ಬಿಸಿಲಿನ ಧಗೆಗೆ ಕಾದು ಕೆಂಪಾದ ಮುತ್ತಿನ ನಗರಿ: ಸ್ಕೂಟರ್ ಮೇಲೆ ಗರಿ ಗರಿ ದೋಸೆ

ಮುತ್ತಿನ ನಗರಿ ಹೈದರಾಬಾದ್  ಸುಡು ಸುಡು ಎನ್ನುತ್ತಿದೆ. ಇದು ಎಷ್ಟರಮಟ್ಟಿಗೆ ಎಂದರೆ ಕೇವಲ ಬಿಸಿಲನ್ನೇ ಬಳಸಿ ಅಡಿಗೆ ಮಾಡುವಷ್ಟರ ಮಟ್ಟಿಗೆ ಬಿಸಿಲಿನ ಧಗೆ ಜನರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಸ್ಕೂಟರ್‌ನ ಸೀಟಿನ ಮೇಲೆ ದೋಸೆ ಮಾಡಿದ್ದು, ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Man Makes Dosa On Vespa Scooter As Temperatures Cross 40 Degrees in Hyderabad

ದೇಶದ ವಿವಿಧ ನಗರಗಳಲ್ಲಿ ತಾಪಮಾನ 44 ಡಿಗ್ರಿ ಗಡಿ ದಾಟಿದ್ದು, ಭಾರತೀಯ ಹವಾಮಾನ ಇಲಾಖೆ ಹಲವೆಡೆ ಯೆಲ್ಲೋ ಆಲರ್ಟ್‌ ನೀಡಿದೆ. ಬಿಸಿಲಿನಿಂದ ಪಾರಾಗಲು ಜನ ತಂಪು ಪಾನೀಯ ಹಣ್ಣು ಹಂಪಲುಗಳ ಮೊರೆ ಹೋಗುತ್ತಿದ್ದಾರೆ. ಈ ಮಧ್ಯೆ ಮುತ್ತಿನ ನಗರಿ ಹೈದರಾಬಾದ್ ಕೂಡ ಸುಡು ಸುಡು ಎನ್ನುತ್ತಿದೆ. ಇದು ಎಷ್ಟರಮಟ್ಟಿಗೆ ಎಂದರೆ ಕೇವಲ ಬಿಸಿಲನ್ನೇ ಬಳಸಿ ಅಡಿಗೆ ಮಾಡುವಷ್ಟರ ಮಟ್ಟಿಗೆ ಬಿಸಿಲಿನ ಧಗೆ ಜನರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಸ್ಕೂಟರ್‌ನ ಸೀಟಿನ ಮೇಲೆ ದೋಸೆ ಮಾಡಿದ್ದು, ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ವೀಡಿಯೊದಲ್ಲಿ, ವ್ಯಕ್ತಿ ಮೊದಲು ಸ್ಕೂಟರ್ ಸೀಟಿನ ಮೇಲೆ ಸ್ವಲ್ಪ ದೋಸೆ ಹಿಟ್ಟನ್ನು ಸುರಿದು ದೋಸೆ ಮಾಡಿದ್ದಾನೆ. ಸೆಕೆಂಡುಗಳ ನಂತರ ದೋಸೆಯನ್ನು ತಿರುವಿ ಹಾಕಿದ್ದು, ಅದು ಬೆಂಕಿ ಮೇಲೆ ಕಾದಂತೆ ಕೆಂಪಗಾಗಿದೆ. streetfoodofbhagyanagar ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಬೇಸಿಗೆಯಲ್ಲಿ ಹೊರಗೆ 40 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ವೃತ್ತಿಪರರು ವೆಸ್ಪಾ ದೋಸೆ ಮಾಡುತ್ತಾರೆ ಎಂದು ಬರೆಯಲಾಗಿದೆ.

 

ವಿಡಿಯೋ ವೈರಲ್ ಆಗಿದ್ದು, ಸ್ಕೂಟರ್ ಸೀಟಿನ ಮೇಲೆ ದೋಸೆ ಮಾಡುವಂತಿದ್ದರೆ ತಾಪಮಾನ ಎಷ್ಟಿರಬಹುದು ಎಂದು ದಂಗಾಗಿದ್ದಾರೆ. ನಾನ್‌ ಸ್ಟಿಕ್ ತವಾಕ್ಕಿಂತ ಈ ಸೀಟ್‌ ಕವರ್ ಉತ್ತಮವಾಗಿದೆ ಎಂದು ನೋಡುಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಎಣ್ಣೆ ಹಾಕದೇ ದೋಸೆ ಮಾಡಲಾಗಿದ್ದು, ಬ್ರೋ ಆಯಿಲ್ ಕಾಣೆಯಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಬಿಸಿಲ ಧಗೆಯಿಂದ ಬರೋ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ, ಹೀಟ್‌ ಸ್ಟ್ರೋಕ್ ಕೂಡಾ ಆಗ್ಬೋದು !

ಇತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನ  44 ಡಿಗ್ರಿ ಗಡಿ ದಾಟಿದೆ. ಹವಾಮಾನ ಇಲಾಖೆ ದೆಹಲಿಯಲ್ಲಿ ಯೆಲ್ಲೋ ಆಲರ್ಟ್‌ ಘೋಷಿಸಿದೆ. ನಗರದ ಕೆಲವು ಭಾಗಗಳಲ್ಲಿ ಬಿಸಿಗಾಳಿ ಇರಬಹುದು ಎಂದು ಎಚ್ಚರಿಕೆ ನೀಡಿದೆ. ಭಾರತೀಯ ಹವಾಮಾನ ಇಲಾಖೆ (IMD) ಯೂ ತಾಪಮಾನಕ್ಕೆ ತಕ್ಕಂತೆ  ನಾಲ್ಕು ಬಣ್ಣದ ಕೋಡ್‌ಗಳನ್ನು ಬಳಸುತ್ತದೆ. ಹಸಿರು (ಯಾವುದೇ ಕ್ರಿಯೆಯ ಅಗತ್ಯವಿಲ್ಲ), ಹಳದಿ (ವೀಕ್ಷಿಸಿ ಮತ್ತು ನವೀಕರಿಸಿ), ಕಿತ್ತಳೆ (ಸಿದ್ಧರಾಗಿರಿ) ಮತ್ತು ಕೆಂಪು (ಕ್ರಮ ತೆಗೆದುಕೊಳ್ಳಿ) ಇವು ಹವಾಮಾನ ಎಚ್ಚರಿಕೆಗೆ ಬಳಸುವ ಬಣ್ಣಗಳಾಗಿವೆ. 

ವಿಪರೀತ ಬಿಸಿಲ ಧಗೆ, ಗಿರಿ ಪ್ರದೇಶದಿಂದ ದೂರ ಉಳಿದ ಪ್ರವಾಸಿಗರು

ದೆಹಲಿಯಲ್ಲಿ ಬೆಳಗ್ಗೆ 8.30ರ ಸಮಯದಲ್ಲಿ ಸಾಪೇಕ್ಷ ಆರ್ದ್ರತೆ ಶೇ.25ರಷ್ಟು ದಾಖಲಾಗಿತ್ತು. ನಿನ್ನೆ ಭಾನುವಾರ, ತೀವ್ರ ತಾಪಮಾನ ದೆಹಲಿಯ ಕೆಲವು ಭಾಗಗಳಲ್ಲಿ ತನ್ನ ಹಿಡಿತವನ್ನು ಬಿಗಿಗೊಳಿಸಿತು, ಗರಿಷ್ಠ ತಾಪಮಾನವು ಆರು ಪ್ರದೇಶಗಳಲ್ಲಿ 45 ಡಿಗ್ರಿ ಸೆಲ್ಸಿಯಸ್  ಅನ್ನು ಮೀರಿತ್ತು. ನಗರದ ಮೂಲ ನಿಲ್ದಾಣವಾದ ಸಫ್ದರ್‌ಜಂಗ್ ವೀಕ್ಷಣಾಲಯದಲ್ಲಿ, ಗರಿಷ್ಠ ತಾಪಮಾನವು 44.2 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿತ್ತು. ಶನಿವಾರ 43.9 ಡಿಗ್ರಿ ಸೆಲ್ಸಿಯಸ್ ಮತ್ತು ಶುಕ್ರವಾರ 42.9 ಡಿಗ್ರಿ ಸೆಲ್ಸಿಯಸ್ ಇತ್ತು.

ಮುಂಗೇಶ್‌ಪುರದಲ್ಲಿ ಗರಿಷ್ಠ ತಾಪಮಾನ 47.3 ಡಿಗ್ರಿಗಳಿಗೆ ಏರಿತು. ಇದು ರಾಜಧಾನಿಯ ಅತ್ಯಂತ ಬಿಸಿಯಾದ ಸ್ಥಳವಾಗಿದೆ. ಪಿತಾಂಪುರ (Pitampura) , ನಜಾಫ್‌ಗಢ್ (Najafgarh), ಜಾಫರ್‌ಪುರ (Jafarpur) ಮತ್ತು ರಿಡ್ಜ್‌ನಲ್ಲಿ (Ridge) ಕ್ರಮವಾಗಿ ಗರಿಷ್ಠ 46.6 ಡಿಗ್ರಿ ಸೆಲ್ಸಿಯಸ್, 46.2 ಡಿಗ್ರಿ ಸೆಲ್ಸಿಯಸ್, 46.3 ಡಿಗ್ರಿ ಸೆಲ್ಸಿಯಸ್, 45.1 ಡಿಗ್ರಿ ಸೆಲ್ಸಿಯಸ್ ಮತ್ತು 45.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
 

Latest Videos
Follow Us:
Download App:
  • android
  • ios