ರಾಜ್ಯದಲ್ಲಿ ಫುಡ್ ಪಾಯ್ಸನಿಂಗ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ 'ಬೆಸ್ಟ್-ಬಿಫೋರ್ ಡೇಟ್' ಲೇಬಲ್‌ಗಳು ಅಥವಾ ಮುಕ್ತಾಯ ದಿನಾಂಕಗಳಿಲ್ಲದ ಆಹಾರ ಪೊಟ್ಟಣಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಕೇರಳ ಸರ್ಕಾರ ಸೂಚಿಸಿದೆ. 

ತಿರು​ವ​ನಂತ​ಪು​ರ: ಕೇರಳ ರಾಜ್ಯ​ದಲ್ಲಿ ಫುಡ್‌ ಪಾಯ್ಸ​ನಿಂಗ್‌ ಪ್ರಕ​ರ​ಣ​ಗಳು ಹೆಚ್ಚಾದ ಹಿನ್ನೆ​ಲೆ​ಯಲ್ಲಿ ಪಾರ್ಸೆಲ್‌ ಕೊಡುವ ಆಹಾ​ರದ ಪೊಟ್ಟ​ಣ​ಗಳ ಮೇಲೆ ಆಹಾರ ಚೆನ್ನಾ​ಗಿ​ರುವ ಅಂತಿಮ ದಿನಾಂಕ​/ಸಮಯವ​ನ್ನು ಪ್ರಕ​ಟಿ​ಸು​ವು​ದನ್ನು ಕಡ್ಡಾ​ಯ​ಗೊ​ಳಿ​ಸಿದೆ. ಇದನ್ನು ನಮೂ​ದಿ​ಸಿ​ಲ್ಲದ ಆಹಾರ ಪದಾ​ರ್ಥ​ಗ​ಳನ್ನು ನಿಷೇ​ಧಿ​ಸಿದೆ. ಆಹಾ​ರ ತಯಾ​ರಿ​ಸಿದ ದಿನಾಂಕ (Manufacture date) ಮತ್ತು ಸಮಯ, ಪ್ಯಾಕ್‌ ಮಾಡ​ಲಾದ ದಿನಾಂಕ ಮತ್ತು ಸಮಯ, ಆಹಾ​ರ​ವನ್ನು ತಿನ್ನ​ಬ​ಹು​ದಾ​ದ ಅಂತಿಮ ದಿನಾಂಕ (Expiry date)​ವನ್ನು ಪ್ರಕ​ಟಿ​ಸು​ವುದು ಕಡ್ಡಾಯ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿ​ದ್ದಾರೆ.

‘ಆ​ಹಾರ ಸುರ​ಕ್ಷತಾ ಮಾನ​ದಂಡದ ನಿಯ​ಮ​ಗಳ ಪ್ರಕಾರ, ಬಿಸಿ ಆಹಾ​ರ​ಗಳನ್ನು ತಯಾ​ರಿ​ಸಿದ 2 ಗಂಟೆ​ಗಳ ಒಳಗೆ ತಿನ್ನ​ಬೇಕು. ಇಂತಹ ಆಹಾ​ರ​ಗ​ಳನ್ನು ಸಾಗಿ​ಸು​ವಾಗ 60 ಡಿಗ್ರಿ ಉಷ್ಣಾಂಶ ಇರು​ವಂತೆ ನೋಡಿ​ಕೊ​ಳ್ಳ​ಬೇಕು. 2 ಗಂಟೆ​ಗ​ಳಿಗೂ ಹೆಚ್ಚು ಕಾಲ ಸಾಮಾನ್ಯ ತಾಪ​ಮಾ​ನಕ್ಕೆ ತೆರೆ​ದಿಟ್ಟಆಹಾರ ಪದಾ​ರ್ಥ​ವನ್ನು ಸೇವಿ​ಸು​ವುದು ಆರೋ​ಗ್ಯಕ್ಕೆ (Health) ಒಳ್ಳೆ​ಯ​ದಲ್ಲ. ಹಾಗಾಗಿ ಸುರ​ಕ್ಷತಾ ಚೀಟಿ​ಗಳು ಮತ್ತು ಎಕ್ಸ್‌​ಪೈರಿ ದಿನಾಂಕ​ಗ​ಳಿ​ಲ್ಲದ ಆಹಾರ ಪದಾ​ರ್ಥ​ಗಳ ಪೊಟ್ಟ​ಣ​ಗ​ಳನ್ನು ನಿಷೇ​ಧಿ​ಸ​ಲಾ​ಗಿದೆ’ ಎಂದು ಅವರು ಹೇಳಿ​ದ್ದಾರೆ. ಇತ್ತೀಚೆಗೆ ಆನ್‌ಲೈನ್‌ನಲ್ಲಿ ಬಿರಿಯಾನಿ ತರಿಸಿಕೊಂಡಿದ್ದ ಕಾಸರಗೋಡಿನ ಮಹಿಳೆ (Woman)ಯೊಬ್ಬರು ಸಾವನ್ನಪ್ಪಿದ್ದರು.

ಫುಡ್ ಪಾಯ್ಸನ್‌ ಯಾಕಾಗುತ್ತೆ ? ತಕ್ಷಣವೇ ಕಡಿಮೆಯಾಗಲು ಏನು ಮಾಡ್ಬೋದು ?

ಕೇರಳ ಸ್ಪೆಷಲ್ ಕುಜಿಮಂತಿ ಹೆಸರಿನ ಚಿಕನ್ ಬಿರಿಯಾನಿ ಸೇವಿಸಿದ್ದ ಯುವತಿ
ಫುಡ್​ ಪಾಯಿಸನ್​ನಿಂದ ಕೇರಳದ ಕಾಸರಗೋಡಿನಲ್ಲಿ ಯುವತಿ (Girl)ಯೊಬ್ಬಳು ಮೃತಪಟ್ಟಿದ್ದಳು. ಮೃತ ಯುವತಿಯನ್ನು ಕಾಸರಗೋಡಿನ ಥಲಕ್ಲೇ ಮೂಲದ ಅಂಜುಶ್ರೀ ಪಾರ್ವತಿ ಎಂದು ಗುರುತಿಸಲಾಗಿತ್ತು. ಉದುಮದಲ್ಲಿರುವ ಹೋಟೆಲ್​ ಒಂದರಲ್ಲಿ ಆನ್​ಲೈನ್​ ಮೂಲಕ ಚಿಕನ್​ ಆಹಾರ ತರಿಸಿ ಅಂಜುಶ್ರೀ ಸೇವಿಸಿದ್ದಳು. ಇದಾದ ಬಳಿಕ ಆಕೆಯ ಆರೋಗ್ಯ (Health)ದಲ್ಲಿ ಏರುಪೇರು ಕಂಡುಬಂದಿತ್ತು. ಪರಿಸ್ಥಿತಿ ಗಂಭೀರವಾದ ಬೆನ್ನಲ್ಲೇ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಯುವತಿ ಮೃತಪಟ್ಟಿದ್ದಾಳೆ. ಪುಡ್​ ಪಾಯಿಸನ್​ನಿಂದ ಮೃತಪಟ್ಟಿದ್ದಾಳೆ (Death) ಎಂದು ವೈದ್ಯರು ದೃಢಪಡಿಸಿದ್ದರು.

ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿದ್ದ ಅಂಜುಶ್ರೀ ಕ್ರಿಸ್ ಮಸ್ ರಜೆಯ ಕಾರಣ ಸಮಯ ಕಳೆಯಲೆಂದು ಮನೆಗೆ ಬಂದಿದ್ದರು. ಈ ವೇಳೆ ಕಾಸರಗೋಡಿನ ಹೋಟೆಲ್ ಒಂದರಿಂದ ಆನ್ ಲೈನ್ ಮೂಲಕ ಕುಜಿಮಂತಿ ಹೆಸರಿನ ಚಿಕನ್ ಬಿರಿಯಾನಿ ಖರೀದಿಸಿ ಸೇವಿಸಿದ್ದರು. ತಕ್ಷಣ ಆಕೆ ಅಸ್ವಸ್ಥಳಾಗಿದ್ದಳು. ಕೂಡಲೇ ಆಕೆಯನ್ನು ಸಮೀಪದ ಕಾಸರಗೋಡು ಆಸ್ಪತ್ರೆಗೂ ಬಳಿಕ ಮಂಗಳೂರು ಆಸ್ಪತ್ರೆಗೂ ಕೊಂಡೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಕೊನೆಯುಸಿರೆಳೆದಳು.

Food Poisoning Remedies: ಫುಡ್ ಪಾಯಿಸನ್ ಸಮಸ್ಯೆಯೇ? ಮನೆಯಲ್ಲಿಯೇ ಈ ಔಷಧ ಮಾಡಿ

ಫುಡ್ ಪಾಯ್ಸನ್ ಅಲ್ಲ ಆತ್ಮಹತ್ಯೆ!
ಪುಡ್​ ಪಾಯಿಸನ್​ನಿಂದ ಯುವತಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿತ್ತು. ಆದರೆ ಈ ಸಾವು ಫುಡ್ ಪಾಯ್ಸನ್‌ನಿಂದ ಆಗಿಲ್ಲ. ಬದಲಿಗೆ ಆತ್ಮಹತ್ಯೆ ಆಗಿರಬೇಕು ಎಂಬ ಶಂಕೆಯೂ ವ್ಯಕ್ತವಾಗಿತ್ತು. ಘಟನೆ ಬೆಳಕಿಗೆ ಬರ್ತಿದ್ದಂತೆ, ಸಂಬಂಧಪಟ್ಟ ಹೋಟೆಲ್‌ನಲ್ಲಿರುವ ನೀರು ಮತ್ತು ಆಹಾರ (Food)ವನ್ನು ಪರಿಶೀಲಿಸಲಾಯಿತು. ಪೊಲೀಸರು ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿತ್ತು.