Food Secret: ಪ್ರಪಂಚದಾದ್ಯಂತ ಜನ್ರು ಅತೀ ಹೆಚ್ಚು ಕದಿಯೋ ಆಹಾರವಿದು !

ಕದಿಯುವುದು ಹಲವರ ವಿಲಕ್ಷಣ ಅಭ್ಯಾಸ. ಹಣ, ಚಿನ್ನ (Gold), ವಸ್ತು ಹೀಗೆ ಏನೇನನ್ನೋ ಕದಿಯುವವರಿದ್ದಾರೆ. ಆಹಾರ (Food)ವನ್ನು ಕದಿಯೋದು ಸಹ ಹಲವರ ಚಾಳಿ. ಹಾಗಿದ್ರೆ ಜನ್ರು ಪ್ರಪಂಚದಾದ್ಯಂತ ಅತಿ ಹೆಚ್ಚಾಗಿ ಕದಿಯೋ ಆಹಾರ ಯಾವುದು ?

Most Stolen Food Across The World

ಅಂಗಡಿಗಳು, ಸೂಪರ್ ಮಾರ್ಕೆಟ್‌ಗಳಲ್ಲಿ ಕದಿಯುವುದು (Stolen)ಹಲವರ ಅಭ್ಯಾಸ. ಖರೀದಿಸಲು ಹಣವಿದ್ದರೂ ಸಣ್ಣ ಪುಟ್ಟ ವಸ್ತುಗಳನ್ನು ಕದಿಯೋ ಚಾಳಿ. ಆಹಾರವನ್ನು ಹೀಗೆ ಕದ್ದು ತೆಗೆದುಕೊಳ್ಳುವವರೂ ಇದ್ದಾರೆ. ಆಹಾರವನ್ನು ಕದಿಯಲು ಹೊರಟ ಮಂದಿ ಹೆಚ್ಚಾಗಿ ಏನನ್ನು ಕದ್ದಿರಬಹುದು ಎಂದು ನೀವು ಊಹಿಸಬಹುದು. ಚಾಕೊಲೇಟ್, ಸ್ನ್ಯಾಕ್ಸ್, ಅಲ್ಕೋಹಾಲ್ ಮೊದಲಾದವು ಆಗಿರಬಹುದು ಎಂದೇ ಎಲ್ಲರೂ ಊಹಿಸುತ್ತಾರೆ. ಆದರೆ, ನಾವು ವಿಶ್ವದ ಅತಿ ಹೆಚ್ಚು ಕದ್ದ ಆಹಾರ (Food)ಗಳ ಪಟ್ಟಿಯನ್ನು ನೋಡಿದರೆ, ಅದರಲ್ಲಿ ಮೊದಲ ಸ್ಥಾನದಲ್ಲಿರುವುದು 'ಚೀಸ್'.

ಚೀಸ್ ಎಂದರೇನು ? 
ಚೀಸ್ (Cheese) ಎಂದರೆ ಘನೀಕೃತ ಮೊಸರು ಎಂದು ಸುಲಭವಾಗಿ ಹೇಳಬಹುದು. ಆದರೆ, ಇದು ಸಂಸ್ಕರಿತ ಡೈರಿ ಉತ್ಪನ್ನವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿದೆ ಎಂದು ಭಾವಿಸಿ ಹಲವರು ಇದನ್ನು ತಿನ್ನುವುದಿಲ್ಲ. ಚೀಸ್ ಹಲವು ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ಅಧ್ಯಯನವೊಂದರ ಪ್ರಕಾರ, ಚೀಸ್‌ನಲ್ಲಿ ಬಟರ್‌ಗಿಂತ ಅಧಿಕ ಪ್ರಮಾಣದಲ್ಲಿ ಪ್ರೊಟೀನ್ ಅಂಶಗಳಿವೆ ಎಂಬುದು ತಿಳಿದುಬಂದಿದೆ. ಅಷ್ಟೇ ಅಲ್ಲ ಕೆಲವೊಂದು ಚೀಸ್ ಗಳು ಪನ್ನೀರ್‌ಗಿಂತಲೂ ಅಧಿಕ ಪ್ರಮಾಣದಲ್ಲಿ ಪ್ರೊಟೀನ್‌ನ್ನು ಹೊಂದಿದೆ ಎಂಬುದು ಅಧ್ಯಯನದಲ್ಲಿ ಸಾಬೀತಾಗಿದೆ. ಬೆಣ್ಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿದ್ದರೆ ಚೀಸ್‌ನಲ್ಲಿ ಅತ್ಯಧಿಕ ಪ್ರಮಾಣದ ಪ್ರೊಟೀನ್ (Protein) ಹಾಗೂ ಕ್ಯಾಲ್ಸಿಯಂನ ಅಂಶವಿದೆ.

Butter vs Cheese: ಬೆಣ್ಣೆ ಅಥವಾ ಚೀಸ್, ಆರೋಗ್ಯಕ್ಕೆ ಯಾವುದು ಉತ್ತಮ

ಅಂಗಡಿಗಳಲ್ಲಿ, ಸೂಪರ್ ಮಾರ್ಕೆಟ್‌ಗಳಲ್ಲಿ ಜನರು ಚೀಸ್ ಕದಿಯುತ್ತಾರೆ. ವಿಚಿತ್ರ ಅಂದ್ರೆ 2016ರಲ್ಲಿ ವಿದೇಶದಲ್ಲಿ ಡಕಾಯಿತರು ಸುಮಾರು 160,000 ಚೀಸ್ ಅನ್ನು ಕದ್ದಿದ್ದಾರೆ. ಈ ಕಳ್ಳರಿಂದ ನಷ್ಟ ಅನುಭವಿಸಿದ ಚೀಸ್ ತಯಾರಕರು ಒಮ್ಮೆ ಈ ಚೀಸ್ ಡಕಾಯಿತರನ್ನು ಹಿಡಿದು ಅವರಿಗೆ ಹಸ್ತಾಂತರಿಸುವ ವ್ಯಕ್ತಿಗೆ ಬಹುಮಾನವನ್ನು ಘೋಷಿಸಿದರು. ನಂತರ ಕಳ್ಳರನ್ನು ಹಿಡಿಯಲಾಯಿತು. ಇದು ವೃತ್ತಿಪರ ಲೂಟಿಯಂತಿದೆ, ಆದರೆ ಗ್ರಾಹಕರು ಆಗಾಗ್ಗೆ ಚೀಸ್ ವೆಜ್‌ಗಳನ್ನು ಹಿಡಿದು ತಮ್ಮ ಶಾಪಿಂಗ್ ಬ್ಯಾಗ್‌ಗಳಲ್ಲಿ ಹಾಕುವ ನಿದರ್ಶನಗಳು ಗಮನಕ್ಕೆ ಬರುವುದಿಲ್ಲ. 

ಚೀಸ್ ಅನ್ನು ಏಕೆ ಕದಿಯುತ್ತಾರೆ ?
ಇಂಗ್ಲೆಂಡ್‌ನಲ್ಲಿ 43 ದೇಶಗಳ 2,50,000 ಚಿಲ್ಲರೆ ಮಾರಾಟ ಮಳಿಗೆಗಳನ್ನು ಪ್ರತಿನಿಧಿಸುವ 1187 ಚಿಲ್ಲರೆ ವ್ಯಾಪಾರಿಗಳನ್ನು ಸಮೀಕ್ಷೆಗೆ ಒಳಪಡಿಸಲಾಯಿತು. ಈ ಸಂಶೋಧನಾ ಕೇಂದ್ರದ ವರದಿಯ ಪ್ರಕಾರ, ಅಂತಿಮವಾಗಿ ಚಾಕೊಲೇಟ್ (Chocolate) ಅಥವಾ ಅಲ್ಕೋಹಾಲ್‌ಗಿಂತ ಚೀಸ್ ಹೆಚ್ಚಿನ ಪ್ರಮಾಣದಲ್ಲಿ ಕದಿಯಲ್ಪಟ್ಟಿದೆ ಎಂದು ತಿಳಿದುಬಂತು.

ಮನೆಗೆ ಪ್ರತಿದಿನ ತರುವ ತುಪ್ಪ, ಹಾಲು, ಪನೀರ್ ಕಲಬೆರಕೆಯೇ? ಹೀಗೆ ಪತ್ತೆ ಮಾಡಿ

ಚೀಸ್, ಜನರು ಅತ್ಯಂತ ಹಂಬಲಿಸುವ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಯಾವುದೇ ಆಹಾರದ ರುಚಿಯನ್ನು ಹೆಚ್ಚು ಮಾಡಲು ಇದನ್ನು ಬಳಸಬಹುದು. ಜನಪ್ರಿಯ ಸುದ್ದಿ ವೆಬ್‌ಸೈಟ್‌ನ ಪ್ರಕಾರ, ಚೀಸ್ ಅನ್ನು ಅಕ್ಷರಶಃ ‘ಕ್ರೇವ್ಡ್’ ಆಹಾರ ವಸ್ತು ಎಂದು ವಿವರಿಸಲಾಗುತ್ತದೆ. ಹೀಗಾಗಿಯೇ ಜನರು ಸ್ಯಾಂಡ್‌ವಿಚ್, ಬರ್ಗರ್, ದೋಸೆ ಮೊದಲಾದವವುಗಳ ಜತೆ ಸೇರಿಸಿ ಇದನ್ನ ತಿನ್ನುತ್ತಾರೆ.

ಜನಸಾಮಾನ್ಯರ ಪಾಲಿಗೆ ಕಾಸ್ಟ್ಲೀ ಚೀಸ್
ಹಾಲಿನ ಉತ್ಪನ್ನಗಳಾದ ಬೆಣ್ಣೆ, ತುಪ್ಪ, ಚೀಸ್ ಮೊದಲಾದವುಗಳು ಸಾಮಾನ್ಯವಾಗಿ ಕಾಸ್ಟ್ಲೀ ಆಗಿರುತ್ತವೆ. ಹೀಗಾಗಿಯೇ ಚೀಸ್‌ನ್ನು ಸಹ ಐಷಾರಾಮಿ ವಸ್ತುವೆಂದು ಪರಿಗಣಿಸಲಾಗುತ್ತದೆ, ಹೆಚ್ಚಿನ ಜನರು ಇದನ್ನು ಪ್ರತಿ ದಿನವೂ ತಿನ್ನುವುದಿಲ್ಲ. ಹಲವು ದೇಶಗಳಲ್ಲಿ ಚೀಸ್ ಅನ್ನೋದು ಇನ್ನೂ ಜನಸಾಮಾನ್ಯರ ಕೈಗೆಟುಕದ ವಸ್ತುವಾಗಿದೆ. ಹೀಗಾಗಿ ಚೀಸ್ ಹೆಚ್ಚು ಕದಿಯಲ್ಪಡುತ್ತದೆ ಮತ್ತು ಕಾಳಸಂತೆಯಲ್ಲಿ ಮಾರಾಟವಾಗುತ್ತದೆ. 

ಅದೇನೆ ಇರ್ಲಿ, ಆದ್ರೆ ಆಹಾರವನ್ನೂ ಕದಿಯುತ್ತಾರೆ ಅನ್ನೋದು ಅಚ್ಚರಿಯಾಗೋ ವಿಷ್ಯಾನೇ ಬಿಡಿ. ಹಾಗಿದ್ರೆ ನಿಮ್ಮ ಮನೇಲಿ ಚೀಸ್ ತಂದಿದ್ರೆ ಕೇರ್ ಫುಲ್ ಆಗಿ ತೆಗೆದಿಡೋದನ್ನು ಮರೀಬೇಡಿ. ಯಾಕಂದ್ರೆ ಚೀಸ್ ಕಳ್ಳರಿದ್ದಾರೆ ಹುಷಾರ್

Latest Videos
Follow Us:
Download App:
  • android
  • ios