ಶ್ರಾವಣ ಮಾಸಕ್ಕೆ ಮೆಕ್‌ಡೊನಾಲ್ಡ್ಸ್ ಸ್ಪೆಷಲ್ ಮೆನ್ಯು, ಬೆಳ್ಳುಳ್ಳಿ-ಈರುಳ್ಳಿ ಇಲ್ಲದ ಬರ್ಗರ್!
ಮೆಕ್‌ಡೊನಾಲ್ಡ್ಸ್ ಇಂಡಿಯಾ ಇತ್ತೀಚೆಗೆ ಶ್ರಾವಣ ಮಾಸಕ್ಕೆ ವಿಶೇಷ ಮೆನ್ಯುವನ್ನು ಪರಿಚಯಿಸಿದೆ. ಇದರಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದ ಮೆಕ್‌ಚೀಸ್ ಬರ್ಗರ್ ಮತ್ತು ಮ್ಯಾಕ್‌ಆಲೂ ಟಿಕ್ಕಿ ಬರ್ಗರ್‌ನಂತಹ ಐಟಂಗಳನ್ನು ಒಳಗೊಂಡಿದೆ.
ಬೆಂಗಳೂರು (ಆ.10): ಶಿವನಿಗೆ ಸಮರ್ಪಿತವಾದ ತಿಂಗಳು ಎನ್ನುವ ಕಾರಣಕ್ಕೆ ಶ್ರಾವಣ ಮಾಸವನ್ನು ಹಿಂದುಗಳು ಪವಿತ್ರ ಮಾಸವೆಂದು ಪರಿಗಣನೆ ಮಾಡುತ್ತಾರೆ. ಈ ಸಮಯದಲ್ಲಿ ಹಲವಾರು ಹಿಂದುಗಳು ಮಾಂಸಾಹಾರ ಸೇವನೆ ಹಾಗೂ ಬಲವಾದ ವಾಸನೆ ಬರುವಂಥ ಈರುಳ್ಳಿ, ಬೆಳ್ಳುಳ್ಳಿ ತಿನ್ನೋದನ್ನು ತ್ಯಜಿಸುತ್ತಾರೆ. ಈಗ ಮನೆಗಳಲ್ಲಿ ಮಾತ್ರವಲ್ಲ ಮೆಕ್‌ಡೊನಾಲ್ಡ್ಸ್ ಇಂಡಿಯಾ ಕೂಡ ಶ್ರಾವಣ ಮಾಸದ ಮೆನ್ಯುವನ್ನು ಪರಿಚಯಿಸುವ ಮೂಲಕ ಗಮನ ಸೆಳೆದಿದೆ. ಇದರಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದ ಮೆಕ್‌ಚೀಸ್ ಬರ್ಗರ್ ಮತ್ತು ಮ್ಯಾಕ್‌ಆಲೂ ಟಿಕ್ಕಿ ಬರ್ಗರ್‌ನಂತಹ ಐಟಂಗಳನ್ನು ಒಳಗೊಂಡಿದೆ. ಫಾಸ್ಟ್‌ಫುಡ್ ಚೈನ್‌ನ ಈ ನಿರ್ಧಾರ ಸೋಶಿಯಲ್ ಮೀಡಿಯಾದಲ್ಲಿ ಗಮನಸೆಳೆದಿದೆ. ಎಲ್ಲರೂ ಈ ನಿರ್ಧಾರವನ್ನು ಧನಾತ್ಮಕವಾಗಿ ತೆಗೆದುಕೊಂಡಿಲ್ಲ. ಹೆಚ್ಚಿನವರು ಮೆಕ್‌ಡೊನಾಲ್ಡ್ಸ್‌ನ ನಿರ್ಧಾರವನ್ನು ಟೀಕೆ ಮಾಡಿದ್ದಾರೆ. ಹೆಚ್ಚಿನವರು ಶ್ರಾವಣ ಮಾಸದ ಸಂದರ್ಭದಲ್ಲಿ ಹೊರಗಡೆ ತಿನ್ನೋದನ್ನ ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಹೇಳಿದ್ದರೆ, ಇನ್ನೂ ಕೆಲವರು ಮೆಕ್‌ಡೊನಾಲ್ಡ್ಸ್‌ನ ಬನ್‌ಗಳನ್ನು ಮೈದಾದಿಂದ ತಯಾರಿಸಲಾಗುತ್ತದೆ. ಇದು ಪವಿತ್ರ ಮಾಸದಲ್ಲಿ ಯೋಗ್ಯ ಆಹಾರವಲ್ಲ ಎಂದಿದ್ದಾರೆ.
ಫುಡ್ ಬ್ಲಾಗರ್ ಈ ಕುರಿತಾಗಿ ಇನ್ಸ್‌ಟಾಗ್ರಾಮ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ. 'ಜೈನರ ಸ್ನೇಹಿಯಾದ ಮೆಕ್‌ಚೀಸ್ ವೆಜ್ ಬರ್ಗರ್ ಅನ್ನೂ ಇವರು ಪರಿಚಯಿಸಿದ್ದಾರೆ. ಇದರಲ್ಲಿ ಬೆಳ್ಳುಳ್ಳಿ, ಈರುಳ್ಳಿಯಂಥ ವಸ್ತುಗಳಿರೋದಿಲ್ಲ. ಅದರೊಂದಿಗೆ ಹೊಸದಾದ ಫ್ಲೇವರಸ್ ಆಫ್ ಇಂಡಿಯಾ ಮೆಕ್‌ಆಲೂ ಟಿಕ್ಕಿ ಕೂಡ ಈರುಳ್ಳಿ ಹಾಗೂ ಬೆಳ್ಳುಳ್ಳಿ ಇಲ್ಲದೆ ತಯಾರಿಸಲಾಗಿದೆ. ಅದರೊಂದಿಗೆ ಶ್ರಾವಣ ಸ್ಪೆಷಲ್ ಊಟವನ್ನು ಮಾಡಿದೆ. ಇದೂ ಕೂಡ ಅದ್ಭುತವಾಗಿತ್ತು. ಅದರೊಂದಿಗೆ ಮೆಕ್‌ಡೊನಾಲ್ಡ್ಸ್‌ನ ಕಿಚನ್ ಟೂರ್ ಕೂಡ ಮಾಡಿದ್ದೇನೆ. ವೆಜ್ ಹಾಗೂ ನಾನ್ ವೆಜ್ ಫುಡ್ ರೆಡಿ ಮಾಡಲು ಸಪರೇಟ್ ಆದ ಸೆಕ್ಷನ್‌ಗಳೇ ಇವೆ..' ಎಂದು ಆಕೆ ಬರೆದುಕೊಂಡಿದ್ದಾರೆ.
ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರ ಪದಾರ್ಥಗಳನ್ನು ತಯಾರಿಸಲು ಮೆಕ್‌ಡೊನಾಲ್ಡ್ಸ್ ಪ್ರತ್ಯೇಕ ಪ್ರದೇಶಗಳನ್ನು ಬಳಸುತ್ತಿದೆ ಎಂದು ಆಹಾರ ಬ್ಲಾಗರ್ ಭರವಸೆ ನೀಡಿದ್ದರೂ, ಇಂಟರ್ನೆಟ್ ಇದರಿಂದ ಖುಷಿಯಾಗಿಲ್ಲ. ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಯೂಸರ್‌ಗಳು "ಸ್ವಲ್ಪ ಸಮಯದ ನಂತರ ಮೆಕ್‌ಡೊನಾಲ್ಡ್ಸ್, ಅವರು ಉಪವಾಸ ಮಾಡುವವರಿಗೆ ಸಾಬುದಾನ ಬರ್ಗರ್‌ಗಳನ್ನು ಮಾರಾಟ ಮಾಡಲು ಪ್ರಾರಂಭಿಸಬಹುದು ಎಂದು ನನಗನಿಸುತ್ತದೆ' ಎಂದಿದ್ದಾರೆ.
ಪವಿತ್ರ ಮಾಸದಲ್ಲಿ ಇಂಥ ಫ್ಯಾನ್ಸಿ ಫುಡ್‌ಗಳನ್ನು ಏಕೆ ತಿನ್ನಬೇಕು. ಕನಿಷ್ಠ ಈ ತಿಂಗಳಲ್ಲಾದರೂ ಮನೆಯಲ್ಲಿನ ಆಹಾರ ಸೇವಿಸಿ ಎಂದು ಇನ್ನೊಬ್ಬರು ಬರೆದಿದ್ದಾರೆ. ಆದರೆ, ಇವರು ನಾನ್‌ವೆಜ್ ಕೂಡ ಇಟಟುಕೊಳ್ಳುತ್ತಾರೆ. ಹೀಗಿದ್ದಾಗ ಮೆಕ್‌ಡೊನಾಲ್ಸ್ಡ್‌ನಲ್ಲಿ ಶ್ರಾವಣ ಸ್ಪೆಷಲ್‌ನ ಐಟಂ ತಿನ್ನೋದಾದರೂ ಹೇಗೆ?' ಎಂದು ಕಾಮೆಂಟ್ ಮಾಡಲಾಗಿದೆ. ಬಹುಶಃ ಮೆಕ್‌ಡೊನಾಲ್ಡ್ಸ್ ಮಾಲೀಕರು ಪಕ್ಕದಲ್ಲೇ ನಿಂತು ನಗುತ್ತಿರಬೇಕು. ಈ ಜನರಿಗೆ ಏನು ಬೇಕಾದರೆ ಸುತ್ತಿ ಕೊಡಿ ಅದನ್ನು ತಿನ್ನುತ್ತಾರೆ ಎಂದು ಅಂದುಕೊಳ್ಳುತ್ತಿರಬಹುದು ಎಂದಿದ್ದಾರೆ.
ದೊಡ್ಡೋರ ಜೊತೆ ಸಹನೆಯಿಂದ ವರ್ತಿಸಿ: ಇಲ್ಲಾಂದ್ರೆ ತಕ್ಕ ಶಾಸ್ತಿ ಮಾಡಿಬಿಡ್ತಾರೆ!
ಈರುಳ್ಳಿ, ಬೆಳ್ಳುಳ್ಳಿ ಇಲ್ಲ ಅನ್ನೋದನ್ನ ಒಪ್ಪಿಕೊಲ್ಳುತ್ತೇನೆ. ಆದರೆ, ಬನ್ಸ್‌ನಲ್ಲಿ ಮೊಟ್ಟೆ ಇರುತ್ತದೆಯಲ್ಲ ಎಂದಿದ್ದಾರೆ. ಪವಿತ್ರ ಮಾಸದ ಸಂದರ್ಭದಲ್ಲಿ ಇಂಥ ಪ್ರದೇಶದಲ್ಲಿ ಆಹಾರ ತಿನ್ನೋದನ್ನು ತಡೆದುಕೊಳ್ಳಲು ನಮಗೆ ಸಾಧ್ಯವಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಜಂಕ್ ಫುಡ್ ಬರ್ಗರ್ ತಿನ್ಬೇಡಿ ಅಂತಾರೆ, ಆದರೆ ಇವನು ಬರ್ಗರ್ ತಿಂದು, ವರ್ಲ್ಡ್ ರೆಕಾರ್ಡ್ ಮಾಡಿದ್ದಾನೆ!
ಈ ಬಗ್ಗೆ ಮೆಕ್‌ಡೊನಾಲ್ಡ್ಸ್ ಕೂಡ ಬರೆದುಕೊಂಡಿದ್ದು, ನಾವೀಗ ಹಿಂದು ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸದಲ್ಲಿದ್ದೇವೆ. ಇದು ಶಿವನಿಗೆ ಸಮರ್ಪಿತವಾದ ತಿಂಗಳು. ಗ್ರಾಹಕರ ಭಾವನೆಗಳನ್ನು ಅರ್ಥಮಾಡಿಕೊಂಡು ನಾವು ನಮ್ಮ ಮೆನ್ಯುವನ್ನು ಸಿದ್ದಮಾಡಿದ್ದೇವೆ' ಎಂದು ಬರೆದುಕೊಂಡಿದೆ. ಆನ್‌ಲೈನ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಾಗಿನಿಂದ, ಇದು 7 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.