ಕಹಿಯಂದು ದೂರ ಹೋಗಬೇಡಿ ಸಕ್ಕರೆ ಕಾಯಿಲೆ ಇರೋರಿಗೆ ಇದೇ ಬೇಕು!

ಹಾಗಲಕಾಯಿ ಎಂದರೆ ಕಹಿ ಎಂದು ಮೂಗು ಮುರಿಯುವವರು ಹಲವರು. ಆದರೆ, ದೇಹಕ್ಕೆ ಒಳ್ಳೆಯದಾಗಿರುವುದು ಕಹಿಯೇ ಆಗಿರುತ್ತದೆ ಎಂದು ಕೇಳಿದ್ದೀರಷ್ಟೇ... ಡಯಾಬಿಟೀಸ್ ಇರುವವರಿಗೆ ಹಾಗಲಕಾಯಿ ಟೀ ಹೇಳಿ ಮಾಡಿಸಿದ್ದು.

karela tea helps recover diabetes

ಕೆಲವರಿಗೆ ಕೆಲ ತರಕಾರಿಗಳು ಆಗುವುದಿಲ್ಲ. ಮತ್ತೆ ಕೆಲವರು ತರಕಾರಿಗಳನ್ನು ಬಹಳ ಪ್ರೀತಿಯಿಂದ ಸೇವಿಸುತ್ತಾರೆ. ಆದರೆ ಈ ಎರಡೂ ವರ್ಗದಿಂದ ಕಡೆಗಣನೆಗೊಳಗಾಗಿ ದೂರ ಉಳಿಯುವುದು ಮಾತ್ರ ಬಡ ಹಾಗಲಕಾಯಿ. ತನ್ನ ಕಹಿ ರುಚಿಯಿಂದಾಗಿ ಜನರ ಮನಸ್ಸಿಗೆ ಹತ್ತಿರವಾಗಲು ಸೋತಿದೆ ಹಾಗಲಕಾಯಿ.

ತೂಕ ಇಳಿಸಿಕೊಳ್ಳಲು ಮಳೆಗಾಲ ಬೆಸ್ಟ್ ಟೈಮ್

ಆದರೆ, ಇದರ ಆರೋಗ್ಯ ಲಾಭಗಳು ಇತರೆ ತರಕಾರಿಗಳಿಗಿಂತ ಹೆಚ್ಚು. ನಾಲಿಗೆಯ ಮಾತು ಕೇಳಬೇಡಿ, ದೇಹದ ಆರೋಗ್ಯಕ್ಕಾಗಿ ಹಾಗಲಕಾಯಿಗೆ ಹತ್ತಿರಾಗಿ. ಹಲವಾರು ಕಾಯಿಲೆಗಳನ್ನು ದೂರವಿಡುವ ಶಕ್ತಿ ಹಾಗಲಕ್ಕಿದೆ. ಅದರಲ್ಲೊಂದು ಡಯಾಬಿಟೀಸ್. ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡುತ್ತದೆ ಹಾಗಲ ಟೀ. ಹಾಗಲದ ಟೀಯಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ಹೇಗೆ ನಿಯಂತ್ರಣದಲ್ಲಿರುತ್ತದೆ ಎಂಬುದನ್ನು ತಿಳಿಯಲು ಮುಂದೆ ಓದಿ. 

ಡಯಾಬಿಟೀಸ್‌ಗಾಗಿ ಕಹಿ ಟೀ

ನೂರಾರು ವರ್ಷಗಳಿಂದ ಜನರು ಹಾಗಲಕಾಯನ್ನು ಔಷಧವಾಗಿ, ಅಡುಗೆಗಳಲ್ಲಿ ಬಳಸುತ್ತಿದ್ದಾರೆ. ಇದನ್ನು ಯಾವುದೇ ರೀತಿಯಲ್ಲಿ ಸೇವಿಸಿದರೂ ಡಯಾಬಿಟೀಸ್ ನಿಯಂತ್ರಣಕ್ಕಿದು ಒಳ್ಳೆಯದೇ. ಏಕೆಂದರೆ, ಇದರಲ್ಲಿರುವ ಪಾಲಿಪೆಪ್ಟೈಡ್ ಪಿ ಎಂಬ ಕಾಂಪೌಂಡ್ ಇನ್ಸುಲಿನ್‌ನಂತೆಯೇ ವರ್ತಿಸುತ್ತದೆ. ರಕ್ತದಲ್ಲಿರುವ ಶುಗರನ್ನು ಬೊಜ್ಜಾಗಲು ಬಿಡದೆ, ಎನರ್ಜಿಯಾಗಿ ಬಳಸಲು ಇದು ಸಹಾಯ ಮಾಡುತ್ತದೆ. ಇದರಿಂದ ವ್ಯಕ್ತಿಯ ತೂಕ ಕೂಡಾ ಕಡಿಮೆಯಾಗಬಹುದು. ಆದ್ದರಿಂದ ಕೊಲೆಸ್ಟೆರಾಲ್ ಇರುವವರಿಗೆ ಕೂಡಾ ಹಾಗಲ ಟೀ ವರವೇ. 
ಹಾಗಲಕಾಯಿ ಗೊಜ್ಜು, ಕಾಯಿರಸ, ಚಟ್ನಿಗಳನ್ನು ನೀವು ತಿಂದಿರಬಹುದು.

ಇದೀಗ ಹಾಗಲಕಾಯಿ ಟೀ ಸವಿಯುವ ಸಮಯ. ಹಸಿ ಹಾಗಲಕಾಯಿಯಷ್ಟೇ ಆರೋಗ್ಯಕಾರಿ ಈ ಹಾಗಲದ ಟೀ. ಡಯಾಬಿಟೀಸ್ ಪೇಶೆಂಟ್ ಆಗಿದ್ದಲ್ಲಿ ಅಥವಾ ಕುಟುಂಬದಲ್ಲಿ ಡಯಾಬಿಟೀಸ್ ಇದ್ದು ನಿಮಗೂ ಬರುತ್ತದೆ ಎಂಬ ಭಯವಿದ್ದಲ್ಲಿ ನೀವಿದನ್ನು ವಾರಕ್ಕೆ ಮೂರು ಬಾರಿಯಾದರೂ ಸೇವಿಸುವುದನ್ನು ರೂಢಿಸಿಕೊಳ್ಳಿ. ಏಕೆಂದರೆ, ಡಯಾಬಿಟೀಸ್ ಈಗ ಬಹಳ ಕಾಮನ್ ಕಾಯಿಲೆಯಾಗಿದ್ದು, ಬೊಜ್ಜು, ಹೃದಯ ಸಮಸ್ಯೆಗಳು, ಸ್ಟ್ರೋಕ್ ಮುಂತಾದವೊಡನೆ ಲಿಂಕ್ ಹೊಂದಿದೆ. ಅದರ ಬಗ್ಗೆ ಎಚ್ಚರ ವಹಿಸುವುದು ಅತ್ಯಗತ್ಯ. 

ಆಹಾ! ಗ್ರೀನ್ ಟೀ, ಬ್ಲ್ಯಾಕ್ ಟೀ ಗೊತ್ತು, ಮಶ್ರೂಮ್ ಟೀ

ಹಾಗಲದ ಟೀ ಎಂದರೇನು?

ಹಾಗಲಕಾಯನ್ನು ಕತ್ತರಿಸಿ ಬಿಸಿಲಲ್ಲಿ ಒಣಗಿಸಿ ಅದರಿಂದ ಟೀ ತಯಾರಿಸಲಾಗುತ್ತದೆ. ಇದು ರೋಗ ನಿರೋಧಕ ವ್ಯವಸ್ಥೆ ಉತ್ತಮಗೊಳಿಸಿ, ರಕ್ತದಲ್ಲಿ ಇನ್ಸುಲಿನ್ ಮಟ್ಟನಿಯಂತ್ರಿಸುತ್ತದೆ. ಹಲವಾರು  ಔಷಧೀಯ ಗುಣಗಳನ್ನು ಹೊಂದಿದೆ. ಈ ಟೀಯನ್ನು ಮಾಡಲು ಹಾಗಲಕಾಯಿ ಗಿಡದ ಎಲೆ ಹಾಗೂ ಬೀಜಗಳನ್ನು ಕೂಡಾ ಬಳಸಬಹುದು. ಈಗೀಗ ಹಾಗಲಕಾಯಿ ಟೀ ಪೌಡರ್ ಕೂಡಾ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಈ ಟೀ ಡಯಾಬಿಟೀಸ್ ನಿಯಂತ್ರಿಸುವ ಜೊತೆಗೆ ರೋಗ ನಿರೋಧಕ ವ್ಯವಸ್ಥೆ ಬಲಗೊಳಿಸಿ, ಕಣ್ಣಿನ ಆರೋಗ್ಯವನ್ನೂ ಹೆಚ್ಚಿಸುತ್ತದೆ. ಲಿವರ್‌ಗೆ ಕ್ಲೆನ್ಸರ್‌ನಂತೆ ಕೆಲಸ ಮಾಡುತ್ತದೆ. 

ಹಾಗಲಕಾಯಿ ಟೀ  ಮಾಡುವುದು ಹೇಗೆ?

ಹಾಗಲಕಾಯನ್ನು ಸಣ್ಣದಾಗಿ ಕತ್ತರಿಸಿ ಐದಾರು ದಿನ ಬಿಸಿಲಲ್ಲಿ ಒಣಗಿಸಿಕೊಳ್ಳಿ.  ಇದನ್ನು ಜಾರ್‌ಗೆ ಹಾಕಿ ತೆಗೆದಿಟ್ಟುಕೊಳ್ಳಿ. 
ಟೀ ಮಾಡುವಾಗ ಕುದಿಯುವ ನೀರಿಗೆ ಸ್ವಲ್ಪ ಒಣಗಿಸಿದ ಹಾಗಲಕಾಯಿ ತುಂಡನ್ನು ಹಾಕಿ. ಹತ್ತು ನಿಮಿಷ ಕುದ್ದ ಬಳಿಕ ಸ್ಟೌ ಆರಿಸಿ. ಈ ನೀರಿಗೆ ಸ್ವಲ್ಪ ನಿಂಬೆರಸ, ಜೇನುತುಪ್ಪ ಹಾಕಿಕೊಂಡು ಸೇವಿಸಿ. 

ಗ್ರೀನ್‌ ಟೀ ಆಯ್ತು ಈಗ ಗ್ರೀನ್‌ ಕಾಫಿ!: ದೇಹದ ತೂಕ ಇಳಿಕೆಗೆ ಬೆಸ್ಟ್!

ಹಾಗಲ ಜ್ಯೂಸ್

ಇನ್ನು ಬಿಸಿ ಬಿಸಿ ಬೇಡ ಎನ್ನುವವರು ಹಾಗಲಕಾಯಿಯನ್ನು ಜ್ಯೂಸ್ ಆಗಿಯೂ ಸೇವಿಸಬಹುದು. ಹಾಗಲಕಾಯಿ ಜ್ಯೂಸ್ ಮಾಡಲು ಹೀಗೆ ಮಾಡಿ.
ಹಾಗಲಕಾಯನ್ನು ತೊಳೆದು ಚಾಕುವಿನಲ್ಲಿ ಸಿಪ್ಪೆ ತೆಗೆದುಕೊಳ್ಳಿ. ಒಳಗಿನ ತರಕಾರಿಯನ್ನು ಕತ್ತರಿಸಿ ಸಣ್ಣ ಸಣ್ಣ ಹೋಳುಗಳಾಗಿಸಿಕೊಳ್ಳಿ. ಇದನ್ನು ಜ್ಯೂಸರ್‌ಗೆ ಹಾಕಿ ಸ್ವಲ್ಪ ನಿಂಬೆರಸ ಹಾಗೂ ಉಪ್ಪು ಸೇರಿಸಿ ಮಿಕ್ಸಿ ಮಾಡಿ. ಇದಕ್ಕೆ ಸ್ವಲ್ಪ ನೀರು ಸೇರಿಸಿ. ಬಹಳ ಕಹಿ ಎನಿಸುತ್ತಿದ್ದಲ್ಲಿ ಸ್ವಲ್ಪ ಜೇನುತುಪ್ಪವನ್ನು ಸೇರಿಸಬಹುದು. ಇಲ್ಲದಿದ್ದಲ್ಲಿ ಸೇಬು ಹಣ್ಣಿನ ರಸದೊಂದಿಗೆ ಸೇರಿಸಿ ಸೇವಿಸಬಹುದು.  

Latest Videos
Follow Us:
Download App:
  • android
  • ios