ಕಾಸ್ಟ್ಲೀ ದುನಿಯಾ..ಏರ್‌ಪೋರ್ಟ್‌ನಲ್ಲಿ ಮನೆ ಆಹಾರ ಸೇವಿಸಿ ಮಾದರಿಯಾದ ಅಮ್ಮ-ಮಗ!
ಪ್ರಯಾಣ ಮಾಡುವಾಗ ಸಾಮಾನ್ಯವಾಗಿ ಹೆಚ್ಚಿನವರು ಮನೆಯಿಂದಲೇ ಆಹಾರವನ್ನು ತೆಗೆದುಕೊಂಡು ಹೋಗುತ್ತಾರೆ. ಬಸ್ಸು, ರೈಲು ಹೀಗೆ ಎಲ್ಲಾ ಪ್ರಯಾಣದಲ್ಲೂ ಮನೆಯಿಂದ ಆಹಾರ ಕೊಂಡೊಯ್ಯುವ ಅಭ್ಯಾಸ ನೆರವಿಗೆ ಬರುತ್ತದೆ. ಆದರೆ ವಿಮಾನ ನಿಲ್ದಾಣಕ್ಕೆ ಯಾರಾದರೂ ಆಹಾರ ತೆಗೆದುಕೊಂಡು ಹೋಗೋದನ್ನು ನೋಡಿದ್ದೀರಾ ? ಇಲ್ಲ ತಾನೆ..ಹಾಗಿದ್ರೆ ಇಲ್ಲಿ ನೋಡಿ.
ಸುದೀರ್ಘ ಸಮಯಗಳ ಕಾಲ ಟ್ರಾವೆಲ್ ಮಾಡುವುದಾದರೆ ಹೊತ್ತಿಗೆ ಸರಿಯಾಗಿ ಆಹಾರವಂತೂ ಬೇಕೇ ಬೇಕು. ಬಸ್ಸಿನಲ್ಲಿ ಹೋಗುವುದಾದರೆ ನಿಗದಿತ ಸಮಯಕ್ಕೆ ತಿಂಡಿ, ಊಟಕ್ಕೆ ಬಸ್ಸನ್ನು ನಿಲುಗಡೆ ಮಾಡಲಾಗುತ್ತದೆ. ಟ್ರೈನ್‌ನಲ್ಲಿ ಆಹಾರ ದೊರಕುವ ಕಾರಣ ಹಸಿವಾದರೆ ಖರೀದಿಸಿ ತಿನ್ನಬಹುದು. ಹೀಗಿದ್ದೂ ಹೊರಗಡೆ ಆಹಾರದ ಬೆಲೆ ಕಾಸ್ಟ್ಲೀ, ತಿನ್ನೋಕು ರುಚಿಯಾಗಿರುವುದಿಲ್ಲ ಅನ್ನೋ ಕಾರಣ ಹೆಚ್ಚಿನವರು ಮನೆಯಿಂದಲೇ ಆಹಾರವನ್ನು ತೆಗೆದುಕೊಂಡು ಹೋಗುತ್ತಾರೆ. ಮನೆಯ ಆಹಾರವಾದ ಕಾರಣ ಆರೋಗ್ಯ ಹದಗೆಡುವ ಭಯವೂ ಇಲ್ಲ. ಆದರೆ ವಿಮಾನ ನಿಲ್ದಾಣಕ್ಕೆ ಯಾರಾದರೂ ಹೀಗೆ ಆಹಾರ ಪ್ಯಾಕ್ ಮಾಡಿ ತೆಗೆದುಕೊಂಡು ಹೋಗೋದಿಲ್ಲ.
ಪ್ರಯಾಣದ ವಿಧದಲ್ಲಿ ಸ್ಪಲ್ಪ ಕಾಸ್ಟ್ಲೀಯಾಗಿರುವುದು ವಿಮಾನ (Flight) ಪ್ರಯಾಣ. ಇದು ಜನಸಾಮಾನ್ಯರ ಪಾಲಿಗೆ ಸ್ಪಲ್ಪ ಮಟ್ಟಿಗೆ ಹೈಫೈ. ಹೀಗಾಗಿಯೇ ವಿಮಾನ ನಿಲ್ದಾಣಕ್ಕೆ ಆಹಾರ (Food) ಪ್ಯಾಕ್ ಮಾಡಿ ತೆಗೆದುಕೊಂಡು ಹೋಗುವುದಿಲ್ಲ. ಹಾಗೆಂದು ಹೋಗಬಾರದು ಅಂತೇನೂ ಇಲ್ಲ. ಆದರೆ ವಿಮಾನ ನಿಲ್ದಾಣದಲ್ಲಿ ಮನೆಯಿಂದ ತೆಗೆದುಕೊಂಡು ಹೋದ ಆಹಾರವನ್ನು ತಿನ್ನುವುವರನ್ನು ನೋಡೋಕೆ ಸಿಗೋದು ತುಂಬಾ ವಿರಳ. ಆದರೆ ಗೋವಾ ವಿಮಾನ ನಿಲ್ದಾಣದಲ್ಲಿ ತಾಯಿ-ಮಗ ವಿಮಾನ ನಿಲ್ದಾಣದ ಕಾಯುವ ಪ್ರದೇಶದಲ್ಲಿ ಕುಳಿತು ಮನೆಯಲ್ಲಿ ತಯಾರಿಸಿದ ಊಟ ಮಾಡಿರೋದು ಸದ್ಯ ಎಲ್ಲೆಡೆ ವೈರಲ್ ಆಗ್ತಿದೆ.
Valentine's Day : ಬೆಂಗಳೂರು ವಿಮಾನ ನಿಲ್ದಾಣದಿಂದ 17.4 ಮಿಲಿಯನ್ ಗುಲಾಬಿ ಹೂಗಳ ರಫ್ತು
ವಿಮಾನ ನಿಲ್ದಾಣದಲ್ಲಿ ಮನೆಯ ಆಹಾರ ಸೇವಿಸಿದ ತಾಯಿ-ಮಗ
ವಿಮಾನ ನಿಲ್ದಾಣಗಳಲ್ಲಿ ಮಾರಾಟವಾಗುವ ಆಹಾರಕ್ಕೆ ಭಾರೀ ಬೆಲೆಯಿರುತ್ತದೆ. ಗುಣಮಟ್ಟ ಚೆನ್ನಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ಹೀಗಿದ್ದರೂ ಮನೆಯ ಆಹಾರವನ್ನು ಕೊಂಡೊಯ್ದು ಯಾರೂ ಸೇವಿಸುವುದಿಲ್ಲ. ಹೀಗಿರುವಾಗ ಮಧುರ್ ಸಿಂಗ್ ಎಂಬವರು ಮತ್ತು ಅವರ ತಾಯಿ ಇಬ್ಬರೂ ಗೋವಾದ ವಿಮಾನ ನಿಲ್ದಾಣದ ಕಾಯುವ ಪ್ರದೇಶದಲ್ಲಿ ಕುಳಿತು ಮನೆಯಲ್ಲಿ ತಯಾರಿಸಿದ ಆಲೂ ಪರಾಠ ಮತ್ತು ನಿಂಬು ಆಚಾರ್ ಅನ್ನು ಸವಿದರು. ತನ್ನ ತಾಯಿ (Mother)ಯೊಂದಿಗೆ ವಿಮಾನ ನಿಲ್ದಾಣದಲ್ಲಿ ಊಟ ಮಾಡುವ ವೀಡಿಯೊವನ್ನು ಪೋಸ್ಟ್ ಮಾಡಿದ ಮಧುರ್ ಸಿಂಗ್, ನನ್ನ ತಾಯಿ ವಿಮಾನ ನಿಲ್ದಾಣದಲ್ಲಿ ತಿನ್ನಲು ಮನೆಯಿಂದಲೇ ಆಹಾರ ತೆಗೆದುಕೊಂಡು ಬಂದಿದ್ದರು. ಮಧ್ಯಮ ವರ್ಗದವರಿಗೆ ವಿಮಾನಗಳಲ್ಲಿ ಪ್ರಯಾಣ ಮಾಡುವುದು ಸುಲಭವಾಗಿದೆ ಆದರೆ 400 ರೂಪಾಯಿ ಮೌಲ್ಯದ ದೋಸೆ ಮತ್ತು 100 ರೂಪಾಯಿ ಮೌಲ್ಯದ ನೀರಿನ ಬಾಟಲಿಯನ್ನು ಖರೀದಿಸುವ ಸಾಮಾಜಿಕ ಒತ್ತಡ ಇನ್ನೂ ತುಂಬಾ ಹೆಚ್ಚಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ.
ಟ್ವಿಟರ್‌ನಲ್ಲಿ ವೀಡಿಯೋ ವೈರಲ್
ವೈರಲ್ ಆಗಿರೋ ಟ್ವೀಟ್‌ಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ನಮ್ಮನ್ನು ವಿಚಿತ್ರವಾಗಿ (Weird) ನೋಡಿದರು, ಆದರೆ ನಾವು ನಮ್ಮ ಆಹಾರವನ್ನು ಆರಾಮವಾಗಿ ತಿಂದೆವು ಎಂದು ಸಿಂಗ್ ಬರೆದಿದ್ದಾರೆ. ಸಮಾಜವು ಏನು ಹೇಳಬೇಕು ಅಥವಾ ಶಿಫಾರಸು ಮಾಡಬೇಕು ಎಂಬುದನ್ನು ಲೆಕ್ಕಿಸದೆ ತನ್ನ ಖರ್ಚು ಸಾಮರ್ಥ್ಯಗಳ ಪ್ರಕಾರ ಬದುಕಬೇಕು ಎಂದು ಹೇಳುವ ಮೂಲಕ ಬದುಕಬೇಕು ಎಂದು ಮಧುರ್ ಸಿಂಗ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಸಿಂಗ್ ಅವರ ಪೋಸ್ಟ್ ಸಾಕಷ್ಟು ಬೆಂಬಲವನ್ನು ಗಳಿಸಿತು. ಹಲವರು ಏರ್‌ಪೋರ್ಟ್‌ನಲ್ಲಿ ಮನೆಯ ಆಹಾರ ಸೇವಿಸಿರುವ ಸಿಂಗ್ ಕ್ರಮಕ್ಕೆ ಮೆಚ್ಚುಗೆ (Compliment) ಸೂಚಿಸಿದ್ದಾರೆ.
ಫ್ಲೈಟ್‌ನಲ್ಲಿ ಮಕ್ಕಳಿಗೂ ಟಿಕೆಟ್ ಇದ್ಯಪ್ಪಾ ಅಂದ್ರೆ ಮಗುವನ್ನು ಏರ್‌ಪೋರ್ಟ್‌ನಲ್ಲೇ ಬಿಟ್ಹೋದ ಪೋಷಕರು!
ಒಬ್ಬರು 'ನೀವು ಹೇಳಿದ್ದು ಸರಿ. ನಾನು ವಿಮಾನ ನಿಲ್ದಾಣದ ಆಹಾರವನ್ನು ದ್ವೇಷಿಸುತ್ತೇನೆ. ಮನೆಯ ಆಹಾರವನ್ನು ಹೆಚ್ಚು ಇಷ್ಟಪಡುತ್ತೇನೆ' ಎಂದಿದ್ದಾರೆ. ಇನ್ನೊಬ್ಬ ವ್ಯಕ್ತಿ, 'ಇದು ಪರಿಪೂರ್ಣವಾಗಿದೆ. ನಾನು ಬಿಸಿನೆಸ್ ಟೂರ್ ಮಾಡುತ್ತಿರುವಾಗ ಇದನ್ನು ಎಲ್ಲಾ ಸಮಯದಲ್ಲೂ ಮಾಡುತ್ತೇನೆ. ಅದು ಆರೋಗ್ಯಕರವಾದ ಅಭ್ಯಾಸವಾಗಿದೆ' ಎಂದು ತಿಳಿಸಿದ್ದಾರೆ. ಅದೇನೆ ಇರ್ಲಿ, ವಿಮಾನ ನಿಲ್ದಾಣದಲ್ಲಿ ಟಿಪ್‌ಟಾಪ್ ಆಗಿ ಡ್ರೆಸ್ ಮಾಡ್ಕೊಂಡು ಅಲ್ಲಿನ ಕಾಸ್ಟ್ಲೀ ಆಹಾರವನ್ನೇ ಸೇವಿಸಬೇಕು ಅನ್ನೋರ ಮಧ್ಯೆ ಮನೆಯ ಆಹಾರವನ್ನು ಸೇವಿಸಿರೋ ವ್ಯಕ್ತಿಯ ನಡೆ ಮೆಚ್ಚುಗೆಗೆ ಪಾತ್ರವಾಗಿರೋದಂತೂ ನಿಜ.