Viral Video: ಕ್ಷಣಾರ್ಧದಲ್ಲಿ ಕೈಯಲ್ಲಿದ್ದ ಪ್ಯಾಕೆಟ್‌ನಿಂದ ಸಕ್ಕರೆ ಮಾಯ..!

ಸೋಷಿಯಲ್ ಮೀಡಿಯಾ (Social Media) ಅಂದ್ರೇನೆ ಹಾಗೆ. ಅಲ್ಲಿ ಒಳ್ಳೆಯ ವಿಚಾರಗಳು, ಕೆಟ್ಟ ವಿಚಾರಗಳು ಎಲ್ಲವೂ ಲೈಕ್ ಪಡೆದುಕೊಳ್ಳುತ್ತವೆ. ಅಷ್ಟೇ ಅಲ್ಲ ಅಚ್ಚರಿಪಡಿಸೋ ವಿಚಾರಗಳು ಫುಲ್ ವೈರಲ್ (Viral) ಆಗ್ತವೆ. ಸದ್ಯ ಮ್ಯಾಜಿಕ್ (Magic) ವಿಚಾರವೊಂದು ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಗ್ಬಿಟ್ಟಿದೆ.

Mans Trick With Sugar Sachet Stuns Internet

ಮ್ಯಾಜಿಕ್‌(Magic) ಅನ್ನೋದು ಪ್ರತಿಯೊಬ್ಬರನ್ನೂ ಬೆರಗುಗೊಳಿಸುವ ವಿಷಯ. ಕೈಯಲ್ಲಿರುವ ಹೂವು ಹೋಗಿ ಪಾರಿವಾಳ ಆಗುವುದು. ಬಾಕ್ಸ್‌ನೊಳಗೆ ಕಣ್ಣೆದುರೇ ಒಳಹೋದ ಹುಡುಗಿ, ಬಾಕ್ಸ್‌ ತೆರೆದೊಡನೇ ಅಲ್ಲಿ ಇರದಿರುವುದು ಹೀಗೆ ಹಲವು ರೀತಿಯ ಮ್ಯಾಜಿಕ್‌ ಎಲ್ಲರನ್ನೂ ನಿಬ್ಬೆರಗೊಳಿಸುತ್ತದೆ. ಇದ್ಹೇಗೆ ಮಾಡ್ತಾರೆ, ಇದೆಲ್ಲಾ ನಿಜಾನ ಎಂಬ ಪ್ರಶ್ನೆಯೂ ಮೂಡುತ್ತದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋದು ಇಂಥದ್ದೇ ಒಂದು ಮ್ಯಾಜಿಕ್ ವಿಚಾರ.

ಸೋಷಿಯಲ್ ಮೀಡಿಯಾದಲ್ಲಿ ಪ್ರತಿ ದಿನ ಪ್ರತಿಯೊಂದಲ್ಲೂ ಹೊಸತನವಿರುತ್ತದೆ. ಹೊಸ ಹೊಸ ಫೋಟೋ, ವೀಡಿಯೋಗಳು ವೈರಲ್ (Viral) ಆಗುತ್ತಿರುತ್ತವೆ. ಮನರಂಜಿಸೋ, ಇನ್‌ ಫಾರ್ಮೇಟಿವ್‌, ಫನ್ನಿ ಹೀಗೆ ಹಲವು ರೀತಿಯ ವೀಡಿಯೋಗಳು ವೈರಲ್ ಆಗುತ್ತವೆ. ಪುಟ್ಟ ಮಕ್ಕಳಿಂದ ತೊಡಗಿ ದೊಡ್ಡವರ ತನಕ ಎಲ್ಲರೂ ಇದನ್ನು ಆಸಕ್ತಿಯಿಂದ ವೀಕ್ಷಿಸುತ್ತಾರೆ. ಇತ್ತೀಚಿನ ಬೆಳವಣಿಗೆಯಲ್ಲಿ ವ್ಯಕ್ತಿಯೊಬ್ಬ ಸಕ್ಕರೆ ಪ್ಯಾಕೆಟ್ ವೀಡಿಯೋ ಮಾಡಿರುವ ಮ್ಯಾಜಿಕ್ ಎಲ್ಲೆಡೆ ವೈರಲ್ ಆಗಿದೆ. 

ಈತ ಮಾಡ್ತಿರೋ ವೀಡಿಯೋವನ್ನು ಎಲ್ರೂ ಕಣ್ಣು ಬಾಯಿ ಬಿಟ್ಕೊಂಡು ನೋಡ್ತಿದ್ದಾರೆ. ಆದರೆ ಯಾರಿಗೂ ಈತ ಮಾಡ್ತಿರೋದು ಏನು ಎಂಬುದು ಅರ್ಥವಾಗ್ತಿಲ್ಲ. ಏನಪ್ಪಾ ಟ್ರಿಕ್ (Trick) ಇದು ಎಂದು ತಲೆಕೆಡಿಸಿಕೊಂಡುಬಿಟ್ಟಿದ್ದಾರೆ. ಇಂಟರ್ನೆಟ್ನಲ್ಲಿ ವೈರಲ್ ಆಗ್ತಿರೋ ವೀಡಿಯೋದಲ್ಲಿ ಏನಿದೆ ನೋಡೋಣ.

ಮದುವೆಯಿಂದ ಆರಂಭ.. ಬೀದಿಯಲ್ಲೂ ಹಿಗ್ಗಾಮುಗ್ಗಾ ಹೊಡೆದಾಟ ವಿಡಿಯೋ ವೈರಲ್‌

ಸಕ್ಕರೆ ಪ್ಯಾಕೆಟ್ ಹಿಡಿದು ಮ್ಯಾಜಿಕ್ ಟ್ರಿಕ್‌..!
ಸಕ್ಕರೆ ಪೊಟ್ಟಣದೊಂದಿಗೆ ವ್ಯಕ್ತಿಯೊಬ್ಬರ 'ಮ್ಯಾಜಿಕ್ ಟ್ರಿಕ್' ನೋಡುಗರನ್ನು ಸಂಪೂರ್ಣವಾಗಿ ಅಚ್ಚರಿಗೊಳಿಸಿದೆ. ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗಿರುವ ದೃಶ್ಯಾವಳಿಗಳು ಪೆಟ್ರೋಲ್ ಪಂಪ್‌ನಲ್ಲಿ ನಿಂತಿರುವ ವ್ಯಕ್ತಿಯನ್ನು ತೋರಿಸುತ್ತದೆ. ಆತ ಸಕ್ಕರೆ  ಪ್ಯಾಕೆಟ್ (Sugar Packet)ಹರಿದು ತನ್ನ ಎಡಗೈಗೆ ಸಕ್ಕರೆಯನ್ನು ಸುರಿಯುತ್ತಾನೆ. ಅದನ್ನು ಮುಷ್ಟಿಯಲ್ಲಿ ಬಿಗಿಗೊಳಿಸುತ್ತಾನೆ. ಖಾಲಿ ಚೀಲವನ್ನು ಬಾಯಿಯಲ್ಲಿ ಹಿಡಿದುಕೊಂಡು ಸಕ್ಕರೆಯನ್ನು ಗಾಳಿಗೆ ಎಸೆಯುತ್ತಾನೆ. 

ನಂತರ, ಲಕ್ಷಾಂತರ ಜನರನ್ನು ಗೊಂದಲಕ್ಕೀಡುಮಾಡುವ ಒಂದು ಮೂವ್‌ನಲ್ಲಿ, ಆತ ತನ್ನ ಬಲಗೈಯಲ್ಲಿ ಸಕ್ಕರೆಯನ್ನು ಹಿಡಿಯುವಂತೆ ಆಕ್ಷನ್ ಮಾಡುತ್ತಾನೆ. ತನ್ನ ಟ್ರಿಕ್ ಅನ್ನು ಪೂರ್ಣಗೊಳಿಸಲು ಸಕ್ಕರೆಯನ್ನು ಸ್ಯಾಚೆಟ್‌ಗೆ ಮತ್ತೆ ಸುರಿಯುವುದನ್ನು ವೀಡಿಯೊ ತೋರಿಸುತ್ತದೆ. Ladbible ಪ್ರಕಾರ, ವೀಡಿಯೊ (Video)ವನ್ನು ಮೊದಲು TikTok ನಲ್ಲಿ @jadon.ray ಬಳಕೆದಾರರು ಹಂಚಿಕೊಂಡಿದ್ದಾರೆ, ಅಲ್ಲಿ ಅದು 6.5 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ಟ್ವಿಟರ್‌ನಲ್ಲಿ, ವೀಡಿಯೊವನ್ನು 5.4 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ.

ಎರಡು ಎತ್ತುಗಳ ನಡುವಿನ ಜಗಳ ಬಿಡಿಸಿದ ಗೂಳಿ... ನೋಡಿ ವೈರಲ್‌ ವಿಡಿಯೋ

ಅಚ್ಚರಿಗೊಳಿಸುವ ಮ್ಯಾಜಿಕ್ ಮಾಡಿದ್ದು ಹೇಗೆ ?
ಗಾಳಿಗೆ ಎಸೆದ ಸಕ್ಕರೆ ಮತ್ತೆ ಪ್ಯಾಕ್‌ಗೆ ತುಂಬುದು ಹೇಗೆ ಎಂಬ ಬಗ್ಗೆ ಪ್ರೇಕ್ಷಕರಲ್ಲಿ ಪ್ರಶ್ನೆ ಮೂಡಿದೆ. ಅನೇಕ ವೀಕ್ಷಕರು ಮ್ಯಾಜಿಕ್ ಟ್ರಿಕ್‌ನಲ್ಲಿ ಈ ಗೊಂದಲವನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಇದು ಫೇಕ್ ವೀಡಿಯೋ ಎಂದು ಹೇಳಿಕೊಂಡಿದ್ದಾರೆ. ಇನ್ನು ಕೆಲವರು ಆತ ಒಂದು ಫೇಕ್ ಬೆರಳು ಇಟ್ಟುಕೊಂಡು ಅದರ ಸಹಾಯದಿಂದ ಸಕ್ಕರೆ ಸುರಿದಿದ್ದಾನೆ ಎಂದಿದ್ದಾರೆ.  ಇನ್ನೊಬ್ಬರು ಕ್ಯಾಮರಾ ಹಿಡಿದಿಟ್ಟುಕೊಂಡಿರುವ ವ್ಯಕ್ತಿ ಮ್ಯಾಜಿಕ್ ಮಾಡುವವರಿಗೆ ಸಹಾಯ ಮಾಡಿದ್ದಾನೆ ಎಂದಿದ್ದಾರೆ. ಇನ್ನೊಬ್ಬರು ಕಮೆಂಟ್ ಮಾಡಿ ನಾನು ಮೆಜಿಷಿಯನ್‌ನ್ನು ಮದುವೆಯಾಗಿದ್ದಾನೆ. ಆದರೆ ಇದು ನಿಜಕ್ಕೂ ಅದ್ಭುತ ಎಂದು ಹೊಗಳಿದ್ದಾರೆ. 

ಕೆಲವೊಬ್ಬರು ಈ ಮ್ಯಾಜಿಕ್ ಟ್ರಿಕ್‌ನ್ನು ಕಂಡುಹಿಡಿದಿದ್ದಾರೆ. ‘ವ್ಯಕ್ತಿ ನಕಲಿ ಹೆಬ್ಬೆರಳು ಧರಿಸಿದ್ದಾನೆ. ಅವನು ತನ್ನ ಎಡಗೈಯಲ್ಲಿ ಹೆಬ್ಬೆರಳಿನ ಕ್ಯಾಪ್ ಒಳಗೆ ಶುಗರ್ ಸುರಿಯುತ್ತಾನೆ, ನಂತರ ನಕಲಿ ಹೆಬ್ಬೆರಳಿನಿಂದ ಸಕ್ಕರೆಯನ್ನು ಪ್ಯಾಕೆಟ್ಗೆ ಸುರಿಯುತ್ತಾನೆ’ ಎಂದು ಕಾಮೆಂಟ್ (Comment) ಮಾಡಿದ್ದಾರೆ. ಅದೇನೆ ಇರ್ಲಿ ಯಾವುದು ನಿಜ, ಯಾವುದು ಸುಳ್ಳು ಎಂಬುದು ಅರ್ಥವಾಗದಿದ್ದರೂ ಸಕ್ಕರೆ ಪ್ಯಾಕೆಟ್ ಮ್ಯಾಜಿಕ್ ಮಾಡೋ ವಿಚಾರ ಎಲ್ಲರನ್ನೂ ನಿಬ್ಬೆರಗೊಳಿಸುತ್ತಿರುವುದಂತೂ ನಿಜ.

Latest Videos
Follow Us:
Download App:
  • android
  • ios