ಕರ್ನಾಟಕದಲ್ಲಿ ಹಾಲಿನ ದರ 2 ರೂ. ಹೆಚ್ಚಳ, ಕೇರಳದಲ್ಲಿ ಭರ್ತಿ 6 ರೂ. !

ಕರ್ನಾಟಕದಲ್ಲಿ ಪ್ರತಿ ಲೀಟರ್‌ ಹಾಲಿನ ದರ 2.ರೂ. ಏರಿಕೆಯಾದ ಬೆನ್ನಲ್ಲೇ, ಕೇರಳ ರಾಜ್ಯವೂ ಜನತೆಗೆ ಬೆಲೆ ಏರಿಕೆಯ ಶಾಕ್ ನೀಡಿದೆ. ಕೇರಳ ರಾಜ್ಯದಲ್ಲಿ ಹಾಲಿನ ದರ ಲೀಟರ್‌ಗೆ 6 ರೂ. ಏರಿಕೆಯಾಗಿದೆ. ಈ ಮೂಲಕ ಒಂದು ಲೀಟರ್‌ ಹಾಲಿನ ದರ  52 ರೂ. ಹೆಚ್ಚಳವಾಗಿದೆ. ಡಿ.1ರಿಂದ ಹೊಸ ದರ ಜಾರಿಗೆ ಬರಲಿದೆ.

Kerala Milma Milk To Cost Rs 6 More Per Litre From December 1 Vin

ತಿರುವನಂತಪುರಂ: ಕರ್ನಾಟಕದಲ್ಲಿ ಪ್ರತಿ ಲೀಟರ್‌ ಹಾಲಿನ ದರ (Milk price) 2.ರು ಏರಿಕೆಯಾದ ಬೆನ್ನಲ್ಲೇ, ಕೇರಳದಲ್ಲಿ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದರ ಏರಿಕೆ ಮಾಡಿ ಶಾಕ್‌ ನೀಡಲಾಗಿದೆ. ಕೇರಳ ರಾಜ್ಯದಲ್ಲಿ ಹಾಲಿನ ದರ ಲೀಟರ್‌ಗೆ 6 ರು. ಏರಿಕೆಯಾಗಿದೆ. ಇದರೊಂದಿಗೆ, ಪ್ರಸ್ತುತ ರಾಜ್ಯದಲ್ಲಿ ಪ್ರತೀ ಲೀಟರ್‌ 46 ರುಪಾಯಿ ಇರುವ ಹಾಲಿನ ಬೆಲೆ 52 ರೂ.ಗೆ ಏರಿಕೆಯಾಗಲಿದೆ. ಕೇರಳ ಹಾಲು ಸಹಕಾರ ಒಕ್ಕೂಟವು ಬೆಲೆ ಏರಿಕೆ ಕುರಿತು ಘೋಷಣೆ ಮಾಡಿದೆ. ಡಿ.1ರಿಂದ ಹಾಲಿನ ದರದಲ್ಲಿ ಬದಲಾವಣೆಯಾಗಲಿದೆ ಎಂದಿದೆ.

ಒಕ್ಕೂಟವು ಮೂರು ವರ್ಷ ಹಿಂದೆ, ಅಂದರೆ 2019ರಲ್ಲಿ 4.ರೂ ಏರಿಕೆ ಮಾಡಿತ್ತು. ಬಳಿಕ ಏರಿಸಿರಲಿಲ್ಲ. ಆಗ ಹೆಚ್ಚಾದ ಹಾಲಿನ ದರದಲ್ಲಿ 3.35 ರೂ. ರೈತರಿಗೆ ಸೇರುತ್ತಿತ್ತು. ಈ ಬಾರಿ 5.025 ರೂ. ರೈತರಿಗೆ ಸೇರಲಿದೆ ಎಂದು ಒಕ್ಕೂಟ ಹೇಳಿದೆ. ರೈತರ ಹಾಲು ಉತ್ಪಾದನಾ ವೆಚ್ಚದಲ್ಲಿ (Prodcution cost) ಏರಿಕೆ ಆದ ಕಾರಣ ದರ ಹೆಚ್ಚಿಸಲಾಗಿದೆ ಎಂದು ಅದು ಸ್ಪಷ್ಟಪಡಿಸಿದೆ.

Nandini Milk Price Hike :ಹಾಲಿನ ದರ ಹೆಚ್ಚಳವಾದರೂ, ಕಾಫಿ- ಟೀ ಬೆಲೆ ಏರಿಕೆಯಿಲ್ಲ

ಕರ್ನಾಟಕದಲ್ಲಿ ಹಾಲು, ಮೊಸರಿನ ದರ ಪ್ರತಿ ಲೀಟರ್‌ಗೆ 2 ರೂ. ಹೆಚ್ಚಳ
ಕೆಎಂಎಫ್‌ ನಂದಿನಿ ಹಾಲು ಹಾಗೂ ಮೊಸರಿನ ದರವನ್ನು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸುವುದಾಗಿ ಕೆಎಂಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಹಾಲು ಹಾಗೂ ಮೊಸರು (Curd) ದರ ಹೆಚ್ಚಳದ ಬಗ್ಗೆ KMF ಆಡಳಿತ ಮಂಡಳಿ ಸಭೆ ಬಳಿಕ ಹಾಲಿನ ದರವನ್ನು 2 ರೂ ಹೆಚ್ಚಳ ಮಾಡುವುದಾಗಿ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಪ್ರತಿ ಲೀಟರ್ ಹಾಲಿಗೆ 2‌ ರೂಪಾಯಿ ಹಾಗೂ ಪ್ರತಿ ಕೆಜಿ ಮೊಸರಿಗೆ 2 ರೂಪಾಯಿ ಏರಿಕೆ ಮಾಡಲಾಗಿದೆ. ನೇರವಾಗಿ ರೈತರಿಗೆ (Farmers) ಈ ಹಣವನ್ನು‌ ನೀಡಲಾಗುತ್ತಿದ್ದು ಗ್ರಾಹಕರು (Customers) ಸಹಕಾರ‌ ಕೊಡುವಂತೆ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದ್ದಾರೆ. ನಿನ್ನೆಯಿಂದಲೇ ಈ ದರ ಜಾರಿಯಾಗಿದೆ.

ಹಾಲು: ಹಳೇ ದರ: ಹೊಸ ದರ

ಟೋನ್ಡ್ ಹಾಲು :  ₹37 : ₹39
ಹೊಮೋಜಿನೈಸ್ಡ್:  ₹38 : ₹40
ಸ್ಪೆಷಲ್ ಹಾಲು:  ₹43 :  ₹45
ಶುಭಂ ಹಾಲು : ₹43 : ₹45
ಸಮೃದ್ಧಿ ಹಾಲು: ₹48 : ₹50
ಸಂತೃಪ್ತಿ ಹಾಲು : ₹50 : ₹52
ಡಬಲ್ ಟೋನ್ಡ್: ₹36 : ₹38
ಮೊಸರು:  ₹45: ₹45

ಕೆಎಂಎಫ್‌ ಸಂಸ್ಥೆಯು ನ.14ರಂದು ಹೊರಡಿಸಿ ಹಿಂಪಡೆದಿದ್ದ ಆದೇಶದಲ್ಲಿ ಹಾಲು ಹಾಗೂ ಮೊಸರಿನ ಬೆಲೆಯನ್ನು ಪ್ರತಿ ಲೀಟರ್‌ಗೆ 3 ರು. ಹೆಚ್ಚಳ ಮಾಡಿತ್ತು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹಾಲಿನ ದರ ಹೆಚ್ಚಳಕ್ಕೆ ವಿವಿಧ ಹಾಲು ಒಕ್ಕೂಟಗಳಿಂದ ಕೆಎಂಎಫ್‌ ಮೇಲೆ ತೀವ್ರ ಒತ್ತಡವಿತ್ತು. ಹೀಗಾಗಿ ಹಲವು ತಿಂಗಳ ಹಿಂದೆಯೇ ಹಾಲಿನ ದರ ಪರಿಷ್ಕರಣೆಗೆ ನಿರ್ಧರಿಸಿ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಕಳುಹಿಸಿತ್ತು. ಸರ್ಕಾರ ಆಸಕ್ತಿ ತೋರದ ಹಿನ್ನೆಲೆಯಲ್ಲಿ ನ.14 ರಂದು ಹಾಲು ಹಾಗೂ ಮೊಸರಿನ ದರವನ್ನು ಲೀಟರ್‌ಗೆ 3 ರು.ಗಳಂತೆ ಹೆಚ್ಚಳ ಮಾಡಿ ಆದೇಶಿಸಿತ್ತು. 

ನಂದಿನಿ ಹಾಲಿನ ಪ್ಯಾಕೆಟ್‌ ಮೇಲೆ ಗಂಧದ ಗುಡಿ: ಕೆಎಂಎಫ್​ನಿಂದ ಅಪ್ಪುಗೆ ವಿಶೇಷ ಗೌರವ

ನವೆಂಬರ್ 21ರಂದು ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿ ಗ್ರಾಹಕರಿಗೆ ಹೊರೆಯಾಗದಂತೆ ಹಾಗೂ ರೈತರಿಗೂ ನ್ಯಾಯ ಸಿಗುವಂತೆ ಸೂತ್ರವೊಂದನ್ನು ಎರಡು ದಿನಗಳೊಳಗೆ ರೂಪಿಸಿಕೊಂಡು ಬರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕ ಹಾಲು ಮಹಾಮಂಡಲದ (ಕೆಎಂಎಫ್‌) ಸೂಚನೆ ನೀಡಿದ್ದರು. ಅದರಂತರ ದರ ಏರಿಕೆ ಮಾಡಲಾಗಿದೆ.

Latest Videos
Follow Us:
Download App:
  • android
  • ios