Asianet Suvarna News Asianet Suvarna News

ಅಪ್ಪನಿಗೆ ದೋಸೆ ಸರ್ವ್‌ ಮಾಡಿದ ಮಗು, ದೋಸೆ ಮಗುಚಿ ಹಾಕಿದ ರೀತಿಗೆ ನೆಟ್ಟಿಗರು ಫಿದಾ

ಮಕ್ಕಳು ತಮ್ಮ ಸಣ್ಣಪುಟ್ಟ ಚಟುವಟಿಕೆಗಳಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಮಕ್ಕಳ ಆಟ, ತರಲೆ ಎಲ್ಲವೂ ಖುಷಿ ನೀಡುತ್ತದೆ. ಇಲ್ಲೊಂದೆಡೆ ಅಂಬೆಗಾಲಿಡುವ ಮಗುವೊಂದು ಅಪ್ಪನಿಗೆ ದೋಸೆಯನ್ನು ತಂದು ಬಡಿಸಿದ್ದು, ಮುದ್ದಾದ ವೀಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.

Toddler Serves Dosa To Dad, Flips It Like Pro. Viral Video Vin
Author
First Published Aug 27, 2022, 3:22 PM IST

ಪುಟ್ಟ ಮಕ್ಕಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅವರ ತೊದಲು ಮಾತು, ಆಟಗಳು, ತರಲೆ, ಕಿರುಚಾಟದಿಂದಲೇ ಎಲ್ಲರ ಮನಸ್ಸು ಸೆಳೆಯುತ್ತಾರೆ. ದೊಡ್ಡವರು ಮಾಡಿದ್ದನ್ನೇ ಮಾಡೋಕೆ ಹೋಗಿ ಯಡವಟ್ಟು ಮಾಡಿಕೊಳ್ಳುತ್ತಾರೆ. ನಾಟಕೀಯವಾಗಿ ವರ್ತಿಸಿ ನಗು ತರಿಸುತ್ತಾರೆ. ಮಕ್ಕಳ ಇಂಥಾ ಚಟುವಟಿಕೆಗಳು ಸೋಷಿಯಲ್ ಮೀಡಿಯಾಗಳು ಬಂದ ನಂತರ ಹೆಚ್ಚು ವೈರಲ್ ಆಗುತ್ತಿವೆ. ಮಕ್ಕಳು ಬೀಳುವ, ಬಿದ್ದು ಬಿದ್ದು ನಗುವ, ಅಳುವ, ತರಲೆ ಮಾಡುವ, ಹಠ ಹಿಡಿಯುವ ವಿಡೀಯೋಗಳು ವೈರಲ್ ಆಗುತ್ತಿವೆ. ಹಾಗಯೇ ಈ ಬಾರಿ ಮುದ್ದು ಮಗುವೊಂದು ತನ್ನ ಅಪ್ಪನಿಗೆ ದೋಸೆಯನ್ನು ಸರ್ವ್ ಮಾಡುವ ವೀಡಿಯೋ ಎಲ್ಲೆಡೆ ವೈರಲ್‌ ಆಗ್ತಿದೆ.

ಮಗು ದೋಸೆ ಫ್ಲಿಪ್‌ ಮಾಡುವ ವೀಡಿಯೋ ವೈರಲ್‌
ಪುಟ್ಟ ಮಗು (Children)ವೊಂದು ಅಡುಗೆ ಮನೆಯಿಂದ ತಂದೆಗೆ ದೋಸೆ ಬಡಿಸುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಅದರಲ್ಲಿ ವಿಶೇಷ ಏನೆಂದರೆ ಅದನ್ನು ಅಪ್ಪನ ತಟ್ಟೆಯಲ್ಲಿ ದೋಸೆಯನ್ನು ತಿರುಗಿಸಿದ ರೀತಿ. ಅಡುಗೆ ಕೋಣೆ (Kitchen)ಯಿಂದ ನಿಧಾನವಾಗಿ ನಡೆಯುತ್ತಾ ಬರುವ ಮಗು ಎಕ್ಸ್‌ಪರ್ಟ್‌ನಂತೆ ದೋಸೆಯನ್ನು ಫ್ಲಿಪ್‌ ಮಾಡುತ್ತದೆ. ಇದನ್ನು ಜೋಷಿಕ್ ಎಂಬ ಪುಟದಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು 16 ಮಿಲಿಯನ್ ಮಂದಿ ಇದನ್ನು ವೀಕ್ಷಿಸಿದ್ದಾರೆ. ಮುದ್ದಾದ ಮಗುವಿನ ವೀಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಕಾಮೆಂಟ್‌ಗಳ ವಿಭಾಗದಲ್ಲಿ ಮಗು ದೋಸೆಯನ್ನು ತಿರುಗಿಸಿದ ರೀತಿ ಅದ್ಭುತವಾಗಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಸೋ ಕ್ಯೂಟ್‌ ಎಂದಿದ್ದಾರೆ. ಮತ್ತೆ ಕೆಲ ಬಳಕೆದಾರರು 'ಮಗು ದೋಸೆಯನ್ನು ತಿರುಗಿಸಿದ ರೀತಿ ಹಲವಾರು ವರ್ಷಗಳ ಕಾಲ ಅನುಭವ ಇರುವವರು ಮಾಡಿದಂತಿದೆ' ಎಂದು ಹೊಗಳಿದ್ದಾರೆ. ಒಟ್ನಲ್ಲಿ ಮಗು ಅಪ್ಪನಿಗೆ ದೋಸೆಯನ್ನು ತಂದು ನೀಡುವ ವೀಡಿಯೋ ನೆಟ್ಟಿಗರ ಮನಗೆದ್ದಿದೆ. ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗುತ್ತಿದೆ.

 
 
 
 
 
 
 
 
 
 
 
 
 
 
 

A post shared by joshiik (@josh_iik)

ಪುಟ್ಟ ಮಕ್ಕಳ ದೊಡ್ಡತನ: ತಳ್ಳು ಗಾಡಿ ಮೇಲೆತ್ತಲು ಮಹಿಳೆಗೆ ಸಹಾಯ
ವಯಸ್ಸಿಗೆ ಮೀರಿ ಮಕ್ಕಳು ದೊಡ್ಡತನ ಮೆರೆದು ಇತರರಿಗೆ ಮಾದರಿಯಾದ, ಪೋಷಕರು ಹೆಮ್ಮೆ ಪಡುವಂತೆ ಮಾಡಿದ ಹಲವು ವಿಡಿಯೋಗಳನ್ನು ನೋಡಿದ್ದೇವೆ. ಅದೇ ರೀತಿ ಇಲ್ಲಿ ಪುಟ್ಟ ಮಕ್ಕಳಿಬ್ಬರು ತಳ್ಳು ಗಾಡಿಯಲ್ಲಿ ಹಣ್ಣು ತರಕಾರಿಗಳನ್ನು ಮಾರಾಟ ಮಾಡುತ್ತಿರುವ ಮಹಿಳೆಗೆ ಸಹಾಯ ಮಾಡಿದ ವಿಡಿಯೋವೊಂದು ಈಗ ವೈರಲ್ ಆಗಿದೆ. ಆದರೆ ಈ ಘಟನೆ ನಡೆದಿದ್ದು ಎಲ್ಲಿ ಎಂಬ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲ. ಆದರೆ ಇದು ಸಿಸಿಟಿವಿ ದೃಶ್ಯಾವಳಿಯಾಗಿದೆ. ಅಲ್ಲದೇ ಕರುಣೆ ಹಾಗೂ ಮಾನವೀಯತೆ ಇನ್ನೂ ಚಾಲ್ತಿಯಲ್ಲಿದೆ ಎಂಬುದನ್ನು ಈ ವಿಡಿಯೋ ತೋರಿಸುತ್ತಿದೆ. 

ವಿಡಿಯೋದಲ್ಲಿ ಕಾಣಿಸುವಂತೆ ತಳ್ಳು ಗಾಡಿಯಲ್ಲಿ ಮಹಿಳೆಯೊಬ್ಬರು ಹಣ್ಣು ಹಾಗೂ ತರಕಾರಿಗಳನ್ನು ಮಾರಾಟ ಮಾಡಲು ರಸ್ತೆಯಲ್ಲಿ ಗಾಡಿಯನ್ನು ತಳ್ಳಿಕೊಂಡು ಹೋಗುತ್ತಿರುತ್ತಾರೆ. ಆದರೆ ಈ ವೇಳೆ ರಸ್ತೆ ಮಧ್ಯೆ ದೊಡ್ಡದಾದ ಹಂಪೊಂದು ಸಿಕ್ಕಿದ್ದು ಇದರ ಮೇಲೆ ತಳ್ಳುಗಾಡಿಯನ್ನು ಏರಿಸಲು ಮಹಿಳೆ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಮಹಿಳೆ ಎಷ್ಟೇ ಪ್ರಯತ್ನಿಸಿದರು. ತಳ್ಳು ಗಾಡಿಯನ್ನು ಅವರೊಬ್ಬರಿಂದಲೇ ಹಂಪ್ ಮೇಲೇ ಏರಿಸಲು ಸಾಧ್ಯವಾಗುವುದೇ ಇಲ್ಲ. ರಸ್ತೆಬದಿಯಲ್ಲಿ ಸಾಗುತ್ತಿರುವ ಅನೇಕರು ಈ ದೃಶ್ಯವನ್ನು ನೋಡಿದರೂ ತಲೆ ತಿರುಗಿಸಿಕೊಂಡು ಹೊರಟು ಹೋಗುತ್ತಾರೆಯೇ ವಿನಃ ಯಾರೊಬ್ಬರೂ ಕೂಡ ಆಕೆಗೆ ಸಹಾಯ ಮಾಡಲು ಮುಂದೆ ಬರುವುದಿಲ್ಲ. ಇದಾಗಿ ಸ್ವಲ್ಪ ಹೊತ್ತಿನಲ್ಲಿ ಶಾಲಾ ಸಮವಸ್ತ್ರ ಧರಿಸಿ ಶಾಲೆಗೆ ಹೊರಟಿದ್ದ ಪುಟ್ಟ ಮಕ್ಕಳು ಆ ಮಾರ್ಗವಾಗಿ ಬಂದಿದ್ದು, ಮಕ್ಕಳು ಎರಡು ಯೋಚನೆ ಮಾಡದೇ ಮಹಿಳೆಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ.

ಬಾಲಕ ಮೇಲೆ ನಿಂತು ತಳ್ಳುಗಾಡಿಯನ್ನು ಮೇಲೆಳೆದರೆ ಬಾಲಕಿ ಮಹಿಳೆಯೊಂದಿಗೆ ನಿಂತು ತಳ್ಳುಗಾಡಿಯನ್ನು ಕೆಳಗಿನಿಂದ ದೂಡಲು ಸಹಾಯ ಮಾಡುತ್ತಾಳೆ. ಈ ಇಬ್ಬರು ಪುಟ್ಟ ಮಕ್ಕಳ ಸಹಾಯದಿಂದ ಮಹಿಳೆ ತಳ್ಳುಗಾಡಿಯನ್ನು ಮೇಲೇರಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಅಲ್ಲದೇ ಮಹಿಳೆ ಸಹಾಯ ಮಾಡಿದ ಮಕ್ಕಳಿಗೆ ತನ್ನ ಗಾಡಿಯಲ್ಲಿದ್ದ ಬಾಳೆಹಣ್ಣನ್ನು ಇಬ್ಬರಿಗೂ ಒಂದೊಂದು ನೀಡಿ ಸಹಾಯ ಮಾಡಿದ್ದಕ್ಕೆ ಅವರ ಕೆನ್ನೆ ಸವರಿ ಕೃತಜ್ಞತೆ ತಿಳಿಸುತ್ತಾಳೆ. 

Follow Us:
Download App:
  • android
  • ios