Asianet Suvarna News Asianet Suvarna News

ಮಾಡಿಟ್ಟ 5 ದಿನ ಆದ್ಮೇಲೆ ಪಾಸ್ತಾ ತಿಂದ ವ್ಯಕ್ತಿ ಮೃತ್ಯು!

ಆಹಾರ ಹಾಳ್ಮಾಡಬಾರದು ಎನ್ನುವ ಕಾರಣಕ್ಕೋ ಯಾರು ಅಡುಗೆ ಮಾಡ್ತಾರೆ ಎನ್ನುವ ಸೋಮಾರಿತನಕ್ಕೋ ಜನರು ಹಳೆ ಆಹಾರ ಸೇವನೆ ಮಾಡ್ತಾರೆ. ಆದ್ರೆ ಎಲ್ಲ ಹಳೆ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲವು ನಮ್ಮ ಪ್ರಾಣವನ್ನೇ ತೆಗೆಯುತ್ವೆ.
 

Man Died After Eating Five Day Old Stale Reheated Tomato Pasta roo
Author
First Published Sep 14, 2023, 4:58 PM IST

ಹಿಂದಿನ ಕಾಲಕ್ಕೆ ಹೋಲಿಸಿದ್ರೆ ಈಗಿನ ಜನರು ಸೋಮಾರಿಗಳಾಗಿದ್ದಾರೆ. ಎಲ್ಲ ಸೌಲಭ್ಯ ಕೈಗೆ ಸಿಗುವಂತೆ ಇದ್ರೂ ಅಡುಗೆ ಮಾಡಿ ತಾಜಾ ಆಹಾರ ಸೇವನೆ ಮಾಡಲು ಜನರಿಗೆ ಬೇಸರ. ಕೆಲವರು ಟೈಂ ಇಲ್ಲ ಎಂಬ ಕಾರಣ ಹೇಳಿದ್ರೆ ಮತ್ತೆ ಕೆಲವರು ಅಡುಗೆ ಯಾರು ಮಾಡ್ತಾರೆ ಎನ್ನುವ ಉದಾಸೀನ ತೋರಿ ಹೊಟೇಲ್ ಗೆ ಹೋಗ್ತಾರೆ. ಆನ್ಲೈನ್ ನಲ್ಲಿ ಫುಡ್ ಆರ್ಡರ್ ಮಾಡಿ ಸೇವನೆ ಮಾಡುವವರಿದ್ದಾರೆ. ಇನ್ನು ಕೆಲವರು ಮನೆಯಲ್ಲಿ ಮಾಡಿದ ಅಡುಗೆಯನ್ನೇ ತಿನ್ನುತ್ತಾರಾದ್ರೂ ಅದು ತಾಜಾ ಇರೋದಿಲ್ಲ. ಬೆಳಿಗ್ಗೆ ಮಾಡಿದ ಆಹಾರವನ್ನು ಮರುದಿನದವರೆಗೆ ಸೇವನೆ ಮಾಡೋರಿದ್ದಾರೆ. ಅಡುಗೆ ಹೆಚ್ಚಾಯ್ತು ಎನ್ನುವ ಕಾರಣಕ್ಕೆ ಇಲ್ಲವೆ ಪ್ರತಿ ದಿನ ಅಡುಗೆ ಮಾಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಹೀಗೆ ಒಬ್ಬೊಬ್ಬರು ಒಂದೊಂದು ನೆಪ ಹೇಳಿ ಹಳೆ ಆಹಾರ ಸೇವನೆ ಮಾಡ್ತಾರೆ. ವೈದ್ಯರು ತಾಜಾ ಆಹಾರ ಸೇವನೆ ಮಾಡುವಂತೆ ಯಾವಾಗ್ಲೂ ಸಲಹೆ ನೀಡ್ತಾರೆ. ಕೆಲ ಆಹಾರವನ್ನು ಒಂದು ದಿನ ಬಿಟ್ಟು ಸೇವನೆ ಮಾಡ್ಬಹುದಾದ್ರೂ ನಾಲ್ಕೈದು ದಿನದ ಹಿಂದಿನ ಆಹಾರ ಸೇವನೆ ಮಾಡೋದು ಬಹಳ ಅಪಾಯಕಾರಿ. ಐದು ದಿನ ಹಳೆಯ ಪಾಸ್ತಾ ತಿಂದ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಮತ್ತೆ ಸುದ್ದಿಯಾಗ್ತಿದೆ. ಘಟನೆ ನಡೆದಿದ್ದು ಎಲ್ಲಿ ಹಾಗೂ ಇದು ಈಗ ಮತ್ತೆ ವೈರಲ್ ಆಗಲು ಕಾರಣವೇನು ಎಂಬುದನ್ನು ನಾವು ಹೇಳ್ತೇವೆ.

ಘಟನೆ ನಡೆದಿರೋದು ಬೆಲ್ಜಿಯಂ (Belgium) ನಲ್ಲಿ. ಯುವಕನೊಬ್ಬ ಹಳಸಿದ ಪಾಸ್ತಾ (Pasta) ತಿಂದು ಸಾವನ್ನಪ್ಪಿದ್ದಾನೆ. ಯುವಕನ ಸೋಮಾರಿತನ, ನಿರ್ಲಕ್ಷ್ಯವೇ ಆತನ ಬಲಿ ಪಡೆದಿದೆ.  
ಯುವಕ ಒಂದೋ ಎರಡೋ ದಿನ ಹಿಂದಿನದಲ್ಲ ಬರೋಬ್ಬರಿ 5 ದಿನ ಹಿಂದಿನ ಪಾಸ್ತಾ ತಿಂದಿದ್ದಾನೆ. ಆತ ಐದು ದಿನಗಳ ಹಿಂದೆ ಪಾಸ್ತಾ ತಯಾರಿಸಿ ಹಾಗೆ ಕಿಚನ್ ನಲ್ಲಿ ಇಟ್ಟು ಪ್ರವಾಸಕ್ಕೆ ಹೋಗಿದ್ದ. ವಾಪಸ್ ಬಂದ್ಮೇಲೆ ಆತನ ಕಣ್ಣಿಗೆ ಪಾಸ್ತಾ ಕಾಣಿಸಿದೆ. ಅದಕ್ಕೆ ಟೋಮಾಟೊ ಸಾಸ್ ಹಾಕಿ ಮತ್ತೆ ಬಿಸಿ ಮಾಡಿದ್ದಲ್ಲದೆ ಅದನ್ನು ಸೇವನೆ ಮಾಡಿದ್ದಾನೆ.

ಮೊಟ್ಟೆ, ಆಲೂ, ಅನ್ನ...ಇವನ್ನೆಲ್ಲಾ ಮೈಕ್ರೋವೇ‌ವ್‌ನಲ್ಲಿ ಬಿಸಿ ಮಾಡಿದರೇನಾಗುತ್ತೆ?

ಹಳಸಿದ ಪಾಸ್ತಾ ತಿಂದ ಮೇಲೆ ಏನಾಯ್ತು? : ಯುವಕ ಹಳಸಿದ ಪಾಸ್ತಾ ತಿಂದು ಹೊರಗೆ ಆಡಲು ಹೋಗಿದ್ದಾನೆ. ಆದ್ರೆ ಅರ್ಧ ಗಂಟೆ ನಂತ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ತಲೆನೋವು, ವಾಕರಿಕೆ, ಅತಿಸಾರ ಮತ್ತು ವಾಂತಿಯಂತಹ ಲಕ್ಷಣಗಳು ಕಾಣಿಸಿಕೊಂಡಿದೆ. ಮನೆಗೆ ಬಂದ ಯುವಕ ನೋವಿನಿಂದ ಮುಕ್ತಿ ಪಡೆಯಲು ನೀರು ಕುಡಿದು ಮಲಗಿದ್ದಾನೆ.

ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಯ್ತು ಈ ಸತ್ಯ : ಮರುದಿನ ಬೆಳಿಗ್ಗೆ ಎಷ್ಟು ಹೊತ್ತಾದ್ರೂ ಏಳದ ಕಾರಣ ತಂದೆ – ತಾಯಿ ಮಗನ ಮನೆಗೆ ಬಂದು ಬಾಗಿಲು ತೆರೆಯುವ ಪ್ರಯತ್ನ ನಡೆಸಿದ್ದಾರೆ. ಬಾಗಿಲು ಒಡೆದು ಒಳಗೆ ಹೋದ ಪಾಲಕರಿಗೆ ಹಾಸಿಗೆ ಮೇಲೆ ಮಗನ ಶವ ಕಾಣಿಸಿದೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಐದು ದಿನಗಳ ಹಳೆಯ ಪಾಸ್ತಾ ತಿಂದ ಕಾರಣ ಯುವಕ ಸಾವನ್ನಪ್ಪಿದ್ದಾನೆ ಎಂದಿದ್ದಾರೆ.  ಸೆಂಟ್ರಿಲೋಬ್ಯುಲರ್ ಲಿವರ್ ನೆಕ್ರೋಸಿಸ್ ಇತ್ತು ಎಂಬುದು ಗೊತ್ತಾಗುದೆ. ಇದರಿಂದ ಅವನ ಅಂಗಾಂಗಗಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದವು.

ಪಲ್ಯ ತಿಂದಂಗೆ ಉಪ್ಪಿಕಾಯಿ ತಿಂತೀರಾ? ಲೈಂಗಿಕ ಜೀವನಕ್ಕೇ ಕುತ್ತು ತರೋದು ಪಕ್ಕಾ

ಫ್ರೈಡ್ ರೈಸ್ ಸಿಂಡ್ರೋಮಾ : ಬೆಲ್ಜಿಯಂನಲ್ಲಿ ನಡೆದ ಘಟನೆ ಹಳೆಯದು. ಫ್ರೈಡ್ ರೈಸ್ ಸಿಂಡ್ರೋಮಾ ಹೆಚ್ಚಾಗಿರುವ ಕಾರಣ ಈಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಅದು ಹರಿದಾಡುತ್ತಿದೆ. ಪಾಸ್ತಾ, ಅಕ್ಕಿ, ಆಲೂಗಡ್ಡೆಯಂತಹ ಆಹಾರ ಪದಾರ್ಥಗಳನ್ನು ಸರಿಯಾದ ಜಾಗದಲ್ಲಿ ಸ್ಟೋರ್ ಮಾಡ್ಬೇಕು. ಒಂದ್ವೇಳೆ ಅದನ್ನು ಸಾಮಾನ್ಯ ಉಷ್ಣಾಂಶದಲ್ಲಿ ತುಂಬಾ ಸಮಯ ಇಟ್ಟಲ್ಲಿ ಅದು ವಿಷವಾಗುತ್ತದೆ. ಅಲ್ಲಿ ಬ್ಯಾಕ್ಟೀರಿಯಾ ವೇಗವಾಗಿ ಬೆಳೆಯುತ್ತದೆ. ಇವು ದೇಹದಲ್ಲಿ ಟಾಕ್ಸಿನ್ ಸೃಷ್ಟಿ ಮಾಡುತ್ತವೆ. ಈ ಆಹಾರವನ್ನು ಮತ್ತೆ ಬಿಸಿ ಮಾಡಿ ಸೇವನೆ ಮಾಡುವುದು ಅಪಾಯಕಾರಿ. 
 

Follow Us:
Download App:
  • android
  • ios