50 ಕೆ.ಜಿ ತೂಕ 7 ಅಡಿ ಉದ್ದದ ಮೀನನ್ನು ಹೆಂಗೆಲ್ಲ ತಿಂದ ಗೊತ್ತಾ?
ಅಡುಗೆ ಬ್ಲಾಗರ್ ಆಹಾರ ಸೇವನೆ ಮಾಡ್ತಾ ಆಹಾ, ಓಹೋ ಅಂತಿದ್ರೆ ನಮ್ಮ ಬಾಯಲ್ಲೂ ಬರುತ್ತೆ. ಕೆಲವೊಮ್ಮೆ ಅಸಹ್ಯವೆನ್ನಿಸುತ್ತೆ. ಈ ಬ್ಲಾಗರ್ ಮೀನು ತಿಂದ ಪರಿ ನೋಡಿದ್ರೆ ನಿಮಗೆ ಏನನ್ನಿಸುತ್ತೆ ಅಂತಾ ನೀವೇ ಹೇಳ್ಬೇಕು.
ಯುಟ್ಯೂಬ್, ರೀಲ್ಸ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಬ್ಲಾಗರ್ ಗಳ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಇದೊಂದು ದೊಡ್ಡ ಸಮುದ್ರ ಅಂದ್ರೆ ತಪ್ಪಾಗೋದಿಲ್ಲ. ಇಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚು ಮಾಡಲು, ಹೆಚ್ಚೆಚ್ಚು ವೀವ್ಸ್ ಹಾಗೂ ಲೈಕ್ಸ್ ಪಡೆಯಲು ಜನರು ಸಾಕಷ್ಟು ಪ್ರಯತ್ನ ನಡೆಸ್ತಿರುತ್ತಾರೆ. ಆಹಾರ ಬ್ಲಾಗರ್ ಗಳ ಸಂಖ್ಯೆಯೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟಿದೆ. ಕೆಲವರು ಅಡುಗೆ ತಯಾರಿಸಿ ನಿಮಗೆ ರೆಸಿಪಿ ಹೇಳಿದ್ರೆ ಮತ್ತೆ ಕೆಲವರು ಹೊಟೇಲ್, ರೆಸ್ಟೋರೆಂಟ್ ಗಳನ್ನು ನಿಮಗೆ ಪರಿಚಯ ಮಾಡ್ತಾರೆ. ಇನ್ನೂ ಕೆಲವರು ಚಿತ್ರವಿಚಿತ್ರವಾಗಿ ಆಹಾರ ಸೇವನೆ ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ತಮ್ಮದೇ ಶೈಲಿಯಲ್ಲಿ ಬ್ಲಾಗ್ ಮಾಡಿ, ಜನರನ್ನು ಸೆಳೆಯುವ ಪ್ರಯತ್ನದಲ್ಲಿರುವ ಒಬ್ಬ ಬ್ಲಾಗರ್ ಉಲ್ಲಾಸ್ ಕಾಮತ್. ಉಲ್ಲಾಸ್ ಕಾಮತ್ ನಾನ್ ವೆಜ್ ಆಹಾರದ ಬ್ಲಾಗ್ ಹೊಂದಿದ್ದಾರೆ. ಅದ್ರಲ್ಲಿ ಅವರು ನಾನ್ ವೆಜ್ ಆಹಾರವನ್ನು ಚಿತ್ರವಿಚಿತ್ರವಾಗಿ ತಿನ್ನುತ್ತಾರೆ. ಇದು ಅನೇಕರಿಗೆ ಇಷ್ಟವಾದ್ರೆ ಮತ್ತೆ ಕೆಲವರಿಗೆ ಅಸಹ್ಯ ತರಿಸುತ್ತದೆ. ಉಲ್ಲಾಸ್ ಕಾಮತ್ ಈಗ ಮತ್ತೊಂದು ವಿಡಿಯೋ ಜೊತೆ ಬಂದಿದ್ದಾರೆ. ಅದ್ರಲ್ಲಿ ಅವರು ದೊಡ್ಡ ಮೀನೊಂದನ್ನು ತಿನ್ನುತ್ತಿದ್ದು, ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ.
ನವರಾತ್ರೀಲಿ ಉಪವಾಸ ಮಾಡಿದ್ರೆ ತೂಕ ಇಳಿಯುತ್ತಾ?
ಉಲ್ಲಾಸ್ ಕಾಮತ್ (Ullas Kamat) ವಿಡಿಯೋದಲ್ಲಿ ಏನಿದೆ? : ಉಲ್ಲಾಸ್ ಕಾಮತ್ ಸತತ ನಾಲ್ಕು ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಮೊದಲ ವಿಡಿಯೋ (Video) ದಲ್ಲಿ ಅವರು 50 ಕೆಜಿ ಏಳು ಅಡಿ ಉದ್ದದ ಮೀನನ್ನು ಎತ್ತುತ್ತಿರುವುದನ್ನು ನೀವು ನೋಡ್ಬಹುದು. ಎರಡನೇ ವಿಡಿಯೋದಲ್ಲಿ ಅವರು ಆ ಮೀನಿನ ಬಗ್ಗೆ ಮಾಹಿತಿ ನೀಡ್ತಾರೆ. ನನ್ನ ಬಳಿ 50 ಕೆಜಿ ತೂಕದ ಮೀನಿದೆ, ಅದನ್ನು ಯಾರು ತಿನ್ನಲು ಬರ್ತಾರೆ ಅಂತಾ ಹೇಳೋದನ್ನು ನೀವು ಕೇಳ್ಬಹುದು. ಇದೇ ಸಮಯದಲ್ಲಿ ಅವರ ಸ್ನೇಹಿತರೊಬ್ಬರು ಅಲ್ಲಿಗೆ ಬರ್ತಾರೆ. ಅವರನ್ನು ಉಲ್ಲಾಸ್ ಕಾಮತ್, ಮಹಾರಾಷ್ಟ್ರ (Maharashtra)ದ ಖಾಲಿ ಎಂದು ಪರಿಚಯಿಸ್ತಾರೆ. ಅವರು ಕೂಡ 7 ಅಡಿ ಉದ್ದವನ್ನು ಹೊಂದಿದ್ದಾರೆ.
ಉಮೇಶ್ ಕಾಮತ್ ಇನ್ನೊಂದು ವಿಡಿಯೋದಲ್ಲಿ ಮೀನನ್ನು ಮೇಲೆ ನೇತುಹಾಕಿ ಅದಕ್ಕೆ ಮಸಾಲೆ ಹಚ್ಚುತ್ತಿದ್ದಾರೆ. ಕೊನೆಯಲ್ಲಿ ಅದನ್ನು ಅವರ ಸ್ನೇಹಿತನ ಜೊತೆ ತಿನ್ನೋದನ್ನು ನೀವು ನೋಡ್ಬಹುದು. 50 ಕೆಜಿ ಮತ್ತು 7 ಅಡಿ ಫಿಶ್ ಚಾಲೆಂಜ್ ಎಂದು ಉಮೇಶ್ ಕಾಮತ್ ತಮ್ಮ ವಿಡಿಯೋಕ್ಕೆ ಶೀರ್ಷಿಕೆ ಹಾಕಿದ್ದಾರೆ.
HEALTH TIPS: ಅಧಿಕ ಕೊಲೆಸ್ಟ್ರಾಲ್ ಹೃದಯಕ್ಕೆ ಅಪಾಯ… ಕಾಲಲ್ಲಿ ಈ ನೋವು ಕಂಡ್ರೆ ಸುಮ್ಮಿರರ್ಬೇಡಿ!
ಸಾಮಾಜಿಕ ಜಾಲತಾಣ ಬಳಕೆದಾರರ ಕೋಪ : ಉಮೇಶ್ ಕಾಮರ್ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಇದುವರೆಗೆ ಮೂರು ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ನೋಡಿದ್ದಾರೆ. ಅನೇಕರು ಈ ವಿಡಿಯೋಕ್ಕೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಉಮೇಶ್ ಈ ಮೀನನ್ನು ತಿನ್ನುತ್ತಿರುವ ವಿಧಾನ ಬಹುತೇಕರಿಗೆ ಇಷ್ಟವಾಗಿಲ್ಲ. ಅನೇಕರು ಉಮೇಶ್ ಕಾಮತ್ ಈ ವಿಡಿಯೋವನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ. ಯಾರಾದರೂ ಈ ರೀತಿ ತಿನ್ನಲು ಹೇಗೆ ಸಾಧ್ಯ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಅವರ ಆಹಾರ ಕ್ರಮ ಸರಿಯಿಲ್ಲ ಎಂದು ಬರೆದಿದ್ದಾರೆ. ಯಾರಾದ್ರೂ ಇದನ್ನು ನಿಲ್ಲಿಸಿ ಎಂದು ಇನ್ನೊಬ್ಬರು ಬರೆದಿದ್ದಾರೆ. ನೀವೇ ಪ್ರಾಣಿಯಂತಿದ್ದೀರಾ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ನವರಾತ್ರಿ ನಡೀತಾ ಇದೆ. ಈ ಸಮಯದಲ್ಲಿ ಇಂಥ ವಿಡಿಯೋ ಹಾಕೋಕೆ ನಿಮಗೆ ನಾಚಿಕೆ ಆಗಲ್ವಾ ಎಂದು ಇನ್ನೊಬ್ಬರು ಬರೆದಿದ್ದಾರೆ.
ಉಮೇಶ್ ಕಾಮತ್ ಬ್ಲಾಗ್ ನಲ್ಲಿ ನೀವು ಸಾಕಷ್ಟು ನಾನ್ ವೆಜ್ ವಿಡಿಯೋಗಳನ್ನು ನೋಡ್ಬಹುದು. ಅವರು ಎಲ್ಲರಂತೆ ಆಹಾರ ಸೇವನೆ ಮಾಡೋದಿಲ್ಲ ಎಂಬುದು ಅವರ ಬ್ಲಾಗ್ ನೋಡಿದ್ರೆ ನಿಮ್ಮ ಅರಿವಿಗೆ ಬರುತ್ತೆ.