Asianet Suvarna News Asianet Suvarna News

48 ಸಿಂಪಿ ತಿಂದ ಗರ್ಲ್ ಫ್ರೆಂಡ್! ಬಿಲ್ ನೋಡಿ ಬಾಯ್ ಫ್ರೆಂಡ್ ಪರಾರಿ

ಆಹಾರ ತಿನ್ನೋಕು ಒಂದು ಮಿತಿ ಇದೆ. ಇಷ್ಟ ಅಂತಾ ಬೇಕಾಬಿಟ್ಟಿ ತಿಂದು ಹೆಚ್ಚು ಬಿಲ್ ಮಾಡಿದ್ರೆ ಬಿಲ್ ಕಟ್ಟೋರ ಗತಿ ಏನಾಗ್ಬೇಡ. ಖುಷಿಯಾಗಿ ಗರ್ಲ್ ಫ್ರೆಂಡ್ ಜೊತೆ ಡೇಟಿಂಗ್ ಗೆ ಬಂದೋನು ಬಿಲ್ ನೋಡಿ ಓಡಿಹೋಗಿದ್ದಾನೆ. 
 

Man Takes Girl Friend Out Runs Away After She Eats Fort Eight Oysters roo
Author
First Published Oct 18, 2023, 1:33 PM IST

ಡೇಟಿಂಗ್ ಗೆ ಹೋದಾಗ ಜನರು ಏನು ಮಾಡ್ತಾರೆ? ಅಲ್ಪಸ್ವಲ್ಪ ತಿಂದು, ಅಲ್ಲಿ ಇಲ್ಲಿ ಸುತ್ತಾಡಿ ತಮ್ಮ ಮನಸ್ಸಿನ ಭಾವನೆಯನ್ನು ಹಂಚಿಕೊಳ್ತಾರೆ. ಇಬ್ಬರು ಹೆಚ್ಚು ಆಪ್ತವಾಗಲು ಪ್ರಯತ್ನಿಸುತ್ತಾರೆ. ತಮ್ಮ ಆಸೆ, ಗುರಿ, ಪ್ರೀತಿಯನ್ನು ಹಂಚಿಕೊಳ್ತಾರೆ. ಇಬ್ಬರ ಮಧ್ಯೆ ಮಾತು ಹೆಚ್ಚಿರುತ್ತದೆಯೇ ವಿನಃ ಆಹಾರಕ್ಕೆ ಹೆಚ್ಚು ಆದ್ಯತೆ ನೀಡೋದಿಲ್ಲ. ಈಗೀಗ ಡೇಟಿಂಗ್ ಗೆ ಹೋದಾಗ ಆಹಾರ ವಿಷ್ಯಕ್ಕೆ ಸಂಬಂಧಿಸಿದಂತೆ ಇಬ್ಬರು ಕಚ್ಚಾಡಿಕೊಳ್ಳುವ ಕೆಲ ಘಟನೆಗಳು ಬೆಳಕಿಗೆ ಬಂದಿವೆ. ಕೆಲ ದಿನಗಳ ಹಿಂದೆ ಡೇಟಿಂಗ್ ಗೆ ಹೋಗಿದ್ದ ಹುಡುಗ, ಹುಡುಗಿಯೂ ಬಿಲ್ ಹಂಚಿಕೊಳ್ಬೇಕೆಂದು ಹಠ ಮಾಡಿದ್ದ. ಆದ್ರೆ ಅದನ್ನು ನಿರಾಕರಿಸಿ ಹುಡುಗಿ ಅಲ್ಲಿಂದ ಹೋಗಿದ್ದಳು. ಈ ವಿಷ್ಯ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಈಗ ಬಿಲ್ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹುಡುಗಿ ಒಂದೇ ಸಮನೆ ಆಹಾರ ಸೇವನೆ ಮಾಡಿ ಬಿಲ್ ಹೆಚ್ಚಿಸಿದ್ದಾಳೆ. ಅದನ್ನು ನೋಡಿ ಕಂಗಾಲಾದ ಹುಡುಗ ಅಲ್ಲಿಂದ ಕಾಲ್ಕಿತ್ತಿದ್ದಾನೆ.  

ಈ ಘಟನೆ ನಡೆದಿರೋದು ಅಟ್ಲಾಂಟಾ (Atlanta) ದಲ್ಲಿ. ಡೇಟಿಂಗ್ (Dating) ವೇಳೆ ಗರ್ಲ್ ಫ್ರೆಂಡ್ ತಿನ್ನೋದನ್ನು ನೋಡಿ ಬಾಯ್ ಫ್ರೆಂಡ್ ಪರಾರಿಯಾಗಿದ್ದಾನೆ. ಗೆಳತಿ (girlfriend)ಯ ಜೊತೆ ಡೇಟಿಂಗ್ ಗೆ ಬಂದಿದ್ದ ಹುಡುಗ, ಆಕೆಗೆ ಪ್ರೇಮ ನಿವೇದನೆ ಮಾಡ್ಬೇಕು ಎಂದ್ಕೊಂಡಿದ್ದ. ಅಷ್ಟರಲ್ಲಿ ಹುಡುಗಿ ತನ್ನ ಕೈಚಳಕ ಶುರು ಮಾಡಿದ್ದಾಳೆ.  

ಡೆನಿಮ್ ಚಡ್ಡಿ ಧರಿಸಿ ಹೆಲ್ಮೆಟ್ ಇಲ್ದೆ ಬೈಕ್ ಓಡಿಸ್ತಿರೋ ಜೋಮಾಟೊ ಹುಡುಗಿ ಟ್ರೋಲ್

ಟಿಕ್‌ಟಾಕ್ ತಾರೆ ತನ್ನ ಗೆಳೆಯನೊಂದಿಗೆ ಅಟ್ಲಾಂಟಾದ ಫಾಂಟೈನ್ ಆಯ್ಸ್ಟರ್ ಹೌಸ್‌ಗೆ ಹೋಗಿದ್ದಾಳೆ.  ಇಲ್ಲಿ ಸಮುದ್ರಾಹಾರವಾದ ಸಿಂಪಿಯನ್ನು ಆರ್ಡರ್ ಮಾಡಿದ್ದಾರೆ. ನಾಲ್ಕು ಡಜನ್ ಅಂದ್ರೆ 48 ಸಿಂಪಿಯನ್ನು ಆರ್ಡರ್ ಮಾಡಿ ಒಂದೊಂದಾಗಿ ತಿಂದಿದ್ದಾಲೆ. ಒಂದು ಪ್ಲೇಟ್ ಸಿಂಪಿ ಬೆಲೆ ಸುಮಾರು 15 ಡಾಲರ್ ಅಂದರೆ ಸುಮಾರು 1200 ರೂಪಾಯಿಯಾಗಿತ್ತು. ಆಕೆ ನಾಲ್ಕು ಡಜನ್ ಸಿಂಪಿ ತಿಂದಿದ್ದಲ್ಲದೆ ಕ್ರ್ಯಾಬ್ ಕೇಕ್, ಪೊಟಾಟೊ, ಲೆಮನ್ ಡ್ರಾಪ್ ಮಾರ್ಟಿನಿ ಹೀಗೆ ಹಲವು ಆಹಾರವನ್ನು ಆರ್ಡರ್ ಮಾಡಿ ತಿಂದಿದ್ದಾಳೆ. ಬರೀ ತಿಂದಿದ್ದಲ್ಲದೆ ಹುಡುಗಿ ಇದಕ್ಕೆ ಈಟಿಂಗ್ ಡೇಟ್ಸ್ ಎಂದೇ ನಾಮಕರಣ ಮಾಡಿದ್ದಾಳೆ. ನಾವು ತಿನ್ನುವ ಡೇಟಿಂಗ್ ಗೆ ಬಂದಿದ್ದೇವೆ, ಹಾಗಾಗಿ ಇಷ್ಟಲ್ಲ ತಿನ್ನುತ್ತಿದ್ದೇವೆ ಎನ್ನುತ್ತಾಳೆ. 

ಬಿಲ್ ನೋಡಿ ಪರಾರಿಯಾದ ಬಾಯ್ ಫ್ರೆಂಡ್ : ಹುಡುಗಿ ಒಂದಾದ್ಮೇಲೆ ಒಂದು ಆಹಾರ ತಿನ್ನೋದನ್ನು ನೋಡಿ ಹುಡುಗ ಕಂಗಾಲಾಗಿದ್ದ. ಆದ್ರೆ ಬಿಲ್ ಬರ್ತಾ ಇದ್ದಂತೆ ಆತನ ಹಾರ್ಟ್ ರೇಟ್ ಹೆಚ್ಚಾಗಿದೆ. ಸಿಂಪಿ ಸೇರಿ ಎಲ್ಲ ಆಹಾರದ ಒಟ್ಟೂ ಬಿಲ್ ಸುಮಾರು ೧೫೦ ಯುರೋ ಅಂದ್ರೆ ೧೩ ಸಾವಿರ ರೂಪಾಯಿ ಬಂದಿದೆ. ಇದು ಬಾಯ್ ಫ್ರೆಂಡ್ ಸ್ಥಿತಿಯನ್ನು ಹದಗೆಡಿಸಿದೆ. ವಾಶ್ ರೂಮಿಗೆ ಹೋಗಿ ಬರ್ತೇನೆ ಎಂದ ಬಾಯ್ ಫ್ರೆಂಡ್ ಅಲ್ಲಿಂದಲೇ ಪರಾರಿಯಾಗಿದ್ದಾನೆ. 

ಮೊಡವೆ ಕಡಿಮೆಯಾಗಬೇಕಾ? ಇವನ್ನೆಲ್ಲಾ ಮುಟ್ಟಲೇ ಬೇಡಿ!

ಹುಡುಗನೇ ಈಟಿಂಗ್ ಡೇಟ್ ಗೆ ನನ್ನನ್ನು ಕರೆದಿದ್ದ. ಆದರೆ ಆತನೇ ಓಡಿ ಹೋಗಿದ್ದಾನೆ ಎಂದ ಹುಡುಗಿ, ಕೊನೆಯಲ್ಲಿ ತಾನೇ ರೆಸ್ಟೋರೆಂಟ್ ಬಿಲ್ ಪಾವತಿ ಮಾಡಿದ್ದಾಳೆ. ಬರೀ ಬಾಯ್ ಫ್ರೆಂಡ್ ಅಲ್ಲ ರೆಸ್ಟೋರೆಂಟ್ ಮಾಲಿಕರು ಕೂಡ ಹುಡುಗಿ ತಿಂದಿದ್ದನ್ನು ನೋಡಿ ದಂಗಾಗಿದ್ದಾರೆ. ದೊಡ್ಡ ಆರ್ಡರ್ ಬರುತ್ತೆ. ಆದ್ರೆ ಹುಡುಗಿಯೊಬ್ಬಳೇ ಇಷ್ಟೊಂದು ತಿಂದಿದ್ದು ಅಚ್ಚರಿ ಮೂಡಿಸಿದೆ ಎಂದು ಅವರು ಹೇಳಿದ್ದಾರೆ. ಟಿಕ್ ಟಾಕ್ ನಲ್ಲಿ ಹುಡುಗಿ ಇದ್ರ ವಿಡಿಯೋ ಹಂಚಿಕೊಂಡಿದ್ದಾಳೆ. ಇತರ ಸಾಮಾಜಿಕ ಜಾಲತಾಣದಲ್ಲೂ ಈ ಸಂಗತಿ ಚರ್ಚೆಗೆ ಬಂದಿದೆ. ಹುಡುಗಿಯ ತಿಂಡಿಬಾಕತನವನ್ನು ನೋಡಿ ನೆಟ್ಟಿಗರು ದಂಗಾಗಿದ್ದಾರೆ. 

Follow Us:
Download App:
  • android
  • ios