Snack Recipe: 90ರ ದಶಕದ ಮಕ್ಕಳು ಶಾಲಾ ಪ್ರವಾಸಕ್ಕೆ ಹೋಗುವಾಗ ಅಮ್ಮಂದಿರು ಮಾಡಿಕೊಡುತ್ತಿದ್ದ ರುಚಿಕರವಾದ ಮಸಾಲೆ ಚಪಾತಿಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸುವ ವಿಧಾನ.
ಇಂದು ಮಕ್ಕಳು ಹಠ ಮಾಡಿದ್ರೆ ಇಂದಿನ ಅಮ್ಮಂದಿರು ಮೊಬೈಲ್ ಹಿಡಿದು ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡ್ತಾರೆ. ಇಲ್ಲಾಂದ್ರೆ ಕಡಿಮೆ ಸಮಯದಲ್ಲಿ ಸಿದ್ಧವಾಗುವ ಮ್ಯಾಗಿ ಅಥವಾ ರೆಡಿಮೇಡ್ ಫುಡ್ ನೀಡುತ್ತಾರೆ. ಆದರೆ 90s ಮಕ್ಕಳು ಹೀಗೆಲ್ಲಾ ಫಾಸ್ಟ್ ಫುಡ್ ತಿನ್ನುತ್ತಿರಲಿಲ್ಲ. 90s ಕಿಡ್ಸ್ ಅಮ್ಮಂದಿರು ಸಹ ಮಕ್ಕಳಿಗಾಗಿ ಮನೆಯಲ್ಲಿಯೇ ಆಹಾರ ಸಿದ್ಧ ಮಾಡುತ್ತಿದ್ದರು. ಈ ಆಹಾರದ ರೆಸಿಪಿಗಳು ತುಂಬಾನೇ ಸಿಂಪಲ್, ಆದ್ರೆ ತುಂಬಾ ಟೇಸ್ಟಿ. ಇಂದು ನಾವು ನಿಮಗೆ ಅಂತಹುವುದೇ ಒಂದು ಸೂಪರ್ ಟೇಸ್ಟಿಯಾಗಿರೋ ರೆಸಿಪಿಯನ್ನು ತೆಗೆದುಕೊಂಡು ಬಂದಿದ್ದೇವೆ. ಈ ರೆಸಿಪಿಯನ್ನು ಮಕ್ಕಳು ಶಾಲಾ ಪ್ರವಾಸಕ್ಕೆ ಹೊರಟರೆ ಮಾಡಿಕೊಡುತ್ತಿದ್ದರು. ಪ್ರಯಾಣದ ವೇಳೆ ಮಕ್ಕಳು ಈ ತಿಂಡಿಯನ್ನು ಆನಂದಿಸುತ್ತಾ ತಿನ್ನುತ್ತಿದ್ದರು.
ನಿಮಗೂ ಕೂಡ 90s ಕಿಡ್ಸ್ ತಿನ್ನುತ್ತಿದ್ದ ಆಹಾರ ಬೇಕು ಅನ್ನಿಸಿದ್ರೆ ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಚಪಾತಿ ಹಿಟ್ಟಿಗೆ ಒಂದಿಷ್ಟು ಮಸಾಲೆಗಳನ್ನು ಮತ್ತು ತರಕಾರಿ ಸೇರಿಸಿ ಈ ರೆಸಿಪಿ ಮಾಡುತ್ತಿದ್ದರು. ಇದನ್ನು ಕೆಲವರು ತಾಲಿಪಟ್ಟು, ಮಸಾಲೆ ಚಪಾತಿ, ತೇಪ್ಲಾ ಎಂದು ಕರೆಯುತ್ತಾರೆ. ಈ ವಿಶೇಷ ರುಚಿಯುಳ್ಳ ಚಪಾತಿ ಮಾಡೋದು ಹೇಗೆ ಅಂತ ನೋಡೋಣ ಬನ್ನಿ.
ಮಸಾಲೆ ಚಪಾತಿ ಮಾಡಲು ಬೇಕಾಗುವ ಸಾಮಾಗ್ರಿಗಳು
ಗೋಧಿ ಹಿಟ್ಟು: 1 ಕಪ್
ಹಸಿಮೆಣಸಿನಕಾಯಿ: 2
ಜೀರಿಗೆ: 1 ಟೀ ಸ್ಪೂನ್
ಈರುಳ್ಳಿ: 1 (ಚಿಕ್ಕದು)
ಅರಿಶಿನ: ಅರ್ಧ ಟೀ ಸ್ಪೂನ್
ಕ್ಯಾರಟ್: 1
ಕರೀಬೇವು: 5 ರಿಂದ 6 ದಳ
ಕೋತಂಬರಿ ಸೊಪ್ಪು
ಎಳ್ಳು: 1 ಟೀ ಸ್ಪೂನ್
ಎಣ್ಣೆ
ಉಪ್ಪು: ರುಚಿಗೆ ತಕ್ಕಷ್ಟು
ಇದನ್ನೂ ಓದಿ: ಮಕ್ಕಳು ಸೂಪ್ ಕೇಳಿದ್ರೆ ಮಾಡಿಕೊಡಿ, ಔಷಧೀಯ ಗುಣವುಳ್ಳ ಆರೋಗ್ಯಕರ ಟೇಸ್ಟಿ ಅಕ್ಕಿ ಗಂಜಿ
ಮಸಾಲೆ ಚಪಾತಿ ಮಾಡುವ ವಿಧಾನ
*ಮೊದಲಿಗೆ ಕ್ಯಾರಟ್‌ನ್ನು ತರಿತರಿಯಾಗಿ ಕತ್ತರಿಸಿಕೊಳ್ಳಬೇಕು. ನಂತರ ಹಸಿಮೆಣಸಿನಕಾಯಿ, ಈರುಳ್ಳಿ, ಕರೀಬೇವು ಮತ್ತು ಕೋತಂಬರಿ ಸೊಪ್ಪನ್ನು ಸಹ ಸಣ್ಣದಾಗಿ ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಬೇಕು.
*ತದನಂತರ ಅಗಲವಾದ ಪಾತ್ರೆಗೆ ಒಂದು ಕಪ್ ಗೋಧಿ ಹಿಟ್ಟು ಹಾಕಿಕೊಳ್ಳಿ. ಈಗ ಇದಕ್ಕೆ ಕತ್ತರಿಸಿಕೊಂಡಿರುವ ಎಲ್ಲಾ ತರಕಾರಿಯನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.
* ನಂತರ ಇದಕ್ಕೆ ಅರಿಶಿನ, ಎಳ್ಳು, ಜೀರಿಗೆ, ಉಪ್ಪು ಮತ್ತು ಒಂದು ಟೀ ಸ್ಪೂನ್ ಎಣ್ಣೆ ಸೇರಿಸಿಕೊಳ್ಳಬೇಕು. ಆ ಬಳಿಕ ಸ್ವಲ್ವ ಸ್ವಲ್ವವೇ ನೀರು ಸೇರಿಸುತ್ತಾ ಹಿಟ್ಟು ಕಲಿಸಿಕೊಳ್ಳಿ. ಹಿಟ್ಟು ಕಲಿಸಿದ ಬಳಿಕ ಪಾತ್ರೆಯಿಂದ ಅದನ್ನು 30 ನಿಮಿಷ ಮುಚ್ಚಿಡಿ.
*ಈಗ ಈ ಹಿಟ್ಟಿನಿಂದ ಸಣ್ಣದಾದ ಒಂದೊಂದೆ ಉಂಡೆಗಳನ್ನು ಮಾಡಿಕೊಂಡು ಚಪಾತಿ ರೀತಿಯಲ್ಲಿ ಲಟ್ಟಿಸಿಕೊಳ್ಳಬೇಕು. ನಂತರ ತವೆ ಮೇಲೆ ಹಾಕಿ ಸ್ವಲ್ಪ ತುಪ್ಪ ಸವರಿ ಎರಡು ಬದಿಯಲ್ಲಿ ಬೇಯಿಸಿಕೊಂಡರೆ ರುಚಿಯಾದ ಮಸಾಲೆ ಚಪಾತಿ ಸವಿಯಲು ಸಿದ್ಧವಾಗುತ್ತದೆ.
ಇದನ್ನೂ ಓದಿ: ಎರಡು ದಿನವಾದ್ರೂ ಹತ್ತಿಯಂತೆ ಚಪಾತಿ ಸಾಫ್ಟ್ ಆಗಿರಲು ಅನುಸರಿಸಿ ಅಜ್ಜಿ ಹೇಳಿ ಕೊಟ್ಟ ಸೂಪರ್ ಟಿಪ್ಸ್
