Asianet Suvarna News Asianet Suvarna News

ದೋಸೆ ಹಂಚು ಕ್ಲೀನ್‌ ಮಾಡಲು ಪೊರಕೆ ಬಳಸಿದ ಹೈಟೆಕ್‌ ಕೆಫೆ, 'ಹೈಜೀನ್‌ ಇಲ್ವೇ ಇಲ್ಲ..' ಎಂದ ನೆಟ್ಟಿಗರು!

ದೋಸೆ ಹಿಟ್ಟನ್ನು ಹಂಚಿನ ಮೇಲೆ ಹಾಕುವ ಮೊದಲು ಪೊರಕೆಯನ್ನು ಬಳಸಿ ಬಿಸಿ ಹಂಚನ್ನು ಕ್ಲೀನ್‌ ಮಾಡಿರುವ ವೈರಲ್‌ ವಿಡಿಯೋ ಸೋಶಿಯಲ್‌ಮೀಡಿಯಾದಲ್ಲಿ ಟ್ರೆಂಡ್‌ ಆಗಿದೆ.
 

Internet Fumes Bengaluru High Tech Dosa Shop Using Broom to Clean Tawa san
Author
First Published Nov 15, 2023, 1:50 PM IST

ಬೆಂಗಳೂರು (ನ.15): ದೋಸೆಗಳು ತಮ್ಮ ಟೇಸ್ಟ್‌ ಹಾಗೂ ಆರೋಗ್ಯಕರವಾಗಿರುವ ಕಾರಣಕ್ಕಾಗಿ ಬೆಂಗಳೂರಿನ ಹೋಟೆಲ್‌ಗಳಲ್ಲಿ ಕಡ್ಡಾಯವಾಗಿರುತ್ತಿದ್ದ ದಿನಗಳು ಕಳೆದುಹೋಗಿವೆ. ಈಗೇನಿದ್ದರೂ ದೋಸೆ ಪಾಯಿಂಟ್‌ಗಳೆಂದರೆ, ಅಲ್ಲಿ ಸ್ವಚ್ಛತೆ ಅನ್ನೋದು ಕೇಳದೇ ಇರುವ ಶಬ್ದದ ರೀತಿ ಕಾಣುತ್ತದೆ. ಬೆಂಗಳೂರು ನಗರದ ಅತ್ಯಂತ ಹೈ ಟೆಕ್‌ ದೋಸೆ ಎನ್ನುವ ಹೋಟೆಲ್‌ನಲ್ಲಿ ದೋಸೆ ಮಾಡುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಹಾಗಂತ ಇದು ಸರಿಯಾದ ಕಾರಣಕ್ಕೆ ವಿಡಿಯೋ ವೈರಲ್‌ ಆಗುತ್ತಿಲ್ಲ. ದೋಸೆ ಮಾಡಲು ಹೋಟೆಲ್‌ನವರು ಒಂಚೂರು ಸ್ವಚ್ಛತೆ ಕಾಪಾಡದೇ ಇರೋ ಕಾರಣಕ್ಕೆ ಸುದ್ದಿಯಾಗುತ್ತಿದೆ. ವೈರಲ್‌ ಫೂಟೇಜ್‌ನಲ್ಲಿ ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ರಾಮೇಶ್ವರಂ ಕಫೆ ದೋಸೆ ಮಾಡಲು ಹಾಗೂ ದೋಸೆ ಹಂಚನ್ನು ಕ್ಲೀನ್‌ ಮಾಡಲು ಬಳಸುವ ಮಾರ್ಗವನ್ನು ತೋರಿಸಲಾಗಿದೆ. ದೋಸೆ ಹಿಟ್ಟನ್ನು ಹಂಚಿನ ಮೇಲೆ ಹಾಕುವ ಮುನ್ನವೇ ಹಂಚನ್ನು ಕ್ಲೀನ್‌ ಮಾಡುವ ಸಲುವಾಗಿ ಪೊರಕೆಯನ್ನು ಬಳಸಲಾಗಿದೆ. ಅದರೊಂದಿಗೆ ದೋಸೆಯ ಮೇಲೆ ಹಾಕುವ ತುಪ್ಪದ ಪ್ರಮಾಣದ ಬಗ್ಗೆಯೂ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ದೋಸೆ ಮಾಡುತ್ತಿರುವ ರೀತಿಯನ್ನು ಕಂಡು ಜನರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ.

'Thefoodiebae' ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಬಾಣಸಿಗ, ದೋಸೆ ಮಾಡುವ ಹಂಚನ್ನು ದೋಸೆ ಹಿಟ್ಟು ಹೊಯ್ಯುವ ಮುನ್ನ ನೀರಿನಿಂದ ತೇವಗೊಳಿಸುತ್ತಿರುವುದು ಕಂದಿದೆ. ಆ ಬಳಿಕ ಇದನ್ನು ಸ್ವಚ್ಛ ಮಾಡಲು ಪೊರಕೆಯನ್ನು ಬಳಸಿದ್ದಾರೆ. ಆ ಬಳಿಕ ದೊಡ್ಡ ಹಂಚಿನ ಮೇಲೆ ದೋಸೆ ಹಿಟ್ಟು ಹಾಕಲು ಮುಂದಾಗಿದ್ದಾರೆ. ಒಂದೇ ಸಮಯಕ್ಕೆ ಹಲವಾರು ದೋಸೆಗಳನ್ನು ಇಲ್ಲಿ ಹೊಯ್ದಿದ್ದಾರೆ. ಇದೆಲ್ಲದರ ನಡುವೆ ಈ ದೋಸೆಗಳ ಮೇಲೆ ಬಾಣಸಿಗ ಹಾಕುವ ತುಪ್ಪದ ಪ್ರಮಾಣ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅದರೊಂದಿಗೆ ಆಲೂ ಮಸಾಲಾ ಹಾಗೂ ಮಸಾಲೆಗಳನ್ನು ಕೂಡ ಹಾಕಿದ್ದಾನೆ.

ದೋಸೆ ಹಂಚುಗಳನ್ನು ಕ್ಲೀನ್‌ ಮಾಡಲು ಪೊರಕೆಯನ್ನು ಬಳಸಿದ್ದು ಹಾಗೂ ಅತಿಯಾದ ಪ್ರಮಾಣದಲ್ಲಿ ತುಪ್ಪವನ್ನು ಹಾಕಿದ್ದನ್ನು ಕಂಡು ನೆಟ್ಟಿಗರು ಹೌಹಾರಿದ್ದು, ಇದನ್ನು ಮೋಸ್ಟ್‌ ಹೈ ಟೆಕ್‌ ದೋಸೆ ಎಂದು ಲೇಬಲ್‌ ಮಾಡಿರುವುದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಈ ವಿಡಿಯೋಗೆ ಕಾಮೆಂಟ್‌ ಮಾಡಿರುವ ವ್ಯಕ್ತಿ, 'ಎಣ್ಣೆಯನ್ನು ಎಲ್ಲಾ ಕಡೆ ಹಾಕುವ ಸಲುವಾಗಿ ಪೊರಕೆಯನ್ನು ಬಳಕೆ ಮಾಡಬೇಡಿ. ನೀವು ಇಂಪ್ರೂವ್‌ ಆಗುತ್ತಿದ್ದೀರಿ ಎನ್ನುವುದು ನಮಗೆ ಗೊತ್ತು. ಪೊರಕೆಯ ಬದಲು ನೀವು ಆಯಿಲ್‌ ಬ್ರಶ್‌ಗಳನ್ನು ಖಂಡಿತವಾಗಿ ಬಳಕೆ ಮಾಡಬಹುದು. ಪೊರಕೆಗಳು, ಟೂತ್‌ಬ್ರಶ್‌ಗಳು, ಟಾಯ್ಲೆಟ್ ಬ್ರಷ್‌ಗಳು ಮತ್ತು ವೈಪರ್‌ಗಳನ್ನು ಅಡುಗೆ ಉದ್ದೇಶಗಳಿಗಾಗಿ ಬಳಸುವುದು ನೋಡುವುದು ಕೆಟ್ಟದಾಗಿರುತ್ತದೆ. ಕೆಲವೊಂದು ವಸ್ತುಗಳನ್ನು ಕೆಲವೊಂದು ಕಾರಣಕ್ಕಾಗಿಯೇ ಸಿದ್ಧ ಮಾಡಲಾಗಿರುತ್ತದೆ ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ ತಮಾಷೆಯಾಗಿ ಬರೆದಿದ್ದು, 'ಇದು ಮೋಸ್ಟ್‌ ಹೈಟೆಕ್‌ ದೋಸೆ ಪಾಯಿಂಟ್‌. ರೆಸ್ಟೋರೆಂಟ್‌ ಬಾಗಿಲು ಮುಚ್ಚಿದ ಬಳಿಕ ಇದೇ ಪೊರಕೆಯಲ್ಲಿ ನೆಲವನ್ನು ಇವರು ಗುಡಿಸಿರಲಿಕ್ಕಿಲ್ಲ' ಎಂದು ಬರೆದಿದ್ದಾರೆ.

ಈ ವರ್ಷದಲ್ಲಿಯೇ ಬೆಂಗಳೂರಿನಲ್ಲಿ ಬಾಡಿಗೆ ದರ ಶೇ. 30ರಷ್ಟು ಹೆಚ್ಚಳ, ವೈಟ್‌ಫೀಲ್ಡ್‌ ನಂ.1

ಇನ್ನೊಬ್ಬ ವ್ಯಕ್ತಿ, 'ನಾನು ಈ ರೀತಿಯ ದೋಸೆಯನ್ನು ಎಂದಿಗೂ ತಿನ್ನುವುದಿಲ್ಲ, ಆದ್ದರಿಂದ ಕೊಳಕು ತವಾವನ್ನು ಪೊರಕೆಯಿಂದ ಶುಚಿಗೊಳಿಸುವುದು ಮತ್ತು ತುಂಬಾ ಎಣ್ಣೆಯನ್ನು ಹಾಕುವುದು ಮತ್ತು ಖಾರವಾದ ಮಸಾಲಾ ನನ್ನನ್ನು ತುಂಬಾ ಕೆರಳಿಸಿದೆ' ಎಂದು ಬರೆದಿದ್ದಾರೆ.

WeWork Bankruptcy: ವೀವರ್ಕ್‌ ಕಂಪನಿ ದಿವಾಳಿ, ಶೇ. 50ರಷ್ಟು ಕುಸಿದ ಕಂಪನಿಯ ಷೇರುಗಳು!

ಇದೇ ವೇಳೆ ತುಪ್ಪದ ಅತಿಯಾದ ಬಳಕೆಯ ಬಗ್ಗೆಯೂ ಟೀಕೆ ಮಾಡಿದ್ದಾರೆ. “ಈ ದೋಸೆಯನ್ನು ಎರಡು ಬಾರಿ ತಿಂದರೆ ಸ್ವರ್ಗ ಕಾಣುವಿರಿ” ಎಂದು ಮತ್ತೊಬ್ಬರು ತಮ್ಮ ಆರೋಗ್ಯದ ಕಾಳಜಿಯನ್ನು ವ್ಯಕ್ತಪಡಿಸಿದರು, “ಇಷ್ಟು ತುಪ್ಪವನ್ನು ಬಳಸುವುದರಿಂದ ಗ್ರಾಹಕರ ಆರೋಗ್ಯಕ್ಕೆ ಹಾನಿಯಾಗುವುದು ಅವರಿಗೆ ತಿಳಿದಿಲ್ಲವೇ? ಹಣ ಸಂಪಾದಿಸುವುದು ಮತ್ತು ವಸ್ತುಗಳನ್ನು ಮಾರಾಟ ಮಾಡುವುದು ಹೇಗೆ? ಅವರು ಅಂತಹ ಉತ್ಪನ್ನಗಳನ್ನು ಉತ್ಪಾದಿಸುತ್ತಾರೆಯೇ?" ಎಂದು ಕೇಳಿದ್ದಾರೆ. ಫೇಸ್‌ಬುಕ್‌ನಲ್ಲಿ ಈ ವಿಡಿಯೋಗೆ 14 ಮಿಲಿಯನ್‌ ವೀವ್ಸ್‌ಬಂದಿದೆ.

Follow Us:
Download App:
  • android
  • ios