್ಥಗಳು
4 ಬ್ರೆಡ್
1 ಟೀ ಸ್ಪೂನ್ ಉಪ್ಪು
1/8 ಟೀಸ್ಪೂನ್ ಕರಿಮೆಣಸಿನ ಪುಡಿ
ಅರ್ಧ ಕಪ್ ತುರಿದ ಚೀಸ್
ಕತ್ತರಿಸಿದ ಕೆಲವು ಹಸಿರು ಮೆಣಸಿನಕಾಯಿಗಳು
ಕೊತ್ತಂಬರಿ ಸೊಪ್ಪು ಸ್ಪಲ್ಪ
ಬೆಣ್ಣೆಯ 1 tbsp.
ಮಾಡುವ ವಿಧಾನ
ಚೀಸ್, ಉಪ್ಪು, ಕರಿಮೆಣಸು, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿಗಳನ್ನು ಮಿಶ್ರಣ ಮಾಡಿ. ಬ್ರೆಡ್‌ಗಳಿಗೆ ಬೆಣ್ಣೆ ಹಾಕಿ. ಅರ್ಧದಷ್ಟು ಚೀಸ್ ಮಿಶ್ರಣಗಳನ್ನು ಎರಡು ಹೋಳುಗಳ ಮೇಲೆ, ಬೆಣ್ಣೆಯಿಲ್ಲದ ಬದಿಯಲ್ಲಿ ಇರಿಸಿ. ಉಳಿದ ಎರಡು ಸ್ಲೈಸ್‌ಗಳನ್ನು, ಮೇಲೆ ಬೆಣ್ಣೆ ಸವರಿದ ಬದಿಯನ್ನು ಮುಚ್ಚಿ. ಗ್ರಿಲ್ ಮಾಡಿ ಬಿಸಿಯಿದ್ದಾಗಲೇ ತಿನ್ನಲು ಚೆನ್ನಾಗಿರುತ್ತದೆ.
ಟೊಮೇಟೊ, ಸೌತೆಕಾಯಿ ಸ್ಯಾಂಡ್‌ವಿಚ್
ಬೇಕಾದ ಪದಾರ್ಥಗಳು
8ರಿಂದ 10 ಬ್ರೆಡ್
1 ಮಧ್ಯಮ ಗಾತ್ರದ ಟೊಮೇಟೊ ತೆಳುವಾಗಿ ಕತ್ತರಿಸಿಟ್ಟುಕೊಳ್ಳಿ
1 ಮಧ್ಯಮ ಗಾತ್ರದ ಸೌತೆಕಾಯಿ ತೆಳುವಾಗಿ ಕತ್ತರಿಸಿ
ಕರಿಮೆಣಸು ಅಥವಾ ಮೆಣಸಿನ ಪುಡಿ
ಸ್ಪಲ್ಪ ಜೀರಿಗೆ ಪುಡಿ
ಅಗತ್ಯವಿರುವಷ್ಟು ಉಪ್ಪು
ಮಾಡುವ ವಿಧಾನ
ತರಕಾರಿ (Vegetable)ಗಳನ್ನು ತಾಜಾ ನೀರನ್ನು ಬಳಸಿ ಕೆಲವು ಬಾರಿ ತೊಳೆಯಿರಿ. ಸೌತೆಕಾಯಿ (Cucumber)ಯನ್ನು ಸಿಪ್ಪೆ ಸುಲಿದು ಸೌತೆಕಾಯಿ ಮತ್ತು ಟೊಮೇಟೊವನ್ನು ನುಣ್ಣಗೆ ನುಣ್ಣಗೆ ತುಂಡು ಮಾಡಿ. ಅವುಗಳನ್ನು ಪಕ್ಕಕ್ಕೆ ಇರಿಸಿ. ನಿಮಗೆ ಇಷ್ಟವಾದಲ್ಲಿ ಬ್ರೆಡ್‌ನ ಅಂಚುಗಳನ್ನು ಟ್ರಿಮ್ ಮಾಡಿ. ಬ್ರೆಡ್ ಚೂರುಗಳ ಮೇಲೆ ಬೆಣ್ಣೆಯನ್ನು ಸಮನಾಗಿ ಹಚ್ಚಿ ಪಕ್ಕಕ್ಕೆ ಇಡಿ. ಬ್ರೆಡ್ ಮೇಲೆ ಟೊಮೆಟೊ ಮತ್ತು ಸೌತೆಕಾಯಿಯ ಚೂರುಗಳನ್ನು ಜೋಡಿಸಿ. 2 ರಿಂದ 3 ಚಿಟಿಕೆ ಕಾಳುಮೆಣಸಿನ ಪುಡಿ (Pepper powder) ಅಥವಾ ಹೊಸದಾಗಿ ರುಬ್ಬಿದ ಮೆಣಸು, ಜೀರಿಗೆ ಪುಡಿ ಮತ್ತು ಉಪ್ಪನ್ನು ಟೊಮೆಟೊ-ಸೌತೆಕಾಯಿ ಚೂರುಗಳ ಮೇಲೆ ಸಿಂಪಡಿಸಿ.
Health Tips : ಮಧ್ಯಾಹ್ನದ ಊಟಕ್ಕೆ ಅಪ್ಪಿತಪ್ಪಿಯೂ ಈ ಆಹಾರ ಸೇವಿಸ್ಬೇಡಿ
ಬೆಣ್ಣೆ ಸವರಿದ ಇನ್ನೊಂದು ಸ್ಲೈಸ್‌ನಿಂದ ಕವರ್ ಮಾಡಿ. ಸರ್ವ್ ಮಾಡುವಾಗ ನೀವು ಸ್ಯಾಂಡ್‌ವಿಚ್‌ಗಳನ್ನು 2 ಅಥವಾ 4 ಭಾಗಗಳಾಗಿ ಕತ್ತರಿಸಬಹುದು. ಇದು 10 ನಿಮಿಷಗಳಿಗಿಂತ ಕಡಿಮೆ ತಯಾರಿಯನ್ನು ತೆಗೆದುಕೊಳ್ಳುವ ಸುಲಭ ಪಾಕವಿಧಾನವಾಗಿದೆ.